Saturday, August 20, 2022

ಜಯನಗರದಲ್ಲಿ ಕೋಟಿ ರೂಪಾಯಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಕಾಮತ್

ಮಂಗಳೂರು: ಮಹಾನಗರ ಪಾಲಿಕೆಯ ಮರೋಳಿ ವಾರ್ಡಿನ ಜಯನಗರದಲ್ಲಿ 1 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, “ಮರೋಳಿ ವಾರ್ಡಿನ ಜಯನಗರದ 2 ನೇ ಮುಖ್ಯ ರಸ್ತೆಯ 1ರಿಂದ 4 ಅಡ್ಡರಸ್ತೆಗಳ ಅಭಿವೃದ್ಧಿ ಹಾಗೂ

1 ಮತ್ತು 2ನೇ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ಕಿರು ಸೇತುವೆ ನಿರ್ಮಾಣಕ್ಕಾಗಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಿಂದ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ.

ಜಯನಗರದ ಅಭಿವೃದ್ಧಿಗಾಗಿ ಸ್ಥಳೀಯರ ಬೇಡಿಕೆಯಂತೆ ಅನುದಾನ ಒದಗಿಸಿ ಎಲ್ಲಾ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ್ದೇವೆ” ಎಂದರು.

ಸ್ಥಳೀಯ ಕಾರ್ಪೊರೇಟರ್ ಕೇಶವ್ ಮರೋಳಿ,ಮುಖಂಡರಾದ ಕಿರಣ್ ಮಾರೋಳಿ, ಜಗದೀಶ್ ಶೆಣೈ, ಜಗನ್ನಾಥ್, ಕೃಷ್ಣ ಎಸ್.ಆರ್, ಪ್ರಶಾಂತ್ ಮರೋಳಿ, ವಸಂತ್ ಜೆ ಪೂಜಾರಿ, ರಾಘು, ಮಾಲತಿ ಶೆಟ್ಟಿ, ಸರಳ, ಸತೀಶ್, ಹಾಗೂ ಮಾರೋಳಿ ನಿವಾಸಿಗಳು,

ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯರಾಮ್ ಗೌಡ ಜಿ, ಕಾರ್ಯದರ್ಶಿ ಮಧುರ ಎಸ್ ಶೆಟ್ಟಿ, ಕೋಶಾಧಿಕಾರಿ ಸೀತಾರಾಮ ಅಗಲಿ, ಸದಸ್ಯ ಎನ್.ತಿಮ್ಮಪ್ಪ ರೈ,

ಉದಯ ಚಂದ್ರ ಶೆಟ್ಟಿ, ರೋಹಿತ್ ಪೈ, ಲೂಯಿಸ್ ಡಿಸೋಜಾ, ಜಯಲಲಿತಾ, ಮುಕುಂದ ಪ್ರಭು, ಗುಣನಾಥ ಬಂಗೇರ ಹಾಗೂ ಸಂಘದ ಹಲವು ಸದಸ್ಯರುಗಳು ಹಾಗೂ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Hot Topics