ಮಂಗಳೂರು/ಬೆಂಗಳೂರು: ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಹಾಗೂ ಮಾಡೆಲ್ ಆಗಿರುವ ಪವಿ ಪೂವಪ್ಪ ಅವರು ‘ಬಿಗ್ ಬಾಸ್ ಸೀಸನ್ 10’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ಇವರ ಬ್ರೇಕಪ್ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ.
ನಾನು ಏಕೆ ಬ್ರೇಕಪ್ ಮಾಡಿಕೊಂಡೆ ಅನ್ನುವ ವಿಚಾರವನ್ನು ಅವರು ತಿಳಿಸಿದ್ದಾರೆ. ಯುಟ್ಯೂಬ್ ಚಾನಲ್ ವೊಂದಕ್ಕೆ ನೀಡಿರುವ ಸಂದರ್ಶನವಿಗ ಸಖತ್ ವೈರಲ್ ಆಗುತ್ತಿದೆ. ಬಿಗ್ ಬಾಸ್ ಸಮಯದಲ್ಲಿ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದ ಪವಿ,’ನನ್ನ ಬಾಯ್ ಫ್ರೆಂಡ್ ಐರ್ ಲ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ ನಾವಿಬ್ಬರು ಮದುವೆಯಾಗುತ್ತಿದ್ದೇವೆ’ ಅಂತಾ ಹೇಳಿದ್ದರು.
ಹೌದು, ಡಿಜೆ ಮ್ಯಾಡಿ ಎಂಬುವವರ ಜೊತೆ ಪವಿ ಪೂವಪ್ಪ ಕಳೆದ ಐದು ವರ್ಷಗಳಿಂದ ರಿಲೇಷನ್ ಶಿಪ್ ನಲ್ಲಿದ್ದರು. ಈ ಜೋಡಿ ಶೀಘ್ರವೇ ಮದುವೆ ಆಗಲಿದೆ ಅಂತಾ ಅನೇಕರು ಅಂದುಕೊಂಡಿದ್ದರಂತೆ. ಆದರೆ ಇದು ಹುಸಿಯಾಗಿದ್ದು, ‘ನಮ್ಮಿಬ್ಬರ ನಡುವೆ ಬ್ರೇಕಪ್ ಆಗಿದೆ’ ಅಂತಾ ಸ್ವತಃ ಪವಿ ಅವರೇ ಯೂಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪವಿ,”ನಾವು ಐದು ವರ್ಷಗಳಿಂದ ಜೊತೆಗಿದ್ದೇವೆ. ನಮ್ಮಿಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇತ್ತು. ಆದರೆ ಬರುಬರುತ್ತಾ ನನ್ನ ನಾಯಿ ಬಗ್ಗೆ ಅವರಿಗೆ ಸಮಸ್ಯೆ ಶುರುವಾಯಿತು. ಮದುವೆಯಾದ ಮೇಲೆ ಮನೆಯಲ್ಲಿ ನಾಯಿಯನ್ನು ಬಿಡುವುದಿಲ್ಲ ಅಂತಾ ಹೇಳಿದರು. ಇದರಿಂದಲೇ ನಮ್ಮಿಬ್ಬರ ನಡುವೆ ಸಮಸ್ಯೆ ಶುರುವಾಯ್ತು. ಸಣ್ಣಪುಟ್ಟ ವಿಚಾರಗಳಿಗೆ ಕಾರಣ ಕೊಡಲು ಶುರು ಮಾಡಿದರು. ಹೀಗಾಗಿ ನಾನು ಬ್ರೇಕಪ್ ತೀರ್ಮಾನಕ್ಕೆ ಬಂದೆ. ಇದರಿಂದ ನಾನೇ ಹಿಂದೆ ಸರಿದರೆ ಒಳ್ಳೆದು ಅನಿಸಿತು” ಅಂತಾ ಅವರು ಹೇಳಿಕೊಂಡಿದ್ದಾರೆ.
ಐದು ವರ್ಷಗಳ ಕಾಲ ರಿಲೇಷನ್ ಶಿಪ್ ನಲ್ಲಿದ್ದ ಜೋಡಿ ಇದೀಗ ಬ್ರೇಕಪ್ ಮಾಡಿಕೊಂಡಿರುವುದು ಸಾಕಷ್ಟು ಚರ್ಚೆಯಲ್ಲಿದೆ.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 14ನೇ ವಾರಕ್ಕೆ ಕಾರಲಿಡಲು ಸಜ್ಜಾಗಿ ನಿಂತಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಗೆ ಕಿಚ್ಚ ಸುದೀಪನ ಎಂಟ್ರಿಯಾಗಿದೆ. ಇಡೀ ವಾರ ಬಿಗ್ಬಾಸ್ ಮನೆಯಲ್ಲಿ ಏನೆಲ್ಲಾ ಆಯ್ತು, ಯಾರದ್ದು ಸರಿ, ಯಾರದ್ದು ತಪ್ಪು ಅಂತ ಕ್ಲಾಸ್ ತೆಗೆದುಕೊಳ್ಳೋದಕ್ಕೆ ಕಿಚ್ಚ ಸುದೀಪ್ ಅವರು ರೆಡಿಯಾಗಿದ್ದಾರೆ.
ಇನ್ನೂ ಈ ವಾರದಲ್ಲಿ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಹೀಗಾಗಿ ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಡುತ್ತಲೇ ಓರ್ವ ಸ್ಪರ್ಧಿಯ ಉಸ್ತುವಾರಿ ಬಗ್ಗೆ ಮಾತಾಡುತ್ತಾ ಬಂದಿದ್ದಾರೆ. ಉಸ್ತುವಾರಿಗಳು ಜವಾಬ್ದಾರಿಗಳನ್ನು ಮರೆತು ಆಟದ ದಾರಿಯನ್ನು ತಪ್ಪುಸುತ್ತಿದ್ದಾರೆ. ಮಾತಿನ ಮಿತಿಗಳು ಮಿರುತ್ತಾ ಹೋಗುತ್ತಿವೆ ಖಡಕ್ ಡೈಲಾಂಗ್ ಹೊಡೆದಿದ್ದಾರೆ.
ಇನ್ನೂ, ಮೊನ್ನೆ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ಜೋರಾಗಿತ್ತು. ತೀವ್ರ ಪೈಪೋಟಿಯಿಂದಾಗಿ ಜಿದ್ದಿಗೆ ಬಿದ್ದವರಂತೆ ಸ್ಪರ್ಧಿಗಳು ಕಚ್ಚಾಡಿಕೊಳ್ತಿದ್ದರು. ಇದರಿಂದ ಟಾಸ್ಕ್ ಪೂರ್ಣಗೊಳಿಸೋದೇ ಇಡೀ ಮನೆ ಮಂದಿ ಕೈಚಲ್ಲಿ ಕುಳಿತುಕೊಂಡಿದ್ದರು. ಇದನ್ನು ನೋಡಿದ ಬಿಗ್ಬಾಸ್ ಟಾಸ್ಕ್ ಅನ್ನು ಅರ್ಧಕ್ಕೆ ರದ್ದು ಮಾಡಿದ್ದರು.
ಇದರಿಂದ ಕೆಲವು ಸ್ಪರ್ಧಿಗಳು ಚೈತ್ರಾ ಕುಂದಾಪುರ ಮೇಲೆ ಬೇಸರ ಹೊರ ಹಾಕಿದ್ದರು. ಚೈತ್ರಾ ಕುಂದಾಪುರ ಪದೇ ಪದೇ ಆಟದ ಮಧ್ಯೆ ಫೌಲ್ ಕೊಟ್ಟಿದ್ದಕ್ಕೆ, ಹಾಗೂ ಇಬ್ಬರು ಉಸ್ತುವಾರಿಗಳು ಸರಿಯಾದ ನಿರ್ಧಾರಕ್ಕೆ ಬರದಿದ್ದ ಕಾರಣಕ್ಕೆ ಟಾಸ್ಕ್ ಅರ್ಧಕ್ಕೆ ನಿಲ್ಲುವಂತೆ ಆಗಿತ್ತು. ಇದೇ ವಿಚಾರ ಬಗ್ಗೆ ಇಂದು ಕಿಚ್ಚ ಸುದೀಪ್ ಮಾತಾಡಲಿದ್ದಾರೆ. ಚೈತ್ರಾ ಕುಂದಾಪುರಗೆ ಮತ್ತೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
ವೀಕೆಂಡ್ ಟೆನ್ಷನ್ನಲ್ಲಿರೋ ಬಿಗ್ಬಾಸ್ ಮಂದಿ ಬೆಚ್ಚಿಬಿದ್ದ ಘಟನೆಯೊಂದು ನಡೆದಿದೆ. ಒಂದು ಕ್ಷಣ ದೊಡ್ಮನೆಯಲ್ಲಿ ದೆವ್ವ ಭೂತಗಳು ಬಂದ ರೀತಿಯಲ್ಲಿ ಸ್ಪರ್ಧಿಗಳು ಗಾಬರಿಯಾಗಿದ್ದು, ಎಲ್ಲರೂ ಕಿರುಚಾಡಿಕೊಂಡಿದ್ದಾರೆ.
ಅಷ್ಟಕ್ಕೂ ಅಲ್ಲಿ ಆಗಿದ್ದೇನು..?
ಅಡುಗೆ ಮನೆಯಲ್ಲಿ ಗೌತಮಿ ಜಾಧವ್ ಅವರು ಲಟ್ಟಣಿಗೆ ಹಿಡಿದು ಚಪಾತಿ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿ ಅಗೋಚರ ದೃಶ್ಯ ಕಾಣಿಸಿದೆ. ಇದರಿಂದ ಗಾಬರಿಯಾದ ಗೌತಮಿ ಅದೇ ಅಲ್ಲಿ ಯಾರು ಎಂದಿದ್ದಾರೆ. ಅಲ್ಲಿಂದ ಓಡಿ ಬಂದ ಗೌತಮಿ, ಭಯದಿಂದ ಮೋಕ್ಷಿತಾರನ್ನು ಹಿಡಿದುಕೊಂಡು ನಿಲ್ಲುತ್ತಾರೆ. ಆಗ ಮೋಕ್ಷಿತಾ ಕೂಡ ಬೆಚ್ಚಿಬಿದ್ದಾರೆ. ಅದೇ ವೇಳೆ ವಿಕಾರವಾದ ಮುಖವೊಂದು ಕಾಣಿಸಿಕೊಂಡಿದೆ. ಆಗ ಉಗ್ರಂ ಮಂಜು ಕೂಡ ಬೆಚ್ಚಿಬಿದ್ದು ಜೋರಾಗಿ ಕಿರುಚಿಕೊಂಡಿದ್ದಾರೆ. ನಂತರ ಅದರ ಅಸಲಿ ಕತೆ ರಿವೀಲ್ ಆಗಿದೆ.
ಅಸಲಿ ಕತೆ ಏನು..?
ದೆವ್ವನೂ ಅಲ್ಲ. ಭೂತನೂ ಅಲ್ಲ. ಕಲರ್ಸ್ ಕನ್ನಡದಲ್ಲಿ ‘ನೂರು ಜನ್ಮಕ್ಕೂ’ ಎಂಬ ಹೊಸ ಧಾರಾವಾಹಿ ಬರ್ತಿದೆ. ಆ ತಂಡ ಬಿಗ್ಬಾಸ್ ಮನೆಗೆ ಲಗ್ಗೆ ಇಟ್ಟಿದೆ. ಧಾರಾವಾಹಿಯಯಲ್ಲಿ ನಾಯಕನ ಮೇಲೆ ಆತ್ಮವೊಂದು ದ್ವೇಷ ಕಾರುತ್ತಿದೆ. ಈ ಆತ್ಮಕ್ಕೆ ನಾಯಕನ ಮೇಲೆ ಯಾಕೆ ದ್ವೇಷವಿರುತ್ತದೆ? ರಾಯರ ಅಪ್ಪಟ ಭಕ್ತೆಯಾಗಿರುವ ನಾಯಕಿ ಆ ಆತ್ಮದಿಂದ ತನ್ನ ಪ್ರೀತಿಯನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ? ಆ ಆತ್ಮಕ್ಕೂ ಹಾಗೂ ನಾಯಕನಿಗೂ ಏನು ಸಂಬಂಧ? ನಾಯಕನ ತಪ್ಪೇನು? ಅನ್ನೋದೇ ಧಾರಾವಾಹಿ ಕಥೆ ಆಗಿದೆ.
ಹೀರೋ ಆಗಿ ಗೀತಾ ಸೀರಿಯಲ್ ಖ್ಯಾತಿಯ ಧನುಷ್ ಗೌಡ ಕಂಬ್ಯಾಕ್ ಮಾಡಿದ್ದಾರೆ. ನಾಯಕಿಯಾಗಿ ಶಿಲ್ಪಾ ಕಾಮತ್ ನಟಿಸುತ್ತಿದ್ದಾರೆ. ಆತ್ಮದ ಪಾತ್ರವನ್ನು ಚಂದನಾ ಗೌಡ ಬಣ್ಣ ಹಚ್ಚಿದ್ದಾರೆ. ಅಂತೆಯೇ ಬಿಗ್ಬಾಸ್ ಮನೆಯಲ್ಲಿ ಆತ್ಮರೂಪದಲ್ಲಿ ಚಂದನಾ ಗೌಡ ಅವರ ಮುಖ ಕಾಣಿಸಿದೆ. ಇದನ್ನು ನೋಡಿ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.
ಬಿಗ್ಬಾಸ್ ಗೆಲ್ಲಲು ಸ್ಪರ್ಧಿಗಳ ನಡುವಿನ ಸರ್ಕಸ್ ಜೋರಾಗಿದೆ. ಅಂತೆಯೇ ವೀಕೆಂಡ್ ಸನಿಹದಲ್ಲಿರುವ ಸ್ಪರ್ಧಿಗಳ ಮಧ್ಯೆ ಉತ್ತಮ ಮತ್ತು ಕಳಪೆ ಚಟುವಟಿಕೆ ಕೂಡ ಮುಕ್ತಾಯವಾಗಿದೆ.
ಯಾರು ಕಳಪೆ..?
ಕಳೆದ ಬಾರಿ ಕಳಪೆ ಸ್ಥಾನದಲ್ಲಿ ಇಬ್ಬರು ಸ್ಪರ್ಧಿಗಳಿದ್ದರು. ತ್ರಿವಿಕ್ರಮ್ ಹಾಗೂ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯ ಜೈಲು ಸೇರಿದ್ದರು. ಈ ವಾರ ಕಳಪೆ ಸ್ಥಾನವನ್ನು ಚೈತ್ರಾ ಅವರೇ ಇಟ್ಟುಕೊಂಡಿದ್ದಾರೆ. ಸತತವಾಗಿ ಚೈತ್ರಾ ಅವರು ಜೈಲು ಸೇರುತ್ತಿದ್ದಾರೆ. ಬಹುತೇಕ ಸ್ಪರ್ಧಿಗಳು ಕಳಪೆಗೆ ಚೈತ್ರಾ ಕುಂದಾಪುರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಹೀಗಾಗಿ ಚೈತ್ರಾ ಕುಂದಾಪುರ ಮತ್ತೆ ಜೈಲು ಸೇರಿದ್ದಾರೆ. ಇನ್ನು ಕಳಪೆ ನೀಡುವ ವೇಳೆ ಎಂದಿನಂತೆ ಮಾತಿನ ಸಮರಗಳು ನಡೆದಿವೆ. ವಿಶೇಷವಾಗಿ ಚೈತ್ರಾ ಕುಂದಾಪುರಗೆ ಹನಮಂತು ಟಾಂಗ್ ನೀಡಿದ್ದಾರೆ.
ಕಳಪೆ ಕೊಡಲು ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನೀನು ನನ್ನ ದೊಡ್ಡಪ್ಪನ ಮಗಳು, ಅತ್ತೆ ಮಗಳು ಅಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಹನುಮಂತು ಅವರ ಈ ಡೈಲಾಗ್ ಸಖತ್ ಸೌಂಡ್ ಮಾಡ್ತಿದೆ. ಇನ್ನು, ಮುಂದಿನ ವಾರಕ್ಕೆ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ. ಅದರಂತೆ ಭವ್ಯಗೌಡ ಅವರು ಬಿಗ್ಬಾಸ್ ನೀಡಿದ ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು ಮುಂದಿನ ವಾರಕ್ಕೆ ನಾಯಕರಾಗಿದ್ದಾರೆ.