Monday, August 15, 2022

ರಸ್ತೆಯಲ್ಲಿ ಸ್ಪೀಡಾಗಿ ಹೋಗ್ತಿದ್ದ ಬೈಕ್-ಒಮ್ಮೆಲೆ ಟ್ರಾನ್ಸ್‌ಫಾರ್ಮರ್ ಏರಿತು…!

ಕೇರಳ: ಸವಾರನೋರ್ವ ವೇಗವಾಗಿ ಬೈಕ್ ಚಲಾಯಿಸಿದ್ದು ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿದ ಘಟನೆ ಕೇರಳದ ಇಡುಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದೆ.


ಬೈಕ್ ಸವಾರ ವಿಷ್ಣುಪ್ರಸಾದ್ ಈ ಅನಾಹುತದಲ್ಲಿ ಪ್ರಾಣಾಪಾಯದಿಂದ ಪಾರಾದ ಯುವಕ.

ಈತ ತನ್ನ ಬೈಕ್‌ನ್ನು ವೇಗವಾಗಿ ಡ್ರೈವ್ ಮಾಡಿಕೊಂಡು ಬಂದಿದ್ದು ಆ ಸಂದರ್ಭ ಆತನ ನಿಯಂತ್ರಣ ತಪ್ಪಿ ಎಡವಿ ಬಿದ್ದಿದ್ದಾರೆ.

ಬೈಕ್ ಮೂರು ಪಲ್ಟಿ ಹೊಡೆದು ಟ್ರಾನ್ಸ್‌ಫಾರ್ಮರ್‌ ಏರಿದೆ. ಘಟನೆಯ ಬಳಿಕ ಆತ ಭಯಭೀತನಾಗಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಘಟನೆಯ ಬಳಿಕ ಕೇರಳ ವಿದ್ಯುತ್‌ ಬೋರ್ಡ್‌ನ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿ ಹೆಚ್ಚಿನ ಅನಾಹುತವಾಗದಂತೆ ತಡೆದಿದ್ದಾರೆ.

ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here

Hot Topics

ಬಿ.ಸಿ ರೋಡಿನ ಬಾನೆತ್ತರದಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಬಂಟ್ವಾಳ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಂಟ್ವಾಳದ ಬಿ.ಸಿ ರೋಡಿನ ವಿಜಯಲಕ್ಮೀ ಗ್ರೂಪ್ ವತಿಯಿಂದ ಬಾನೆತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು.20×30 ಅಳತೆಯ ರಾಷ್ಟ್ರ ಧ್ವಜವನ್ನು ಕ್ರೇನ್ ಮೂಲಕ ಸುಮಾರು 174 ಅಡಿ ಎತ್ತರದಲ್ಲಿ...

ಮಂಗಳೂರು: ಗುರುಪುರದ ಅಡ್ಡೂರು ಜಂಕ್ಷನ್‌ನಲ್ಲಿ ಸ್ವಾತಂತ್ರ್ಯ ಸಂಭ್ರಮ

ಮಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಗಳೂರು ನಗರ ಹೊರವಲಯದ ಗುರುಪುರದ ಅಡ್ಡೂರು ಜಂಕ್ಷನ್‌ನಲ್ಲಿ ಫ್ರೆಂಡ್ಸ್ ಕ್ಲಬ್ ಅಡ್ಡೂರು ಇದರ ವತಿಯಿಂದ ಧ್ವಜಾರೋಹಣ ನಡೆಯಿತು.ಮೊದಲಿಗೆ ಅಡ್ಡೂರು ಜಂಕ್ಷನ್‌ನಲ್ಲಿ ನಿರ್ಮಿಸಲಾಗಿರುವ ನೂತನ ಧ್ವಜಸ್ತoಭವನ್ನು ನಿಕಟಪೂರ್ವ...

“ಇಂದು ಸೂರ್ಯಾಸ್ತದೊಳಗೆ ನಿಯಮಬದ್ಧವಾಗಿ ಧ್ವಜವನ್ನು ಸುರಕ್ಷಿತವಾಗಿ ಮಡಚಿಡಿ”

ಮಂಗಳೂರು: ಸ್ವಾತಂತ್ರ್ಯದ ಆಚರಣೆಯು ಈಗಾಗಲೇ ಮುಗಿದಿದ್ದು, ಇಂದು ಸಂಜೆ ಸೂರ್ಯಾಸ್ತಮಾನದೊಳಗೆ ನಿಯಮಬದ್ಧವಾಗಿ ತ್ರಿವರ್ಣ ಧ್ವಜವನ್ನು ಸುರಕ್ಷಿತವಾಗಿ ಮಡಚಿಡುವಂತೆ ಎಲ್ಲಾ ಸಾರ್ವಜನಿಕರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.ಈ ಬಗ್ಗೆ...