ಪ್ರೀತಿಗೆ ಜಾತಿ-ಧರ್ಮ..ಅಲ್ಲದೇ ವಯಸ್ಸಿನ ಅಂತರವಿಲ್ಲ ಅಂತಾ ಹೇಳ್ತಾರೆ.. ಅವರಿಬ್ರೂ ವಯಸ್ಸಿನ ಎಲ್ಲೆ ಮೀರಿ ಪೋಷಕರ ವಿರೋಧದ ನಡುವೆಯೂ ಸತಿ-ಪತಿಗಳಾಗಿದ್ದರು. ಊರಿನಲ್ಲಿ ನೆಮ್ಮದಿ ಜೀವನ ಮಾಡ್ಬೇಕು ಅನ್ಕೊಂಡಿದ್ದ ಇವರಿಗೆ ಯುವತಿಯ ಪೋಷಕರೇ ವಿಲನ್ ಆಗಿ ಬಿಟ್ಟಿದ್ದಾರೆ. ಸ್ವಚ್ಛಂದವಾಗಿ ಹಾರುತ್ತಿದ್ದ ಹಕ್ಕಿಗಳು ಗೂಡಿಗೆ ಸೇರುವ ಮೊದಲೇ ಕುಟುಂಬಸ್ಥರೇ ದಾಂಪತ್ಯ ಬದುಕಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಚಿತ್ರದುರ್ಗದ ಕೋಣನೂರು ಗ್ರಾಮದಲ್ಲಿ ಇಂತಹದೊಂದು ಕೃತ್ಯ ನಡೆದಿದೆ. ಮಂಜುನಾಥ ಹಾಗೂ ರಕ್ಷಿತಾ ಅನ್ನೋರು ಪರಸ್ಪರ ಪ್ರೀತಿಸುತ್ತಿದ್ದರು. ಮಂಜುನಾಥನ ವಯಸ್ಸು 42. ರಕ್ಷಿತಾ ವಯಸ್ಸು ಕೇವಲ 19. ಇಬ್ಬರಿಗೆ ಅದು ಹೇಗೆ ಪ್ರೀತಿಯಾಯ್ತೋ ಗೊತ್ತಿಲ್ಲ. ಮೂರು ವರ್ಷದಿಂದ ಪ್ರೀತಿ ಮಾಡ್ತಿದ್ದ ಇವರು, ಮೂರು ತಿಂಗಳ ಹಿಂದೆಷ್ಟೇ ಓಡೋಗಿ ಮದ್ವೆ ಆಗಿದ್ದರು.
ಮುಂದೆ ಏನಾಯ್ತು?
3 ತಿಂಗಳ ಹಿಂದೆ ಮಂಜುನಾಥ ಹಾಗೂ ರಕ್ಷಿತಾ ಚಿತ್ರದುರ್ಗಕ್ಕೆ ಬಂದಿದ್ರು. ಹಿರಿಯರೆಲ್ಲ ಚಿತ್ರದುರ್ಗ ಡಿವೈಎಸ್‌ಪಿ ಕಚೇರಿಯಲ್ಲಿ ರಾಜಿ ಪಂಚಾಯಿತಿ ಕೂಡ ಆಗಿತ್ತು. ಮೇಜರ್ ಆಗಿರೋ ಕಾರಣಕ್ಕೆ ಇಬ್ಬರಿಗೂ 15 ದಿನಗಳಲ್ಲಿ ಮದ್ವೆ ಮಾಡ್ತೀವಿ ಅಂತಾ ರಕ್ಷಿತಾ ಕುಟುಂಬಸ್ಥರು ಮಗಳನ್ನ ಮನೆಗೆ ಕರ್ಕೋಂಡು ಹೋಗಿದ್ರು. ಸಮಸ್ಯೆ ಬಗೆಹರಿತು ಸದ್ಯ ಅನ್ಕೊಂಡಿದ್ದ ಮಂಜುನಾಥ ನಿನ್ನೆ ಕೋಣನೂರಿಗೆ ಹೋದವನು ಜೀವ ಕಳೆದುಕೊಂಡಿದ್ದಾನೆ. ಅಲ್ಲಿ ನಡೆದ ಗಲಾಟೆಯಲ್ಲಿ ಮಂಜುನಾಥ ಉಸಿರು ನಿಲ್ಲಿಸಿದ್ದಾನೆ. ಮಂಜುನಾಥ್ನ ಕುಟುಂಬಸ್ಥರು ಕೈ-ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ.
15 ದಿನದೊಳಗೆ ಮದುವೆ ಮಾಡಿಕೊಡ್ತೀನಿ ಎಂದು ಹೇಳಿದ್ದರು. ನನ್ನ ಮಗ ಇಲ್ಲೇ ಇದ್ದ. ನಾನು ಅವರ ಊರಿಗೆ ಹೋಗ್ತಿದ್ದಂತೆಯೇ ಸುಮಾರು 35 ಜನರು ಒಂದೇ ಸಮನೆ ನುಗ್ಗಿ ಬಂದರು. ಏನು ಆಗ್ತಿದೆ ಅನ್ನುವಷ್ಟರಲ್ಲಿ ನಮ್ಮ ಮೇಲೆ ಅಟ್ಯಾಕ್ ಮಾಡಿಬಿಟ್ಟರು ಎಂದು ಮಂಜುನಾಥ ತಂದೆ ಚಂದ್ರಪ್ಪ ಹೇಳಿದ್ದಾರೆ.
ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಘಟನಾಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ತಲೆ ಮರೆಸಿಕೊಂಡಿರುವ ಆರೋಪಿಗಳಾಗಿ ಬಲೆ ಬೀಸಿದ್ದಾರೆ. ಇದೇ ವೇಳೆ ಮಂಜುನಾಥ್ನ ಲವ್ಸ್ಟೋರಿಗೂ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈಗಾಗಲೇ ಒಂದು ಹುಡುಗಿಯನ್ನು ಪ್ರೀತಿಸಿದ್ದ ಮಂಜುನಾಥ, ಆಕೆಯನ್ನು ದಾವಣಗೆರೆಗೆ ಕರೆದುಕೊಂಡು ಹೋಗಿದ್ನಂತೆ. ಆದ್ರೆ ಮಂಜುನಾಥನ ಮೊದಲ ಪ್ರೇಯಸಿ ದಾವಣಗೆರೆಯಲ್ಲಿ ಜೀವ ತೆಗೆದುಕೊಂಡಿದ್ದಳು. ಈ ಪ್ರಕರಣದಲ್ಲಿ ಮಂಜುನಾಥ್ ಜೈಲಿಗೆ ಹೋಗಿ ಬೇಲ್ ಮೇಲೆ ಹೊರ ಬಂದಿದ್ದ.. ಬಳಿಕ ರಕ್ಷಿತಾ ಮಂಜುನಾಥ್ನ ಹಿಂದೆ ಬಿದ್ದಿದ್ದಳು ಎನ್ನಲಾಗಿದೆ.
ಮಂಗಳೂರು: ಚೆನ್ನ್ಯೆ ಸೂಪರ್ ಕಿಂಗ್ಸ್ ವಿರುದ್ದ 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪ ಕೇಳಿ ಬಂದಿತ್ತು. ಈ ಕಾರಣದಿಂದ ಸಿಎಸ್ ಕೆ ಫ್ರಾಂಚೈಸಿಯು 2 ವರ್ಷಗಳ ನಿಷೇಧಕ್ಕೆ ಒಳಗಾಗಿತ್ತು. ಇದೀಗ, ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗಂಭೀರ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.
ದೇಶ ಬಿಟ್ಟು ತೆರಳಿರುವ ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ವಿರುರದ್ದ ಗಂಭೀರ ಫಿಕ್ಸಿಂಗ್ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ರಾಜ್ ಶರ್ಮಾ ಅವರ ಯೂಟ್ಯೂಬ್ ಚಾನಲ್ ‘ಫಿಗರಿಂಗ್ ಔಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಲಲಿತ್ ಮೋದಿ, ಬಿಸಿಸಿಐ ಕಾರ್ಯದರ್ಶಿ ಆಗಿದ್ದ ಶ್ರೀನಿವಾಸನ್ ವಿರುದ್ದ ಸ್ಪೋಟಕ ಆರೋಪಗಳನ್ನು ಮಾಡಿದ್ದಾರೆ.
ಎನ್ ಶ್ರೀನಿವಾಸನ್ ಅವರು ಸಿಎಸ್ ಕೆ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್ ಗಳನ್ನು ನೇಮಿಸುತ್ತಿದ್ದರು. ಅವರಿಗೆ ಐಪಿಎಲ್ ಏಳಿಗೆಗಿಂತ ತಮ್ಮ ಮಾಲೀಕತ್ವದ ಸಿಎಸ್ ಕೆ ತಂಡದ ಯಶಸ್ಸು ಮುಖ್ಯವಾಗಿತ್ತು. ಅದಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.
ಮೊದ ಮೊದಲು ಅವರು ಅಂಪೈರ್ ಗಳನ್ನು ಬದಲಿಸುತ್ತಿದ್ದಾಗ ಅದರ ಬಗ್ಗೆ ನಾನು ಗಮನ ಹರಿಸಿರಲಿಲ್ಲ. ಸಿಎಸ್ ಕೆ ಪಂದ್ಯಗಳಿಗೆಲ್ಲಾ ಚೆನ್ನೈನ ಅಂಪೈರ್ ಗಳೇ ಇರುತ್ತಿದ್ದರು. ಸಿಎಸ್ ಕೆ ಪರವಾಗಿ ತೀರ್ಪು ಬರಲೆಂದು ತಮಗೆ ಬೇಕಾದ ಅಂಪೈರ್ ಗಳನ್ನು ನೇಮಿಸುತ್ತಿದ್ದರು. ಅದನ್ನು ಅಂಪೈರ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ. ಅದನ್ನು ನಾನು ಬಹಿರಂಗಪಡಿಸಲು ಪ್ರಯತ್ನಿಸಿದಾಗ ಸಂಪೂರ್ಣವಾಗಿ ನನ್ನ ವಿರೋಧಿಯಾಗಿದ್ದರು ಎಂದು ಲಲಿತ್ ಹೇಳಿದ್ದಾರೆ.
ಇದನ್ನೂ ಓದಿ: ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !
ಐಪಿಎಲ್ ಅನ್ನು ಶ್ರೀನಿವಾಸನ್ ಇಷ್ಟಪಡುತ್ತಿರಲಿಲ್ಲ. ಐಪಿಎಲ್ ಸಕ್ಸಸ್ ಆಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಆದರೆ, ಅದು ಸಕ್ಸಸ್ ಆದಾಗ ಎಲ್ಲರೂ ಲಾಭ ಪಡೆಯಲು ಶುರು ಮಾಡಿದರು. ಬಿಸಿಸಿಐ ಸದಸ್ಯ ಹಾಗೂ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್, ನನ್ನ ದೊಡ್ಡ ವಿರೋಧಿಯಾಗಿದ್ದರು. ಅಂಪೈರ್ ಫಿಕ್ಸಿಂಗ್ ಸೇರಿದಂತೆ ಹಲವು ಅಕ್ರಮ ಎಸಗಿದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.
2013ರಲ್ಲಿ ಸಿಎಸ್ ಕೆ ವಿರುದ್ದ ಹಗರಣಗಳ ಆರೋಪ :
2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗಂಭೀರ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಗಳ ಕಾರಣದಿಂದಾಗಿ 2016 ಮತ್ತು 2017ರಲ್ಲಿ ಐಪಿಎಲ್ ನಿಂದ ಸಿಎಸ್ ಕೆ ಫ್ರಾಂಚೈಸಿಯನ್ನು ಬ್ಯಾನ್ ಮಾಡಲಾಗಿತ್ತು. ಇದಕ್ಕಾಗಿ ಫ್ರಾಂಚೈಸಿಯ ಉನ್ನತ ಅಧಿಕಾರಿ ಮತ್ತು ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ಫೋರ್ಜರಿ ಮತ್ತು ವಂಚನೆ ಆರೋಪದ ಮೇಲೆ ಬಂಧಿಸಲಾಗಿತ್ತು.
ಐಪಿಎಲ್ ಪ್ರಾರಂಭವಾಗುವ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿರುದ್ದ ಅಂಪೈರ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಚಾಂಪಿಯನ್ ಪಟ್ಟದ ಮೇಲೇಯೆ ಪ್ರಶ್ನೆಗಳೆದ್ದಿವೆ.
ಮಂಗಳೂರು/ಬೆಂಗಳೂರು : ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ತಾಯಿಗೆ ಕಿ*ಡಿಗೇ*ಡಿಯೊಬ್ಬ ಕರೆ ಮಾಡಿ ಬೆ*ದರಿಕೆಯೊಡ್ಡಿದ್ದಾನೆ. ಈ ಬಗ್ಗೆ ನಟಿಯ ತಾಯಿ ಪದ್ಮಲತಾ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ದೂರಿನಲ್ಲಿ ಏನಿದೆ?
ತನಗೆ ಬೆ*ದರಿಕೆ ಕರೆ ಬಂದಿರುವ ಬಗ್ಗೆ ಪದ್ಮಲತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಬಗ್ಗೆ ಎಫ್ ಐ ಆರ್ ದಾಖಲಾಗಿದೆ. ನನ್ನ ಮಗಳು ಚಲನಚಿತ್ರ ನಟಿಯಾಗಿದ್ದು, 8 ತಿಂಗಳ ಹಿಂದೆ ದೀಪಕ್ ಕುಮಾರ್ ಎಂಬರ ಜೊತೆ ವಿವಾಹವಾಗಿದೆ. ಮಗಳು, ಅಳಿಯ 1 ತಿಂಗಳ ಹಿಂದೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಅಪರಿಚಿತನೋರ್ವ ಕರೆ ಮಾಡಿ ನಿಮ್ಮ ಮಗಳಿಗೆ ಯಾಕೆ ಮದುವೆ ಮಾಡಿದ್ರಿ. ನಿಮ್ಮ ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಜನರಿಗೆ ಮೋಸ ಮಾಡಿರುತ್ತಾನೆ ಎಂದಿದ್ದ. ನಾನು ಹಾಗೇನಾದರೂ ಇದ್ದರೆ ಕಾನೂನಾತ್ಮಕವಾಗಿ ದೂರು ನೀಡುವಂತೆ ಹೇಳಿದ್ದೆ.
ಕೆಲವು ದಿನಗಳ ಬಳಿಕ ನನ್ನ ಮಗಳು ದೀಪಿಕಾ ದಾಸ್ ಗೂ ಕರೆ ಮಾಡಿದ್ದ. ನಿನ್ನ ಪತಿ ಅಕ್ರಮ ಚಟುವಟಿಕೆಗಳಿಂದ ಬಡಾವಣೆಗೆ ಮೋಸ ಮಾಡಿದ್ದು ನಿಮಗೆ ತಿಳಿದಿಲ್ಲವೆ. ನೀವು ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಆಣೆ ಮಾಡುವಂತೆ ಕೇಳಿದ್ದ. ಈ ಆರೋಪಗಳೆಲ್ಲ ಸುಳ್ಳು ಇದಕ್ಕೆ ಪುನೀತ್ ರಾಜ್ ಕುಮಾರ್ ಹೆಸರು ತರಬೇಡಿ ಎಂದಿದ್ದಳು. ನೀವೂ ಕಾನೂನು ರೀತಿ ದೂರು ನೀಡಿ ಎಂದು ಹೇಳಿರುತ್ತಾಳೆ. ನಿಮ್ಮ ಹೆಸರಿಗೆ ಧಕ್ಕೆ ತರುತ್ತೇನೆ. ನನಗೆ ಹಣ ನೀಡಿ ಎಂದಿದ್ದ. ಹಣ ನೀಡದೆ ಇದ್ದರೆ ನಿಮ್ಮ ಹೆಸರು ಬರೆದು ಆ*ತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ. ಇದನ್ನೂ ಓದಿ : ಮೂರು ತಿಂಗಳ ಹಿಂದೆ ಪ್ರೀತಿಸಿ ಮದುವೆ.. ಮಗಳು ಕೈಹಿಡಿದ ಅಳಿಯನ ಜೀವವನ್ನೇ ತೆಗೆದ ಪೋಷಕರು..!
ನನ್ನ ಮಗಳು ಮತ್ತು ಅಳಿಯನ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿರುತ್ತಾನೆ. ಪದೇ ಪದೇ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಸಾಯುವುದಾಗಿ ಬೆದರಿಕೆ ಇಟ್ಟಿದ್ದಾನೆ. ಯಶವಂತ ಎಂಬಾತನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭುವನೇಶ್ವರ: ಹಣಕಾಸಿನ ಸಮಸ್ಯೆಯಿಂದಾಗಿ ಪೋಷಕರು ತಮ್ಮ 4 ವರ್ಷದ ಹೆಣ್ಣು ಮಗುವನ್ನು 40,000 ರೂ.ಗಳಿಗೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಒಡಿಶಾದಲ್ಲಿ ನಡೆದಿದೆ.
ಘಟನೆ ತಿಳಿದ ಕೂಡಲೇ ಮಗುವನ್ನು ರಕ್ಷಣೆ ಮಾಡಿರುವ ಬಡಗಡ ಪೊಲೀಸರು, ಪೋಷಕರು ಹಾಗೂ ಮಗು ಮಾರಾಟಕ್ಕೆ ಸಹಾಯ ಮಾಡಿದ ನಾಲ್ವರು ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿ ದಂಪತಿ ಬಿಹಾರ ಮೂಲದವರಾಗಿದ್ದು, ಬಡಗಡದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕುಟುಂಬದಲ್ಲಿ ತುಂಬಾ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ ತಮ್ಮ ನಾಲ್ಕು ವರ್ಷದ ಮಗುವನ್ನು ಪಿಪಿಲಿಯಲ್ಲಿರುವ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದರು ಎಂದು ಬಡಗಡ ಪೊಲೀಸ್ ಠಾಣೆಯ ಪ್ರಭಾರಿ ತೃಪ್ತಿ ರಂಜನ್ ನಾಯಕ್ ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ನಂತರ ಬಡಗಡ ಪೊಲೀಸರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಧ್ಯವರ್ತಿಗಳು ಮತ್ತು ಮಗುವಿನ ಪೋಷಕರು ಸೇರಿದಂತೆ ಒಟ್ಟು 6 ಜನರನ್ನ ಬಂಧಿಸಿದ್ದಾರೆ.
Pingback: ಹೆಬ್ರಿ : ಮರದಿಂದ ಬಿದ್ದು ಪ್ರಗತಿಪರ ಕೃಷಿಕ ಮೃ*ತ್ಯು - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: ಖ್ಯಾತ ಕಿರುತೆರೆ ನಟಿ ದೀಪಿಕಾ ದಾಸ್ ತಾಯಿಗೆ ಬೆ*ದರಿಕೆ ಕರೆ - NAMMAKUDLA NEWS - ನಮ್ಮಕುಡ್ಲ ನ್ಯೂಸ್