Monday, July 4, 2022

ಕಾಸರಗೋಡು: ಬೈಕ್ ಮತ್ತು ಟೆಂಪೋ ಭೀಕರ ಅಪಘಾತ-ಇಬ್ಬರು ಯುವಕರ ದುರ್ಮರಣ

ಕಾಸರಗೋಡು: ಬೈಕ್ ಮತ್ತು ಟೆಂಪೋ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆ ನಿನ್ನೆ ತಡ ರಾತ್ರಿ ಮೇಲ್ಪರಂಬ ಠಾಣಾ ವ್ಯಾಪ್ತಿಯ ಕಳ್ನಾಡ್ ಪೇಟೆ ಎಂಬಲ್ಲಿ ನಡೆದಿದೆ.


ಪೆರಿಯ ನಡುವೆಟ್ಟುಪಾರ ನಿವಾಸಿ ಎನ್.ಎ.ಪ್ರಜೀಶ್ (21) ಮತ್ತು ಪಳ್ಳಿಕೆರೆ ಸಿ.ಎಚ್.ನಗರದ ಅನಿಲ್ (24) ಎಂಬವರು ಮೃತಪಟ್ಟವರು.

ಕಳೆದ ರಾತ್ರಿ ಹತ್ತು ಗಂಟೆ ಸುಮಾರಿಗೆ ಕಳ್ನಾಡ್ ಪೇಟೆಯ ಸಮೀಪ ಈ ಅಪಘಾತ ನಡೆದಿದೆ.

ಇವರು ಸಂಚರಿಸುತ್ತಿದ್ದ ಬೈಕಿಗೆ ಕಾಸರಗೋಡು ಕಡೆಯಿಂದ ಕಾಞ೦ಗಾಡ್ ನತ್ತ ಮೀನು ಹೇರಿಕೊಂಡು ತೆರಳುತ್ತಿದ್ದ ಟೆಂಪೋ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪ್ರಜೀಶ್ ಕಾಸರಗೋಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅನಿಲ್ ರೂಫಿಂಗ್ ಕಾರ್ಮಿಕರಾಗಿದ್ದರೆ, ಪ್ರಜೀಶ್ ಪೈಂಟಿಂಗ್ ಕಾರ್ಮಿಕರಾಗಿದ್ದರು.

ಅಪಘಾತದ ಬಳಿಕ ಈ ರಸ್ತೆಯಲ್ಲಿ ಹಲವು ಸಮಯ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು KSRTC ನಿಲ್ದಾಣದ ಟಾಯ್ಲೆಟ್‌ಗೆ ಹೋಗಿದ್ದ ಯುವತಿ ನಾಪತ್ತೆ..!

ಮಂಗಳೂರು: ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಮಂಗಳೂರು ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಜು.2 ರಂದು ಮುಂಜಾನೆ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಕು. ದೀಪಿಕಾ (19) ಎಂದು ಗುರುತಿಸಲಾಗಿದೆ.ಘಟನೆ ವಿವರ ಹಾವೇರಿ ಜಿಲ್ಲೆ...

ಸಮಾಜವಾದಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ ಅಖಿಲೇಶ್‌ ಯಾದವ್‌

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಎಲ್ಲ ಘಟಕಗಳನ್ನು ಭಾನುವಾರ ವಿಸರ್ಜಿಸಿದ್ದಾರೆ. ಇದರಲ್ಲಿ ಯುವ ಘಟಕ ಮತ್ತು ಮಹಿಳಾ ಘಟಕಗಳು ಕೂಡ ಸೇರಿವೆ.ತಮ್ಮ ಈ...

ಬೆಳ್ತಂಗಡಿ: ಕೆರೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಕೊನೆಯುಸಿರು

ಬೆಳ್ತಂಗಡಿ: ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಬದ್ಯಾರು ಬಳಿ ಇಂದು ನಡೆದಿದೆ.ಕುಶಾಲಪ್ಪ ಗೌಡ (46) ಮೃತ ವ್ಯಕ್ತಿ. ಮೃತ ಕುಶಾಲಪ್ಪ ಗೌಡ ಮನೆಯ...