ಕಾಸರಗೋಡು: ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲೆಂದು ಗೋವಾಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಕಾಸರಗೋಡಿನ ಉದುಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮಲಪ್ಪುರಂ ನಿವಾಸಿಗಳಾದ ಜಂಶೀರ್(22) ಹಾಗೂ ಮುಹಮ್ಮದ್ ಶಿಬಿಲ್ (20) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇವರಿಬ್ಬರು ಗೋವಾದಲ್ಲಿ ನಡೆಯಲಿರುವ ಐ.ಎಸ್.ಎಲ್ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಬೈಕ್‌ನಲ್ಲಿ ಕಾಸರಗೋಡು ಕಡೆಯಿಂದ ಹೋಗುತ್ತಿದ್ದಾಗ ಎದುರಿಗೆ ಬಂದ ಲಾರಿ ಬೈಕ್‌ಗೆ ಹೊಡೆದಿದ್ದು ಇದರಿಂದ ಇಬ್ಬರು ಗಂಭೀರ ಗಾಯಗೊಂಡಿದ್ದರು.
ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಕೊನೆಯುಸಿರೆಳೆದಿದ್ದಾರೆ.