ಮಂಗಳೂರು: ಭ್ರಾಮರೀ ಯಕ್ಷಮಿತ್ರರು ಮಂಗಳೂರು ಇದರ ಐದನೇ ವರ್ಷದ ಭ್ರಾಮರೀ ಯಕ್ಷವೈಭವ 2022 ಇದೇ ಆಗಸ್ಟ್ 27 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ 7 ರಿಂದ ಮರುದಿನ ಮುಂಜಾನೆಯವರೆಗೆ ನಡೆಯಲಿದೆ.
ಯಕ್ಷಗಾನದ ಹಿರಿಯ ಹಾಸ್ಯಕಲಾವಿದ ಪೆರುವಡಿ ನಾರಾಯಣ ಭಟ್ಟ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ , ನೇಪಥ್ಯ ಕಲಾವಿದರಾದ ಗೋಪಾಲ ಪೂಜಾರಿ ಮತ್ತು ಬೊಕ್ಕಸ ಜಗನ್ನಾಥ ರಾವ್ ಅವರಿಗೆ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಗುವುದು.
ಹಿರಿಯ ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಡಾ| ವೈ.ಭರತ್ ಶೆಟ್ಟಿ, ಮಂಗಳೂರಿನ ಮೇಯರ್ ಪ್ರೇಮಾನಂದ ಶೆಟ್ಟಿ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್,ಧಾರ್ಮಿಕ ಪರಿಷತ್ ಸದಸ್ಯ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ,ಮಂಗಳೂರು ಗಣೇಶೋತ್ಸವದ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದಿವಂಗತ ಬಲಿಪ ಪ್ರಸಾದ ಭಟ್ ಅವರ ಸಂಸ್ಮರಣೆ,ಯಕ್ಷಗಾನ ಪೂರ್ವರಂಗ,ಚೆಂಡೆ ಜುಗಲ್ ಬಂಧಿ, ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ದಮಯಂತಿ ಪುನಃ ಸ್ವಯಂವರ,
ಮಾಯಾತಿಲೋತ್ತಮೆ,ವೀರವರ್ಮ ಕಾಳಗ ಯಕ್ಷಗಾನದ ಪ್ರದರ್ಶನ ಜರಗಲಿದೆ.ಈ ಎಲ್ಲಾ ಕಾರ್ಯಕ್ರಮ ಗಳಿಗೂ ಉಚಿತ ಪ್ರವೇಶ ಇರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಂಗಳೂರು: ಬಳ್ಳಾಲ್‌ಭಾಗ್ ಗುರ್ಜಿ ದೀಪೋತ್ಸವ ಸಮಿತಿ ವತಿಯಿಂದ 73ನೇ ವರ್ಷದ ಗುರ್ಜಿ ದೀಪೋತ್ಸವ ಬಹಳ ಸಂಭ್ರಮದಿಂದ ಜರುಗಿತು.
ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ , ಸೇವಾ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ನೆರವೇರಿಸಲಾಯಿತು. ಅತ್ಯಂತ ಜನಮಣ್ಣನೆ ಗಳಿಸಿದ ಈ ಗುರ್ಜಿ ದೀಪೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಈ ಬಾರಿಯೂ ನಡೆಯಿತು. ಸಂಜೆ 5.55ಕ್ಕೆ ದೀಪಾರಾಧನೆ, ಸಂಜೆ 6 .30ಕ್ಕೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ರಾತ್ರಿ 9.30ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಿತು. ವೈಭವದ ಮೆರವಣಿಗೆ ಮೂಲಕ ಶ್ರೀದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬರಲಾಯಿತು. ವಿದ್ಯುತ್ ಅಲಂಕಾರ, ಹೂವಿನ ಅಲಂಕಾರದಿಂದ ರಥವನ್ನು ಶೃಂಗರಿಸಲಾಗಿತ್ತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ಉದ್ಯಮಿ ಕುಡ್ಪಿ ಜಗದೀಶ್ ಶೆಣೈ ಅವರು ನೀಡಿದರು. ಕಾರ್ಮಿಕ ನಾಯಕ ಸುರೇಶ್ಚಂದ್ರ ಶೆಟ್ಟಿ, ಉದ್ಯಮಿ ರವೀಂದ್ರ ಶೇಟ್, ಕಾಂಗ್ರೆಸ್ ನಾಯಕ ಸುರೇಶ್ ಬಲ್ಲಾಳ್, ಮಾಜಿ ಕಾರ್ಪೋರೇಟರ್ ಪದ್ಮನಾಭ ಅಮೀನ್ , ರಂಗ ಕಲಾವಿದ ವಿಜಯಕುಮಾರ್ ಕೊಡಿಯಾಲ್‌ಬೈಲು, ಸುಶಾಂತ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್, ಪ್ರಮೋದ್ ಭಂಢಾರಿ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸನಾತನ ನೃತ್ಯಾಂಜಲಿ ಕಾರ್ಯಕ್ರಮ ಪ್ರದರ್ಶನಗೊಂಡಿತು. ಇದೇ ವೇಳೆ ಗುರ್ಜಿ ದೀಪೋತ್ಸವದಲ್ಲಿ ಹಲವು ಮಂದಿ ಸಾಧಕರನ್ನು ಗೌರವಿಸಲಾಯಿತು.
ಬಂಟ್ವಾಳ: ನಾಲ್ಕು ಮದುವೆಯಾಗಿ, ಐದನೇ ಮದುವೆಗೆ ತಯಾರಾಗುತ್ತಿದ್ದ ಭೂಪನೊಬ್ಬನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ನಾಲ್ಕನೇ ಮದುವೆಯಾದ ಪತ್ನಿಗೆ ತ್ರಿವಳಿ ತಲಾಖ್ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹ*ಲ್ಲೆ ನಡೆಸಿ ಮನೆಯಿಂದ ಹೊರದಹಾಕಿದ್ದ ರಾ*ಕ್ಷಸೀಯ ಕೃ*ತ್ಯವೊಂದು ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ ಬುಧವಾರ (ನ.27) ರಾತ್ರಿ ನಡೆದಿದೆ.
ಈ ಬಗ್ಗೆ ಸಂತ್ರಸ್ತ ಪತ್ನಿ ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗುವುದನ್ನೇ ಕಸುಬಾಗಿಸಿಕೊಂಡ ನಟೋರಿಯಸ್ ಬಹುಪತ್ನಿ ವಲ್ಲಭನನ್ನು ಮಾಣಿ ರಫೀಕ್ ಯಾನೆ ಮಹಮ್ಮದ್ ರಫೀಕ್(42)ನನ್ನು ಬಂಟ್ವಾಳ ಪೊಲೀಸರು ಬಲೆಗೆ ಕೆಡವಿದ್ದಾರೆ. ಆರೋಪಿ ಮಾಣಿ ರಫೀಕ್ ಈಗಾಗಲೇ ನಾಲ್ಕು ಮದುವೆಯಾಗಿದ್ದು, ಒಂದೆರಡು ವರ್ಷ ಜೊತೆಯಾಗಿ ಜೀವನ ಮಾಡಿ ಮಕ್ಕಳನ್ನು ಕರುಣಿಸಿದ ಬಳಿಕ ವಿಚ್ಚೇದನ ನೀಡಿ ಪರಾರಿಯಾಗುತ್ತಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.
ನಾಲ್ಕನೇ ಪತ್ನಿಯಿಂದ ದೂರು ದಾಖಲು :
‘ನಿನ್ನೆ ( ನ.26) ಸಂಜೆ ಐದು ಗಂಟೆ ಸುಮಾರಿಗೆ ರಫೀಕ್ ನ ಮನೆಗೆ ನಾನು ಹೋಗಿದ್ದೇನೆ. ಹೋದಂತ ಸಂದರ್ಭದಲ್ಲಿ ಆರೋಪಿಯಾದ ರಫೀಕ್ ಅ*ವಾಚ್ಯ ಶಬ್ದಗಳಿಂದ ಬೈದು, ಹ*ಲ್ಲೆ ನಡೆಸಿದ್ದಲ್ಲದೇ ಮಗುವನ್ನು ಕೊಂ*ದು ಹಾಕುತ್ತೇನೆಂದು ಬೆದರಿಕೆ ಹಾಕಿದ್ದಲ್ಲದೇ, ತಾಯಿಯ ಮಡಿಲಲ್ಲಿದ್ದ ಮಗುವನ್ನು ಎಳೆದು ಎಸೆಯಲು ಮುಂದಿಗಿದ್ದಾನೆ’ ಎಂದು ಸಂತ್ರಸ್ತ ಪತ್ನಿ ಆರೋಪಿಸಿದ್ದಾಳೆ. ಅಲ್ಲದೇ ತ್ರಿವಳಿ ತಲಾಖ್ ಎಂದು ಹೇಳಿ ಕುತ್ತಿಗೆಗೆ ಕೈಹಾಕಿ ಮನೆಯಿಂದ ಹೊರಗೆ ದಬ್ಬಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾಳೆ. ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನೂ ಕಿತ್ತುಕೊಂಡಿರುವ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ.
ಮಾಣಿ ರಫೀಕ್ ಯಾರು ? ಹಿನ್ನಲೆ ಏನು ?
ಮಾಣಿ ರಫೀಕ್ ಯಾನೆ ನಟೋರಿಯಸ್ ಕಿರಾತಕ. ಮಾಣಿಯಿಂದ ವಲಸೆ ಬಂದ ರಫೀಕ್ ವಿಟ್ಲ ಸಮೀಪದ ಮಂಗಲಪದವು ಎಂಬಲ್ಲಿ ಮನೆ ಕಟ್ಟಿಕೊಂಡಿದ್ದ. ಅಲ್ಲಿಯೂ ನೆರೆಹೊರೆಯವರ ಜೊತೆ ಗಲಾಟೆ, ಗದ್ದಲ ಎಬ್ಬಿಸಿ ಕೊನೆಗೆ ಮನೆ ಮಾರಾಟ ಮಾಡಿ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಲ್ಲೂ ಕೂಡಾ ಪರಿಸರದ ಶಾಂತಿಪ್ರಿಯ ನಿವಾಸಿಗಳ ಜೊತೆ ತಕರಾರು ಎಬ್ಬಿಸಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಜನ್ಮ ನೀಡಿದ ತಾಯಿಯ ಮೇಲೆಯೇ ಮನಬಂದಂತೆ ಹ*ಲ್ಲೆ ನಡೆಸಿ ಆಕೆಯ ಚಿನ್ನಾಭರಣ ಕಿತ್ತು ಕಾಲಿನಿಂದ ತುಳಿದು ಮನೆಯಿಂದ ಹೊರದಬ್ಬಿ ರಾ*ಕ್ಷಸೀಯ ಕೃ*ತ್ಯ ನಡೆಸಿದ್ದ. ಈತನ ಹ*ಲ್ಲೆ, ಕಿರುಕುಳದಿಂದ ಮನನೊಂದ ತಾಯಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಲ್ಲದೇ ಠಾಣೆಯಲ್ಲೂ ಹೆತ್ತ ತಾಯಿಯ ಮೇಲೆ ಮನಬಂದಂತೆ ಅ*ವಾಚ್ಯ ಶಬ್ದಗಳಿಂದ ನಿಂದಿಸಿ ರಾ*ಕ್ಷಸೀ ಕೃ*ತ್ಯ ನಡೆಸಿರುವುದು ಪ್ರತಿಯೊಬ್ಬನಿಗೂ ತಿಳಿದ ವಿಚಾರವಾಗಿದೆ. ಅದಾದ ಬಳಿಕ ಅನಾರೋಗ್ಯದಿಂದ ಮೃ*ತಪಟ್ಟ ಮೊದಲ ಪತ್ನಿಯ ಹಿರಿಮಗಳ ಮೇಲೆ ಹ*ಲ್ಲೆ ನಡೆಸಿ ಮನೆಯಿಂದ ಹೊರದಬ್ಬಿದ್ದಾನೆ. ಇದೀಗ ಆಕೆಯೂ ತನ್ನ ಅಜ್ಜಿ ಜೊತೆ ಮಂಗಲಪದವು ಬಳಿ ಬಾಡಿಗೆ ಮನೆಯಲ್ಲಿದ್ದಾರೆ।
ಇದೀಗ ನಾಲ್ಕನೇ ಪತ್ನಿಯ ಚಿನ್ನಾಭರಣವನ್ನೆಲ್ಲಾ ಕಿತ್ತುಕೊಂಡು ಬಳಿಕ ಆಕೆಯ ಮಗುವಿನ ಮೇಲೆ ಹ*ಲ್ಲೆ ನಡೆಸಿ ಹೊರದಬ್ಬಿದ್ದ ಕಿರಾತಕನ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಸೆಕ್ಷನ್ BNS/-85,86,352,351(1),115(2) ರಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ, ವೀರಾಂಜನೇಯ ಶಾಖೆ ಕಾಜಿಲ, ಭಾರತೀಯ ಜನತಾ ಪಾರ್ಟಿ ತೆಂಕುಳಿಪಾಡಿ ವಾರ್ಡ್ ಸಮಿತಿ ಕಾಜಿಲ, ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗ ಮೋರ್ಚಾ ಮಂಗಳೂರು ಉತ್ತರ ಮಂಡಲ ಇದರ ಸಹಯೋಗದಿಂದ ರಕ್ತಕೇಂದ್ರ ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ದಿ.ಉಮೇಶ್ ಕಾಜಿಲ ಇವರ ಸವಿನೆನಪಿಗಾಗಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಡಿಸೆಂಬರ್ 1 ರಂದು ಭಾನುವಾರ ಕಾಜಿಲ ಮಾಧವ ಮನೆ ವಠಾರದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 8.30 ರಿಂದ 1 ರ ವರೆಗೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.