ಬರೀ ಕಿತ್ತಾಟ, ಗಲಾಟೆಯಿಂದ ತುಂಬಿರುತ್ತಿದ್ದ ಬಿಗ್ಬಾಸ್ ಮನೆ ಕಳೆದ ಎರಡು ದಿನಗಳಿಂದ ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿ ಆಗ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಎಂಟ್ರಿ ಆಗ್ತಿದ್ದು, ವೀಕ್ಷಕರಿಗೆ ಸ್ಪೆಷಲ್ ಮನರಂಜನೆಯ ಬೂಸ್ಟ್ ಸಿಗ್ತಿದೆ. ಜೊತೆಗೆ ಸ್ಪರ್ಧಿಗಳಿಗೂ ಎನರ್ಜಿ ಸಿಗ್ತಿದೆ.
ಅಂತೆಯೇ ಧನರಾಜ್ ಆಚಾರ್ಯ ಅವರ ಕೂಡು ಕುಟುಂಬ ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದೆ. ಇಡೀ ಕುಟುಂಬವನ್ನು ಕಂಡ ಧನರಾಜ್ ಫುಲ್ ಖುಷ್ ಆಗಿದ್ದಾರೆ. ಮನೆಗೆ ಎಂಟ್ರಿ ಆಗ್ತಿದ್ದಂತೆಯೇ ಕುಟುಂಬದ ಸದಸ್ಯರೆಲ್ಲರೂ ಹುಲಿ ಕುಣಿತದ ಸ್ಟೆಪ್ಸ್ ಹಾಕಿದ್ದಾರೆ.
ವಿಶೇಷ ಅಂದರೆ ಅವರ ಮುದ್ದಿನ ಮಗಳು ಕೂಡ ಬಿಗ್ಬಾಸ್ ಮನೆಗೆ ಬಂದಿದ್ದಾಳೆ. ಮೊದಲಿಗೆ ತೊಟ್ಟಿಲಲ್ಲಿ ಹಾಯಾಗಿ ಮಲಗಿರುವ ಮಗುವನ್ನು ಸ್ಕ್ರೀನ್ ಮೇಲೆ ತೋರಿಸಲಾಗಿತ್ತು. ಇದನ್ನು ನೋಡಿದ ಧನು, ಪ್ಲೀಸ್ ಮಗುವನ್ನು ಎತ್ತಿಕೊಳ್ಳಲು ಬಿಡಿ ಎಂದು ಬಿಗ್ಬಾಸ್ಗೆ ಮನವಿ ಮಾಡಿಕೊಂಡಿದ್ದಾರೆ. ಧನು ಭಾವುಕರಾಗಿದ್ದನ್ನು ನೋಡಿದ ಬಿಗ್ಬಾಸ್, ಕೊನೆಗೂ ಮಗುವನ್ನು ಎತ್ತಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಓಡಿ ಹೋಗಿ ಮಗುವನ್ನು ಎತ್ತಿಕೊಂಡ ಧನು, ಭಾವುಕರಾಗಿ ಎತ್ತಿ ಮುದ್ದಾಡಿದ್ದಾರೆ. ಮಗುವಿನ ಪಕ್ಕದಲ್ಲಿ ಮಲಗಿ ಕೆಲ ಸಮಯ ಕಳೆದಿದ್ದಾರೆ. ಅಂದ್ಹಾಗೆ ಧನರಾಜ್-ಪ್ರಜ್ಞಾ ದಂಪತಿಗೆ ಸೆಪ್ಟೆಂಬರ್ 20 ರಂದು ಹೆಣ್ಣು ಮಗು ಜನಿಸಿದೆ.
ಇನ್ನು, ಪತ್ನಿ ಪ್ರಜ್ಞಾ ಧನುಗೆ ಮುದ್ದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ. ಇವತ್ತು ರಾತ್ರಿ ಈ ಎಪಿಸೋಡ್ ಪ್ರಸಾರವಾಗಲಿದೆ.
ಬಿಗ್ ಬಾಸ್ ಸೀಸನ್ 11 ಮನೆಯಲ್ಲಿ ಮತ್ತೆ ಹೋರಾಟದ ಕಿಚ್ಚು ಹಚ್ಚಿಕೊಳ್ಳುವ ಸುಳಿವು ಸಿಕ್ಕಿದೆ. ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಸುದೀಪ್ ಮನೆಯವರು ಮಾಡಿರೋ ತಪ್ಪುಗಳನ್ನ ಹುಡುಕಿದ್ದು, ಇವತ್ತು ತ್ರಿವಿಕ್ರಮ್, ಮಂಜು, ಗೌತಮಿ ಈ ಮೂವರಿಗೆ ಚಳಿ ಬಿಡಿಸೋ ಸಾಧ್ಯತೆ ಇದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಂಟೆಸ್ಟೆಂಟ್ ತಮ್ಮ ರಕ್ತ ಸಂಬಂಧಗಳನ್ನ ಭೇಟಿ ಮಾಡಿದ್ದಾರೆ. ಆದರೆ ಮನೆ ಊಟ ತಿಂದು ಬಿಗ್ ಬಾಸ್ ಆಟದ ಮೈ ಮರೆತು ಮಾತನಾಡಿದ್ದಾರೆ. ಮನೆಯವರ ಮಾತನ್ನ ಕೇಳಿ ಎಚ್ಚರ ಆದವರು ಇದ್ದಾರೆ.
ಮನೆಯವರ ಭೇಟಿಯಿಂದ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ, ಸಂತೋಷ ಹೆಚ್ಚಾಗಿರಬಹುದು. ಆದರೆ ಸ್ಪರ್ಧಿಗಳ ಆಟದಲ್ಲೂ ಬದಲಾವಣೆ ಆಗಲಿದೆ. ಇದಕ್ಕೆ ಸಾಕ್ಷಿಯಾಗಿ ಮನೆಯವರ ಜೊತೆ ಮಾತಾಡಿದ ತ್ರಿವಿಕ್ರಮ್, ಮಂಜು, ಗೌತಮಿ ಅವರ ಮಾತುಗಳಾಗಿದೆ. ತ್ರಿವಿಕ್ರಮ್ ಅವರ ತಾಯಿ ಬಿಗ್ ಬಾಸ್ ಮನೆಯಲ್ಲಿ ಭವ್ಯ ಜೊತೆ ಸ್ವಲ್ಪ ದೂರ ಇರು ಅಂತ ನೇರವಾಗಿ ಹೇಳಿದ್ದಾರೆ. ಇದು ತ್ರಿವಿಕ್ರಮ್ ಅವರ ಮನಮುಟ್ಟಿದ್ದು, ಇನ್ಮುಂದೆ ಭವ್ಯಾ, ತ್ರಿವಿಕ್ರಮ್ ಅವರ ಗೇಮ್ ಪ್ಲಾನ್ ಚೇಂಜ್ ಆಗುವ ಸಾಧ್ಯತೆ ಇದೆ.
ಇನ್ನು ಗೌತಮಿ ಅವರ ಪತಿ ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನ ಉಪಯೋಗಿಸಿಕೊಳ್ಳುತ್ತಾ ಇರೋರು ಅವರು. ಬಿ ಕೇರ್ ಫುಲ್ ಎಂದ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಜು ಅವರ ತಂಗಿ ಕೂಡ ಬೇಡ ಅವರ ಜೊತೆ ಇರೋದು ಬೇಡ. ಫ್ರೆಂಡ್ ಶಿಪ್‌ನ ಬ್ರೇಕ್ ಅಪ್ ಮಾಡು. ನನಗೆ ಪ್ರಾಮಿಸ್ ಮಾಡಬೇಕು ಎಂದು ಮಂಜು ತಂಗಿ ಭಾಷೆ ಕೂಡ ತೆಗೆದುಕೊಂಡಿದ್ದಾರೆ.
ಇವತ್ತಿನ ಕಿಚ್ಚನ ಪಂಚಾಯ್ತಿಯಲ್ಲಿ ಮನೆಯವರ ಜೊತೆ ಕಾಲ ಕಳೆದ ಖುಷಿಯ ಜೊತೆಗೆ ಮೈ ಮರೆತು ಮಾತನಾಡಿರೋ ಮಾತು ಚರ್ಚೆಯಾಗಲಿದೆ. ಮನೆಯವರಿಗೆ ಮಾತು ಕೊಟ್ಟಂತೆ ತ್ರಿವಿಕ್ರಮ್, ಗೌತಮಿ, ಮಂಜು ಅವರು ನಡೆದುಕೊಳ್ತಾರಾ. ಗೆಳೆತನ, ಸ್ನೇಹ ಆಟದ ದಿಕ್ಕು ಬದಲಿಸುತ್ತಾ ಅನ್ನೋದು ರೋಚಕವಾಗಿದೆ.
ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದಾರೆ. ಹಳ್ಳಿಕಾರ್ ಒಡೆಯನಿಗೆ ಕಂಕಣ ಭಾಗ್ಯವೇ ಮುಳ್ಳಾಗಿ ಕಾಡಿತ್ತು. ಮದುವೆ ಬಗ್ಗೆ ಹಲವು ಸುದ್ದಿಗಳು ರೆಕ್ಕೆ ಪುಕ್ಕ ಇಲ್ಲದೇ ಹಾರಾಡಿವೆ. ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ವರ್ತೂರು ಸಂತೋಷ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿ ಇರ್ತಾರೆ. ಬಿಗ್ ಬಾಸ್ ಮನೆಯಿಂದ ಬಂದ ಮೇಲಂತೂ ಸಂತುಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಆಗಿದ್ದಾರೆ. ಜನಪ್ರಿಯತೆ ಹೆಚ್ಚಿದಷ್ಟೂ ಸಂತೋಷ್ ಅವ್ರಿಗೆ ವಿವಾದಗಳು ಬೆಂಬಿಡದೇ ಕಾಡುತ್ತಿವೆ.
ಬಿಗ್ ಬಾಸ್ ಮನೆಗೆ ಕಾಲಿಡೋಕು ಮೊದಲು ವರ್ತೂರು ಸಂತೋಷ್ಗೆ ಮದುವೆ ಆಗಿದೆ ಅನ್ನೋದು ಅವರ ಆಪ್ತ ಬಳಗಕ್ಕೆ ಬಿಟ್ರೆ ಯಾರಿಗೂ ಗೊತ್ತಿರಲಿಲ್ಲ. ಅವರು ಬಿಗ್ ಮನೆಯಲ್ಲಿ ಇರಬೇಕಾದ್ರೆ ಯುವತಿ ಓರ್ವರ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಮದುವೆ ಆಗಿದ್ರು ಮುಚ್ಚಿಟ್ಟಿದ್ದಾರೆ. ಪತ್ನಿಗೆ ಟಾರ್ಚರ್ ಕೊಟ್ಟು ಮನೆಯಿಂದ ಹೊರಗಟ್ಟಿದ್ದಾರೆ ಎಂದು ಮದುವೆ ವಿಚಾರ ಸದ್ದು ಮಾಡಿತ್ತು. ಇದಾದ ಬಳಿಕ ಬಿಗ್ ಬಾಸ್ ಅವಕಾಶ ಕೊಟ್ಟಾಗ ಸಂತೋಷ್ ಅವ್ರೇ ತಮ್ಮ ಮನದಾಳದ ಮಾತುಗಳನ್ನ ಹೇಳಿದ್ದಾರೆ. ಅವ್ರು ಹೊರಗಡೆ ಬಂದ್ಮೇಲೂ ಸಾಕಷ್ಟು ಚರ್ಚೆಗಳು ನಡೆಯುತ್ತೆ. ಇದು ಹಾದಿ ಬೀದಿಯಲ್ಲಿ ಚರ್ಚೆ ಮಾಡೋ ವಿಷ್ಯಲ್ಲ. ನಮ್ಮ ನಡುವೆ ಏನ್ ಆಗಿದೆ ಅನ್ನೋದು ನಮಗೆ ಮಾತ್ರ ಗೊತ್ತು ಎಂದು ವಿವಾದಗಳಿಗೆ ತೆರೆ ಎಳೆದಿದ್ದಾರೆ. ಅಲ್ಲಿಗೆ ಈ ವಿಚಾರ ಕೂಡ ತಣ್ಣಗಾಗುತ್ತೆ.
ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಒಳ್ಳೆ ಸ್ನೇಹಿತರಾಗುತ್ತಾರೆ. ಇಬ್ಬರ ನಡುವಿನ ಬಾಂಧವ್ಯ ಹೊರಗಡೆ ಬಂದ್ಮೇಲೂ ಮುಂದುವರೆಯುತ್ತೆ. ಹೀಗಾಗಿ ಸಂತು-ಬೆಂಕಿ ನಡುವೆ ಏನೋ ನಡೀತಿದೆ ಅಂತ ಇವತ್ತಿಗೂ ಗುಸು ಗುಸು, ಪಿಸು ಪಿಸು ಇದೆ. ಸದ್ಯ ವರ್ತೂರು ಸಂತೋಷ್ ಅವರೇ ಹೊಸ ಸುದ್ದಿ ನೀಡಿದ್ದಾರೆ. ನನ್ನ ಮೊದಲ ಮದುವೆ ಮುಗಿದ ಅಧ್ಯಾಯ. ಹೊಸ ಜೀವನ ಶುರು ಮಾಡಬೇಕು. ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಎಂದಿದ್ದಾರೆ.
ಖಾಸಗಿ ಸಂದರ್ಶನ ಒಂದರಲ್ಲಿ ಮಾತ್ನಾಡಿದ ಸಂತೋಷ್, ನನಗೆ ಪ್ರೀತಿ ಆಗಿದೆ. ಪರಸ್ಪರ ನಾನು ಮತ್ತು ಆ ಹುಡುಗಿ ಪ್ರೀತಿ ಮಾಡ್ತಿದ್ದೀವಿ. ನನ್ನ ಸೆಕೆಂಡ್ ಹಾರ್ಟ್ ಅವಳು. ನಾನು ಡಿಪ್ರೇಷನ್ನಲ್ಲಿ ಇದ್ದಾಗ ಕಮ್ಬ್ಯಾಕ್ ಮಾಡೋಕೆ ಅವಳೇ ಕಾರಣ. ನನ್ನ ಜೀವನದ ಏರುಪೇರುಗಳನ್ನ ಅವಳು ನೋಡಿದ್ದಾಳೆ. ಜೊತೆಗಿದ್ದಾಳೆ. ನನ್ನ ಅಮ್ಮನ ನಂತರ ನಾನು ತುಂಬಾ ಪ್ರೀತಿಸೋ ಜೀವ ಅವಳು. ಇಬ್ಬರಿಗೂ ಮದುವೆಗೆ ಒಪ್ಪಿಗೆ ಇದೆ. ಪ್ರೀತಿ ಇದೆ ಎಂದು ಮುಚ್ಚಿಟ್ಟಿದ್ದ ಪ್ರೀತಿ ವಿಚಾರವನ್ನ ಬಹಿರಂಗ ಪಡೆಸಿದ್ದಾರೆ ವರ್ತೂರು ಸಂತೋಷ್.
ಮದುವೆ ವಿಚಾರ ಹೇಳುತ್ತಿದ್ದ ಹಾಗೆ ಥಟ್ ಅಂತ ತನಿಷಾ ಕಣ್ಮುಂದೆ ಬರ್ತಾರೆ. ಇದಕ್ಕೂ ಅವ್ರು ಉತ್ತರಿಸಿದ್ದು, ತನಿಷಾ ನಾನು ಒಳ್ಳೆ ಸ್ನೇಹಿತರು. ಖಂಡಿತ ಅವ್ರಲ್ಲ. ನನ್ನ ಹುಡುಗಿನೇ ಬೇರೆ. ಸದ್ಯದಲ್ಲೇ ಅವರ ಬಗ್ಗೆ ತಿಳಿಸ್ತೀನಿ ಎಂದಿದ್ದಾರೆ.
ಬೆಂಕಿ-ಸಂತು ಫ್ಯಾನ್ಸ್ಗೆ ಈ ಸುದ್ದಿ ನಿರಾಸೆ ಮೂಡಿಸಿದ್ದು, ವರ್ತೂರು ಸಂತೋಷ್ ಮನಗೆದ್ದಿರೋ ಆ ಹುಡುಗಿ ಯಾರು ಅನ್ನೋ ಕುತೂಹಲ ಸಹಜವಾಗಿದೆ. ಒಂದು ಮೂಲದ ಪ್ರಕಾರ ಸಂಬಂಧಿಕರ ಹುಡುಗಿ ಕಾಲೇಜು ದಿನಗಳ ಗೆಳತಿಯನ್ನ ಕೈ ಹಿಡಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಮಂಗಳೂರು/ಬೆಂಗಳೂರು : ಬೇಟೆಗಾರನನ್ನು ಬೇಟೆ ಆಡುವ ರಣ ಬೇಟೆಗಾರ ಬಂದ ಎಂಬ ಡೈಲಾಗ್ನಂತೆ ‘ಬಿಗ್ ಬಾಸ್’ ದಾಖಲೆಯನ್ನು ‘ಸರಿಗಮಪ’ ಹಿಂದಿಕ್ಕಿದೆ. ಇಷ್ಟು ದಿನಗಳ ಕಾಲ ಟಿಆರ್‌ಪಿಯಲ್ಲಿ ಬಿಗ್ ಬಾಸ್ ಪಾರುಪತ್ಯ ಸಾಧಿಸುತ್ತಾ ಬರುತ್ತಿತ್ತು. ಎಲ್ಲಾ ಧಾರಾವಾಹಿಗಳ ಟಿಆರ್ಪಿಯನ್ನು ಬೀಟ್ ಮಾಡಿ ಬಿಗ್ ಬಾಸ್ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಭರ್ಜರಿ ಟಿಆರ್ಪಿ ಪಡೆಯುವ ಮೂಲಕ ಈ ಶೋ ಮೊದಲ ಸ್ಥಾನ ಪಡೆದಿದೆ.
52ನೇ ವಾರದ ಟಿಆರ್ಪಿ ಪ್ರಕಾರ, ಬಿಗ್ ಬಾಸ್ಗೆ ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ವಾರದ ದಿನ 8 ಟಿವಿಆರ್, ಶನಿವಾರ 9.1 ಟಿವಿಆರ್ ಹಾಗೂ ಭಾನುವಾರ 10 ಟಿವಿಆರ್ ಸಿಕ್ಕಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಇರುವ ಕಾರಣ ಶೋಗೆ ಭರ್ಜರಿ ಟಿಆರ್ಪಿ ದೊರೆಯುತ್ತಿದೆ. ‘ಸರಿಗಮಪ’ ಆಡಿಷನ್ ಇತ್ತೀಚೆಗೆ ಪೂರ್ಣಗೊಂಡಿದೆ. ಶನಿವಾರ ಹಾಗೂ ಭಾನುವಾರ ಸಂಜೆ 7.30ರಿಂದ 9 ಗಂಟೆವರೆಗೆ ಈ ಶೋ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಆಡಿಷನ್ ಎಪಿಸೋಡ್ ಉತ್ತಮ ಟಿಆರ್ಪಿ ಪಡೆದುಕೊಂಡಿದೆ. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ 11.1 ಟಿವಿಆರ್ ಹಾಗೂ ಗ್ರಾಮೀಣ ಭಾಗದಲ್ಲಿ 13.1 ಟಿವಿಆರ್ ಈ ಶೋಗೆ ಸಿಕ್ಕಿದೆ. ಈ ಮೂಲಕ ಬಿಗ್ ಬಾಸ್ನ ಶೋ ಹಿಂದಿಕ್ಕಿದೆ. ‘ಸರಿಗಮಪ’ ಶೋನಲ್ಲಿ ಅನುಶ್ರೀ ಅವರು ಆ್ಯಂಕರಿಂಗ್ ಮಾಡುತ್ತಿದ್ದಾರೆ. ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಜಡ್ಜ್ ಸ್ಥಾನದಲ್ಲಿ ಇದ್ದಾರೆ.
ಸೀರಿಯಲ್‌ಗಳ ಟಿಆರ್ಪಿ
ಸೀರಿಯಲ್‌ಗಳ ಟಿಆರ್ಪಿ ವಿಚಾರಕ್ಕೆ ಬರೋದಾದರೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ಹಾಗೂ ‘ಅಣ್ಣಯ್ಯ’ ಧಾರಾವಾಹಿಗಳು ಇವೆ. ಮೂರನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’, ನಾಲ್ಕನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಹಾಗೂ ಐದನೇ ಸ್ಥಾನದಲ್ಲಿ ‘ಭಾಗ್ಯ ಲಕ್ಷ್ಮೀ’ ಧಾರಾವಾಹಿ ಇದೆ.