LATEST NEWS
ಬೆಳ್ಮಣ್: ಬೈಕ್‌ಗೆ ಕಾರು ಢಿಕ್ಕಿ-ಸವಾರ ದಾರುಣ ಅಂತ್ಯ..
ಬೆಳ್ಮಣ್: ಬೈಕ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನ ಬೆಳ್ಮಣ್ ನೀರ್ಚಲ್ ಬಳಿ ನಡೆದಿದೆ.
ಮುದರಂಗಡಿ ನಿವಾಸಿ ಜಾರ್ಜ್ ಡಿಸೋಜ (74) ಮೃತ ದುರ್ದೈವಿ.
ಇವರು ಸಂಬಂಧಿಕರ ಮನೆಯಿಂದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ವಾಪಸು ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕಾರೊಂದು ಇವರ ಬೈಕಿಗೆ ಢಿಕ್ಕಿ ಹೊಡೆದಿದೆ.
ಇದರಿಂದಾಗಿ ರಸ್ತೆಗೆ ಎಸೆಯಲ್ಪಟ್ಟ ಜಾರ್ಜ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಸಂಬಳ ಪಾವತಿಯಾಗದ್ದಕ್ಕೆ ದಿಢೀರ್ ಪ್ರತಿಭಟನೆಗೆ ಇಳಿದ 48 KSRTC ಚಾಲಕರು
ಮಡಿಕೇರಿ: ಸರಿಯಾಗಿ ವೇತನ ಪಾವತಿಯಾಗದ್ದಕ್ಕೆ ಕರ್ತವ್ಯ ಸ್ಥಗಿತಗೊಳಿಸಿ ಕೆಎಸ್‌ಆರ್‌ಟಿಸಿಯ 48 ಹೊರಗುತ್ತಿಗೆ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮಡಿಕೇರಿಯಲ್ಲಿ ಇಂದು(ಸೆ.14) ಬೆಳಿಗ್ಗೆ ನಡೆದಿದೆ.
ಸರಿಯಾದ ವೇತನ ಸಿಗದಕ್ಕೆ ಇರುವುದರಿಂದ ಇಂದು ಬೆಳಿಗ್ಗೆಯಿಂದಲೇ ಬಸ್ಸುಗಳನ್ನು ರಸ್ತೆಗೆ ಇಳಿಸದೇ ಪ್ರತಿಭಟನೆ ನಡೆಸುತ್ತಿದ್ದು ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಬಂದ್ ಆಗಿದೆ.
ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಬಸ್ಸು ಚಾಲಕರು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಇದ್ದ ಏಜೆನ್ಸಿ ಪ್ರತಿ ತಿಂಗಳು 23 ಸಾವಿರ ರೂ. ಸಂಬಳ ನೀಡುತ್ತಿತ್ತು. ಆದರೆ ಈ ಏಜೆನ್ಸಿ ಬದಲಾಗಿದ್ದು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ 13, 14 ಸಾವಿರ ರೂ. ಪಾವತಿಸುತ್ತಿದೆ. ಹಲವು ದಿನಗಳ ಬಳಿಕ ಒತ್ತಾಯದ ಬಳಿಕ ಶುಕ್ರವಾರ ಅರ್ಧ ಸಂಬಳ ಪಾವತಿಸಿದ್ದಾರೆ.
ಸಿಎಲ್ ರಜೆ ಕೊಡದ ಏಜೆನ್ಸಿ ಯಾವುದೇ ಅಪಘಾತವಾದರೂ ಚಾಲಕರನ್ನೇ ಹೊಣೆ ಮಾಡುತ್ತಿದೆ. ಏಜೆನ್ಸಿ ಪೂರ್ಣ ಪ್ರಮಾಣದ ವೇತನ ಹಾಕುವವರೆಗೂ ಬಸ್ಸು ಸಂಚಾರ ಅರಂಭ ಮಾಡುವುದಿಲ್ಲ ಎಂದು 48 ಬಸ್ಸು ಚಾಲಕರು ಪಟ್ಟು ಹಿಡಿದ್ದಾರೆ.
ದಿಢೀರ್ ಪ್ರತಿಭಟನೆಯಿಂದ ಕೊಡಗು ಜಿಲ್ಲೆಯ ಹಲವಾರು ಮಾರ್ಗಗಳಲ್ಲಿ ಸರ್ಕಾರಿ ಬಸ್ಸು ಸಂಚಾರ ಅಗದೇ ವ್ಯತ್ಯಯಗೊಂಡಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಇಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ.
LATEST NEWS
ಬಾಲಕಿಯೊಂದಿಗೆ ಅಸಭ್ಯ ವರ್ತನೆ; ಪ್ರಯಾಣಿಕರಿಂದಲೇ ರೈಲ್ವೆ ಸಿಬ್ಬಂದಿ ಹ*ತ್ಯೆ
ಮಂಗಳೂರು/ಬಿಹಾರ: ಇತ್ತೀಚೆಗೆ ನಮ್ಮ ಸುತ್ತ ಮುತ್ತ ಮಹಿಳೆಯರ ಮೇಲೆ ಅತ್ಯಾ*ಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ಮೇಲೂ ಕಾ*ಮುಕರು ಕ್ರೌರ್ಯ ಮೆರೆಯುತ್ತಿದ್ದಾರೆ. ಇದೀಗ ರೈಲಿನಲ್ಲಿ ಇಂತಹುದೇ ಕೃತ್ಯ ನಡೆದಿದೆ.
ರೈಲ್ವೇ ನೌಕರನೊಬ್ಬ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 11 ವರ್ಷದ ಬಾಲಕಿಯ ಮೇಲೆ ಬಲ*ತ್ಕಾರಕ್ಕೆ ಯತ್ನಿಸಿದ್ದಾನೆ. ಅ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಉಳಿದ ಕೆಲ ಪ್ರಯಾಣಿಗರು ಸೇರಿ ಆತನನ್ನು ಸ್ಥಳದಲ್ಲೇ ಕೊಂ*ದಿರುವ ಘಟನೆ ಬಿಹಾರದ ಬರೌನಿಯಿಂದ ದೆಹಲಿಗೆ ತೆರಳುತ್ತಿದ್ದ ಹಮ್ಸಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.
ಘಟನೆಯ ಸಂಪೂರ್ಣ ಮಾಹಿತಿ:
ಬಿಹಾರದ ಸಿವಾನ್‌ನ ಕುಟುಂಬವೊಂದು ಹಮ್ಸಫರ್ ಎಕ್ಸ್‌ಪ್ರೆಸ್ ಮೂರನೇ ಎಸಿ ಕೋಚ್‌ನಲ್ಲಿ ಬುಧವಾರ ಪ್ರಯಾಣಿಸುತ್ತಿರುವ ವೇಳೆ, ಅದೇ ಕೋಚ್‌ನಲ್ಲಿ ರೈಲ್ವೆ ಉದ್ಯೋಗಿ ಪ್ರಶಾಂತ್ ಕುಮಾರ್ ಪ್ರಯಾಣಿಸುತ್ತಿದ್ದ. ಆ ಕುಟುಂಬದ 11 ವರ್ಷದ ಬಾಲಕಿಯನ್ನು ಈತ ತನ್ನ ಸೀಟಿನಲ್ಲಿ ಕೂರಿಸಿಕೊಂಡಿದ್ದ . ಬುಧವಾರ (ಸೆ.11) ರಾತ್ರಿ 11.30ಕ್ಕೆ ಬಾಲಕಿಯ ತಾಯಿ ವಾಶ್ ರೂಂಗೆ ಹೋದಾಗ ಬಾಲಕಿಯೊಂದಿಗೆ ಅನು*ಚಿತವಾಗಿ ವರ್ತಿಸಿದ್ದಾನೆ. ಬಳಿಕ ಬಾಲಕಿ ತನ್ನ ತಾಯಿಯನ್ನು ವಾಶ್‌ರೂಮ್‌ಗೆ ಕರೆದೊಯ್ದು ನಡೆದುದ್ದನ್ನು ಹೇಳಿದಳು.
ರೈಲ್ವೇ ಉದ್ಯೋಗಿ ಪ್ರಶಾಂತ್ ಕುಮಾರ್ ವರ್ತನೆಯ ಬಗ್ಗೆ ಮಹಿಳೆ ತನ್ನ ಪತಿ, ಚಿಕ್ಕಪ್ಪ ಮತ್ತು ಕೋಚ್‌ನಲ್ಲಿದ್ದ ಇತರ ಪ್ರಯಾಣಿಕರಿಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಕುಟುಂಬಸ್ಥರು ಹಾಗೂ ಇತರೆ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಲ್ಲಿ ಹಲವು ಗಂಟೆಗಳ ಕಾಲ ಆತನನ್ನು ಮನಬಂದಂತೆ ಥಳಿಸಿದ್ದರು.
ಮರುದಿನ ರೈಲು ಗುರುವಾರ ಬೆಳಿಗ್ಗೆ 4.30 ರ ಸುಮಾರಿಗೆ ಉತ್ತರ ಪ್ರದೇಶದ ಕಾನ್ಪುರ ಕೇಂದ್ರ ನಿಲ್ದಾಣವನ್ನು ತಲುಪಿದ್ದು, ಪ್ರಯಾಣಿಕರು ಸರ್ಕಾರಿ ರೈಲ್ವೆ ಪೊಲೀಸರಿಗೆ ಪ್ರಶಾಂತ್ ಕುಮಾರ್ ನನ್ನು ಒಪ್ಪಿಸಿ, ಬಾಲಕಿಗೆ ಕಿರು*ಕುಳ ನೀಡಿದ್ದಾನೆ ಎಂದು ಆತನ ವಿರುದ್ಧ ದೂರು ನೀಡಿದರು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ರೈಲ್ವೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವನು ಅದಾಗಲೇ ಮೃ*ತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದರು.
LATEST NEWS
ನೇರ ಉರಿಯಲ್ಲಿ ಆಹಾರ ಬೇಯಿಸಿದರೆ ಕ್ಯಾನ್ಸರ್ ಬರುವುದು ಖಚಿತ!
ಮಂಗಳೂರು: ರೊಟ್ಟಿ ಮತ್ತು ಚಪಾತಿ ಪ್ರತಿ ಭಾರತೀಯ ಕುಟುಂಬದ ಪ್ರಧಾನ ಆಹಾರವಾಗಿದೆ. ನೇರವಾಗಿ ಜ್ವಾಲೆಯ ಮೇಲೆ ರೊಟ್ಟಿಗಳನ್ನು ಬೇಯಿಸಿ ತಿನ್ನುವುದನ್ನು ಅನೇಕ ಜನರು ಇಷ್ಟ ಪಡುತ್ತಾರೆ ಆದರೆ ಈ ರೀತಿ ಮಾಡುವುದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ಹೌದು. ಇದು ಆಶ್ಚರ್ಯ ಎನಿಸಿದರೂ ಸತ್ಯ. ಕೆಲವರು ಮಾಂಸ ಆಹಾರಗಳನ್ನು ಕೂಡ ನೇರವಾಗಿ ಉರಿಯುವ ಜ್ವಾಲೆಯ ಮೇಲೆ ಹುರಿದು ಬೇಯಿಸುತ್ತಾರೆ. ಆದರೆ ಈ ರೀತಿ ಆಹಾರಗಳನ್ನು ಉರಿಯಲ್ಲಿ ನೇರವಾಗಿ ಇಟ್ಟು ಬೇಯಿಸುವುದು ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಈ ರೀತಿ ಬರುವ ಕ್ಯಾನ್ಸರ್ ಅನ್ನು ತಪ್ಪಿಸಲು ವೈದ್ಯರು ಕೆಲವು ಸಲಹೆಗಳನ್ನು ಕೂಡ ಸೂಚಿಸುತ್ತಾರೆ. ಈ ರೀತಿ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾದರೆ ಯಾವ ರೀತಿಯ ನಿಯಮಗಳನ್ನು ಅನುಸರಿಸಬೇಕು? ಇಲ್ಲಿದೆ ಮಾಹಿತಿ.
ಬ್ರೆಡ್, ರೊಟ್ಟಿ ಮತ್ತು ಚಪಾತಿ ಇತ್ಯಾದಿಗಳನ್ನು ಅನೇಕ ಜನರು ಹೆಚ್ಚಿನ ಉರಿಯಲ್ಲಿ ಬೇಯಿಸುತ್ತಾರೆ. ಇದರಿಂದ ಆಹಾರ ಚೆನ್ನಾಗಿ ಬೇಯುವುದಲ್ಲದೆ ರುಚಿ ಹೆಚ್ಚಾಗುತ್ತದೆ ಎಂಬುದು ಜನರ ಭಾವನೆ. ತಜ್ಞರು ಹೇಳುವ ಪ್ರಕಾರ ಆಹಾರ ಬೇಯಿಸಲು ಈ ಕ್ರಮವನ್ನು ಅನುಸರಿಸುವುದಾದರೆ ಉರಿಯಲ್ಲಿ ನೇರವಾಗಿ ಇಟ್ಟ ಆಹಾರ ಕಪ್ಪು ಬಣ್ಣಕ್ಕೆ ತಿರುಗಬಾರದು ಎಂದು ಹೇಳುತ್ತಾರೆ. ಅಂದರೆ ಬೆಂಕಿಯ ಜ್ವಾಲೆಯನ್ನು ಕಡಿಮೆ ಮಾಡುವ ಮೂಲಕ ಆಹಾರವನ್ನು ಆಗಾಗ ತಿರುಗಿಸುವ ಮೂಲಕ, ಅವು ಹೆಚ್ಚು ಕಾಲ ಜ್ವಾಲೆಯಲ್ಲಿ ಇರದಂತೆ ನೋಡಿಕೊಳ್ಳಬೇಕು. ಇದರಿಂದ ಇದು ಕಪ್ಪಗಾಗುವುದನ್ನು ತಡೆಯಬಹುದು. ಈ ರೀತಿ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಅಥವಾ ಕಪ್ಪಾದ ಪ್ರದೇಶಗಳನ್ನು ತೆಗೆದು ಹಾಕಬೇಕು.
ವೈದ್ಯರು ಹೇಳುವ ಪ್ರಕಾರ ನೇರವಾಗಿ ಉರಿಯ ಮೇಲೆ ಬೇಯಿಸಿದ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ತಿನ್ನಬೇಕು.
ನೇರವಾಗಿ ಜ್ವಾಲೆಯ ಮೇಲೆ ಆಹಾರ ಬೇಯಿಸುವ ಬದಲು ಬಾಣಲೆಯಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ಕಡಿಮೆ ಶಾಖದಲ್ಲಿ ಆಹಾರ ಬೇಯುತ್ತದೆ.
ನೀವೂ ಕೂಡ ಈ ರೀತಿಯಾಗಿ ಆಹಾರ ಸೇವನೆ ಮಾಡುತ್ತಿದ್ದರೆ ಅದರ ಜೊತೆಗೆ ಉತ್ಕರ್ಷಣ ನಿರೋಧಕ ಸಮೃದ್ಧ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಿ ಎಂದು ತಜ್ಞರು ಹೇಳುತ್ತಾರೆ. ಈ ಫ್ರೀ ರಾಡಿಕಲ್ಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!