ರಾಜ್ಯದಲ್ಲಿ ಸದ್ಯಕ್ಕೆ ಶಾಲೆ ಆರಂಭ ಇಲ್ಲ : ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ..!
ಬೆಂಗಳೂರು : ಕೊರೊನಾ ಸೋಂಕಿನ ಆತಂಕದ ಹಿನ್ನೆಲೆ ಸದ್ಯಕ್ಕೆ ಶಾಲೆ ಆರಂಭ ಇಲ್ಲ , ಅ.12 ರಿಂದ ಇ ಕ್ಲಾಸ್ ಪಾಠಗಳು ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಶಾಲೆಗಳು ಆರಂಭಕ್ಕೆ ಇರುವ ಗೊಂದಲ- ಆತಂಕಗಳ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಮುಂದೆ ತರಗತಿ ಆರಂಭದ ಬಗ್ಗೆ ನಿರ್ಧಾರ ಮಾಡಲಾಗುವುದು,
ಅ. 12 ರಿಂದ ಸಂವೇದ ಇ ಕ್ಲಾಸ್ ಪಾಠ ಸರಣಿಯ ಎರಡನೆಯ ಅವಧಿ ಆರಂಭವಾಗಲಿದೆ ಎಂದು ಹೇಳಿದರು.
5,6,7 ನೇ ತರಗತಿಯ ಮಕ್ಕಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ವಿಡಿಯೋ ಪಾಠ ನಡೆಯಲಿದೆ.
ಈ ತರಗತಿಗಳು ದೂರದರ್ಶನದ ಚಂದನ ವಾಹಿನಿಯಲ್ಲೂ ಮರು ಪ್ರಸಾರಗೊಳ್ಳಲಿದೆ ಎಂದರು. ದೂರದರ್ಶನ ಚಂದನವಾಹಿನಿಯಿಂದ ಪ್ರತಿನಿತ್ಯ ನಾಲ್ಕು ಗಂಟೆ ಅವಧಿಯಲ್ಲಿ ಪ್ರಥಮ ಹಂತದಲ್ಲಿ ಪ್ರೌಢಶಾಲೆಯ 8 ರಿಂದ 10 ನೆಯ ತರಗತಿ ಮಕ್ಕಳಿಗೆ ವಿಡಿಯೋ ಪಾಠ ತಯಾರಿಸಿ ಪ್ರಸಾರ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಶಾಲೆ ಕಾಲೇಜುಗಳನ್ನು ಆರಂಭಿಸುವ ವಿಚಾರದಲ್ಲಿ ಯಾವುದೇ ಧಾವಂತವಿಲ್ಲ. ತರಾತುರಿಯಲ್ಲಿ ಶಾಲೆಗಳನ್ನು ಪುನಾರಂಭಿಸುವುದಿಲ್ಲ. ಪೋಷಕರು ಮತ್ತು ಅಧ್ಯಾಪಕ ವರ್ಗ ಯಾವುದೇ ಅತಂಕಕ್ಕೆ ಒಳಗಾಗುವುದು ಬೇಡಾ ಎಂದು ಹೇಳಿದ್ದಾರೆ.