Sunday, September 27, 2020

ಗಾಂಜಾದ ಬೃಹತ್ ಜಾಲ ಪತ್ತೆಹಚ್ಚಿದ ದಕ್ಷಿಣಕನ್ನಡ ಪೋಲೀಸರು,175 ಕೆಜಿ ಗಾಂಜಾ ವಶ

ಲೀಫ್ ಆರ್ಟಿಸ್ಟ್  ಅಕ್ಷಯ್ ಕೋಟ್ಯಾನ್ ಗೆ ಸಿಎಂ ಪ್ರಶಂಸೆ :ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನದ ಗೌರವ..!   

ಲೀಫ್ ಆರ್ಟಿಸ್ಟ್  ಅಕ್ಷಯ್ ಕೋಟ್ಯಾನ್ ಗೆ ಸಿಎಂ ಪ್ರಶಂಸೆ :ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನದ ಗೌರವ..!    ಮಂಗಳೂರು : ಅಶ್ವತ್ಥ ಎಲೆಯನ್ನು ಕಲಾತ್ಮಕವಾಗಿ ಕತ್ತರಿಸಿ ಚಿತ್ರ ರಚಿಸುವ ಕಲೆ ಇತ್ತೀಚೆನ ದಿನಗಳಲ್ಲಿ...

ಟೀಂ ಗರುಡ ಎಂಬ ಪಡ್ಡೆ ಹುಡುಗರ ಗ್ಯಾಂಗ್ ನ ಮಟ್ಟ ಹಾಕಿದ ಉಡುಪಿ ಪೊಲೀಸರು

ಉಡುಪಿ :ಉಡುಪಿ ನಗರ ಆಸುಪಾಸಿನ ದ್ವಿಚಕ್ರ ವಾಹನದಲ್ಲಿ ಬಂದು ಹಣ, ಮೊಬೈಲ್, ಪರ್ಸ್ ಸುಲಿಗೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನ ಮೊಹಮ್ಮದ್ ಆಶಿಕ್(19), ಮಹಮ್ಮದ್ ಆಸಿಫ್ ಯಾನೆ ರಮೀಝ್(30), ಮಿಸ್ವಾ(22),...

ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟ : ಹೋಟೆಲ್ ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ..!

ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟ : ಹೋಟೆಲ್ ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ..! ಉಡುಪಿ : ಕೊರೊನಾ ಲಾಕ್ ಡೌನ್ ನಿಂದಾಗಿ ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾದ ಹಿನ್ನಲೆ ಮುಂಬೈ ಹೋಟೆಲ್ ಉದ್ಯಮಿ ಗುಂಡು...

ಸ್ವಾಮಿ ಕೊರಗಜ್ಜನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಸ್ವಾಮಿ ಕೊರಗಜ್ಜನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..! ಮಂಗಳೂರು : ತುಳುನಾಡಿನ ಅತ್ಯಂತ ಕಾರ್ಣಿಕ ಹಾಗೂ ಪ್ರಸಿದ್ಧ ದೈವಗಳಲ್ಲಿ ಒಂದಾದ ಕೊರಗಜ್ಜನ ದರ್ಶನವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಡೆದಿದ್ದಾರೆ. ಕೆಲ ತಿಂಗಳ ಹಿಂದೆ ಮಂಗಳೂರಿಗೆ ಭೇಟಿ...

ಕೊರೊನಾದಿಂದಾಗಿ ಮೃತಪಟ್ಟ ಕೇಂದ್ರ ಸಚಿವರೊಬ್ಬರ ಅಂತ್ಯಕ್ರಿಯೆ ಹೀಗೂ ನಡೆಯುತ್ತಾ….!!

ಬೆಂಗಳೂರು : ಕೊರೊನಾ ವೈರಸ್ ಸೋಂಕು ಬಂದವರನ್ನು ಅನೇಕರು ತುಂಬ ಹೀನಾಯವಾಗಿ ನೋಡುತ್ತಾರೆ. ಬಹುತೇಕ ಸಾಮಾಜಿಕ ಬಹಿಷ್ಕಾರ ಇರುತ್ತೆ ಅನ್ನೊದನ್ನು ಕೇಳಿದ್ದೇವೆ. ಅದರಲ್ಲೂ ಕೊರೊನಾದಿಂದ ಸತ್ತವರ ಮುಖ ನೋಡಲು, ಹತ್ತಿರ ಹೋಗಲು, ಅವರ ಅಂತ್ಯಕ್ರಿಯೆಯನ್ನು...

ಬಂಟ್ವಾಳ ಅಗಸ್ಟ್ 11: ಬೃಹತ್ ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಬೃಹತ್ ಜಾಲವನ್ನು ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ಪತ್ತೆಹಚ್ಚಿದ್ದು, ಲಕ್ಷಾಂತರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 175 ಕೆ.ಜಿ ಗಾಂಜಾವನ್ನು ಬಂಟ್ವಾಳ ತಾಲೂಕಿನ ಕೇದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


ಬಂಧಿತರನ್ನು ಮಂಜೇಶ್ವರ ದೂರ್ಮಕ್ಕಾಡ್ ನಿವಾಸಿ ಇಬ್ರಾಹಿಂ ಯಾನೆ ಅರ್ಷದ್ (26), ಹೊಸಂಗಡಿ ನಿವಾಸಿ ಮೊಹಮ್ಮದ್ ಶಫಿಕ್ (31), ಕನ್ಯಾನ ಗ್ರಾಮದ ಖಲಂದರ್ ಶಾಫಿ (26) ಎಂದು ಗುರುತಿಸಲಾಗಿದೆ.  ಖಚಿತ ಮಾಹಿತಿ ಮೇರೆಗೆ ಇಂದು ಬೆಳಿಗ್ಗೆ ಪುತ್ತೂರು ನಗರ ಠಾಣಾ ಪೊಲೀಸ್‌ ನಿರೀಕ್ಷಕರು ತಮ್ಮ ಠಾಣಾ ಪೊಲೀಸ್ ಉಪನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಪಾಟ್ರಕೋಡಿ ಎಂಬಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಪಿಕಪ್ ವಾಹನ ಹಾಗೂ ಕಾರಿನಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಆರೋಪಿಗಳನ್ನು ಪಿಕಪ್ ವಾಹನ ಮತ್ತು ಕಾರಿನಲ್ಲಿ ಬರೋಬ್ಬರಿ 175 ಕೆಜಿ ಗಾಂಜಾವನ್ನು ಸಾಗಾಟ ಮಾಡಲು ಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


ಬಂಧಿತರಿಂದ ಸುಮಾರು 17,50,000 ಮೌಲ್ಯದ ಸುಮಾರು 175 ಕೆ.ಜಿ ಗಾಂಜಾ, ಸುಮಾರು ರೂ 3,00,000 ಮೌಲ್ಯದ ಪಿಕ್ ಅಪ್ ವಾಹನ, ಸುಮಾರು ರೂ 4,00,000 ಮೌಲ್ಯದ ಕಾರು ಸೇರಿದಂತೆ ಒಟ್ಟು ರೂ 24,50,000 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಇಬ್ರಾಹಿಂ ಎಂಬಾತನ ವಿರುದ್ದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ಹಾಗೂ ಖಲಂದರ್ ಶಾಫಿ ಎಂಬಾತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ 2 ಅಕ್ರಮ ಗಾಂಜಾ ಪ್ರಕರಣ ಹಾಗೂ 1 ಕೊಲೆ ಯತ್ನ ಪ್ರಕರಣ ಮತ್ತು ಕಾವೂರು ಠಾಣೆಯಲ್ಲಿ 1 ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.