Saturday, May 15, 2021

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಭಾರ್ಗವ್ ಬಂಧನ..!

ಆಂಧ್ರಪ್ರದೇಶ:ಅಂತರ್ಜಾಲದ ಟಿಕ್ ಟಾಕ್ ಆ್ಯಪ್ ಮುಖಾಂತರ ಪರಿಚಯಿಸಿಕೊಂಡು ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆ ಫನ್ ಬಕೆಟ್ ಭಾರ್ಗವನನ್ನು ಬಂಧಿಸಿದ್ದಾರೆ.

ಇದೀಗ ಬ್ಯಾನ್ ಆಗಿರುವ ಟಿಕ್ ಟಾಕ್ ಯುವಜನರನ್ನು ಬಹಳಷ್ಟು ಸೆಳೆದಿತ್ತು. ಈ ಟ್ರೆಂಡ್ ನಲ್ಲಿದ್ದ ಯುವಕ ಭಾರ್ಗವ್ ತಾನೋರ್ವ ಸ್ಟಾರ್ ಆಗಿದ್ದು , ಅಪ್ರಾಪ್ತ ಬಾಲಕಿಯೋರ್ವಳಿಗೆ ಬೇರೆ ಮಾಧ್ಯಮಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಪುಸಲಾಯಿಸಿ ಆಗಾಗ ಭೇಟಿಯಾಗುತ್ತಿದ್ದ ಇಬ್ಬರ ನಡುವೆ ಸಲುಗೆ ಬೆಳೆದು ಜತೆಗೂಡಿ ವೀಡಿಯೋ ಕೂಡಾ ಮಾಡಿದ್ದ

ಬಾಲಕಿ ಆತನ ಆಮಿಷಕ್ಕೆ ಒಲಿದು ಆತನ ಕಾಮತೃಷೆಗೆ ಬಲಿಯಾಗಿದ್ದಾಳೆ. ವೀಡಿಯೋ ಮಾಡಲು ಬಟ್ಟೆ ಬದಲಾಯಿಸುವಾಗ ಭಾರ್ಗವ್ ಆಕೆಯ ನಗ್ನ ಚಿತ್ರಗಳನ್ನು ಸೆರೆಹಿಡಿದು ಆಕೆಯನ್ನು ಅತ್ಯಾಚಾರ ಮಾಡುತ್ತಿದ್ದ ಎಂದು ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದ ಇದೀಗ ಅಪ್ರಾಪ್ತೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ.ಈ ಕುರಿತು ವಿಶಾಖಪಟ್ಟಣಂ ನಗರದ ಸಹಾಯಕ ಪೊಲೀಸ್​ ಆಯುಕ್ತರಾದ ಪ್ರೇಮ್​ ಕಾಜಲ್​ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಫನ್ ಬಕೆಟ್ ಭಾರ್ಗವ ಎಂದೇ ಖ್ಯಾತಿ ಪಡೆದ ಆರೋಪಿ ತನ್ನ ಜತೆಗಿರುವ ಅಪ್ರಾಪ್ತೆಯನ್ನು ಅನನ್ಯ ಎಂದು ಪರಿಚಯಿಸಿದ್ದ ಎನ್ನಲಾಗಿದೆ.

ಇಬ್ಬರ ನಡುವೆ ನಿರಂತರ ಚಾಟಿಂಗ್ ನಡೆಯುತ್ತಿತ್ತು.ಮತ್ತು ಪದೇಪದೆ ಭೇಟಿಯಾಗುವುದು ಮಾಡುತ್ತಿದ್ದರು. ಭಾರ್ಗವ್​, ಟಿಕ್​ಟಾಕ್​ ವಿಡಿಯೋ ಹೆಸರಲ್ಲಿ ಅಪ್ರಾಪ್ತೆಯನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ.ಹೀಗಿರುವಾಗ ಒಮ್ಮೆ ಅಪ್ರಾಪ್ತೆಯ ದೇಹದಲ್ಲಾದ ಬದಲಾವಣೆಯನ್ನು ನೋಡಿ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ.

ಅಪ್ರಾಪ್ತೆಯ ತಾಯಿ ಎಪ್ರಿಲ್ ತಿಂಗಳ 16ರಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಮಗಳ ಸ್ಥಿತಿಗೆ ಫನ್​ ಬಕೆಟ್​ ಭಾರ್ಗವ ಕಾರಣ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ವಿಶಾಖಪಟ್ಟಣಂ ನಗರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಭಾರ್ಗವ್​ನನ್ನು ಬಂಧಿಸಲಾಗಿದೆ. ಆತನು ಸಹ ಅಪ್ರಾಪ್ತೆಯನ್ನು ತಂಗಿಯ ಹೆಸರಲ್ಲಿ ಅಧೀನದಲ್ಲಿ ಇಟ್ಟುಕೊಂಡು ದೈಹಿಕ ಸಂಪರ್ಕ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ವಿಜಯನಗರಂ ಜಿಲ್ಲೆಯ ಕೊಟ್ಟವಲಸಾ ಏರಿಯಾದ ನಿವಾಸಿ ಆಗಿರುವ ಭಾರ್ಗವ ಟಿಕ್​ಟಾಕ್​ ವಿಡಿಯೋಗಳಿಂದ ತುಂಬಾ ಫೇಮಸ್​ ಆಗಿದ್ದಾನೆ.

ಒಮ್ಮೆ ಚಾಟಿಂಗ್​ ಮೂಲಕ ವಿಶಾಖಪಟ್ಟಣಂ ಜಿಲ್ಲೆಯ ಸಿನ್ಹಗಿರಿ ಕಾಲನಿಯ 14 ವರ್ಷದ ಬಾಲಕಿಯ ಪರಿಚಯವಾಗಿದೆ. ಸಿನ್ಹಗಿರಿ ಕಾಲನಿ ವಿಜಯನಗರಂ ಮತ್ತು ವಿಶಾಖಪಟ್ಟಣಂ ಗಡಿಭಾಗದಲ್ಲಿದೆ.

ಚಾಟಿಂಗ್​ನಿಂದ ಆರಂಭವಾದ ಪರಿಚಯ ತುಂಬಾ ಸಲುಗೆಗೆ ತಿರುಗಿತ್ತು.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಭಾರ್ಗವ ವಿರುದ್ಧ ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...