ಅಮೃತಸರ: ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಂಪುಟಕ್ಕಿಂದು 10 ಸಚಿವರು ಸೇರ್ಪಡೆಯಾಗಿದ್ದಾರೆ. ಈ 10 ಶಾಸಕರಲ್ಲಿ 8 ಶಾಸಕರು ಹೊಸಬರು. ಅಂದರೆ ಇದೇ ಮೊದಲ ಬಾರಿಗೆ ಗೆದ್ದು ಶಾಸಕರಾದವರು. ಇನ್ನುಳಿದ ಇಬ್ಬರು ಮಾತ್ರ ಹಿಂದಿನ ಅವಧಿಯಲ್ಲೂ ಗೆದ್ದು ಶಾಸಕರಾಗಿದ್ದವರು.
10 ಸಚಿವರಲ್ಲಿ ಒಬ್ಬರು ಮಹಿಳೆಯಿದ್ದಾರೆ. ಇಂದು ಮಧ್ಯಾಹ್ಯ ನೂತನ ಸಚಿವರ ಮೊದಲ ಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ ಪಂಜಾಬ್ನಲ್ಲಿ ಸರ್ಕಾರ ರಚನೆ ಮಾಡುತ್ತಿದ್ದು, ಪಂಜಾಬ್ ಸಂಪುಟದಲ್ಲಿ ಒಟ್ಟು 18 ಸ್ಥಾನಗಳಿದ್ದು, ಅದರಲ್ಲೀಗ 10 ಸ್ಥಾನ ಭರ್ತಿಯಾಗಿದೆ.
ಇಂದು ಹರ್ಪಾಲ್ ಸಿಂಗ್ ಚೀಮಾ, ಡಾ ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ, ಡಾ ವಿಜಯ್ ಸಿಂಗ್ಲಾ, ಲಾಲ್ ಚಂದ್ ಕತರುಚಕ್, ಗುರ್ಮೀತ್ ಸಿಂಗ್ ಮೀತ್ ಹೇಯರ್, ಕುಲದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲರ್, ಬ್ರಾಮ್ ಶಂಕರ್ (ಜಿಂಪಾ) ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಇವರಲ್ಲಿ ಹರ್ಪಾಲ್ ಸಿಂಗ್ ಚೀಮಾ, ಡಾ. ಡಾ ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಅವರು ಜಂಡಿಯಾಲಾ ಮೂಲದವರು. ಡಾ. ವಿಜಯ್ ಸಿಂಗ್ಲಾ ಮಾನ್ಸಾದವರಾಗಿದ್ದು, ಲಾಲ್ ಚಾಂದ್- ಭೋವಾ, ಗುರ್ಮೀತ್ ಸಿಂಗ್, ಕುಲ್ದೀಪ್ ಸಿಂಗ್ ಧಲಿವಾಲ್-ಅಜ್ನಾಲಾ, ಲಾಲ್ಜಿತ್ ಸಿಂಗ್ ಭುಲ್ಲಾರ್-ಪಟ್ಟಿ, ಬ್ರಹ್ಮ ಶಂಕರ್-ಹೋಶಿಯಾರ್ಪುರ್ ಮತ್ತು ಹರ್ಜೋತ್ ಬೇನ್ಸ್-ಆನಂದ್ಪುರ ಸಾಹೀಬ್ರವರಾಗಿದ್ದಾರೆ.