ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇದೀಗ ಸೆಮಿ ಫಿನಾಲೆ ವಾರ ಮುಕ್ತಾಯವಾಗುತ್ತಾ ಬಂದಿದೆ. ಇಂದು ಕಿಚ್ಚ ಸುದೀಪ್ ವಾರಾಂತ್ಯದ ಪಂಚಾಯ್ತಿ ನಡೆಸಿಕೊಡಲಿದ್ದಾರೆ. ಇದರಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಇದು ನಾಮಿನೇಟ್ ಆಗಿರುವ ಸ್ಪರ್ಧಿಗಳ ಆಟವನ್ನು ನಿರ್ಧಾರ ಮಾಡಲಿದೆ.
ಇನ್ನೊಂದು ಕಡೆ ಮಧ್ಯವಾರದಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಹಾಗೆ ಮಾಡಿಲ್ಲ. ಈಗ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆಯೋದು ಪಕ್ಕಾ ಆಗಿದೆ. ಇಂದು (ಜ.18) ಎಲಿಮಿನೇಷನ್ ನಡೆಯಲಿದ್ದು, ಒಬ್ಬರು ಹೊರ ಹೋಗುವುದು ಪಕ್ಕಾ ಎನ್ನಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಳ್ಳಲು ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಮುಂದಿನ ವೀಕೆಂಡ್‌ನಲ್ಲಿ ಫಿನಾಲೆ ನಡೆಯಲಿದೆ. ಅಲ್ಲಿಯವರೆಗೆ ಯಾರು ಇರುತ್ತಾರೆ ಹಾಗೂ ಯಾರು ಹೋಗುತ್ತಾರೆ ಎಂದು ಊಹಿಸೋದು ಕೂಡ ಕಷ್ಟ ಎಂಬಂತಾಗಿದೆ. ಹೀಗಿರುವಾಗಲೇ ಶನಿವಾರ ಸ್ಪರ್ಧಿಗಳಿಗೆ ಒಂದು ಶಾಕಿಂಗ್ ವಿಚಾರ ಇರಲಿದೆ ಎಂದು ಹೇಳಲಾಗುತ್ತಿದೆ.
ಕೆಲವು ವರದಿಗಳ ಪ್ರಕಾರ ಇಂದು ಶೋ ಆರಂಭಕ್ಕೂ ಮೊದಲೇ ಅಥವಾ ಶೋ ಕೊನೆಯಲ್ಲಿ ಎಲಿಮಿನೇಷನ್ ನಡೆಯೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾನುವಾರ ಕೂಡ ಒಂದು ಎಲಿಮಿನೇಷನ್ ನಡೆಯಲಿದೆ. ಈ ವಾರ ಒಟ್ಟಾರೆ ಇಬ್ಬರು ಅಥವಾ ಮೂವರು ಹೊರ ಹೋಗಲಿದ್ದಾರೆ.
ಇದನ್ನೂ ಓದಿ: ಮಂಥರೆಯಾಗಿ ಮೊದಲ ಬಾರಿ ಯಕ್ಷಗಾನದಲ್ಲಿ ಮಿಂಚಿದ ನಟಿ ಉಮಾಶ್ರೀ
ಸದ್ಯ ಹನುಮಂತ ಅವರು ಎಲಿಮಿನೇಷನ್‌ನಿಂದ ಬಚವ್ ಆಗಿದ್ದಾರೆ. ಮೋಕ್ಷಿತಾ ಪೈ ಅವರನ್ನು ಹನುಮಂತ ಸೇವ್ ಮಾಡಿದ್ದು, ಫಿನಾಲೆ ವಾರ ತಲುಪಿದ್ದಾರೆ. ಇನ್ನು ಡಬಲ್ ಎಲಿಮಿನೇಷನ್ ಇರುವ ಕಾರಣ ನಾಮಿನೇಟ್ ಆಗಿರುವ ಗೌತಮಿ, ರಜತ್, ಮಂಜು, ಭವ್ಯ ಹಾಗೂ ಧನರಾಜ್ ಮೊಗದಲ್ಲಿ ಆತಂಕ ಕಾಡುತ್ತಿದೆ. ನಗು ಎನ್ನುವುದು ಮಾಯವಾಗಿ ಕಣ್ಣೀರು ಬಾಕಿ ಉಳಿದಿದೆ. ಕೊನೆ ಹಂತಕ್ಕೆ ಬಂದು ಹೊರ ನಡೆದರೆ ಹೇಗೆ ಎಂದು ಯೋಚನೆಯಲ್ಲಿ ತೊಡಗಿದ್ದಾರೆ. ಹನುಮಂತು, ಮೋಕ್ಷಿತಾ ಅವರನ್ನು ಉಳಿಸಿಕೊಂಡಿದ್ದು ಧನರಾಜ್‌ಗೆ ಕೈಕೊಟ್ಟಿದ್ದಾರೆ.
ಈ ವಾರ ಯಾರಿಗೆ ಮನೆಯಿಂದ ಗೇಟ್‌ಪಾಸ್ ?
ಉಗ್ರಂ ಮಂಜು, ರಜತ್ ಮತ್ತು ಭವ್ಯಾ ಗೌಡ ಅವರ ಆಟಕ್ಕೆ ಹೋಲಿಕೆ ಮಾಡಿದರೆ ಗೌತಮಿ ಈ ವಾರ ಹೊರ ಹೋಗೋದು ಬಹುತೇಕ ಖಚಿತ. ಅಷ್ಟೇ ಅಲ್ಲದೆ, ಅವರಿಗೆ ಫ್ಯಾನ್ಸ್ ಫಾಲೋವಿಂಗ್ ಕೂಡ ತೀರಾ ಕಡಿಮೆ ಇದೆ. ಇನ್ನು ಇವರನ್ನು ಹೊರತುಪಡಿಸಿ ಧನರಾಜ್ ಅವರು ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಡುವ ಸಾಧ್ಯತೆ ಇದೆ.
ಆಟದ ವೈಖರಿ, ಮನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಇವೆಲ್ಲವನ್ನೂ ಗಮನಿಸಿದರೆ ಧನರಾಜ್ ಉತ್ತಮವಾಗಿದ್ದಾರೆ. ಆದರೆ ಈ ವಾರದ ಟಾಸ್ಕ್ ಒಂದರಲ್ಲಿ ನಿಯಮದ ಅರಿವಿಲ್ಲದೆ, ಕನ್ನಡಿ ನೋಡಿಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದ್ದರು. ಈ ಒಂದು ತಪ್ಪಿನಿಂದಾಗಿ ಅವರಿಗೆ ಓಟಿಂಗ್ ವ್ಯವಸ್ಥೆಯಲ್ಲಿ ಪೆಟ್ಟು ಬೀಳುವ ಸಾಧ್ಯತೆ ಇದೆ.
ಅಲ್ಲದೆ ನಾಮಿನೇಟ್ ಆದ ಪ್ರತಿ ಸ್ಪರ್ಧಿಗಳಿಗೆ ವಾರದಲ್ಲಿ 5 ದಿನ ಓಟ್ ಮಾಡುವ ಅವಕಾಶವಿರುತ್ತದೆ. ಆದರೆ ಈ ಬಾರಿ ಧನರಾಜ್ ಅವರಿಗೆ 3 ದಿನವಷ್ಟೇ ಅದರ ಅವಕಾಶ ಸಿಗಲಿದೆ. ಹೀಗಾಗಿ ಕಡಿಮೆ ಓಟ್ ಇವರ ಪಾಲಾಗುವ ಸಾಧ್ಯತೆ ಇದೆ. ಹೀಗಾಗಿ ಈ ವಾರ ಗೌತಮಿ ಮತ್ತು ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಿದೆ.