LATEST NEWS
ಚಂದ್ರಕುಳಿಯಂತಾದ ಕೂಳೂರು ಬ್ರಿಡ್ಜ್-ಗರ್ಭಿಣಿ ಹೋದ್ರೆ ಡೆಲಿವರಿ ಗ್ಯಾರಂಟಿ..
Published
2 years agoon
By
Adminಮಂಗಳೂರು: ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರ ಕೂಳೂರು ಸೇತುವೆಯ ಮೇಲೆ ದೊಡ್ಡ ಗಾತ್ರದ ಹೊಂಡ, ಗುಂಡಿಗಳು ನಿರ್ಮಾಣವಾಗಿದ್ದು, ಚಂದ್ರನಲ್ಲಿರುವ ಚಂದ್ರಕುಳಿಯಂತೆ ಕಾಣುತ್ತಿವೆ. ವಾಹನ ಸಂಚಾರ ದುಸ್ತರವಾಗಿದೆ.
ಉಡುಪಿ ಭಾಗದಿಂದ ಮಂಗಳೂರು ಕಡೆಗೆ ಬರುವ ಕೂಳೂರು ಹಳೆ ಸೇತುವೆಯು ತೀರಾ ಹದಗೆಟ್ಟಿದೆ.
ಸೇತುವೆಯುದ್ದಕ್ಕೂ ಅಲ್ಲಲ್ಲಿ ಡಾಂಬರು ಪೂರ್ತಿ ಎದ್ದು ಹೋಗಿದ್ದು, ಈ ಸೇತುವೆಯಲ್ಲಿ ವಾಹನ ಚಲಾಯಿಸುವುದೇ ಒಂದು ಸವಾಲಾಗಿ ಪರಿಣಮಿಸಿದೆ.
ಬೆಳಗ್ಗೆ ಮತ್ತು ಸಂಜೆ ವೇಳೆ ಪೀಕ್ ಆವರ್‌ಗಳಲ್ಲಿ 150 ಮೀಟರ್ ಉದ್ದದ ಈ ಸೇತುವೆಯನ್ನು ದಾಟಲು ವಾಹನ ಸವಾರರಿಗೆ ಕನಿಷ್ಠ 10 ನಿಮಿಷ ತಗಲುತ್ತದೆ.
ಒಂದೊಂದೇ ಹೊಂಡಗಳಿಗೆ ಬಿದ್ದು ಎದ್ದು ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸುವಷ್ಟರಲ್ಲಿ ಚಾಲಕರ ಜೀವ ಹೈರಾಣಾಗಿ ಹೋಗುತ್ತದೆ. ಇದರಲ್ಲಿರುವ ಡಾಂಬಾರು ಎದ್ದು ಕಬ್ಬಿಣದ ರಾಡುಗಳು
ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳ ತೀರದು. ಆ್ಯಂಬುಲೆನ್ಸ್,
ಅಗ್ನಿ ಶಾಮಕ ದಳ ಮತ್ತಿತರ ತುರ್ತು ಸೇವೆಯ ವಾಹನಗಳಿಗೆ ತುರ್ತಾಗಿ ಸೇವೆಯನ್ನು ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. 1952 ರಲ್ಲಿ ನಿರ್ಮಾಣವಾದ ಈ ಸೇತುವೆ ಇದೀಗ ಶಿಥಿಲವಾಗಿದ್ದು,
2020 ರಲ್ಲಿ 2 ತಿಂಗಳ ಕಾಲ ಈ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ಮಾಡಿ ಪುನಶ್ಚೇತನಗೊಳಿಸಲಾಗಿತ್ತು. ಈಗ ಈ ಸೇತುವೆ ಸಂಪೂರ್ಣ ಹದಗೆಟ್ಟು ಹೋಗಿದೆ.
ಈ ಸೇತುವೆ ಮಾತ್ರವಲ್ಲದೆ ಇದೀಗ ಮಂಗಳೂರು ಭಾಗದಿಂದ ಉಡುಪಿ ಕಡೆಗೆ ಹೋಗುವ ರಸ್ತೆ ಕೂಡಾ ಹದಗೆಟ್ಟಿದೆ.
ರಸ್ತೆಯ ಕಾಂಕ್ರೀಟಿಗೆ ಹಾಕಿದ್ದ ಕಬ್ಬೀಣದ ಸರಳುಗಳು ಕಳಚಲ್ಪಟ್ಟು ಮೇಲಕ್ಕೆ ಕಾಣುತ್ತಿವೆ.
ಸೇತುವೆಯನ್ನು ಕೂಡಲೇ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶ್ರೀಧರ್ ಹೊಳ್ಳ
ಕಳೆದ ಸುಮಾರು 15 ದಿನಗಳಿಂದ ಈ ಸೇತುವೆಯಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೊತ್ತಿನಲ್ಲಿ ವಾಹನಗಳು ಬೀಚ್ ರಸ್ತೆ ತನಕವೂ ಮೈಲುದ್ದ ಸಾಲುಗಟ್ಟಿ ನಿಂತಿರುತ್ತವೆ.
ಪಣಂಬೂರಿನಿಂದ ಕೂಳೂರಿಗೆ ಪ್ರಯಾಣಿಸಲು 45 ನಿಮಿಷ ಬೇಕಾಗುತ್ತದೆ. ರಸ್ತೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳ ಬೇಕೆಂದು ಸಾಮಾಜಿಕ ಹೋರಾಟಗಾರ ಶ್ರೀಧರ ಹೊಳ್ಳ ಅವರು ಒತ್ತಾಯಿಸಿದ್ದಾರೆ.
FILM
ಸಮಂತಾಗೆ ಪಿತೃ ವಿಯೋಗ; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ
Published
38 minutes agoon
30/11/2024By
NEWS DESK4ಮಂಗಳೂರು/ಹೈದರಾಬಾದ್ : ನಟಿ ಸಮಂತಾ ರುತ್ ಪ್ರಭು ತಂದೆ ಜೋಸೆಫ್ ಪ್ರಭು(72) ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಜೋಸೆಫ್ ಪ್ರಭು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿ*ಧನಕ್ಕೆ ಹಲವರು ಸಂ*ತಾಪ ಸೂಚಿಸಿದ್ದಾರೆ.
ಸ್ಯಾಮ್ ಭಾವುಕ ಪೋಸ್ಟ್ :
ಇತ್ತೀಚಿಗಷ್ಟೇ ಸಿಟಾಡೆಲ್ ವೆಬ್ ಸೀರೀಸ್ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಬಂದಿದ್ದರು ಸಮಂತಾ. ಸಿಟಾಡೆಲ್ ಸಕ್ಸಸ್ ಖುಷಿಯಲ್ಲಿದ್ದ ಅವರಿಗೆ ತಂದೆಯ ಸಾ*ವು ಬರಸಿಡಿಲು ಬಡಿದಂತಾಗಿದೆ.
ಈ ನೋವಿನಲ್ಲಿರುವ ಸಮಂತಾ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಮತ್ತೆ ಭೇಟಿಯಾಗೋಣ ಡ್ಯಾಡ್’ ಎಂದು ಸಮಂತಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಒಡೆದ ಹೃದಯದ ಎಮೋಜಿ ಹಾಕಿದ್ದಾರೆ.
ಸಿಟಾಡೆಲ್ ಹನಿಬನ್ನಿ ವೆಬ್ ಸೀರೀಸ್ ನವೆಂಬರ್ 7 ರಿಂದ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸಮಂತಾ ಹಾಗೂ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶಿಸಿದ ಈ ಸೀರಿಸ್ ಜನಮನ ಗೆದ್ದಿದೆ.
ಇದನ್ನೂ ಓದಿ : ‘ಕಲ್ಟ್’ ಚಿತ್ರದ ಟೆಕ್ನಿಷಿಯನ್ ಆತ್ಮಹ*ತ್ಯೆ ಯತ್ನ; ಸಚಿವ ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ
ಈ ಯಶಸ್ಸಿನ ಸಂಭ್ರಮವಾಗಿ ಮುಂಬೈನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ನವೆಂಬರ್ 28 ರ ರಾತ್ರಿ ಸಮಂತಾ ಸಿಟಾಡೆಲ್ ಸಕ್ಸಸ್ ಪಾರ್ಟಿಯಲ್ಲಿ ವರುಣ್ ಧವನ್ ಜೊತೆ ಡ್ಯಾನ್ಸ್ ಮಾಡಿದ್ದರು. ಈ ವೀಡಿಯೋ ವೈರಲ್ ಕೂಡ ಆಗಿತ್ತು. ಪಾರ್ಟಿಯಲ್ಲಿ ಪಾಲ್ಗೊಂಡು ಮನೆಗೆ ಹೋಗ್ತಿದ್ದಂತೆ ಸ್ಯಾಮ್‌ಗೆ ದೊಡ್ಡ ಶಾ*ಕ್ ಎದುರಾಗಿತ್ತು. ಒಂದೆಡೆ ಸ್ಯಾಮ್ ಮಾಜಿ ಪತಿಯ ಮದುವೆಯ ಶಾಸ್ತ್ರ ಸಂಭ್ರಮ ನಡೆಯುತ್ತಿದ್ದರೆ, ಇನ್ನೊಂದೆಡೆ ಸಮಂತಾ ಮನೆಯಲ್ಲಿ ದುಃಖ ಆವರಿಸಿದೆ.
2025 ರ ಜನವರಿಯಿಂದ ಕರ್ನಾಟಕ ಆರೋಗ್ಯ ಇಲಾಖೆ ರಾಜ್ಯದ ಪ್ರತಿ ಮನೆಗೂ ಭೇಟಿ ನೀಡಿ ಮಾನಸಿಕ ಮತ್ತು ದೈಹಿಕ ಆರೋಗ್ಯ ತಪಾಸಣೆ ನಡೆಸುವ ಯೋಜನೆ ಹಮ್ಮಿಕೊಂಡಿದೆ. ಗೃಹ ಆರೋಗ್ಯ ಯೋಜನೆಯ ಭಾಗವಾಗಿ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ಒದಗಿಸಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಮನೆ ಮನೆಗೆ ತೆರಳಿ ಚಿಕಿತ್ಸೆ ಜೊತೆ ಉಚಿತ ಔಷಧಿ ನೀಡುವ ‘ಗೃಹ ಆರೋಗ್ಯ’ ಯೋಜನೆ ಆರಂಭಿಸಿರುವ ಕರ್ನಾಟಕ ಆರೋಗ್ಯ ಇಲಾಖೆ ಇದೀಗ ಮತ್ತೊಂದು ಮಹತ್ವದ ಯೋಜನೆ ಹಮ್ಮಿಕೊಂಡಿದೆ. 2025ರ ಜನವರಿಯಿಂದ ರಾಜ್ಯದ ಪ್ರತಿ ಮನೆಯ ಸದಸ್ಯರ ಮಾನಸಿಕ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಗೃಹ ಆರೋಗ್ಯ ಯೋಜನೆ ಅಂಗವಾಗಿ ಜನವರಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿ ರಾಜ್ಯದ ಪ್ರತಿ ಮನೆಗೂ ತೆರಳಿ ಮಾನಸಿಕ ಆರೋಗ್ಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಮಾಡಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಡಿಮೆನ್ಶಿಯಾ ಇಂಡಿಯಾ ಅಲಯನ್ಸ್ (DIA) ನಡೆಸಿದ DemCon’24, ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ರಾಜ್ಯದಾದ್ಯಂತ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಬಳಲುತ್ತಿರುವ ಜನರು ನಿರಂತರ ಔಷಧಿಗಳನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸಲಿದ್ದಾರೆ. ಅನೇಕ ರೋಗಿಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಅಲ್ಪಾವಧಿಯ ನಂತರ ವೈದ್ಯರು ಸೂಚಿಸಿದ ಚಿಕಿತ್ಸೆ, ಔಷಧ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ. ಇದಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಗ್ರಾಮೀಣ ಪ್ರದೇಶಗಳ ಮೇಲೆ ಕಾಳಜಿ :
ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ತಪಾಸಣೆಯ ಜೊತೆಗೆ, ಗೃಹ ಆರೋಗ್ಯ ಯೋಜನೆಯಡಿ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುವುದು. ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ. ಅಲ್ಲಿ ಮೆಮೊರಿ ನಷ್ಟದಂತಹ ಪರಿಸ್ಥಿತಿಗಳನ್ನು ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಲಾಗುತ್ತದೆ. ಇದರ ನಿವಾರಣೆಗೆ ಮಾನಸಿಕ ಆರೋಗ್ಯ ತಪಾಸಣೆ, ಚಿಕಿತ್ಸೆ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ತರಬೇತಿ :
ಯೋಜನೆಯ ಭಾಗವಾಗಿ, ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸಲು ಮತ್ತು ಅಗತ್ಯ ಬೆಂಬಲವನ್ನು ಒದಗಿಸಲು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರಿಂದ ವ್ಯಕ್ತಿಗಳು ಅವರಿಗೆ ಅಗತ್ಯವಿರುವ ಆರೈಕೆಯನ್ನು ಪಡೆಯಲಿದ್ದಾರೆ ಎಂದು ಗುಂಡೂರಾವ್ ತಿಳಿಸಿದ್ದಾರೆ. ಆರೋಗ್ಯ ಯೋಜನೆಯನ್ನು ಮೊದಲಿಗೆ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಇದೀಗ ರಾಜ್ಯದಾದ್ಯಂತ ಸುಮಾರು 30,000 ರೋಗಿಗಳನ್ನು ತಪಾಸಣೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡುವ ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ಜಾಗೃತಿ ಮತ್ತು ತರಬೇತಿ ನೀಡಲಾಗುತ್ತಿದೆ. ಅವರು ಆರಂಭಿಕ ಹಂತದಲ್ಲಿ ಆರೋಗ್ಯ ಸಮಸ್ಯೆಗಳನ್ನು ಗುರುತಿಸುತ್ತಾರೆ ಮತ್ತು ಪರಿಹರಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.
FILM
‘ಕಲ್ಟ್’ ಚಿತ್ರದ ಟೆಕ್ನಿಷಿಯನ್ ಆತ್ಮಹ*ತ್ಯೆ ಯತ್ನ; ಸಚಿವ ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ
Published
3 hours agoon
30/11/2024By
NEWS DESK4ಮಂಗಳೂರು/ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ನಟಿಸಿ, ನಿರ್ಮಿಸುತ್ತಿರುವ ‘ಕಲ್ಟ್’ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರದ ಟೆಕ್ನಿಷಿಯನ್ ಸಂತೋಷ್ ಆತ್ಮಹ*ತ್ಯೆಗೆ ಯತ್ನಿಸಿದ್ದು, ಜೈದ್ ಖಾನ್ ಸೇರಿದಂತೆ ಚಿತ್ರತಂಡದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕಲ್ಟ್ ಸಿನಿಮಾದ ಡ್ರೋನ್ ಉಸ್ತುವಾರಿಯನ್ನು ಸಂತೋಷ್ ಎಂಬವರು ವಹಿಸಿಕೊಂಡಿದ್ದರು. ಚಿತ್ರತಂಡದ ತಪ್ಪಿನಿಂದಾಗಿ ಇದೀಗ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾರ್ಟಿನ್, ಯುವ ಚಿತ್ರಗಳಿಗೆ ಕೆಲಸ ಮಾಡಿರುವ ಸಂತೋಷ್ ದಿನಕ್ಕೆ 25 ಸಾವಿರ ರೂಪಾಯಿ ನಿಗದಿ ಮಾಡಿ ಕಲ್ಟ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ನ.25 ರಂದು ಚಿತ್ರದುರ್ಗದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಸಂದರ್ಭ ವಿಂಡ್ ಫ್ಯಾನ್‌ಗೆ ಟಚ್ ಆಗಿ ಡ್ರೋನ್ ತುಂಡಾಗಿತ್ತು. ಆದರೆ, ಚಿತ್ರತಂಡ ನಷ್ಟ ತುಂಬಿಸಿಲ್ಲ ಎಂಬುದು ಸಂತೋಷ್ ಆರೋಪ.
ಇದನ್ನೂ ಓದಿ : ಪತ್ನಿಯನ್ನು ಹನಿಮುನ್‌ಗೆ ಕರೆದೊಯ್ದು ಮಾರಿದ ಪಾ*ಪಿ ಪತಿ !! ಮುಂದೇನಾಯ್ತು…..
ಚಿತ್ರತಂಡದ ಬಳಿ ಕೇಳಿದರೂ ಪ್ರಯೋಜನವಾಗಿಲ್ಲ. ನಷ್ಟ ಪರಿಹಾರ ನೀಡದೆ ಒಂದುವರೆ ಲಕ್ಷ ರೂಪಾಯಿ ಬೆಲೆಯ ಮೆಮೊರಿ ಕಾರ್ಡ್ ಕಿತ್ತುಕೊಂಡಿರುವ ಆರೋಪ ಕೇಳಿ ಬಂದಿದೆ. ಇದರಿಂದ ಸಂತೋಷ್ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಸದ್ಯ ಸಂತೋಷ್ ಸಹೋದರಿ ಮಾಗಡಿ ರೋಡ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
LATEST NEWS
ಫೆಂಗಲ್ ಚಂಡಮಾರುತ ಭೀತಿ; ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಹುಲ್ಲು ತರಲು ಗುಡ್ಡಕ್ಕೆ ತೆರಳಿದ್ದ ವೃದ್ಧೆ ಶ*ವವಾಗಿ ಪತ್ತೆ; ಚಿರತೆ ದಾ*ಳಿ ಶಂಕೆ
ಆರ್ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !
ಕಟಪಾಡಿ: ಪತ್ನಿ ನಿ*ಧನದ ಬೆನ್ನಲ್ಲೇ ಆಘಾತದಿಂದ ಪತಿ ಸಾ*ವು
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಡ್ರೈವರ್ ಎಡವಟ್ಟು: 12 ಮಂದಿಯ ದುರಂತ ಅಂತ್ಯ
Trending
- BIG BOSS7 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- BANTWAL2 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- Baindooru7 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- FILM23 hours ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ