NATIONAL
ಕಾಸರಗೋಡಿಗೆ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ನೇಮಕ..
Published
3 years agoon
By
Adminಕಾಸರಗೋಡು :ಕಾಸರಗೋಡು ನೂತನ ಜಿಲ್ಲಾಧಿಕಾರಿಯಾಗಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ನೇಮಕಗೊಂಡಿದ್ದಾರೆ.
ಕಾಸರಗೋಡಿನ 24ನೇ ಜಿಲ್ಲಾಧಿಕಾರಿ ಮತ್ತು ಪ್ರಥಮ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಅವರು ಕೇರಳದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
2010ರ ಬ್ಯಾಚ್ ನ ಐಎಎಸ್ ಅಧಿಕಾರಿಯಾದ ಅವರು ನಾಗರಿಕ ಸೇವೆ ಪರೀಕ್ಷೆಯಲ್ಲಿ 69ನೇ ಶ್ರೇಯಾಂಕ ಪಡೆದಿದ್ದಾರೆ.
ಕಾಸರಗೋಡಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ.ಡಿ. ಸಜಿತ್ ಬಾಬು ಅವರನ್ನು ಕೇರಳ ಸರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.
International news
ಐಪಿಎಲ್ ಹರಾಜಿನಲ್ಲಿ ಬದಲಾವಣೆ ತಂದ ಬಿಸಿಸಿಐ; ಏನು ಗೊತ್ತಾ!?
Published
5 hours agoon
23/11/2024By
NEWS DESK3ಬೆಂಗಳೂರು/ಮುಂಬೈ: ಐಪಿಎಲ್ ಸೀಸನ್ 18ರ ಮೆಗಾ ಹರಾಜು ಪ್ರಕ್ರಿಯೆ ನಾಳೆಯಿಂದ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದೆ. ಆದರೆ ಐಪಿಎಲ್ ಹರಾಜಿನ ನಡುವೆ ಬಿಸಿಸಿಐ ಹೊಸ ಟ್ವಿಸ್ಟ್ ಕೊಟ್ಟಿದೆ.
ಈ ಬಾರಿಯ ಮೆಗಾ ಹರಾಜಿನಲ್ಲಿ 577 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. 204 ಸ್ಥಾನಗಳಿಗೆ ನಡೆಯುವ ಈ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಹಾಗೂ ವಿದೇಶಿ ಆಟಗಾರರು ಕೋಟಿ-ಕೋಟಿ ಮೌಲ್ಯದಲ್ಲಿ ವಿವಿಧ ತಂಡಗಳಿಗೆ ಸೇರಿಕೊಳ್ಳಲಿದ್ದಾರೆ. 10 ಫ್ರಾಂಚೈಸಿಗಳು ಮುಂಬರುವ ಐಪಿಎಲ್ ಸೀಸನ್ ಗಾಗಿ ತಮ್ಮ ತಂಡಗಳನ್ನು ರೂಪಿಸಿಕೊಳ್ಳಲಿದೆ. ಆದರೆ ಬಿಸಿಸಿಐ ಮೆಗಾ ಹರಾಜಿನ ಸಮಯವನ್ನು ಸ್ವಲ್ಪ ಬದಲಾಯಿಸಿದೆ.
ಇದನ್ನೂ ಓದಿ :ಜೈಲಲ್ಲಿ ರಜತ್ ಹೊಸ ವರಸೆ.. ಕಂಬಿ ಹಿಂದೆ ಇದ್ದುಕೊಂಡೇ ಎದುರಾಳಿಗಳ ಆಟವಾಡಿಸಿದ ಸ್ಪರ್ಧಿ..!
ಈಗಗಾಲೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಪಂದ್ಯಾಟ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆಯುತ್ತಿದೆ. ಅದೇ ದಿನ ಮೊದಲ ಟೆಸ್ಟ್ ನ ಮೂರನೇ ಮತ್ತು ನಾಲ್ಕನೇ ದಿನದ ಆಟ ನಡೆಯಲಿದೆ. ಟೆಸ್ಷ್ ಪಂದ್ಯವು ಮಧ್ಯಾಹ್ನ 2:50ಕ್ಕೆ ಮುಕ್ತಾಯವಾಗಲಿದೆ. ಒಂದು ವೇಳೆ ಬದಲಾದ ಸಂದರ್ಭದಲ್ಲಿ ಪಂದ್ಯ ಮುಂದುವರಿದರೆ ಮಧ್ಯಾಹ್ನ 3:20ರವರೆಗೂ ನಡೆಯಲಿದೆ. ನಿಗದಿಯಂತೆ ಹರಾಜು ಪ್ರಕ್ರಿಯೆ ನಡೆದರೆ ನೇರ ಪ್ರಸಾರಕ್ಕೆ ತೊಂದರೆಯಾಗಲಿದೆ.
ಪ್ರಸಾರಕರ ಕೋರಿಕೆ ಮೆರೆಗೆ ಬಿಸಿಸಿಐ ಐಪಿಎಲ್ ಹರಾಜಿನ ಸಮಯವನ್ನು ಮಧ್ಯಾಹ್ನ 3ರಿಂದ 3:30ಕ್ಕೆ ಬದಲಾಯಿಸಿದೆ. ಈ ಮೊದಲು ನಿಗಧಿಯಂತೆ 3:30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಬೇಕಿತ್ತು. ಇದರಿಂದ ನಾಳೆಯ ಹರಾಜು ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದೆ.
NATIONAL
ಕೂಲಿ ಕೆಲಸ ಮಾಡುತ್ತಿದ್ದ ಯುವಕ ನೀಟ್‌ನಲ್ಲಿ ಹೈ ಸ್ಕೋರ್… ಇಂಟ್ರೆಸ್ಟಿಂಗ್ ಕಥೆ !!
Published
7 hours agoon
23/11/2024ಮಂಗಳೂರು/ಪಶ್ಚಿಮ ಬಂಗಾಳ: ಉತ್ತಮ ತರಭೇತಿ, ಸೌಲಭ್ಯ ಯಾವುದೂ ಇಲ್ಲದೆ 21 ವರ್ಷದ ಸರ್ಫ್‌ರಾಜ್ ನೀಟ್ ಪರೀಕ್ಷೆಯಲ್ಲಿ 720 ಕ್ಕೆ 677 ಅಂಕ ಗಳಿಸಿದ್ದಾರೆ. ದಿನಗೂಲಿ ಕೆಲಸ ಮಾಡುತ್ತಿದ್ದ ಸರ್ಫ್‌ರಾಜ್ ಈಗ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್‌ಗೆ ದಾಖಲಾಗಿದ್ದಾರೆ. ಪಶ್ಚಿಮ ಬಂಗಾಳದ ಪುಟ್ಟ ಗ್ರಾಮವೊಂದರಿಂದ ಕೂಲಿ ಕೆಲಸ ಮಾಡಿ ದಿನಕಳೆಯುತ್ತಿದ್ದ ಸರ್ಫರಾಜ್ ಕಠಿಣ ಪರಿಶ್ರಮದಿಂದ ಮೇಲೆ ಬಂದ ಸ್ಪೂರ್ತಿದಾಯಕ ಕಥೆ ಇಲ್ಲಿದೆ.
ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ನೀಡುವ ನೀಟ್ ಪರೀಕ್ಷೆಯನ್ನು ಪಾಸಾಗುವುದು ಅಷ್ಟೊಂದು ಸುಲಭದ ಕೆಲಸವಲ್ಲ, ನೀಟ್‌ನಲ್ಲಿ ತೇಗರ್ಡೆ ಹೊಂದುವುದಕ್ಕಾಗಿ ಅನೇಕ ವಿದ್ಯಾರ್ಥಿಗಳು ರಾತ್ರಿ ಹಗಲೆನ್ನದೇ ಓದುವ ಮುಖಾಂತರ ಅಧ್ಯಯನದಲ್ಲಿ ತೊಡಗಿಸಿಕೊಂಡಿರುತ್ತಾರೆ. ಮಕ್ಕಳು ಈ ಪರೀಕ್ಷೆಯನ್ನು ಸುಲಭವಾಗಿ ಪಾಸು ಮಾಡಲಿ ಎಂದು ಪೋಷಕರು ಎಲ್ಲಾ ಸೌಲಭ್ಯಗಳನ್ನು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಕ್ಕಳಿಗೆ ಕೋಚಿಂಗ್ ಟ್ಯೂಷನ್ ಅಂತ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಆದರೂ ಕೂಡ ಎಲ್ಲರಿಗೂ ಈ ಪರೀಕ್ಷೆಯನ್ನು ಪಾಸು ಮಾಡಲಾಗುವುದಿಲ್ಲ. ಓದು, ಪರೀಕ್ಷೆ ಹಾಗೂ ಪೋಷಕರ ಒತ್ತಡಕ್ಕೆ ಸಿಲುಕಿ ಮಕ್ಕಳು ಸಾವಿನ ದಾರಿ ಹಿಡಿದಂತಹ ಹಲವು ಬೇಸರದ ಸಂಗತಿಗಳೂ ನಡೆಯುತ್ತಿರುತ್ತವೆ.
ದಿನಗೂಲಿ ಮಾಡಿ ಜೀವನ :
ಸರ್ಫರಾಜ್ ನೀಟ್ ಪಾಸಾದ ಕಥೆ ನಿಜಕ್ಕೂ ರೋಮಾಂಚನಕಾರಿಯಾಗಿದೆ. ದಿನಕ್ಕೆ 300 ರೂಪಾಯಿ ಸಂಬಳಕ್ಕೆ 400 ಇಟ್ಟಿಗೆಗಳನ್ನು ಹೊರುತ್ತ ಕೂಲಿ ಕೆಲಸ ಮಾಡುತ್ತಿದ್ದಲ್ಲಿಂದ ಆರಂಭವಾಗಿ ಕೋಲ್ಕತ್ತಾದ ನೀಲ್ ರತನ್ ಸಿರ್ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್‌ಗೆ ದಾಖಲಾಗುವವರೆಗೆ ಈತನ ಪ್ರಯಾಣವೂ ಕಠಿಣ ಪರಿಶ್ರಮ ಹಾಗೂ ಸಮರ್ಪಣೆಗೆ ಸಾಕ್ಷಿಯಾಗಿದೆ.
ವೈದ್ಯನಾಗುವ ಗುರಿ ಹೊಂದಿದ್ದ ಸಾಮಾನ್ಯ ಹುಡುಗನ ಮುಂದೆ ಹಲವಾರು ಸವಾಲುಗಳಿದ್ದವು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾದ ಪುಟ್ಟ ಮನೆಯಲ್ಲಿ ವಾಸವಿದ್ದ ಸರ್ಫರಾಜ್ ತನ್ನ ಕನಸನ್ನು ನನಸಾಗಿಸುವುದರ ಜೊತೆಗೆ ಕುಟುಂಬದ ನಿರ್ವಹಣೆಗೆ ತಂದೆಗೆ ನೆರವಾಗಲು ದುಡಿಮೆಯನ್ನು ಮಾಡುತ್ತಿದ್ದರು. ತರಗುಟ್ಟುವ ಚಳಿಯ ರಾತ್ರಿಗಳಲ್ಲಿ ಮನೆಯ ಟೆರೇಸ್ ಮೇಲೆ ಓದುತ್ತಿದ್ದ ಆತನ ಪಕ್ಕದಲ್ಲಿ ಕುಳಿತುಕೊಂಡು ಮಗನಿಗೆ ಶೀತದ ವಾತಾವರಣದಿಂದ ಅನಾರೋಗ್ಯ ಆಗದಂತೆ ಕುಳಿತ ದಿನಗಳನ್ನು ಅವರು ತಾಯಿ ಯಾವಾಗಲೂ ನೆನೆಯುತ್ತಾಳೆ.
ವೈಧ್ಯನಾಗುವ ಕನಸಿಗೆ ಹೊಸ ತಿರುವು :
2023ರಲ್ಲಿ ಸರ್ಫರಾಜ್ ದಂತ ವೈದ್ಯಕೀಯ ಕೋರ್ಸ್‌ಗೆ ಸೇರಿದ್ದರು. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಅವರು ಕೋರ್ಸನ್ನು ಮಧ್ಯದಲ್ಲೇ ಕೈ ಬಿಡಬೇಕಾಯ್ತು, ನಂತರ 2024ರಲ್ಲಿ ಮತ್ತೆ ನೀಟ್ ಪರೀಕ್ಷೆ ಬರೆಯುವ ಮೂಲಕ ಜನ ಮೆಚ್ಚುವ ಸಾಧನೆ ಮಾಡಿದ್ದಾರೆ. ಸರ್ಫರಾಜ್‌ನ ಈ ಸಾಧನೆಯನ್ನು ಮೆಚ್ಚಿದ ಅಲ್ಕಾ ಪಾಂಡೆ ಆತನಿಗೆ ಸಹಾಯ ಮಾಡಲು ಮುಂದಾಗಿದ್ದು, ಆತನಿಗೆ ಹೊಸದಾದ ಫೋನೊಂದನ್ನು ಕೊಡುಗೆಯಾಗಿ ನೀಡಿದ್ದಾರೆ ಮಾತ್ರವಲ್ಲದೆ, ಆತನ ಕಾಲೇಜು ಶಿಕ್ಷಣಕ್ಕಾಗಿ 5 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
NATIONAL
91ರ ಅಜ್ಜಿ ಜೊತೆ 23ರ ಹುಡುಗನ ಲವ್; ಹನಿಮೂನ್‌ನಲ್ಲಿ ನಡೆಯಿತು ದು*ರ್ಘಟನೆ !!
Published
10 hours agoon
23/11/2024ಮದುವೆ ಹಾಗೂ ವಯಸ್ಸಿಗೆ ಸಂಬಂಧವಿಲ್ಲ. 10 -12 ವರ್ಷ ವಯಸ್ಸಿನ ಅಂತರ ಇರೋರು ಮದುವೆಯಾಗುತ್ತಿದ್ದ ಕಾಲ ಈಗಿಲ್ಲ. ಆದರೂ ಆಶ್ಚರ್ಯವೆಂಬಂತೆ, ಇಲ್ಲೊಂದು ದಂಪತಿ ಮಧ್ಯೆ ಬರೋಬ್ಬರಿ 68 ವರ್ಷ ಅಂತರವಿದೆ. ಪತ್ನಿ ವಯಸ್ಸು 91 ಹಾಗೂ ಪತಿ ವಯಸ್ಸು 23. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಹನಿಮೂನ್‌ನಲ್ಲಿ ಸತ್ಯ ಬಯಲಾಗಿದೆ. ಹನಿಮೂನ್‌ನಲ್ಲಿ ಮಹಿಳೆ ಸಾ*ವನ್ನಪ್ಪಿದ್ದು, ಅದಕ್ಕೆ ಪತಿ ಕಾರಣ ಎಂದು ಆರೋಪಿಸಲಾಗಿತ್ತು. ಆದರೆ, ಪತಿ ಹೇಳಿದ ಮಾತು ಕೇಳಿ ಪೊಲೀಸರೇ ದಂಗಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಇಂಥ ಮದುವೆ ಸಾಮಾನ್ಯವಾಗಿದೆ. ಹಣವಿರುವ ಹಿರಿಯ ವ್ಯಕ್ತಿ ಜೊತೆ ಮದುವೆ ಆಗಲು ಯುವಕರು ಮುಂದೆ ಬರುತ್ತಿದ್ದಾರೆ. ಈ ಘಟನೆಯಲ್ಲಿ ಮಾತ್ರ ಇಲ್ಲಿ ಮಾತ್ರ ವೃದ್ಧೆಯೇ ಮದುವೆಗೆ ಮುಂದಾಗಿದ್ದು ವಿಶೇಷ.
ಸ್ನೇಹಿತೆ ಮಗನೊಡನೆ ಅಜ್ಜಿ ವಿವಾಹ :
ಅರ್ಜೆಂಟೀನಾದಲ್ಲಿ 91 ವರ್ಷದ ಮಹಿಳೆ ತನ್ನ ಸ್ನೇಹಿತೆ ಮನೆಯಲ್ಲಿ ವಾಸವಾಗಿದ್ದಳು. ಸ್ನೇಹಿತೆ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಹಾಗಾಗಿ ಸ್ನೇಹಿತೆಗೆ ತನ್ನ ಪಿಂಚಣಿಯ ಸ್ವಲ್ಪ ಹಣವನ್ನು ಕೊಡುತ್ತಿದ್ದ ವೃದ್ಧೆ ಕಣ್ಣೆದುರಲ್ಲೇ ಬೆಳೆಯುತ್ತಿದ್ದ ಗೆಳತಿಯ ಮಗನನ್ನು ಮದುವೆಯಾಗಿದ್ದಾಲೆ.
ಹನಿಮೂನ್ ನಲ್ಲಿ ನಡೀತು ದು*ರ್ಘಟನೆ :
ಮದುವೆಯಾದ ಜೋಡಿ ಹನಿಮೂನ್‌ಗೆ ಹೋಗಿದ್ದ ಸಮಯದಲ್ಲಿ ವೃದ್ಧ ಮಹಿಳೆ ಸಾ*ವನ್ನಪ್ಪಿದ್ದಾಳೆ. ಆಕೆ ನಿ*ಧನದ ನಂತರ ಪತಿ, ಪಿಂಚಣಿ ಹಣ ಪಡೆಯಲು ಹೋಗಿದ್ದ. ಆಗ ಅನುಮಾನಗೊಂಡ ಪೊಲೀಸರು, ಯುವಕನ ವಿರುದ್ಧ ದೂರು ದಾಖಲಿಸಿ. ವಿಚಾರಣೆ ಶುರು ಮಾಡಿದ್ದರು. ವೃದ್ಧ ಮಹಿಳೆಯ ಪಿಂಚಣಿ ಆಸೆಗೆ ಯುವಕ ಆಕೆಯನ್ನು ಮದುವೆಯಾಗಿದ್ದ. ಹನಿಮೂನ್ನಲ್ಲಿ ಹ*ತ್ಯೆ ಮಾಡಿದ್ದಾನೆ ಎಂಬೆಲ್ಲ ಆರೋಪ ಯುವಕನ ಮೇಲೆ ಬಂದಿತ್ತು. ಪೊಲೀಸರು ಯುವಕನನ್ನು ಜೈಲಿಗೆ ಹಾಕಲು ಎಲ್ಲಾ ತಯಾರಿ ಮಾಡಿದ್ದರು. ಇನ್ನೇನು ಜೈಲು ಸಮೀಪವಾಗುತ್ತಿದೆ ಎಂದಾಗ ಯುವಕ ಎಲ್ಲಾ ಸತ್ಯ ಬಹಿರಂಗಪಡಿಸಿದ್ದಾನೆ.
ಲವ್ ಸ್ಟೋರಿ ಶುರುವಾದದ್ದು ಹೇಗೆ ?
ಯುವಕನ ಕುಟುಂಬ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದ ವಿಷಯವೆಲ್ಲವೂ ವೃದ್ಧೆಗೆ ತಿಳಿದಿತ್ತು. ಸ್ನೇಹಿತೆ ಮನೆ ಖರ್ಚಿಗೆ ಮಾತ್ರವಲ್ಲದೆ ಹುಡುಗನ ಶಿಕ್ಷಣಕ್ಕೂ ಆಕೆ ಹಣ ನೀಡುತ್ತಿದ್ದಳು. ‘ತಾನು ಸಾವನ್ನಪ್ಪಿದರೆ ಪಿಂಚಣಿ ಬರುವುದು ನಿಲ್ಲುತ್ತದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಅದೇ ನಾನು ಮದುವೆಯಾದರೆ, ಈ ಹಣ ಅಗತ್ಯವಿರುವವರಿಗೆ ಸೇರುತ್ತದೆ’ ಎಂದು ಆಲೋಚಿಸಿ ಯುವಕನಿಗೆ ಮದುವೆ ಪ್ರಪೋಸಲ್ ಇಟ್ಟಿದ್ದಳು. ಯುವಕ ಇದಕ್ಕೆ ಒಪ್ಪಿ, ಮನೆಯವರೂ ಒಪ್ಪಿದ ಬಳಿಕ ಮದುವೆ ನಡೆದಿತ್ತು.
ಹಣ ಕೊನೆಗೂ ಸಿಗಲಿಲ್ಲ :
ವೃದ್ಧೆ, ಸ್ನೇಹಿತೆ ಮನೆಗೆ ಸಹಾಯ ಮಾಡುವ ಉದ್ದೇಶದಿಂದ ಯುವಕನನ್ನು ಮದುವೆಯಾಗಿದ್ದಳು. ಆದರೆ ಹನಿಮೂನ್‌ಗೆ ಹೋಗಿದ್ದ ವೇಳೆ ಸಹಜವಾಗಿ ಸಾ*ವನ್ನಪ್ಪಿದ್ದಾಳೆ. ಪೊಲೀಸರು ಮಾತ್ರ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು. ಹೋಗೋ ಕೊನೆಗೆ ಯುವಕನಿಗೆ ಜೈಲಿನಿಂದ ಮುಕ್ತಿ ಸಿಕ್ಕಿತ್ತು. ಆದರೆ, ವೃದ್ಧ ಮಹಿಳೆ ಆಸೆ ಮಾತ್ರ ಈಡೇರಿಲ್ಲ. ಯುವಕನಿಗೆ ಪಿಂಚಣಿ ಹಣ ನೀಡಲು ಸರ್ಕಾರ ನಿರಾಕರಿಸಿದೆ.
LATEST NEWS
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: KSRTC ಬಸ್ಸಿನಲ್ಲಿ ‘UPI’ ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !
Viral Video: ಮಿಂಚಿನ ವೇಗದಲ್ಲಿ ಊಟ ಬಡಿಸಿದ ನಾಲ್ವರು ಯುವಕರು
ವಿದ್ಯಾಸಿರಿ ವಿದ್ಯಾರ್ಥಿ ವೇತನ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ
ಜಾರ್ಖಂಡ್ನಲ್ಲಿ ಬಿಗ್ ಟ್ವಿಸ್ಟ್; ಜೆಎಂಎಂ ಮುನ್ನಡೆ – ಎನ್ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ
Trending
- LATEST NEWS3 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru1 day ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION2 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS5 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!