ಕಾರ್ಕಳ: ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಕಾರಣ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲ್ಲೂಕಿನ ಬೋಳದ ಕೆದಿಂಜೆಯಲ್ಲಿ ನಡೆದಿದೆ.
ಬೈಕ್ ಸವಾರ ಗುರುಪ್ರಸಾದ್ ಗಾಯಗೊಂಡ ವ್ಯಕ್ತಿ.
ಗುರುಪ್ರಸಾದ್ ಅವರು ಬೆಳ್ಮಣ್ ಕಡೆಯಿಂದ ಕೆದಿಂಜೆ ಕಡೆಗೆ ಬರುವ ಸಂದರ್ಭ ಬೈಕ್ ನಿಯಂತ್ರಣ ತಪ್ಪಿ ವಾಹನ ಸಮೇತ ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ನ ಮೇಲೆ ಬಿದ್ದಿದೆ.
ಇದರ ಪರಿಣಾಮವಾಗಿ ಗುರುಪ್ರಸಾದ್ ಇವರ ಎಡಕೈ ತುಂಡಾಗಿದೆ.
ಗಂಭೀರ ಗಾಯಗೊಂಡ ಇವರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.