ಪಾಟ್ನಾ: ಪಕ್ಕದ ಗ್ರಾಮದಲ್ಲಿ ಮನೆ ಕಟ್ಟಿಕೊಳ್ಳುತ್ತಿರುವ ನೆಪ ಒಡ್ಡಿ ಶಾಲೆಯ ಕೊಠಡಿಯೊಂದನ್ನೇ ರೂಮ್ ಆಗಿ ಮಾಡಿಕೊಂಡ ಪ್ರಿನ್ಸಿಪಾಲ್ ಒಬ್ಬನ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ಶಾಲಾ ಕೊಠಡಿಯಲ್ಲಿ ಬೆಡ್, ಕಪಾಟು , ಫ್ರಿಡ್ಜ್ ,ಟಿವಿ , ಇಟ್ಟು ಐಶಾರಾಮಿ ರೂಮ್ ಮಾಡಿಕೊಂಡು ಅಡುಗೆಗೆ ಕಿಚನ್ ಕೂಡಾ ಮಾಡಿಕೊಂಡಿದ್ದಾನೆ.
ಬಿಹಾರ ರಾಜ್ನಯದ ನಕ್ಸಲ್ ಪೀಡಿತ ಜಿಲ್ಲೆಯಾಗಿರೋ ಜಮೂಯಿ ಜಿಲ್ಲೆಯ ಬರ್ದೂಲ್ ಎಂಬಲ್ಲಿ ಈ ಘಟನೆ ನಡೆದಿದೆ . ಮೇಲ್ದರ್ಜೆಗೇರಿಸಿದ ಮಾಧ್ಯಮಿಕ ಶಾಲೆಯ ಪ್ರಿನ್ಸಿಪಾಲ್ ಶೀಳಾ ಹೆಂಬ್ರಾಮ್ ಎಂಬಾತ ಶಾಲೆಯ ಕೊಠಡಿಯನ್ನೇ ಮನೆ ಮಾಡಿಕೊಂಡು ಅಲ್ಲೇ ವಾಸ ಮಾಡಿಕೊಂಡಿದ್ದಾನೆ. ಮನೆ ಕಟ್ಟುವ ನೆಪದಲ್ಲಿ ಎಲ್ಲಾ ಗೃಹಪಯೋಗಿ ವಸ್ತುಗಳನ್ನು ಶಾಲೆಗೆ ತಂದು ಅಲ್ಲೇ ಇರೋ ಕೊಠಡಿಯೊಂದನ್ನು ರೂಮಾಗಿ ಪರಿವರ್ತಿಸಿಕೊಂಡಿದ್ದಾನೆ. ಶಾಲೆಯ ಕಚೇರಿಯ ಕೊಠಡಿಯನ್ನು ರೂಮ್ ಆಗಿ ಪರಿವರ್ತಿಸಿದ್ದರೆ, ಇತರ ಕೊಠಡಿಯನ್ನ ಮನೆ ನಿರ್ಮಾಣದ ಸಾಮಾಗ್ರಿ ದಾಸ್ತಾನು ಇರಿಸೋ ಗೋಡೌನ್ ತರ ಮಾಡಿಕೊಂಡಿದ್ದಾನೆ. ಸಮಾಜಿಕ ಜಾಲತಾಣದಲ್ಲಿ ಈತನ ವಿಚಾರ ವೈರಲ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತನಿಕೆ ನಡೆಸಿದ್ದಾರೆ. 150 ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ 1 ರಿಂದ 8 ನೇ ತರಗತಿ ವರೆಗಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 150 ಮಕ್ಕಳಿಗೆ ಮೂರು ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದ್ದು, ಉಳಿದ ಕೊಠಡಿಯನ್ನು ಪ್ರಿನ್ಸಿಪಾ್ ಶೀಳಾ ಹೆಂಬ್ರಾಮ್ ಅತಿಕ್ರಮಿಸಿಕೊಂಡಿದ್ದು ತನಿಕೆಯಿಂದ ಬಹಿರಂಗವಾಗಿದೆ. ಇನ್ನು ಮನೆ ಸಾಮಾಗ್ರಿಯನ್ನು ಸಾಗಿಸಲು ಶಾಲೆಯ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳುತ್ತಿದ್ದ ಅನ್ನೋದು ಕೂಡಾ ತಿಳಿದು ಬಂದಿದೆ. ಆದ್ರೆ ಇದ್ರಲ್ಲಿ ನಂದೇನೂ ತಪ್ಪಿಲ್ಲ ನಾನು ಹೋಗಲು ಗ್ರಾಮಸ್ಥರೇ ಬಿಡ್ತಾ ಇಲ್ಲ ಎಂದಿರೋ ಪ್ರಿನ್ಸಿಪಾಲ್ ಮನೆ ಪೂರ್ಣಗೊಂಡ ತಕ್ಷಣ ಶಾಲೆಯಿಂದ ಸಾಮಾನು ಖಾಲಿ ಮಾಡೋದಾಗಿ ಹೇಳಿದ್ದಾನೆ. ಆದ್ರೆ ಅಧಿಕಾರಿಗಳು ತಕ್ಷಣ ಶಾಲೆಯಿಂದ ಎಲ್ಲಾ ಸಾಮಾನು ತೆಗೆದುಕೊಂಡು ಬೇರೆಡೆ ರೂಮ್ ಮಾಡುವಂತೆ ಪ್ರಿನ್ಸಿಪಾಲರನ್ನು ಶಾಲೆಯಿಂದ ಹೊರಗಟ್ಟಿದ್ದಾರೆ.
ವಿಜಯಪುರ: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 3ಕ್ಕೆ 3 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ಕೈ ನಾಯಕರ ಆತ್ಮವಿಶ್ವಾಸ ಹೆಚ್ಚಾಗಿದೆ. ಮೂರು ಉಪಚುನಾವಣೆ ಗೆದ್ದ ಕಾಂಗ್ರೆಸ್ ನಾಯಕರು ವಿಜಯೋತ್ಸವದಲ್ಲಿ ಬ್ಯುಸಿಯಾಗಿದ್ದಾರೆ.
ಕಾಂಗ್ರೆಸ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ ಬಿಜೆಪಿ ನಾಯಕರಿಗೆ ಬಹಳ ದೊಡ್ಡ ನಿರಾಸೆಯಾಗಿದೆ. ಬಿಜೆಪಿ ನಾಯಕರು ನಿರೀಕ್ಷೆ ಮಾಡದ ತೀರ್ಪನ್ನು ಮೂರು ವಿಧಾನಸಭಾ ಕ್ಷೇತ್ರದ ಮತದಾರರು ನೀಡಿದ್ದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಸೋಲು ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ಬೇಸರಕ್ಕೆ ಕಾರಣವಾಗಿದೆ.
ಬೈಎಲೆಕ್ಷನ್ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಮನೆಯಲ್ಲಿನ ಟಿವಿ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲ್ಹಾರ ಪಟ್ಟಣದ ವೀರಭದ್ರಪ್ಪ ಬಾಗಿ ಎಂಬುವವರು ಇಂದು ಬೆಳಗ್ಗೆಯಿಂದ ಉಪಚುನಾವಣಾ ಫಲಿತಾಂಶವನ್ನು ಟಿವಿಯಲ್ಲಿ ನೋಡುತ್ತಾ ಇದ್ದರು. 3ಕ್ಕೆ 3 ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದ್ದಂತೆ ಟಿವಿ ಒಡೆದು ರಾಜ್ಯ ಬಿಜೆಪಿ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರ ಒಗ್ಗಟ್ಟಿನ ಕೊರತೆಯಿಂದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಬಿಜೆಪಿ ವರಿಷ್ಠರು ಮೊದಲು ಬಿಜೆಪಿ ನಾಯಕರು, ಮುಖಂಡರ ಸಭೆ ಕರೆಯಬೇಕು. ಬಿಜೆಪಿ ನಾಯಕರ ನಡುವಿನ ಒಡಕಿನಿಂದ ಕಾರ್ಯಕರ್ತರು ಹಾಳಾಗುವ ಪರಿಸ್ಥಿತಿ ಬಂದಿದೆ ಎಂದು ವೀರಭದ್ರಪ್ಪ ಬಾಗಿ ಆಗ್ರಹಿಸಿದ್ದಾರೆ.
ಬೆಂಗಳೂರು : ಇಷ್ಟು ದಿನ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಜನರು ನಗದು ಹಣ ನೀಡಿ ಟಿಕೆಟ್ ಪಡೆಯುತ್ತಿದ್ದರು. ಈ ವೇಳೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ವಿಷಯವಾಗಿ ಗಲಾಟೆ ನಡೆಯುತ್ತಿತ್ತು. ಆದರೆ ಇದೀಗ ಪ್ರಯಾಣಿಕರ ಬೇಡಿಕೆಯಂತೆ ಕೆಎಸ್ಆರ್ಟಿಸಿಯು ಇನ್ನು ಮುಂದೆ ಬಸ್ಗಳಲ್ಲಿ ಯುಪಿಐ ಮೂಲಕ ಹಣ ಪೇ ಮಾಡಿ ಟಿಕೆಟ್ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.
ಹೌದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಂತೆ ಇದೀಗ KSRTC ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ, ದುಡ್ಡು ಕೊಟ್ಟು ಚಿಲ್ಲರೆ ವಿಚಾರವಾಗಿ ಕಂಡಕ್ಟರ್ ಜೊತೆಗೆ ಸಣ್ಣಪುಟ್ಟ ಕಿರಿಕ್ ಆಗುತ್ತಿದ್ದವು. ಆದರೆ ಇದೀಗ ಆ ಚಿಂತೆ ಬಿಟ್ಟುಬಿಡಿ. ಡೈನಮಿಕ್ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ರಾಜ್ಯದ 8800 ಬಸ್ಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ
ಆನ್ಲೈನ್ ಹಣ ಸಂದಾಯ ಮಾಡುವ ಆಪ್ ಗಳಾದ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಭೀಮ್ ಆಪ್ ಮೂಲಕ ಹಣ ಪಾವತಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಎಟಿಎಂ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಗಳಲ್ಲೂ ಹಣ ಸ್ವೀಕರಿಸಲಾಗುತ್ತದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.
ರಾಂಚಿ: ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಗಡಿ ದಾಟಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾದ ನಂತರ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ಮತ್ತೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಬೆಳಗ್ಗೆ 10.30ಕ್ಕೆ ರಾಜ್ಯದ 81 ಸ್ಥಾನಗಳ ಪೈಕಿ 51ರಲ್ಲಿ ಇಂಡಿಯಾ ಮೈತ್ರಿಕೂಟ ಮುಂದಿದೆ. 28 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ.
ಜಾರ್ಖಂಡ್ ವಿಧಾನಸಭೆಗೆ ಬಹುಮತಕ್ಕೆ 41 ಸ್ಥಾನಗಳು ಅಗತ್ಯವಿದೆ. ರಾಜ್ಯಕ್ಕೆ ನ.13 ರಂದು ಮೊದಲ ಹಂತದ ಮತದಾನವು 43 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆದಿತ್ತು.
ಮ್ಯಾಟ್ರಿಜ್ ಪ್ರಕಾರ, ಎನ್‌ಡಿಎ 42-47 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಜೆಎಂಎಂ ನೇತೃತ್ವದ ಮೈತ್ರಿಕೂಟವು 25-30 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಬಹುದು ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ, ಬಹುಪಾಲು ಸಮೀಕ್ಷೆಗಳು ಉಲ್ಟ ಆದಂತಿದೆ. ಆದಾಗ್ಯೂ, ಆಕ್ಸಿಸ್ ಮೈ ಇಂಡಿಯಾ ಮತ್ತು ಪಿ ಮಾರ್ಕ್ ಸಮೀಕ್ಷೆ ಭಿನ್ನವಾಗಿತ್ತು. ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ 49-59 ಮತ್ತು ಎನ್‌ಡಿಎ ಮೈತ್ರಿಕೂಟ 37-47 ಸ್ಥಾನ ಪಡೆಯಬಹುದು ಎಂದು ಅಂದಾಜಿಸಿದ್ದವು. ಬಹುಪಾಲು ಇದು ನಿಜವಾದಂತೆ ಕಾಣುತ್ತಿದೆ.