ಉಡುಪಿ: ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾಡು ಹಂದಿ ರಸ್ತೆ ಅಡ್ಡ ಬಂದಾಗ ಗಲಿಬಿಲಿಗೊಂಡು ಒಮ್ಮೆಲೇ ಬ್ರೇಕ್ ಹಾಕಿ ಪರಿಣಾಮ ಸಹಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಮುದೂರು ಗ್ರಾಮದ ನಲವತ್ತುಕುನ್ನು ಎಂಬಲ್ಲಿ ಘಟನೆ ನಡೆದಿದೆ.
ಮಾ.18ರಂದು ಪಿ. ಎನ್ ಸದಾಶಿವನ್ ಎಂಬುವವರು ರಾತ್ರಿ 9:30 ಗಂಟೆಗೆ ಮಗ ಸುಜಿತ್‌ನ ಬೈಕ್‌ನಲ್ಲಿ ಹಿಂಬದಿ ಸಹ ಸವಾರನಾಗಿ ಮನೆಯ ಸಮೀಪದಲ್ಲಿರುವ ಜಮೀನಿಗೆ ಕೃಷಿ ಕೆಲಸಕ್ಕೆ ಅಳವಡಿಸಿದ ನೀರಿನ ಪೈಪ್‌ನ್ನು ಸರಿ ಮಾಡಲು ಹೋಗುತ್ತಿದ್ದರು.
ಮುದೂರು ಗ್ರಾಮದ ನಲವತ್ತುಕುನ್ನು ಎಂಬಲ್ಲಿ ರಸ್ತೆಯಲ್ಲಿ ಅಚಾನಕ್ಕಾಗಿ ಕಾಡು ಹಂದಿ ಅಡ್ಡ ಬಂದದ್ದನ್ನು ನೋಡಿ ಸವಾರ ಗಲಿಬಿಲಿಗೊಂಡು ಒಮ್ಮೇಲೆ ಬ್ರೇಕ್ ಹಾಕಿದ್ದಾರೆ. ಪರಿಣಾಮ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಸದಾಶಿವನ್ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ಪರಿಣಾಮ ತಲೆಗೆ ರಕ್ತಗಾಯ ಎದೆಗೆ ತರಚಿದ ಗಾಯ ಮತ್ತು ಎಡ ಭುಜಕ್ಕೆ ಹಾಗೂ ಎಡಕಾಲು ತೊಡೆಗೆ ರಕ್ತಗಾಯ ಉಂಟಾಗಿದೆ. ಗಾಯಾಳುವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.