LATEST NEWS
ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್; ಕಟ್ಟುನಿಟ್ಟಿನ ಕ್ರಮಕೈಗೊಂಡ ಬಿಸಿಸಿಐ
Published
2 hours agoon
By
NEWS DESK3ಮಂಗಳೂರು/ಮುಂಬೈ : ನ್ಯೂಝಿಲೆಂಡ್ ವಿರುದ್ದ ಹೀನಾಯ ಸೋಲು, ಆಸ್ಟ್ರೇಲಿಯಾ ವಿರುದ್ದದ ಶೋಚನೀಯ ಸೋಲುಗಳ ಬಳಿಕ ಬಿಸಿಸಿಐ ಎಚ್ಚೆತ್ತುಕೊಂಡಿದೆ.
ಕೆಲ ದಿನಗಳ ಹಿಂದೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಬಿಸಿಸಿಐ ಪರಿಶೀಲನಾ ಸಭೆ ನಡೆಸಿದೆ. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಆಸ್ಟ್ರೇಲಿಯಾ ಪ್ರವಾಸದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಟೀಂ ಇಂಡಿಯಾ ಆಟಗಾರರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಪಂದ್ಯವಾಳಿಗಳ ಸಂದರ್ಭಗಳಲ್ಲಿ ಆಟಗಾರರೊಂದಿಗೆ ಕುಟುಂಬ ವರ್ಗದವರಿಗೆ ಎರಡು ವಾರಗಳವರೆಗೆ ಮಾತ್ರ ಇರಲು ಅವಕಾಶವಿರುತ್ತದೆ. ಅಂದರೆ ಒಂದುವರೆ ತಿಂಗಳ ಪ್ರವಾಸದ ಅವಧಿಯಲ್ಲಿ ಆಟಗಾರರ ಪತ್ನಿಯರು ಅಥವಾ ಗೆಳತಿಯರು 2 ವಾರಗಳವರೆಗೆ ಮಾತ್ರ ಆಟಗಾರರೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಪಂದ್ಯಾವಳಿಗಳ ಸಮಯದಲ್ಲಿ ಆಟಗಾರರು ಕುಟುಂಬದ ಜೊತೆ ಸಮಯ ಕಳೆಯುವುದನ್ನು ಬಿಸಿಸಿಐ ನಿರ್ಬಂಧಿಸಲಿದೆ.
ಅಲ್ಲದೆ ತಂಡದ ಬಸ್ ಗಳಲ್ಲಿ ಆಟಗಾರರು ಒಟ್ಟಿಗೆ ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆಟಗಾರರು ಹೆಚ್ಚುವರಿ ಲಗೇಜ್ ಗೆ ಹಣ ನೀಡುವಂತೆಯೂ ಕೇಳಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ 1-3 ಅಂತರದಲ್ಲಿ ಸೋಲನ್ನಪ್ಪಿತ್ತು. ಇದಕ್ಕೆ ಆಸ್ಟ್ರೇಲಿಯಾದ ಮಾಧ್ಯಮಗಳು, ಟೀಮ್ ಇಂಡಿಯಾ ಆಟಗಾರರ ಡ್ರೆಸ್ಸಿಂಗ್ ರೂಮ್ ನಲ್ಲಿ ಆಟಗಾರರ ಮನಸ್ಥಿತಿಯೂ ಆಫ್ ಆಗಿದೆ. ಇದರಿಂದ ರವಿಚಂದ್ರನ್ ಅಶ್ವಿನ್ ನಿವೃತ್ತಿ ತೆಗೆದುಕೊಂಡರು ಎಂದು ಅತಿರೇಕದ ವಿಶ್ಲೇಷಣೆ ಕೊಟ್ಟಿದ್ದವು. ಇದು ಬಿಸಿಸಿಐಗೆ ತೀವ್ರ ಮುಜುಗರ ಉಂಟುಮಾಡಿತ್ತು.
ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಜಸ್ ಪ್ರೀತ್ ಬುಮ್ರಾ ತಮ್ಮ ಕುಟುಂಬದ ಜೊತೆ ಆಸ್ಟ್ರೇಲಿಯಾ ಪ್ರಮುಖ ನಗರಗಳಲ್ಲಿ ಸುತ್ತಾಡಿದ್ದಾರೆ ಮತ್ತು ಉಳಿದ ಆಟಗಾರರು, ಸಹ ಆಟಗಾರರೊಂದಿಗೆ ಪ್ರಯಾಣಿಸಿದ್ದರು. ಅಲ್ಲದೆ ಭಾರತ ತಂಡವು ಪರ್ತ್ ನಲ್ಲಿ ತಮ್ಮ ಐತಿಹಾಸಿಕ ಗೆಲುವನ್ನು ಕೂಡ ಒಟ್ಟಿಗೆ ಆಚರಿಸಲಿಲ್ಲ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಉಕ್ರೇನ್ ಯುದ್ದದಲ್ಲಿ ರಷ್ಯಾ ಪರ ಹೋರಾಡುತ್ತಿದ್ದ ಕೇರಳದ ವ್ಯಕ್ತಿ ಸಾವು
ಬಿಸಿಸಿಐ ಕೈಗೊಂಡ ನಿಯಮಗಳು
1) ಪಂದ್ಯಾವಳಿಯು 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿದ್ದರೆ ಆಟಗಾರರ ಕುಟುಂಬಗಳು 14 ದಿನಗಳವರೆಗೆ ಮತ್ತು ಕಡಿಮೆ ದಿನಗಳ ಪಂದ್ಯಾವಳಿಗಳಲ್ಲಿ 7 ದಿನಗಳವರೆಗೆ ಮಾತ್ರ ಆಟಗಾರರೊಂದಿಗೆ ಉಳಿಯಲು ಅನುಮತಿ ನೀಡಲಾಗಿದೆ.
2) ಎಲ್ಲಾ ಆಟಗಾರರು ತಂಡದ ಬಸ್ಸ್ ನಲ್ಲೇ ಪ್ರಯಾಣಿಸಬೇಕು.
3) ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ವೈಯಕ್ತಿಕ ಮ್ಯಾನೇಜರ್ ವಿಐಪಿ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಅಥವಾ ತಂಡದ ಬಸ್ಸ್ ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ಅಲ್ಲದೆ ಆಟಗಾರರು ಉಳಿದುಕೊಳ್ಳುವ ಹೋಟೆಲ್ ಗಳಲ್ಲಿ ಇರುವಂತಿಲ್ಲ. ಅವರು ಬೇರೆ ಹೋಟೆಲ್ ನಲ್ಲಿ ಉಳಿಯಬೇಕಾಗುತ್ತದೆ.
4) ಆಟಗಾರರ ಲಗೇಜ್ 150 ಕೆಜಿ ಮೀರಿದರೆ, ಬಿಸಿಸಿಐ ಹೆಚ್ಚುವರಿ ಶುಲ್ಕವನ್ನು ಭರಿಸುವುದಿಲ್ಲ, ಬದಲಾಗಿ ಆಟಗಾರರೇ ಅದನ್ನು ಪಾವತಿಸಬೇಕಾಗುತ್ತದೆ.
ಈ ಮೂಲಕ ಆಟಗಾರರನ್ನು ಜವಾಬ್ದಾರಿಯುತ ಸ್ಥಾನದಲ್ಲಿರಿಸಲು ಇಂತಹ ಕಠಿಣ ಕ್ರಮಕೈಗೊಳ್ಳಲು ಬಿಸಿಸಿಐ ಮುಂದಾಗಿದ್ದು, ಈ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ ಭಾರತ ತಂಡದ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಚಿಂತಿಸಲಾಗಿದೆ.
BIG BOSS
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
Published
10 minutes agoon
14/01/2025By
NEWS DESK3ಬಿಗ್ ಬಾಸ್ ಫಿನಾಲೆಗೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಬಿಗ್ ಬಾಸ್ ಮನೆಯಲೀಗ ಮಿಡ್ ವೀಕ್ ಎಲಿಮಿನೇಷನ್ ಟೆನ್ಶನ್ ಶುರುವಾಗಿದೆ.
ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ನಾಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡಲಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
ಬಿಗ್ ಬಾಸ್ ಕೊಟ್ಟ ಟಾಸ್ಕ್ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ನಿಂದ ಪಾರಾಗಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ಉಳಿದುಕೊಂಡಿದ್ದು, ಈ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ. ಇನ್ನು ಇಬ್ಬರು ವಾರಾಂತ್ಯಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ. ಕೊನೆಗೆ ವಾರಾಂತ್ಯದಲ್ಲಿ ಮೂರು ಜನ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ.
ಹೀಗಾಗಿ ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಕೊಟ್ಟ ಟಾಸ್ಕ್ ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ಅದರಲ್ಲೂ ರಿಲೀಸ್ ಆದ ಪ್ರೋಮೋದಲ್ಲಿ, ಇದು ಮಿಡ್ ವೀಕ್ ಎಲಿಮಿನೇಷನ್ ನಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ಇರುವ ಕೊನೆಯ ಟಾಸ್ಕ್ ಎಂದು ಭಯ ಹುಟ್ಟಿಸಿದ್ದಾರೆ.
LATEST NEWS
ಮ*ರಣದ ನಂತರ ಏನು ಎಂದು ಹುಡುಕಿದಾತ ಸಾ*ವಿಗೆ ಶರಣಾದ!
Published
14 minutes agoon
14/01/2025By
NEWS DESK4ಮಂಗಳೂರು/ಲಖನೌ: ಇತ್ತೀಚಿನ ದಿನಗಳಲ್ಲಿ ಆ*ತ್ಮಹ*ತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ಮಕ್ಕಳು ಸಾ*ವಿಗೆ ಶರಣಾಗುತ್ತಿರೋದು ವಿಪರ್ಯಾಸ. ಸಣ್ಣ ಪುಟ್ಟ ವಿಚಾರಗಳಿಗೆ ಸಾ*ವಿನ ದಾರಿ ಹಿಡಿಯುತ್ತಿರೋರು ಅಧಿಕ. ಉತ್ತರಪ್ರದೇಶದ ಮೀರತ್‌ನಲ್ಲಿ ಬಾಲಕನೋರ್ವ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಆತ ಗೂಗಲ್ ಹಾಗೂ ಯೂಟ್ಯೂಬ್‌ನಲ್ಲಿ ಹುಡುಕಾಡಿರುವ ವಿಚಾರ ಶಾ*ಕ್ ಕೊಟ್ಟಿದೆ.
9ನೇ ತರಗತಿಯಲ್ಲಿ ಓದುತ್ತಿದ್ದ ಯುವರಾಜ್ ಮೃ*ತ ಬಾಲಕ. ಈತ ಪಿಸ್ತೂಲ್‌ನಿಂದ ಗುಂ*ಡು ಹಾ*ರಿಸಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮುಂಚೆ ಆತ ‘ಗರುಡ ಪುರಾಣ’ದ ಬಗ್ಗೆ ಹುಡುಕಾಟ ನಡೆಸಿದ್ದಾನೆ ಎನ್ನಲಾಗಿದೆ. ಯೂಟ್ಯೂಬ್, ಗೂಗಲ್‌ಗಳಲ್ಲಿ ಗರುಡ ಪುರಾಣದ ಬಗ್ಗೆ ಹುಡುಕಿದ್ದಾನಂತೆ. ಸಾ*ವಿನ ರೀತಿ, ಸಾ*ವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಎಂಬ ಬಗ್ಗೆ ಕುತೂಹಲ ಹೊಂದಿದ್ದ ಎಂಬುದು ಆತನ ಸರ್ಚ್ ಇಂಜಿನ್‌ನಿಂದ ತಿಳಿದುಬಂದಿದೆ. ಆದರೆ, ಯಾವುದೇ ಡೆ*ತ್ ನೋಟ್ ಪತ್ತೆಯಾಗಿಲ್ಲ.
ಇದನ್ನೂ ಓದಿ : ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
ಬುದ್ದಿ ಮಾತು…ಬೈಕ್ ಮಾರಾಟ :
ಓದಿನತ್ತ ಬಾಲಕ ಗಮನ ಕೊಡುತ್ತಿರಲಿಲ್ಲ. ಹೀಗಾಗಿ ಆತನ ತಾಯಿ ಗದರಿದ್ದರಂತೆ. ಅಲ್ಲದೇ, ಆತ ತನ್ನ ಬಳಿಯಿದ್ದ ದ್ವಿಚಕ್ರವಾಹನದ ಬಗ್ಗೆ ಅತಿಯಾದ ವ್ಯಾಮೋಹ ಹೊಂದಿದ್ದನಂತೆ. ಇದು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ ಎಂದರಿತು ಪೋಷಕರು ಆ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿದ್ದರು. ಇದೂ ಕೂಡ ಬಾಲಕ ಆ*ತ್ಮಹ*ತ್ಯೆಯ ನಿರ್ಧಾರ ತಳೆಯಲು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸದ್ಯ ಮ*ರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
BIG BOSS
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
Published
36 minutes agoon
14/01/2025By
NEWS DESK3‘ಬಿಗ್ ಬಾಸ್ ಕನ್ನಡ ಸೀಸನ್ 11’ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಆದ್ರೆ ಕಳೆದ ವಾರ ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಆಚೆ ಬಂದಿದ್ದಾರೆ. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಯಾರು ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಗೂ ಮೊದಲೇ ಔಟ್ ಆಗಿದ್ದಾರೆ. 105ಕ್ಕೂ ಹೆಚ್ಚು ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದ ಅವರು ಈಗ ಆಟದಿಂದ ಹೊರ ಹೋಗಿದ್ದಾರೆ. ಅವರು ಆಟವನ್ನು ಹತ್ತಿರದಿಂದ ನೋಡಿದವರು. ಯಾರು ದೊಡ್ಮನೆಯಿಂದ ಹೊರ ಹೋಗುತ್ತಾರೆ ಹಾಗೂ ಯಾರೂ ಗೆಲ್ಲಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?
ಬಿಗ್ ಬಾಸ್ ಕನ್ನಡ ಸೀಸನ್ 11ರ, ಟಾಪ್ 5 ಫೈನಲಿಸ್ಟ್ ಜಾಗದಲ್ಲಿ ತ್ರಿವಿಕ್ರಮ್, ಹನುಮಂತ, ರಜತ್, ಭವ್ಯಾ ಗೌಡ ಹಾಗೂ ಉಗ್ರಂ ಮಂಜು ಇರಲಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ವಾರ ಮೋಕ್ಷಿತಾ ಅಥವಾ ಧನರಾಜ್ ಅವರು ಆಚೆ ಬರಬಹುದು ಎಂದು ಹೇಳಿದ್ದಾರೆ.
ಅಲ್ಲದೇ ಬಿಗ್ ಬಾಸ್ ಸೀಸನ್ 11 ಫಿನಾಲೆ ಟ್ರೋಫಿ ಗೆಲ್ಲೋದು ಯಾರು ಅಂತ ಕೂಡ ಹೇಳಿದ್ದಾರೆ. ಹನುಮಂತ ತುಂಬಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ಹನುಮಂತ ಟಾಪ್ 2ನಲ್ಲಿ ಇರುತ್ತಾರೆ ಅಥವಾ ಗೆಲ್ಲಲುಬಹುದು. ಆದ್ರೆ ನನಗೆ ತ್ರಿವಿಕ್ರಮ್ ಅವರು ಗೆಲ್ಲಬೇಕು. ಅವ್ರು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿದ್ದಾರೆ. ಈ ಬಿಗ್ ಬಾಸ್ ಗೆಲುವು ಅವರಿಗೆ ತುಂಬಾನೇ ಮುಖ್ಯ ಎಂದು ಹೇಳಿದ್ದಾರೆ.
LATEST NEWS
ಅಧಿಕಪ್ರಸಂಗದ ಪ್ರಶ್ನೆ ಕೇಳಿದ ಯೂಟ್ಯೂಬರನ್ನು ಹೊಡೆದ ನಾಗಾಸಾಧು
ತುಳು ಸಿನೆಮಾಗೆ ‘ಜೈ’ ಅಂದ ಸುನೀಲ್ ಶೆಟ್ಟಿ; ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ
ಮಕರ ಜ್ಯೋತಿ ಯಾವ ಹೊತ್ತಲ್ಲಿ ಕಾಣುತ್ತದೆ ಗೊತ್ತಾ ?
ನಟ ದರ್ಶನ್ ಸಂಕ್ರಾಂತಿ ಆಚರಣೆ…ಪತ್ನಿ ಮಾಡಿರುವ ಪೋಸ್ಟ್ ವೈರಲ್!
ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್; ಕಟ್ಟುನಿಟ್ಟಿನ ಕ್ರಮಕೈಗೊಂಡ ಬಿಸಿಸಿಐ
ಟ್ಯಾಂಕರ್ಗಳಿಂದ ಡಿಸೇಲ್ ಕಳ್ಳತನ; ಆರೋಪಿಗಳು ಅರೆಸ್ಟ್
Trending
- BIG BOSS3 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- LATEST NEWS4 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- FILM6 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- FILM5 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ