Connect with us

BANTWAL

ವಿಟ್ಲದಲ್ಲಿ ರಸ್ತೆ ಬದಿ ನಿಂತಿದ್ದ ಬಾಲಕಿಗೆ ಗುದ್ದಿದ ಬೈಕ್-ಸ್ಥಿತಿ ಚಿಂತಾಜನಕ…

Published

on

ವಿಟ್ಲ: ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ನಡೆದಿದೆ.


ಇಲ್ಲಿನ ವಿಟ್ಲ ಒಕ್ಕೆತ್ತೂರು ನಿವಾಸಿ ಬಶೀರ್ ಅವರ ಪುತ್ರಿ ಫಾತಿಮತ್ ನಿದಾ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ.

ಈಕೆ ವಿಟ್ಲ ಸರಕಾರಿ ಮಾದರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆಗೆ ಹೋಗಲು ಒಕ್ಕೆತ್ತೂರಿನಲ್ಲಿ ಆಟೋ ರಿಕ್ಷಾಕ್ಕೆ ಕಾಯುತ್ತಿದ್ದಾಗ ವಿಟ್ಲ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದು ಬಾಲಕಿಯನ್ನು ಎಳೆದುಕೊಂಡು ಹೋಗಿದೆ.

ತಕ್ಷಣವೇ ಸ್ಥಳೀಯರು ಬಾಲಕಿಯನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ವಿಟ್ಲ-ಕಲ್ಲಡ್ಕ ರಸ್ತೆ ಅಗಳೀಕರಣಗೊಂಡು ಡಾಮರೀಕರಗೊಂಡಿದ್ದು, ವಾಹನಗಳು ಮಿತಿಮೀರಿದ ವೇಗದಲ್ಲಿ ಚಲಿಸುತ್ತಿರುವುದರಿಂದ ಅವಘಡಗಳು ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Click to comment

Leave a Reply

Your email address will not be published. Required fields are marked *

BANTWAL

WATCH VIDEO : ಬಂಟ್ವಾಳದಲ್ಲಿ ಧರ್ಮಗುರುವಿನ ಪೈಶಾಚಿಕ ಕೃತ್ಯ; ಅಸಹಾಯಕ ವೃದ್ಧ ದಂಪತಿಗೆ ಹಿಗ್ಗಾಮುಗ್ಗ ಥಳಿತ

Published

on

ಬಂಟ್ವಾಳ : ಕ್ರೈಸ್ತ ದಂಪತಿ ಮೇಲೆ ಧರ್ಮಗುರುವೊಬ್ಬರು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ವಿಟ್ಲ ಸಮೀಪದ ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ 79 ವರ್ಷ ಪ್ರಾಯದ ಗ್ರೆಗರಿ ಮೊಂತೇರೋ ಹಾಗೂ ಅವರ ಪತ್ನಿ ಮೇಲೆ ಮನೆಲಾ ಚರ್ಚ್‌ನ ಪ್ರಧಾನ ಧರ್ಮ ಗುರು ನೆಲ್ಸನ್‌ ಒಲಿವೆರಾ ಅವರು ಹಲ್ಲೆ ಮಾಡಿದ್ದಾರೆ.

ಫಾದರ್ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಫೆ.29 ರ ಮುಂಜಾನೆ ಈ ಘಟನೆ ನಡೆದಿದೆ. ಮನೆ ಶುದ್ಧ ಭೇಟಿ ನಿಮಿತ್ತ ವೃದ್ಧ ದಂಪತಿಗಳ ಮನೆಗೆ ಬಂದಿದ್ದ ಫಾದರ್ ಒಲಿವೆರಾ ಗೇಟ್‌ ಬಳಿಯಲ್ಲೇ ಗ್ರೆಗರಿ ಮೊಂತೆರೋ ಅವರಿಗೆ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ.

ಇಷ್ಟೇ ಅಲ್ಲದೆ, ಕುತ್ತಿಗೆ ಹಿಡಿದು ಎಳೆದಾಡಿದ್ದು, ಕೋಲಿನಿಂದಲೂ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಗ್ರೆಗರಿ ಮೊಂತೆರಾ ಅವರ ಪತ್ನಿ ಪ್ರತಿರೋಧ ತೋರಿಸಿದ್ರೂ ಫಾದರ್ ಜೊತೆಗಿದ್ದ ವ್ಯಕ್ತಿ ವೃದ್ಧೆಯನ್ನು ಅಡ್ಡ ಗಟ್ಟಿದ್ದಾನೆ.

ಆದರೆ, ಫಾದರ್ ಅವರಿಗೂ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಫಾಧರ್ ಆಗಿದ್ದು ವಯೋ ವೃದ್ಧರಿಗೆ ಗೌರವ ಕೊಡಲು ಗೊತ್ತಿಲ್ಲದ ಇಂತಹ ನೀಚನ ವಿರುದ್ಧ ಕ್ರಮ ಕೈಗೊಳ್ಳಿ ಅಂತ ವೃದ್ಧ ದಂಪತಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಫಾದರ್‌ ಪರ ಹಲವರು ವಿಟ್ಲ ಠಾಣೆ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Continue Reading

BANTWAL

ಬಾಲವಿಕಾಸದಲ್ಲಿ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ

Published

on

ವಿಟ್ಲ: ಪೆರಾಜೆ, ಮಾಣಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮಾಣಿ ಸ್ಥಳೀಯ ಸಂಸ್ಥೆ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇವರ ಸಹಭಾಗಿತ್ವದಲ್ಲಿ ಫೆ. 28 ರಂದು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾನಗರ ಪೆರಾಜೆ, ಮಾಣಿ ಇಲ್ಲಿ 2023-24 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕ ಹಾಗೂ ಮಾಣಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ  ಪ್ರಹ್ಲಾದ್ ಶೆಟ್ಟಿ ಜೆ  ಪರೀಕ್ಷಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣವಿದ್ದಾಗ ಮುಂದಿನ ದಿನಗಳಲ್ಲಿ ಸದೃಢ ದೇಶ ಕಟ್ಟಬಲ್ಲರು ಎಂದು ಹೇಳಿ ಪರೀಕ್ಷಾ ಶಿಬಿರಕ್ಕೆ ಶುಭ ಹಾರೈಸಿದರು.

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ರವೀಂದ್ರ ಡಿ ಸ್ವಾಗತಿಸಿ,ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಬ್ ವಿಭಾಗದ ಶಿಬಿರ ನಾಯಕಿ ಯಮುನಾ,ಬುಲ್ ಬುಲ್ ವಿಭಾಗದ ಶಿಬಿರ ನಾಯಕಿ ಯಶೋಧ ಕೆ (HWB) ರವರು ಉಪಸ್ಥಿತರಿದ್ದರು. ಪರೀಕ್ಷಾ ಶಿಬಿರದಲ್ಲಿ ಸಹಾಯಕರಾಗಿ ಕಬ್ ಮಾಸ್ಟರ್ ಮತ್ತು ಫ್ಲಾಕ್ ಲೀಡರ್ ಗಳಾದ ಕಾಂತಪ್ಪ, ಸುಮಾ, ಅಮಿತಾ ಎಸ್, ಪ್ರಮೀಳಾ, ಕುರ್ಶಿದ, ಯೋಗಿನಿ, ಚಿತ್ರ ಕೆ, ವೀಣಾ, ಶೀಲಾವತಿ, ಪ್ರಮೀಳಾ ಕ್ರಾಸ್ತಾ, ಸೌಮ್ಯ ಹಾಗೂ ಸ್ಕೌಟ್ ಮತ್ತು ಗೈಡ್ ಶಿಕ್ಷಕಿ ಸಪ್ನ, ಅನಿತಾ ಗೌರಿ, ಲೀಲಾರವರು ಸಹಕರಿಸಿದರು. ಕಬ್ ವಿಭಾಗದಲ್ಲಿ 77 ವಿದ್ಯಾರ್ಥಿಗಳು ಹಾಗೂ ಬುಲ್ ಬುಲ್ ವಿಭಾಗದಲ್ಲಿ 66 ವಿದ್ಯಾರ್ಥಿಗಳು ಒಟ್ಟು 143 ವಿದ್ಯಾರ್ಥಿಗಳು ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದ್ದರು. ಸ್ವಯಂ ಸೇವಕರಾಗಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಸಹಕರಿಸಿದರು. ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿ ಕಾರ್ಯಕ್ರಮ ನಿರೂಪಿಸಿದರು.

Continue Reading

BANTWAL

Bantwala: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ- ಯುವಕ ಸಾವು..!

Published

on

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ಯುವಕ ಮೃತಪಟ್ಟಿರುವ ಘಟನೆ ಫೆ. 25ರಂದು ಬಂಟ್ವಾಳ ತಾಲೂಕಿನ ಬಿ.ಸಿ ರೋಡಿನ ಕೈಕಂಬದಲ್ಲಿ ನಡೆದಿದೆ.

ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿ ಪ್ರಸ್ತುತ ಪಾಣೆಮಂಗಳೂರು ಆಲಡ್ಕದಲ್ಲಿ ವಾಸ್ತವ್ಯವಿದ್ದ  ಅಶ್ರಫ್ (32) ಮೃತ ಯುವಕ. ಕೈಕಂಬದಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಆಲಡ್ಕ ನಿವಾಸಿ ತನ್ವೀರ್ ಎಂಬವರನ್ನು ಅಶ್ರಫ್ ತಮ್ಮ ಸ್ಕೂಟರ್ ನಲ್ಲಿ ಅಂಗಡಿಗೆ ಬಿಡಲು ತೆರಳಿದ್ದರು. 5.30ರ ಸುಮಾರಿಗೆ ಕೈಕಂಬಕ್ಕೆ ತಲುಪಿದ ಅವರು ತನ್ವೀರ್ ರನ್ನು ಸ್ಕೂಟರ್ ನಿಂದ ಇಳಿಸಬೇಕು ಅನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಹಿಂದಿರುಗುತ್ತಿದ್ದ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರಿಗೂ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡ ಅಶ್ರಫ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

LATEST NEWS

Trending