Friday, July 1, 2022

ಉಡುಪಿ: ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರೆ ದಾರುಣ ಸಾವು

ಉಡುಪಿ: ಬೈಕ್ ನಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರೆ ಮೃತಪಟ್ಟಂತಹ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಕಾಲ್ತೋಡು ಗ್ರಾಮದ ಮುರೂರು ಎಂಬಲ್ಲಿ ನಡದಿದೆ.

ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಶೆಟ್ಟಿ (55) ಎಂಬವರು ಬೈಕ್ ಸ್ಕಿಡ್ ಆಗಿ ಮೃತ ದುರ್ದೈವಿ.


ಅವರು ನಿನ್ನೆ ಬೆಳಗ್ಗೆ ಗ್ರಾಮ ಪಂಚಾಯತ್ ಮೀಟಿಂಗ್ ಮುಗಿಸಿಕೊಂಡು ಮಧ್ಯಾಹ್ನ ಊಟಕ್ಕೆ ಮುರೂರುನಲ್ಲಿ ಇರುವ ತಮ್ಮ ಮನೆಗೆ ಬೈಕ್ ನಲ್ಲಿ ಹಿಂಬದಿ ಕುಳಿತುಕೊಂಡು ಹೋಗುವಾಗ ಆಕಸ್ಮಿಕವಾಗಿ ಬೈಕ್ ಸ್ಕಿಡ್ ಆಗಿದೆ.

ಆಗ ಹಿಂಬದಿ ಕುಳಿತ ಲಲಿತಾ ಅವರು ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿದ್ದು ಅವರನ್ನು ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಾಲ್ತೋಡು ಗ್ರಾಮ ಪಂಚಾಯತ್ ಗೆ ಸದಸ್ಯರಾಗಿ 2ನೇ ಭಾರೀ ಆಯ್ಕೆ ಆಗಿದ್ದು ಅವರು ಪ್ರಸ್ತುತ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದರು.

ಜೊತೆಗೆ 10ವರ್ಷಗಳ ಕಾಲ ಕಾಲ್ತೋಡು ಭಾಗದಲ್ಲಿ ಆಶಾ ಕಾರ್ಯಕರ್ತೆ ಆಗಿ ಸೇವೆ ಸಲ್ಲಿಸಿದ್ದರು.
ಪ್ರಕರಣ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಉಡುಪಿ: ಬಾವಿಗೆ ಹಾರಿ ಯುವತಿ ಜೀವಾಂತ್ಯ

ಉಡುಪಿ: ಬಾವಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕಾಪುವಿನ ಮಡಂಬು ಇನ್ನಂಜೆಯಲ್ಲಿ ನಡೆದಿದೆ.ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ, ಗೋಪಾಲ ಶೆಟ್ಟಿಯವರ ಪುತ್ರಿ ಶರ್ಮಿಳಾ (22) ಸಾವನ್ನಪ್ಪಿದ ಯುವತಿ.ಶರ್ಮಿಳಾರವರು ಸುಮಾರು 8 ತಿಂಗಳಿನಿಂದ...

ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ‘ನನಗೆ EDಯಿಂದ ಲವ್‌ ಲೆಟರ್‌ ಬಂದಿದೆ’ ಎಂದ ಶರದ್‌ ಪವಾರ್‌

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 2004, 2009, 2014 ಮತ್ತು 2020ರ ಚುನಾವಣೆಗಳಲ್ಲಿ ಅವರು ಸಲ್ಲಿಸಿದ್ದ...

ರಾಜಸ್ಥಾನ್ ಟೈಲರ್ ಹತ್ಯೆ ಖಂಡಿಸಿ ಬಂಟ್ವಾಳದಲ್ಲಿ ಪ್ರತಿಭಟನೆ

ಬಂಟ್ವಾಳ: ರಾಜಸ್ತಾನದ ಉದಯಪುರದಲ್ಲಿ ಭಯೋತ್ಪಾದಕರಿಂದ ಹಿಂಸಾತ್ಮಕ ರೀತಿಯಲ್ಲಿ ಹತ್ಯೆಯಾದ ಟೈಲರ್ ಕನ್ಹಯ್ಯಲಾಲ್ ಅವರ ಸಾವಿಗೆ ನ್ಯಾಯ ಸಿಗಬೇಕು ಹಾಗೂ ಹತ್ಯೆ ಮಾಡಿದ ಭಯೋತ್ಪಾದಕ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್...