Connect with us

BIG BOSS

ಜಗದೀಶ್ ಇದ್ರೇನೆ ಬಿಗ್’ಬಾಸ್ ಗೆ ಕಳೆ ಅಂತಿದ್ದಾರೆ ಜನ! 

Published

on

ಬಿಗ್ ಬಾಸ್ ಸೀಸನ್ 11 ಆರಂಭವಾದಾಗ ಲಾಯರ್ ಜಗದೀಶ್ ನಡವಳಿಕೆ ನೋಡಿ ಇವರನ್ನ ಈ ವಾರವೇ ಮನೆಯಿಂದ ಹೊರಗೆ ಕಳುಹಿಸಿ ಎಂದಿದ್ದ ಜನರು ಈಗ ಜಗ್ಗು ಇದ್ರೇನೆ ಬಿಗ್ ಬಾಸ್ ಗೆ ಕಳೆ ಅಂತಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ದಿನವೇ ಮನೆಮಂದಿ ಜೊತೆ ಜಗಳಕ್ಕೆ ನಿಂತಿದ್ದ ಜಗದೀಶ್, ನಂತರದ ದಿನಗಳಲ್ಲಿ, ಬಿಗ್ ಬಾಸ್ ನ್ನೆ ಎಕ್ಸ್ ಪೋಸ್ ಮಾಡುವ, ಕಲರ್ಸ್ ಕನ್ನಡಕ್ಕೆ ಬೆದರಿಕೆ ಹಾಕುವ ಬಗ್ಗೆ ಮಾತನಾಡಿ ಭಾರಿ ಸುದ್ದಿಯಾಗಿದ್ದರು. ಕಿಚ್ಚನ ಪಂಚಾಯ್ತಿಯಲ್ಲೂ ಸಹ ಜಗದೀಶ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು ಆಯ್ತು.

ಮೊದಲನೇ ವಾರದಲ್ಲಿ ಜಗದೀಶ್ ಜಗಳ, ಧನಿ ಎತ್ತರಿಸಿ ಮಾತನಾಡುತ್ತಾ, ಯಾವಾಗ್ಲೂ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದ ಜಗದೀಶ್ ಅವರನ್ನು ನೋಡಿ ಜನ ದಯವಿಟ್ಟು ಇವರನ್ನ ಬಿಗ್ ಬಾಸ್ ಮನೆಯಿಂದ ಹೊರಹಾಕಿ, ಇವರಿದ್ದರೆ ಬಿಗ್ ಬಾಸ್ ನೋಡೊದಕ್ಕೆ ಸಾಧ್ಯ ಆಗ್ತಿಲ್ಲ. ತುಂಬಾನೆ ಇರಿಟೇಟಿಂಗ್ ವ್ಯಕ್ತಿ ಎಂದೆಲ್ಲಾ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದರು.

ಆದ್ರೆ ದಿನಗಳು ಕಳೆಯುತ್ತಿದ್ದಂತೆ, ಲಾಯರ್ ಜಗದೀಶ್ ಜನಪ್ರಿಯತೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಬಿಗ್ ಬಾಸ್ ಶೋ ಬಿಡುಗಡೆ ಮಾಡುತ್ತಿರುವ ಪ್ರತಿಯೊಂದು ಪ್ರೊಮೋದಲ್ಲಿ ಹೆಚ್ಚಾಗಿ ಜಗದೀಶ್ ಅವರೇ ಹೈಲೈಟ್ ಆಗುತ್ತಿದ್ದು, ಸಿಕ್ಕಾಪಟ್ಟೆ ಎಂಟರ್ ಟೇನ್ ಮೆಂಟ್ ಕೂಡ ಕೊಡುತ್ತಿದ್ದಾರೆ, ಜಗಳಾನೂ ಮಾಡ್ತಾರೆ, ಗೇಮ್ ಕೂಡ ಆಡಿ ಎಲ್ಲಾ ಕಡೆ ಸದ್ದು ಮಾಡ್ತಿದ್ದಾರೆ.

ಜಗದೀಶ್ ಆಟ, ಮನರಂಜನೆ ನೋಡಿ ಜನರು ಈಗ ಜಗ್ಗಿ ಮಹಾನ್ ಕಲಾವಿದ, ಜಗದೀಶ್ ಕೊನೆವರೆಗೂ ಇರಬೇಕು, ಜಗದೀಶ್ ಇದ್ರೆನೆ ಬಿಗ್ ಬಾಸ್ ಗೊಂದು ಕಳೆ, ಇಲ್ಲಾಂದ್ರೆ ತುಂಬಾನೆ ಬೋರ್, ಜಗದೀಶ್ ಒಬ್ರೇನೆ ಮನರಂಜನೆ ನೀಡ್ತಿರೋದು, ಜಗದೀಶ್ ಮತ್ತು ಹಂಸ ಕೊನೆವರೆಗೂ ಇರಬೇಕು, ಜಗದೀಶ್ ಇದ್ರೇನೆ ಮಜಾ ಅಂತೆಲ್ಲಾ ಪ್ರೊಮೋ ನೋಡಿ ಕಾಮೆಂಟ್ ಮಾಡ್ತಿದ್ದಾರೆ.

ಅಷ್ಟೇ ಅಲ್ಲ ಜಗ್ಗು ದಾದಾಗೆ ನಮ್ಮ ಬೆಂಬಲ, ಜಗ್ಗು ಆಟ ಬೆಂಕಿ, ನಾವು ಜಗ್ಗು ಅಭಿಮಾನಿಗಳು, ಜಗದೀಶ್ ಅಣ್ಣ ನೀವು ಏನ್ ಮಾಡಿದ್ರು ನಿಮ್ಮ ಬೆಂಬಲಕ್ಕೆ ನಾವಿದ್ದೀವಿ ಎನ್ನುತ್ತಿದ್ದಾರೆ ಜನ. ಒಟ್ಟಲ್ಲಿ ಜಗದೀಶ್ ಕಂಡ್ರೆ ಆಗದೆ ಇರೋ ಜನರು ಈಗ ಜಗದೀಶ್ ಇರ್ಬೇಕು ಅಂತಿದ್ದಾರೆ.

BIG BOSS

ಪಾರು ಖ್ಯಾತಿಯ ಮೋಕ್ಷಿತಾಗೆ ತುಕಾಲಿ ಸಂತು ತರದ ಗಂಡ ಬೇಕಂತೆ..!

Published

on

ಕಿರುತೆರೆ ಕಲಾವಿದ ತುಕಾಲಿ ಸಂತೋಷ್‌ ಅವರ ಪತ್ನಿ ಮಾನಸ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದರು ಮೊದಲ ಕೆಲವು ವಾರಗಳಲ್ಲಿ ಸಖತ್‌ ಆಯಕ್ವೀವ್‌ ಆಗಿದ್ದ ಮಾನಸ ಸದ್ಯ ಶೋನಿಂದ ಹೊರಬಿದ್ದಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಮಾನಸ, ಬಿಗ್ ಬಾಸ್‌ಗೆ ಹೋಗುವ ಮುನ್ನ ಸಿದ್ಧತೆ ಹೇಗಿತ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

ಈ ವೇಳೆ ಪಾರು ಖ್ಯಾತಿಯ ಮೋಕ್ಷಿತಾ ಪೈ ಅವರಿಗೆ ತುಕಾಲಿ ಸಂತೋಷ್‌ ರೀತಿಯ ಗಂಡ ಬೇಕಂತೆ ಎನ್ನುವ ವಿಚಾರವನ್ನು ಮಾನಸ ಹೇಳಿದ್ದಾರೆ. ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾನಸ, ಬಿಗ್‌ ಬಾಸ್‌ ಶೋ ಆರಂಭಕ್ಕೆ ಎರಡು ದಿನ ಇರುವಾಗ ನನಗೆ ಕಾಲ್‌ ಬಂದಿದ್ದು. ಅದರ ಮಧ್ಯೆ ನಮ್ಮ ಆರೋಗ್ಯದ ಬಗ್ಗೆ ಒಂದು ರಿಪೋರ್ಟ್‌ ಕೊಡಬೇಕು. ಹೀಗಾಗಿ ಅದನ್ನು ಸಿದ್ಧ ಮಾಡುವುದರಲ್ಲೇ ಒಂದು ದಿನ ಹೋಯ್ತು ಎಂದರು.

ಮತ್ತೆ ಅಗ್ರಿಮೆಂಟ್, ಪ್ರೋಟೋಕಾಲ್‌, ವಿಡಿಯೋ ಕಾಲ್ ಇವೆಲ್ಲಾ ಮಾತನಾಡುವಷ್ಟರಲ್ಲಿ ಎರಡನೇ ದಿನ ಕೂಡ ಹೋಯ್ತು. ಮೂರನೇ ದಿನಕ್ಕೆ ಬಿಗ್‌ ಬಾಸ್‌ ಮನೆಯಲ್ಲೇ ಇದ್ದೇನೆ. ಹೀಗಾಗಿ ಮನೆಯಲ್ಲಿದ್ದ ಬಟ್ಟೆಗಳನ್ನೇ ಹೋಗುವಾಗ ತುಂಬಿಕೊಂಡು ಹೋಗಿದ್ದೆ. ಮುಂದಿನ ವಾರದಿಂದ ಸಂತು ಬಟ್ಟೆ ಕಳುಹಿಸಲು ಶುರು ಮಾಡಿದರು. ಮೊದಲ ದಿನ ಹೋಗುವಾಗ ನನಗೆ ಅಂತಾ ನಾನು ಏನೂ ತೆಗೆದುಕೊಳ್ಳಲಿಲ್ಲ ಎಂದರು.

ಸಂತು ಹೊಸ ಹೊಸ ಬಟ್ಟೆಗಳನ್ನೇ ಕಳುಹಿಸುತ್ತಿದ್ದರು. ಸಂತು ಬಟ್ಟೆ ಚಪ್ಪಲಿ ಕಳುಹಿಸಿದಾಗ ನಾನೇ ಅಲ್ಲಿ ಬೈಯುತ್ತಿದೆ. ಬರುವ ಸಂಬಳವನ್ನೆಲ್ಲಾ ಇದಕ್ಕೆ ಖುರ್ಚು ಮಾಡುತ್ತಿದ್ದಾರೇನೋ, ಹೊರಗಡೆ ಹೋದ ಮೇಲೆ ಎಲ್ಲಾ ದುಡ್ಡು ಖಾಲಿ ಎನ್ನುತ್ತಾರೇನೋ ಎನ್ನುವ ಭಯ ಇತ್ತು. ಅಷ್ಟೊಂದು ಬಟ್ಟೆ ಕಳುಹಿಸಿದ್ದರು. ಇರುವ ಬಟ್ಟೆಗಳೇ ಸಾಕು ಅನಿಸುತ್ತಿತ್ತು. ಅದಕ್ಕೆ ಹೊರಗಡೆ ಬಂದ ಮೇಲೆ ಎಷ್ಟು ದುಡ್ಡು ಖರ್ಚು ಮಾಡಿದೆ ಅಂತಾ ಫಸ್ಟ್ ಕೇಳಿದೆ ಎಂದು ಹೇಳಿದರು.

ಸಂತು ಬಟ್ಟೆ ಕಳುಹಿಸುತ್ತರುವುದನ್ನು ನೋಡಿ ಖುಷಿ ಕೂಡ ಆಗಿತ್ತು. ಬಟ್ಟೆ ಮಾತ್ರ ಅಲ್ಲ..ಸ್ಟಿಕರ್‌ಯಿಂದ ಹಿಡಿದು ಕ್ಲಿಪ್‌ ತನಕನೂ ಸಂತೂನೇ ಕಳುಹಿಸುತ್ತಿದ್ದರು. ಬೇರೆ ಯರೂ ಕಳುಹಿಸುವವರು ಇರಲಿಲ್ಲ ನನಗೆ. ಸಂತು ಈ ರೀತಿ ಕಳುಹಿಸುವುದನ್ನು ನೋಡಿ ಮೋಕ್ಷಿತಾ ಹಾಗೂ ಗೌತಮಿ ತುಂಬಾ ಆಶ್ಚರ್ಯ ಪಡುತ್ತಿದ್ದರು. ನನಗಿಂತ ಅವರಿಬ್ಬರೇ ಕ್ಯಾಮರಾ ಮುಂದೆ ಹೋಗಿ ಥ್ಯಾಂಕ್ಯೂ ಸಂತೋಷ್‌ ಅವರೇ ಎನ್ನುತ್ತಿದ್ದರು.

ಮೋಕ್ಷಿತಾ ಅಕ್ಕ ಯಾವಾಗಲೂ ಹೇಳುತ್ತಿದ್ದರು, ಸಿಗೋದು ಸಿಗುತ್ತಾರೆ ಸಂತು ತರ ಗಂಡ ಸಿಕ್ಕಿದರೆ ಸಾಕು ಅಂತಾ ಎಷ್ಟೋ ಸಲ ಹೇಳಿದ್ದಾರೆ. ಹೊರಗಡೆ ಇದ್ದಾಗ ಸಂತು ಅಷ್ಟೊಂದು ಕೊಡಿಸುತ್ತಿರಲಿಲ್ಲ. ಆದರೆ ಒಳಗಡೆ ಹೋದ ಮೇಲೆ ಬಹುಶಃ ಇನ್ನೊಂದಿಷ್ಟು ದಿನ ಇದ್ದು ಬರಲಿ ಅಂತಾ ಖುಷಿಯಿಂದ ಕಳುಹಿಸುತ್ತರೆನೋ…ಅದೇನೆ ಇರಲಿ ತುಂಬಾ ಚೆನ್ನಾಗಿ ಬಟ್ಟೆಗಳನ್ನು ಕಳುಹಿಸುತ್ತಿದ್ದರು ಎಂದು ಮಾನಸ ತಮ್ಮ ಪತಿ ತುಕಾಲಿ ಸಂತು ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

Continue Reading

BIG BOSS

‘ಹೂಸು’ ಬಿಡೋದು ತಪ್ಪಾ ?? ಬಿಗ್‌ಬಾಸ್ ಮನೆಯಲ್ಲಿ ಹನುಮಂತನ ಆಕ್ರೋಶ

Published

on

BBK 11: ಬಿಗ್‌ಬಾಸ್‌ ಮನೆಯಲ್ಲಿ ಆರನೇ ವಾರ ಯಾವುದೇ ಎಲಿಮಿನೇಷನ್‌ ಆಗಿಲ್ಲ. ಆದರೆ ಮುಂದಿನ ವಾರ ಮಿಡ್‌ ವೀಕ್‌ ಎಲಿಮಿನೇಷನ್‌ ಅಥವಾ ಡಬಲ್‌ ಎಲಿಮಿನೇಷನ್‌ ಇದ್ದರೂ ಅಚ್ಚರಿಪಡಬೇಕಿಲ್ಲ.

ಎಲಿಮಿನೇಷನ್‌ ಹಂತದಿಂದ ಕೊನೆ ಕ್ಷಣದಲ್ಲಿ ಪಾರಾಗಿ ಬಂದ ಭವ್ಯ ಗೌಡ ಅವರಿಗೆ ಬಿಗ್‌ ಬಾಸ್‌ ಎಚ್ಚರಿಕೆ ಜತೆಗೆ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡಿದ್ದಾರೆ. ಅದನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಆಟದ ರೋಚಕತೆಯನ್ನು ಬದಲಾಯಿಸಲು ಬಿಗ್‌ ಬಾಸ್‌ ಸ್ಪರ್ಧಿಗಳನ್ನು ಜೋಡಿಗಳಾಗಿ ವಿಂಗಡಿಸಿದ್ದು ಹನುಮಂತು – ಗೌತಮಿ, ಧರ್ಮ – ಐಶ್ವರ್ಯಾ, ಚೈತ್ರಾ – ಶಿಶಿರ್‌, ಮಂಜು – ಭವ್ಯ, ಅನುಷಾ – ಸುರೇಶ್‌, ಮೋಕ್ಷಿತ – ಧನರಾಜ್ ಅವರನ್ನು ಜೋಡಿಗಳಾಗಿ ಮಾಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಈ ವೇಳೆ ಬಿಗ್‌ ಬಾಸ್‌ ಈ ಮನೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳದ ಸದಸ್ಯ ಯಾರೆಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಬಹುತೇಕರು ಹನುಮಂತು ಎಂದು ಹೇಳಿದ್ದಾರೆ.‌

‘ನನ್ನ ಹೆಸರು ಬರೆದು ಬಿಡೋದ, ನಾನೇನು ಕೇಳಲ್ಲ ಅಂಥ. ಈ ಮನೆಯಲ್ಲಿ ಹೂಸು ಬಿಡೋದು ತಪ್ಪಾ’ ಎಂದು ಹನುಮಂತು ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಸೋಮವಾರ ರಾತ್ರಿ (ನ.11ರಂದು) ಈ ಸಂಚಿಕೆ ಪ್ರಸಾರವಾಗಲಿದೆ.

Continue Reading

BIG BOSS

ಭವ್ಯಗೌಡನನ್ನು ಆಲಂಗಿಸಿ ಜೊತೆಯಾದ ಮೋಕ್ಷಿತಾ ಪೈ ; ವಿರೋಧಿಗಳಿಬ್ಬರು ಯಾಕೆ ಜೊತೆಯಾದ್ರು ಗೊತ್ತಾ ??

Published

on

BBK 11 : ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಯಾವುದೂ ಸರಿ ಇರಲಿಲ್ಲ. ಹೆಸರಿಗೆ ಮಾತ್ರ ಎದುರಿನಿಂದ ನಗುತ್ತಿದ್ದ ಅವರಿಬ್ಬರು, ಹಿಂದಿನಿಂದ ಒಬ್ಬರಿಗೊಬ್ಬರು ಬೈದು ಕೊಳ್ಳುತ್ತಿದ್ದರು. ಆದರೆ, ಭವ್ಯಾ ನೋವಿನಲ್ಲಿ ಇರುವಾಗ ಮೋಕ್ಷಿತಾ ಹೆಗಲುಕೊಟ್ಟಿದ್ದಾರೆ. ಭವ್ಯಾನ ಬಿಗಿದಪ್ಪಿ ಸಮಾಧಾನ ಮಾಡಿದ್ದಾರೆ. ನಿನ್ನೆಯ (ನವೆಂಬರ್ 11) ಎಪಿಸೋಡ್​ನಲ್ಲಿ ಇದು ಹೈಲೈಟ್ ಆಗಿದೆ.

ಭವ್ಯಾ ಗೌಡ ಅವರಿಗೆ ಕಳೆದ ವಾರ ಸಾಕಷ್ಟು ಹಿನ್ನಡೆಗಳು ಆದವು. ಕ್ಯಾಪ್ಟನ್ಸಿ ರೇಸ್​ನಿಂದ ಅವರು ಔಟ್ ಆದರು. ಇದಕ್ಕೆ ಮಂಜು ಅವರು ಮಾಡಿದ ಕುತಂತ್ರವೇ ಕಾರಣ. ಇದಕ್ಕೆ ಅವರು ಸಾಕಷ್ಟು ಬೇಸರಗೊಂಡರು. ಆ ಬಳಿಕ ಕಿಚ್ಚನ ಚಪ್ಪಾಳೆ ಕೂಡ ಮಿಸ್ ಆಯಿತು. ಇದಕ್ಕೆ ಭವ್ಯಾ ಗೌಡ ಅವರು ಸಾಕಷ್ಟು ನೊಂದುಕೊಂಡರು.

ಭವ್ಯಾ ಅವರು ಉತ್ತಮವಾಗಿ ಆಡಿದ್ದರು ನಿಜ. ಆದರೆ, ಪ್ರಶ್ನೆ ಕೇಳುವ ಜಾಗದಲ್ಲಿ ಮೌನವಾಗಿದ್ದರು. ಇದಕ್ಕೆ ಸುದೀಪ್ ಅಸಮಾಧಾನ ಹೊರಹಾಕಿದರು. ‘ಒಂದೇ ಒಂದು ತಪ್ಪಿನಿಂದ ನಿಮಗೆ ಕಿಚ್ಚನ ಚಪ್ಪಾಳೆ ಮಿಸ್ ಆಗಿದೆ’ ಎಂದು ಹೇಳುತ್ತಿದ್ದಂತೆ ಭವ್ಯಾ ಅವರು ಕಣ್ಣೀರು ಹಾಕಿದರು. ಎಪಿಸೋಡ್ ಮುಗಿದ ಬಳಿಕವೂ ಅವರು ಅಳುತ್ತಲೇ ಇದ್ದರು.

‘ಮನೆಯ ಹೊರಗೂ ಹೀಗೆ ಆಗುತ್ತಿತ್ತು. ಕಾರು ತೆಗೆದುಕೊಳ್ಳಬೇಕು ಎಂದಾಗ ಮನೆಯಲ್ಲಿ ಏನೋ ಸಮಸ್ಯೆ ಆಯಿತು. ಈ ಕಾರಣಕ್ಕೆ ಕಾರು ತೆಗೆದುಕೊಳ್ಳೋಕೆ ಆಗಿರಲಿಲ್ಲ. ಇಲ್ಲಿಯೂ ಹಾಗೆಯೇ ಆಗುತ್ತಿದೆ’ ಎಂದು ಅಳಲು ಆರಂಭಿಸಿದರು. ಆಗ ಅಲ್ಲಿಯೇ ಇದ್ದ ಮೋಕ್ಷಿತಾ ಅವರು ಭವ್ಯಾ ಅವರನ್ನು ಹಗ್​ ಮಾಡಿ ಸಮಾಧಾನ ಮಾಡಿದ್ದಾರೆ. ಈ ಬಗ್ಗೆ ಮೆಚ್ಚುಗೆ ಸಿಕ್ಕಿದೆ.

ಭವ್ಯಾ ಹಾಗೂ ಮೋಕ್ಷಿತಾ ಈ ಮೊದಲು ಮಾತಿನ ಫೈಟ್ ಮಾಡಿಕೊಂಡಿದ್ದು ಇದೆ. ಹಿಂದಿನಿಂದ ಮಾತನಾಡಿಕೊಂಡಿದ್ದೂ ಇದೆ. ಆದರೆ, ಇನ್ಮೇಲೆ ಇವರ ಮಧ್ಯೆ ಗೆಳೆತನ ಬೆಳೆಯುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

Continue Reading

LATEST NEWS

Trending

Exit mobile version