HomeDAKSHINA KANNADAಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಿನೆಮಾ 'ಬೇರ'- ವಿನು ಬಳಂಜ

ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಿನೆಮಾ ‘ಬೇರ’- ವಿನು ಬಳಂಜ

ವಿನು ಬಳಂಜ ನಿರ್ದೇಶನದ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ವಿನು ಬಳಂಜ ನಿರ್ದೇಶನದ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತಮ ಕಲಾವಿದರನ್ನು ಒಳಗೊಂಡ ಸಿನೆಮಾ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಕಲಾವಿದ ಸ್ವರಾಜ್ ಶೆಟ್ಟಿ ಹೇಳಿದ್ದಾರೆ.

ಬದುಕುವುದಕ್ಕೆ ವ್ಯಾಪಾರ ಒಂದೆಡೆಯಾದರೆ, ಬದುಕು ಮುಗಿಸುವುದೇ ಇನ್ನೊಂದೆಡೆ ವ್ಯಾಪಾರ. ಮುಗ್ಧ ಅಮ್ಮಂದಿರ ಮಕ್ಕಳು ಸಾಯ್ತಾರೆ.

ಅದು ಆಗಬಾರದು ಎನ್ನುವ ಆಶಯದೊಂದಿಗೆ ಸಿನೆಮಾ ಮಾಡಿದ್ದೇವೆ. ಕಲ್ಲಡ್ಕದಲ್ಲಿ ಮ್ಯೂಸಿಯಂ ಒಂದಿದೆ.‌

ಅಲ್ಲಿ ಈ ಕತೆ ಹೊಳೆಯಿತು. ಕರಾವಳಿಯ ಜನರಿಗೆ ಕನೆಕ್ಟ್ ಆಗುವ ನಿಟ್ಟಿನಲ್ಲಿ ಸಿನೆಮಾ ಮೂಡಿಬಂದಿದೆ. “ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂಗೆ ಹೋದೆ.

ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್. ತುಳುವಿನಲ್ಲಿ ಬೇರ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ.

ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ಯಾವ ತಾಯಂದ್ರ ಮಕ್ಕಳೂ ಇನ್ನೊಬ್ರಿಂದಾಗಿ ಸಾಯ್ಬಾರ್ದು ಎಂಬುದೇ ಕಥಾಹಂದರ.

ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ.

ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದು ವಿನು ಬಳಂಜ ನಿರ್ದೇಶಕರು ಹೇಳಿದರು.

ವಿನು ಬಳಂಜ ತುಳುನಾಡಿನ ಪ್ರತಿಭೆ. ಟಿ.ಎನ್. ಸೀತಾರಾಮ್ ಅವರ ಶಿಷ್ಯ. ಹಲವು ಧಾರಾವಾಹಿ ಮಾಡಿದ್ದರು ಅವರು ಇನ್ನಷ್ಟು ಚಿತ್ರ ಮಾಡುವಂತಾಗಲಿ ಎಂದು ಹಿರಿಯ ಕಲಾವಿದ ವಿಜಯ ಕುಮಾರ್ ಕೊಡಿಯಾಲಬೈಲ್ ಶುಭ ಹಾರೈಸಿದರು.

ಚಿತ್ರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರೋಲ್ ಮಾಡಿದ್ದೇನೆ. ಕರಾವಳಿಗೆ ಈ ಕತೆ ತುಂಬ ಕನೆಕ್ಟ್ ಆಗಿದೆ ಎಂದು ಅಶ್ವಿನ್ ಹಾಸನ ಸಂತಸ ವ್ಯಕ್ತಪಡಿಸಿದರು. ಅಮಾಯಕರನ್ನು ಉಪಯೋಗಿಸಿ ಹೇಗೆ ಬಿಸಾಡುತ್ತಾರೆ.

ಅದು ಹೇಗೆ ವ್ಯಾಪಾರ ಆಗ್ತದೆ? ಜೀವನ ಹಾಳು ಮಾಡಿಕೊಳ್ಳದೆ ಸಾಗಲು ಈ ಸಿನೆಮಾ ಉತ್ತಮ ಮೆಸೆಜ್ ನೀಡಲಿದೆ ನಟ ಧವಳ್ ದೀಪಕ್ ಹೇಳಿದ್ದಾರೆ. ನಟ ತಮ್ಮಣ್ಣ ಶೆಟ್ಟಿ ಸೇರಿದಂತೆ ನಟರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Latest articles

ಕಾಸರಗೋಡು: ಎಮರ್ಜೆನ್ಸಿಲೈಟ್‌ನಲ್ಲಿ ಅಕ್ರಮ ಚಿನ್ನ ಸಾಗಾಟ- ಓರ್ವನ ಬಂಧನ..!

ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಕಾಸರಗೋಡು ಡಿ ವೈ ಎಸ್ಪಿ ಪಿ. ಬಾಲಕೃಷ್ಣನ್ ನೇತೃತ್ವದ ಪೊಲೀಸರು...

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ- ಐದು ಮಂದಿ ಸ್ಥಳದಲ್ಲೇ ಸಾವು…!

ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿಗೆ ಗಾಯಗಳಾಗಿರುವ ಘಟನೆ...

ಬಂಟ್ವಾಳ ವಿಟ್ಲದಲ್ಲಿ ರಸ್ತೆಗೆ ಅಡ್ಡ ಬಂದ ದನ : ಆಟೋ ರಿಕ್ಷಾ ಪಲ್ಟಿ-50 ಲೀಟರ್ ಹಾಲು ನಷ್ಟ..!

ಸಾರಡ್ಕ - ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ಮಂಗಳವಾರ ದನ ರಸ್ತೆಯಲ್ಲಿ ಅಡ್ಡ ಬಂದ ಹಿನ್ನಲೆಯಲ್ಲಿ ಹಾಲು...

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್- ಮುಂಗಾರು ಮತ್ತಷ್ಟು ವಿಳಂಬ ಸಾಧ್ಯತೆ..!

ಜೂನ್ ಎರಡನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ...