Tuesday, October 26, 2021

ಅಮೇರಿಕದಲ್ಲೀಗ ಬೈಡನ್- ಕಮಲ ಯುಗ..! ಜೋ ಬೈಡನ್ ರನ್ನು ಅಭಿನಂಧಿಸಿದ ಪ್ರಧಾನಿ ಮೋದಿ..!

ಅಮೇರಿಕದಲ್ಲೀಗ ಬೈಡನ್- ಕಮಲ ಯುಗ..! ಜೋ ಬೈಡನ್ ರನ್ನು ಅಭಿನಂಧಿಸಿದ ಪ್ರಧಾನಿ ಮೋದಿ..!

Biden- kamala era in America.! PM Modi praise Joe Biden..

ವಾಷಿಂಗ್ಟನ್ : ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ದಾಂದಲೆ ನಡೆಸಬಹುದು ಎಂಬ ಭೀತಿಯಿಂದಾಗಿ ಸಂಸತ್‌ ಭವನ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಭದ್ರಕೋಟೆಯಾಗಿ ಪರಿವರ್ತಿಸಿದ್ದರು ಮತ್ತು ಈ ಐತಿಹಾಸಿಕ ಕಾರ್ಯಕ್ರಮವು ಸರಳವಾಗಿ ನಡೆಯಿತು.

ಮುಖ್ಯ ನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್‌ ಅವರು 78 ವರ್ಷದ ಬೈಡನ್‌ಗೆ ಕ್ಯಾಪಿಟಲ್‌ನ ವೆಸ್ಟ್‌ ಫ್ರಂಟ್‌ನಲ್ಲಿ ಪ್ರಮಾಣ ವಚನ ಬೋಧಿಸಿದರು.

ಸೇನೆಯ 25 ಸಾವಿರಕ್ಕೂ ಹೆಚ್ಚು ಯೋಧರು ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿದ್ದರು. ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಹಿರಿಯ ಅಧ್ಯಕ್ಷರಾಗಿ ಬೈಡನ್‌ ಅವರು ದಾಖಲೆ ಸೇರಿದ್ದಾರೆ.

ಅವರು ತಮ್ಮ ಕುಟುಂಬದ 127 ವರ್ಷ ಹಳೆಯ ಬೈಬಲ್ ಪ್ರತಿಯ ಮೇಲೆ ಎಡಕೈಯನ್ನು ಇರಿಸಿ ಪ್ರಮಾಣವಚನ ಉಚ್ಚರಿಸಿದರು.

ಉಪಾಧ್ಯಕ್ಷರಾಗಿ ಮತ್ತು ಏಳು ಬಾರಿ ಸೆನೆಟರ್‌ ಆಗಿದ್ದಾಗಲೂ ಅವರು ಈ ಬೈಬಲ್‌ನ ಮೇಲೆ ಕೈ ಇರಿಸಿಯೇ ಪ್ರಮಾಣವಚನ ಸ್ವೀಕರಿಸಿದ್ದರು.

ಮಾಜಿ ಅಧ್ಯಕ್ಷರಾದ ಬರಾಕ್‌ ಒಬಾಮ, ಜಾರ್ಜ್‌ ಡಬ್ಲ್ಯು. ಬುಷ್‌ ಮತ್ತು ಬಿಲ್‌ ಕ್ಲಿಂಟನ್ ಕಾರ್ಯಕ್ರಮದಲ್ಲಿ ‌ ಹಾಜರಿದ್ದರೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೈರಾಗಿದ್ದರು.

ಇನ್ನು ನೂತನ ಅಧ್ಯಕ್ಷರಾದ ಬೈಡನ್ ಅವರು ಮಾತನಾಡಿ ‘ಇಂದು ನಾವು ಒಬ್ಬ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸುತ್ತಿಲ್ಲ.

ಪ್ರಜಾಪ್ರಭುತ್ವ ಮೌಲ್ಯಗಳಿಗೆ ಸಿಕ್ಕಿರುವ ಗೆಲುವನ್ನು ಸಂಭ್ರಮಿಸುತ್ತಿದ್ದೇವೆ’ ಎಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.

ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೋ ಬೈಡನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಬೈಡನ್ ಜತೆ ಕಲಸ ಮಾಡುವುದನ್ನು ಮತ್ತು ಭಾರತ-ಅಮೆರಿಕ ವ್ಯೂಹಾತ್ಮಕ ಸಹಭಾಗಿತ್ವವನ್ನು ಗಟ್ಟಿಗೊಳಿಸುವುದನ್ನು ಎದುರುನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...