ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾದಂತೆ ಇದೀಗ ದೇಶದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ 102.50 ರೂಪಾಯಿ ಹೆಚ್ಚಾಗಿದ್ದು, ಆ ಮೂಲಕ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯು ರೂ. 2355.50 ರಷ್ಟು ಏರಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಇದರ ಬಿಸಿ ತಟ್ಟಿದೆ.
ಫೆಬ್ರವರಿಯಲ್ಲಿ 91.50 ರೂ ಇದ್ದ ಸಿಲಿಂಡರ್ ಬೆಲೆ ಎಪ್ರಿಲ್ ತಿಂಗಳಿನಲ್ಲಿ 105 ರೂ. ವರೆಗೆ ಏರಲ್ಪಟ್ಟಿತ್ತು. ಇಂದು ನಾಲ್ಕನೇ ಬಾರಿಗೆ ಮತ್ತೆ 102.50 ರೂ. ಗಳಷ್ಟು ಏರಿಕೆ ಕಂಡಿದೆ.
ಆದರೆ ಮನೆಯಲ್ಲಿ ಬಳಸುವ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.
ಸುಮಾರು ನಾಲ್ಕು ತಿಂಗಳಿಂದ ಎಲ್‌ಪಿಜಿ ಸಿಲಿಂಡರ್‌ಗಳ ದರ ಹೆಚ್ಚಾಗಿದ್ದು ಒಟ್ಟಾರೆಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.