Friday, March 24, 2023

ಉಡುಪಿಯಲ್ಲಿ ಡಿವೈಡರ್‌ಗೆ ಗುದ್ದಿದ ಬೈಕ್: ವಿದ್ಯಾರ್ಥಿ ದುರಂತ ಅಂತ್ಯ-ಇಬ್ಬರಿಗೆ ಗಾಯ

ಉಡುಪಿ: ಬೈಕೊಂದು ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಇರುವ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಉಡುಪಿ ಮಣಿಪಾಲದ ಟೈಗರ್ ಸರ್ಕಲ್ ಬಳಿ ನಡೆದಿದೆ.


ಮೃತರನ್ನು ಸಹಸವಾರ ಶಿವಮೊಗ್ಗದ ಮೂಲದ ನಿಖಿಲ್ (23) ಎಂದು ಗುರುತಿಸಲಾಗಿದೆ. ಸವಾರ ನಿಹಾಲ್ ಹಾಗೂ ಇನ್ನೊರ್ವ ಸಹಸವಾರ ಮಹೇಂದ್ರ ಜಿ. ಎಂಬವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಇವರು ಮೂವರು ಮಣಿಪಾಲ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಟೆಕ್ ವಿದ್ಯಾರ್ಥಿಗಳಾಗಿದ್ದಾರೆ. ಇವರು ಮೂವರು ನಿನ್ನೆ ಬೆಳಗ್ಗೆ ಒಂದು ಬೈಕಿನಲ್ಲಿ ಕೆಳ ಪರ್ಕಳ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದು, ಈ ವೇಳೆ ನಿಂತ್ರಯಣ ತಪ್ಪಿದ ಬೈಕ್ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಮೂವರು ರಸ್ತೆಗೆ ಬಿದ್ದಿದ್ದು, ಇವರಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡ ನಿಖಿಲ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics