ಭುವನೇಶ್ವರ: ಹಣಕಾಸಿನ ಸಮಸ್ಯೆಯಿಂದಾಗಿ ಪೋಷಕರು ತಮ್ಮ 4 ವರ್ಷದ ಹೆಣ್ಣು ಮಗುವನ್ನು 40,000 ರೂ.ಗಳಿಗೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಒಡಿಶಾದಲ್ಲಿ ನಡೆದಿದೆ.
ಘಟನೆ ತಿಳಿದ ಕೂಡಲೇ ಮಗುವನ್ನು ರಕ್ಷಣೆ ಮಾಡಿರುವ ಬಡಗಡ ಪೊಲೀಸರು, ಪೋಷಕರು ಹಾಗೂ ಮಗು ಮಾರಾಟಕ್ಕೆ ಸಹಾಯ ಮಾಡಿದ ನಾಲ್ವರು ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿ ದಂಪತಿ ಬಿಹಾರ ಮೂಲದವರಾಗಿದ್ದು, ಬಡಗಡದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕುಟುಂಬದಲ್ಲಿ ತುಂಬಾ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ ತಮ್ಮ ನಾಲ್ಕು ವರ್ಷದ ಮಗುವನ್ನು ಪಿಪಿಲಿಯಲ್ಲಿರುವ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದರು ಎಂದು ಬಡಗಡ ಪೊಲೀಸ್ ಠಾಣೆಯ ಪ್ರಭಾರಿ ತೃಪ್ತಿ ರಂಜನ್ ನಾಯಕ್ ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ನಂತರ ಬಡಗಡ ಪೊಲೀಸರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಧ್ಯವರ್ತಿಗಳು ಮತ್ತು ಮಗುವಿನ ಪೋಷಕರು ಸೇರಿದಂತೆ ಒಟ್ಟು 6 ಜನರನ್ನ ಬಂಧಿಸಿದ್ದಾರೆ.
ಉಳ್ಳಾಲ: ಎರಡು ಶಾಲೆಗಳಿಗೆ ನುಗ್ಗಿದ ಕಳ್ಳರು ಕಚೇರಿಯನ್ನೆಲ್ಲಾ ತಡಕಾಡಿದ್ದು, ನಗದು ದೋಚಿ ಪರಾರಿಯಾಗಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆ ಕಾರ್ ಕೊಲ್ಯದಲ್ಲಿ ನಡೆದಿದ್ದು, ಈ ಪ್ರಕರಣವು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕೊಲ್ಯದ ಸಂತ ಜೋಸೆಫರ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಕನ್ನಡ ಮಾಧ್ಯಮ ಶಾಲೆಗಳಿಗೆ ಕಳ್ಳರು ಕನ್ನ ಹಾಕಿದ್ದು ,ಸಿಸಿಟಿವಿ ಕ್ಯಾಮೆರಾವನ್ನು ತಿರುಚಿ ಬೀಗ ಒಡೆದು ಒಳ ನುಗ್ಗಿ ಜಾಲಾಡಿದ್ದಾರೆ.
ಕೊಲ್ಯ ಜಾಯ್ ಲ್ಯಾಂಡ್ ಶಾಲೆಗೆ ಮೂರನೇ ಬಾರಿ ಕಳ್ಳರು ಕನ್ನ ಹಾಕಿದ್ದಾರೆ.ಈ ಹಿಂದೆಯೂ ಎರಡು ಬಾರಿ ಶಾಲೆಗೆ ಕಳ್ಳರು ನುಗ್ಗಿದ್ದು ನಗದು ಕಳವುಗೈದಿದ್ದರು.ಈ ಬಾರಿ ಸಿಸಿಟಿವಿ ಕ್ಯಾಮೆರ ತಿರುಚಿ ಒಳ ನುಗ್ಗಿದ ಕಳ್ಳರು ಪ್ರಾಂಶುಪಾಲರ ಕಚೇರಿ,ಕಬಾಟುಗಳ ಬೀಗ ಒಡೆದು ಹುಡುಕಾಟ ನಡೆಸಿದ್ದು, ವಿದ್ಯಾರ್ಥಿಗಳಿಂದ ಪಿಕ್ನಿಕ್ ಗಾಗಿ ಸಂಗ್ರಹಿಸಿದ್ದ ಸುಮಾರು 26,000 ರೂಪಾಯಿ ನಗದನ್ನ ಎಗರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಗೂ ಬುಧವಾರ ಮುಂಜಾನೆ 4.30 ಗಂಟೆ ವೇಳೆಗೆ ಕನ್ನ ಹಾಕಿದ ಕಳ್ಳನೋರ್ವನು ಸಿಸಿಟಿವಿ ಕ್ಯಾಮರಕ್ಕೆ ಮುಖ ಕಾಣದಿರಲು ಮ್ಯಾಟನ್ನು ಅಡ್ಡ ಹಿಡಿದು ಮುನ್ನುಗ್ಗುತ್ತಿರುವ ದೃಶ್ಯವು ಸಿಸಿಟಿವಿ ಯಲ್ಲಿ ದಾಖಲಾಗಿದೆ. ಸಿಸಿಟಿವಿ ಕ್ಯಾಮರ ತಿರುಚಿ ಕಚೇರಿ ,ಸ್ಟಾಪ್ ರೂಂನ ಕಪಾಟುಗಳನ್ನು ಒಡೆದು ತಡಕಾಡಿ ನಗದು ದೋಚಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎರಡೂ ಶಾಲೆಗಳಲ್ಲೂ ಏಕಕಾಲದಲ್ಲಿ ಕಳ್ಳತನ ನಡೆದಿದ್ದು, ಓರ್ವನೇ ಕಳ್ಳ ಕೈಚಳಕ ತೋರಿದ್ದಾನೋ ಅಥವ ತಂಡ ಶಾಮೀಲಾಗಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ದೈನಂದಿನ ಆಹಾರದಲ್ಲಿ ನೆಲ್ಲಿಕಾಯಿ ಸೇವಿಸುವುದರಿಂದ ಪಿಸಿಒಎಸ್ ಮತ್ತು ಪಿಸಿಒಡಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾರ್ಮೋನ್ ಸಮಸ್ಯೆಗಳನ್ನು ನಿಯಂತ್ರಿಸಲು ನೆಲ್ಲಿಕಾಯಿ ಸಹಾಯ ಮಾಡುತ್ತದೆ. ಮಾತ್ರವಲ್ಲದೆ, ಪಿಸಿಒಎಸ್ ಮತ್ತು ಪಿಸಿಒಡಿಯಂತಹ ಹಾರ್ಮೋನುಗಳ ಸಮಸ್ಯೆಗಳಿಗೆ ನೆಲ್ಲಿಕಾಯಿ ಸೇವನೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಯಾವೆಲ್ಲಾ ರೀತಿ ನೆಲ್ಲಿಕಾಯಿ ಪ್ರಯೋಜನಕಾರಿಯಾಗುವುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿವೆ.
ದಿನದಿಂದ ದಿನಕ್ಕೆ ಪಿಸಿಒಡಿ (PCOD), ಪಿಸಿಒಎಸ್ (PCOS) ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದು ಹಾರ್ಮೋನ್ ಸಂಬಂಧಿತ ಸಮಸ್ಯೆಯಾಗಿರುವುದರಿಂದ ಸಮತೋಲಿತ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಆಹಾರವು ಆರೋಗ್ಯಕರವಾಗಿದ್ದರೆ, ಹಾರ್ಮೋನುಗಳು ಸಹ ಸಮತೋಲದಲ್ಲಿರುತ್ತದೆ. ಇಲ್ಲವಾದಲ್ಲಿ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗದೇ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ. ಪಿಸಿಒಎಸ್ ಮತ್ತು ಪಿಸಿಒಡಿಯಂತಹ ಹಾರ್ಮೋನುಗಳ ಸಮಸ್ಯೆಗಳಲ್ಲಿ ಆಮ್ಲಾ ಸೇವನೆಯು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ದೈನಂದಿನ ಆಹಾರದಲ್ಲಿ ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುವುದನ್ನು ತಿಳಿಯೋಣ.
ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಪ್ರಯೋಜನಗಳು
1. ಹಾರ್ಮೋನುಗಳು ಸಮತೋಲಿತವಾಗಿರುತ್ತವೆ :
ಪಿಸಿಒಡಿ ಮತ್ತು ಪಿಸಿಒಎಸ್ ನಲ್ಲಿ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ.ಆಮ್ಲಾ ಪಿಸಿಒಎಸ್ ಮತ್ತು ಪಿಸಿಒಡಿಯಲ್ಲಿ ಸೂಪರ್ ಫುಡ್‌ನಂತೆ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ವಿಟಮಿನ್ ಸಿ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುವ ನೆಲ್ಲಿಕಾಯಿ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
2. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ :
ಮಹಿಳೆಯರು ಇನ್ಸುಲಿನ್ ಪ್ರತಿರೋಧ ಸಮಸ್ಯೆಗಳನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ ತೂಕ ಹೆಚ್ಚಳ ಮತ್ತು ಹಾರ್ಮೋನುಗಳ ಅಸಮತೋಲನದ ಅಪಾಯವಿದೆ. ಈ ಸಮಸ್ಯೆಗಳಲ್ಲಿ ಆಮ್ಲಾ ತಿನ್ನುವುದು ಪ್ರಯೋಜನಕಾರಿ. ಆಮ್ಲಾದಲ್ಲಿ ವಿಟಮಿನ್ ಸಿ ಇದ್ದು, ಇದು ರಕ್ತದಲ್ಲಿನ ಸಕ್ಕರೆಯ ಸಮತೋಲನವನ್ನು ಕಾಪಾಡುತ್ತದೆ. ಅಲ್ಲದೆ ಇದು ಫೈಬರ್ ಅನ್ನು ಹೊಂದಿರುವ ಕಾರಣ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.
3. ದೇಹವನ್ನು ನಿರ್ವಿಷಗೊಳಿಸುತ್ತದೆ :
ನೆಲ್ಲಿಕಾಯಿ ದೇಹದಲ್ಲಿ ನೈಸರ್ಗಿಕ ನಿರ್ವಿಷಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಯಕೃತ್ತನ್ನು ಸ್ವಚ್ಛವಾಗಿರಿಸುತ್ತದೆ. ಪಿತ್ತಜನಕಾಂಗದ ಡಿಟಾಕ್ಸ್ ನಿಂದಾಗಿ, ದೇಹದ ಎಲ್ಲಾ ಕಾರ್ಯಗಳು ಸರಿಯಾಗಿ ನಡೆಯಬಹುದು. ಅಲ್ಲದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
4. ಚರ್ಮದ ಆರೋಗ್ಯ :
ಪಿಸಿಒಎಸ್ ಮತ್ತು ಪಿಸಿಒಡಿ ಸಮಸ್ಯೆಯು ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಮುಖದಲ್ಲಿ ಕೂದಲು ಮತ್ತು ಮೊಡವೆಗಳ ಸಮಸ್ಯೆ ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ಆಮ್ಲಾ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಮೊಡವೆಗಳು ಮರುಕಳಿಸುವುದಿಲ್ಲ ಮತ್ತು ಚರ್ಮವು ಕಾಂತಿಯುತವಾಗಿರುತ್ತದೆ. ಅಲ್ಲದೆ ನೆಲ್ಲಿಕಾಯಿ, ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
5. ಫಲವತ್ತತೆಯನ್ನು ಹೆಚ್ಚಿಸಲು ಪ್ರಯೋಜನಕಾರಿ :
ದೈನಂದಿನ ಆಹಾರದಲ್ಲಿ ನೆಲ್ಲಿಕಾಯಿ ಸೇವಿಸುವುದರಿಂದ ಫಲವತ್ತತೆಯೂ ಹೆಚ್ಚಾಗುತ್ತದೆ. ಇದು ಅಂಡಾಶಯಗಳಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಇದರ ಸೇವನೆಯು ಋತುಚಕ್ರವನ್ನು ನಿಯಮಿತವಾಗಿರಿಸುತ್ತದೆ ಮತ್ತು ಋತುಚಕ್ರದ ಹರಿವನ್ನು ಸುಧಾರಿಸುತ್ತದೆ. ಗರ್ಭಧರಿಸಲು ಪ್ರಯತ್ನಿಸುತ್ತಿರುವವರು ಪ್ರತಿದಿನ ಆಮ್ಲಾ ತಿನ್ನುವಂತೆ ವೈಧ್ಯರು ಸಲಹೆ ನೀಡಲಾಗುತ್ತದೆ.
ನೆಲ್ಲಿಕಾಯಿ ರಸವನ್ನು ತಯಾರಿಸಿ ಕುಡಿಯಬಹುದು. ಇದಲ್ಲದೆ, ಆಮ್ಲಾ ಪುಡಿ ಮತ್ತು ಹಸಿ ಆಮ್ಲಾವನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆದರೆ ಬೇರೆ ಬೇರೆ ರೀತಿಯ ಕಾಯಿಲೆಗಳಿದ್ದಲ್ಲಿ ಇದನ್ನು ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಮಂಗಳೂರು/ ರಾಮನಗರ : ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಎರಡು ದಿನದ ಶಿಶುವನ್ನು ಟಾಯ್ಲೆಟ್‌ನಲ್ಲಿ ಹಾಕಿ ಫ್ಲಶ್ ಮಾಡಿರುವ ಕೃ*ತ್ಯ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರೋದು ರಾಮನಗರದಲ್ಲಿ.
ರಾಮನಗರದ ದಯಾನಂದ್ ಸಾಗರ್ ಆಸ್ಪತ್ರೆಯಲ್ಲಿ ಕೃ*ತ್ಯ ನಡೆದಿದೆ. ಟಾಯ್ಲೆಟ್ ಪರಿಶೀಲಿಸುವ ವೇಳೆ ಶಿಶುವಿನ ಶ*ವ ಪತ್ತೆಯಾಗಿದೆ. ತಾಯಿಯೇ ಇಂತಹ ಕೃ*ತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಟಾಯ್ಲೆಟ್ ಗುಂಡಿಯಲ್ಲಿ ನವಜಾತ ಶಿಶುವಿನ ಮೃ*ತದೇಹಗಳು ಪತ್ತೆಯಾಗಿದ್ದು, ಈ ಬಗ್ಗೆ ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೃ*ತ್ಯ ಎಸಗಿದವರ ಪತ್ತೆಗೆ ಬಲೆ ಬೀಸಿದ್ದಾರೆ.
ಆಸ್ಪತ್ರೆಯ ನೆಲಮಹಡಿಯ ಟಾಯ್ಲೆಟ್‌ಗೆ ತೆರಳಿದ್ದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಮಹಿಳೆಯರ ಟಾಯ್ಲೆಟ್‌ನಲ್ಲಿ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ನೀರು ಫ್ಲಶ್ ಆಗದ ಕಾರಣ ಸ್ವಚ್ಛಗೊಳಿಸುವಂತೆ ಹಾಸ್ಪಿಟಲ್ ಸ್ವೀಪರ್‌ಗೆ ಹೇಳಿದ್ದಾರೆ. ಸಿಬ್ಬಂದಿ ವ್ಯಾಕ್ಯೂಮ್‌ನಿಂದ ಕ್ಲೀನ್ ಮಾಡಿದ್ದಾರೆ. ಆಗ ಯಾವುದೋ ವಸ್ತು ಅಡ್ಡ ಇರುವುದು ಕಂಡುಬಂದಿದೆ. ಟಾಯ್ಲೆಟ್ ಬ್ಲಾಕ್ ಆಗಿರುವುದನ್ನು ತೆಗೆಯಲು ಪರಿಕರಗಳನ್ನು ಬಳಸಿ ಒಳಗೆ ಸಿಕ್ಕಿ ಹಾಕಿಕೊಂಡಿದ್ದನ್ನು ತೆಗೆಯುವ ಯತ್ನ ಮಾಡಲಾಗಿದೆ. ಈ ವೇಳೆ ನವಜಾತ ಶಿಶುವಿನ ಶ*ವ ಸಿಕ್ಕಿದೆ.