Connect with us

bangalore

ಬೆಂಗಳೂರು: ಅಕ್ರಮ ಆನೆ ದಂತ ಮಾರಾಟ- ಇಬ್ಬರು ವಶಕ್ಕೆ

Published

on

ಅಕ್ರಮವಾಗಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಅಕ್ರಮವಾಗಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೇರಿಂದ್ಯಾಪನಹಳ್ಳಿ ಗ್ರಾಮದ ರವಿಕುಮಾರ್‌ ಹಾಗೂ ಹಾರೋಹಳ್ಳಿ ತಾಲೂಕಿನ ಕುಲುಮೆ ಭೀಮಸಂದ್ರದ ನಿವಾಸಿ ಸೋಮಶೇಖರ್‌ ಬಂಧಿತ ಆರೋಪಿಗಳು.

ಆರೋಪಿಗಳಿಂದ 25.5 ಕೇಜಿ ತೂಕದ ಒಂದು ಆನೆ ದಂತ ಜಪ್ತಿ ಮಾಡಲಾಗಿದ್ದು, ಈ ದಾಳಿ ನಡೆಸಿದ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದರು.

ಇದೀಗ ಮೂವರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ.

ಬನಶಂಕರಿ 3ನೇ ಹಂತದ ಸಪ್ತಗಿರಿ ಲೇಔಟ್‌ನ ಹನುಮಗಿರಿ ಬೆಟ್ಟದ ನೀಲಗಿರಿ ತೋಪಿನಲ್ಲಿ ಆನೆದಂತ ಮಾರಾಟಕ್ಕೆ ಕೆಲವರು ಯತ್ನಿಸಿದ್ದಾರೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ರವಿಕುಮಾರ್‌ ಹಾಗೂ ಸೋಮಶೇಖರ್‌ ವೃತ್ತಿಪರ ಬೇಟೆಗಾರರಾಗಿದ್ದಾರೆ.

ಆರೋಪಿಗಳು ಹಲವು ವರ್ಷಗಳಿಂದ ಕನಕಪುರ ವ್ಯಾಪ್ತಿಯ ಅರಣ್ಯದಲ್ಲಿ ಹಲವು ವನ್ಯಜೀವಿಗಳನ್ನು ಬೇಟೆಯಾಡಿದ ಬಳಿಕ ಆ ವ್ಯನ್ಯಜೀವಿಗಳ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಅವರು ಹಣ ಸಂಪಾದಿಸುತ್ತಿದ್ದರು.

ಕೆಲವು ದಿನಗಳ ಹಿಂದೆ ಕಾಡಿಗೆ ಮೊಲ ಬೇಟೆಗೆ ತೆರಳಿದ್ದಾಗ ಅಲ್ಲಿ ಸತ್ತು ಬಿದ್ದಿದ್ದ ಆನೆಯ ದಂತವನ್ನು ಕತ್ತರಿಸಿಕೊಂಡು ಬಂದು ನಗರದಲ್ಲಿ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರಣೆ ವೇಳೆ ಕಾಡಿನಲ್ಲಿ ಆನೆ ಸತ್ತು ಬಿದ್ದಿರುವುದಾಗಿ ಆರೋಪಿಗಳು ಹೇಳಿರುತ್ತಾರೆ.

ಆದರೆ ಆರೋಪಿಗಳ ಮಾತಿನ ಮೇಲೆ ಯಾವುದೇ ನಂಬಿಕೆಯಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳಿಬ್ಬರನ್ನು ಕಸ್ಟಡಿಗೆ ಕರೆದೊಯ್ದು ಪರಿಶೀಲಿಸಿದಾಗ ಸತ್ಯ ಗೊತ್ತಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

bangalore

SHOCKING! ಗುರುತೇ ಸಿಗದಷ್ಟು ಬದಲಾದ ‘ಹುಚ್ಚ’ ಖ್ಯಾತಿಯ ನಟಿ ರೇಖಾ …!

Published

on

ಶಾಕಿಂಗ್ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್.

 

ಬೆಂಗಳೂರು : ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.

ಅಷ್ಟೊಂದು ಮುದ್ದು ಮುದ್ದು ಮುಖ, ಹೊಳೆಯುತ್ತಿದ್ದ ಕಣ್ಣು, ಮಿನುಗುತ್ತಿದ್ದ ಕೆನ್ನೆಯನ್ನು ಇಂದಿಗೂ ಅಭಿಮಾನಿಗಳು ನೆನೆಸಿಕೊಳ್ಳುತ್ತಾರೆ.ಆದ್ರೆ ಈಗ ಅದೇ ರೇಖಾ ಗುರುತೆ ಸಿಗದಷ್ಟರ ಮಟ್ಟಿಗೆ ಬದಲಾಗಿ ಹೋಗಿದ್ದಾರೆ.

ಸಣಕಲು ದೇಹ, ಬತ್ತಿದ ಕಣ್ಣುಗಳು, ಬಾಡಿದ ಕೆನ್ನೆಗಳು ರೇಖಾ ಅವರ ನಿಜ ಸ್ವರೂಪವನ್ನೇ ಬದಲಾಯಿಸಿ ಬಿಟ್ಟಿದೆ.

ಒಂದು ಕಾಲದಲ್ಲಿ ಬೆಳ್ಳಿ ತೆರೆಯಲ್ಲಿ ಮಿರ ಮಿರ ಮಿಂಚಿ ಮರೆಯಾಗಿರುವ ನಟಿ ರೇಖಾ ದಿಢೀರನೆ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆಗಿದ್ದಾರೆ.

ತೆಲುಗಿನ ‘ಶ್ರೀದೇವಿ ಡ್ರಾಮಾ ಕಂಪನಿ’ ಕಾಮಿಡಿ ಶೋಗೆ ಅತಿಥಿಯಾಗಿ ಬಂದಿದ್ದ ರೇಖಾ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿಬೆಳೆದ ರೇಖಾ ಕನ್ನಡದ ‘ಹುಚ್ಚ’ ಚಿತ್ರದಲ್ಲಿ ಮೊದಲಿಗೆ ಆಕೆ ಬಣ್ಣ ಹಚ್ಚಿದ್ದರು.

ಅಲ್ಲಿಂದ ಮುಂದೆ ಕನ್ನಡ ಸಿನಿರಸಿಕರಿಗೆ ‘ಹುಚ್ಚ’ ನಟಿ ರೇಖಾ ಅಂತ್ಲೇ ಪರಿಚಿತರಾದರು.

ಕನ್ನಡ ಜೊತೆ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲಿ ರೇಖಾ ಮಿಂಚಿದರು. ತೆಲುಗಿನಲ್ಲೂ ಆಕೆ ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ ಚೆಲುವೆಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ.

‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ‘ಚೆಲ್ಲಾಟ’ ಹೀಗೆ ಹಿಟ್ ಸಿನಿಮಾಗಳಲ್ಲಿ ಮಿಂಚಿದರು.

ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡಿದ್ದರು. ಗಣೇಶ್ ಜೋಡಿಯಾಗಿ ‘ಹುಡುಗಾಟ’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ ರೇಖಾ ಮತ್ತೊಮ್ಮೆ ಕಮಾಲ್ ಮಾಡಿದರು.

ನಟಿ ರೇಖಾ 2014ರ ನಂತರ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಅವಕಾಶಗಳು ಸಿಕ್ಕಿಲ್ವೋ ಅಥವಾ ಸಿನಿಮಾ ಮೇಲಿನ ಆಸಕ್ತಿ ಕಮ್ಮಿ ಆಯ್ತೋ ಗೊತ್ತಿಲ್ಲ.

ಆದರೆ ಇದ್ದಕ್ಕಿಂದ್ದಂತೆ ಬಿಗ್ ಸ್ಕ್ರೀನ್​ನಿಂದ ಮಾಯವಾಗಿದ್ದ ರೇಖಾ ಸಿನಿಪ್ರೇಮಿಗಳಿಗೆ ಅಪರೂಪದ ತಾರೆಯಾಗಿ ಉಳಿದುಕೊಂಡು ಬಿಟ್ರು.

ಆದಷ್ಟು ಬೇಗ ಕನ್ನಡ ಮುದ್ದು ಮುಖದ ನಟಿ ರೇಖಾ ವೇದವ್ಯಾಸ್ ಗುಣ ಮುಖರಾಗಿ ಮೊದಲಿನ ಮಂದಹಾಸ ಬರಲಿ ಅನ್ನೋದೆ ಅವರ ಅಭಿಮಾನಿಗಳ ಆಸೆ.

 

Continue Reading

bangalore

ಹಾಫ್ ಸೆಂಚುರಿ ಖುಷಿಯಲ್ಲಿ ಸೀತಾ-ರಾಮ ಸೀರಿಯಲ್

Published

on

ಕನ್ನಡ ಕಿರುತೆರೆಯ ನಂಬರ್ ಒನ್ ಧಾರವಾಹಿ “ಸೀತಾ-ರಾಮ” ಯಶಸ್ವಿ 50 ಸಂಚಿಕೆಗಳನ್ನು ಪೂರೈಸಿದೆ. 

 

ಬೆಂಗಳೂರು : ಕನ್ನಡ ಕಿರುತೆರೆಯಲ್ಲಿ ಸದ್ಯ ಸೀತಾರಾಮ ಧಾರವಾಹಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ರಾತ್ರಿ 9.30 ಕ್ಕೆ ಸರಿಯಾಗಿ ಪುಟ್ಟ ಮಕ್ಕಳಿಂದ ಹಿಡಿದು, ಹುಡುಗೀರು, ಆಂಟಿಯಂದಿರು ಟಿವಿ ಮುಂದೆ ಹಾಜರಿರ್ತಾರೆ.

ಇದೀಗ ನಂಬರ್ ಒನ್ ಸೀರಿಯಲ್ ಆಗಿರುವ ಸೀತಾರಾಮ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕಥೆ ರಿಮೇಕ್ ಆದ್ರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಧಾರವಾಹಿ ಕಥಾ ಹಂದರವನ್ನು ಬಳಸಲಾಗಿದೆ.

ಅದ್ರಲ್ಲೂ ವೈಷ್ಣವಿ ಇದ್ದಾರೆ ಅಂದ್ರೆ ಅಲ್ಲಿ ಟಿ.ಆರ್.ಪಿ ರೇಟ್ ಗಗನಕ್ಕೇರುತ್ತೆ.

ಬಿಗ್ ಬಾಸ್ ಬಳಿಕ ವೈಷ್ಣವಿ ಸೀತಾ ರಾಮ ಪ್ರೋಜೆಕ್ಟ್ ಮೂಲಕ ಜನರ ಮನಸ್ಸನ್ನು ಗೆದ್ದು ಈಗ 50 ಸಂಚಿಕೆಗಳನ್ನು ಪೂರೈಸಿರುವ ಸಂತೋಷದಲ್ಲಿದ್ದಾರೆ.

ಬಡ ಮನೆಯ ಹೆಣ್ಣು ಮಗಳು ಬದುಕಿನ ಹೋರಾಟದಲ್ಲಿ ಎದುರಿಸುವ ನಾನಾ ಸಂಕಷ್ಟಗಳನ್ನುಇಟ್ಟುಕೊಂಡು ಧಾರವಾಹಿಯ ಕಥೆಯನ್ನು ಹೆಣೆಯಲಾಗಿದೆ.

ಹೀರೋ- ಹೀರೋಹಿನ್ ಕೆಮೆಸ್ಟ್ರೀ ಕ್ಲಿಕ್ ಆಗಿದ್ದು, ಇವರಿಬ್ಬರೂ ರಿಯಲ್ ಲೈಫಲ್ಲೂ ಒಂದಾದ್ರೆ ಚೆನ್ನಾಗಿರುತ್ತೆ ಅಲ್ವಾ ಅಂತ ಯೋಚ್ನೆ ಮಾಡ್ತಿದ್ದಾರೆ.

ಧಾರವಾಹಿ ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಲಿ ಅನ್ನೋದೆ ಸೀತಾ-ರಾಮ ಧಾರವಾಹಿ ಅಭಿಮಾನಿಗಳ ಆಸೆ. ನಮ್ಮ ಕಡೆಯಿಂದಲೂ ಆಲ್ ದ ವೆರೀ ಬೆಸ್ಟ್.

Continue Reading

bangalore

ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?

Published

on

ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನಲ್ಲಿ ರಕ್ಷಿತ್  ವೈಟ್ ಟೀ-ಶರ್ಟ್ ಮೇಲೆ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು. ಈ ಲುಕ್ ಇದೀಗ ರಿಪೀಟ್ ಆಗಿದ್ದು ಹುಡುಗಿ ಮಾತ್ರ ಚೇಂಜ್ ಆಗಿದ್ದಾರೆ. 

 

ಬೆಂಗಳೂರು : ಸದ್ಯ ರಕ್ಷಿತ್ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಅವರ ಸಿನೆಮಾ ಸಪ್ತ ಸಾಗರಾದಾಚೆ ಅಂತೂ ಹೆವ್ವಿ ಸೌಂಡ್ ಮಾಡ್ತಿದ್ದು, ನೆರೆಯ ಭಾಷೆಗಳಿಗೂ ರಿಮೇಕ್ ಆಗಿ ಜನರ ಮನಸ್ಸು ಗೆದ್ದಿದೆ.


ಈ ನಡುವೆ ರಕ್ಷಿತ್ ಶೆಟ್ಟಿ ಮತ್ತೆ ಲವ್ವಲ್ಲಿ ಬಿದ್ರಾ ಅನ್ನೋ ಗುಮಾನಿ ಕೂಡ ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲಿ ಚರ್ಚೆಯಾಗುತ್ತಿದೆ.

ರಕ್ಷಿತ್ ಶೆಟ್ಟಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಹುಡುಗೀನ ನೋಡಿ ನಕ್ಕಿದ್ರೂ ಅದು ಬಿಗ್ ಹೆಡ್ ಲೈನ್ ಆಗಿ ಬಿಡುತ್ತೆ.

ಇದೀಗ ನೆಟ್ಟಿಗರು ಎಷ್ಟು ಸ್ಮಾರ್ಟ್ ಆಗಿದ್ದಾರೆ  ಅಂದ್ರೆ 4-5 ವರ್ಷಗಳ ಹಿಂದಿನ ರಕ್ಷಿತ್ ಶೆಟ್ಟಿ ಫೋಟೋ ಹುಡುಕಿ ಈಗ ಸ್ವೀಟ್ ಮೀಮ್ಸ್ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಡುತ್ತಿದ್ದಾರೆ.

ಹೌದು! ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನಲ್ಲಿ ರಕ್ಷಿತ್  ವೈಟ್ ಟೀ-ಶರ್ಟ್ ಮೇಲೆ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು.

ಈ ಲುಕ್ ಇದೀಗ ರಿಪೀಟ್ ಆಗಿದ್ದು ಹುಡುಗಿ ಮಾತ್ರ ಚೇಂಜ್ ಆಗಿದ್ದಾರೆ.

ಅಂದು ಪಕ್ಕದಲ್ಲಿ ರಶ್ಮಿಕ ಮಂದಣ್ಣ ಇದ್ರೆ ಇಂದು ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.

ರೊಮ್ಯಾಂಟಿಕ್ ಆಕ್ಷನ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಮತ್ತು ರಕ್ಮಿಣಿ ವಸಂತ್ ನಟಿಸಿದ್ದು , ಸಿನಿಮಾ ಹಿಟ್ ಆದ ಬೆನ್ನಲ್ಲೆ ಸಾಕಷ್ಟು ಪ್ರೆಸ್‌ಮೀಟ್ ಮತ್ತು ಸಕ್ಸಸ್ ಮೀಟ್ ಗಳಲ್ಲಿ ಈ ಜೋಡಿ ಕಾಣಿಸಿಕೊಳ್ಳೋದು ಮಾಮೂಲು.

ಆದ್ರೆ ಕಿರಿಕ್ ಪಾರ್ಟಿ ಟೈಮಲ್ಲಿ ಹಾಕಿದ ಬಟ್ಟೆಯನ್ನೇ ಇದೀಗ ಮತ್ತೆ ಶೆಟ್ರು ರಿಪೀಟ್ ಮಾಡಿರೋದನ್ನ ನೋಡಿ ಶೆಟ್ರು ಸೋ ಸಿಂಪಲ್ ಅಂತಿದ್ದಾರೆ.

ಒಟ್ನಲ್ಲಿ ಇದನ್ನು ನೋಡಿದ ನೆಟ್ಟಿಗರು ಹುಡುಗಿ ಚೇಂಜ್ ಆದ್ರೂ  ಡ್ರೆಸ್ ಇನ್ನೂ ಚೇಂಜ್ ಆಗಿಲ್ಲ ಅಲ್ವಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದ್ರೆ ಅಂದು ರಕ್ಷಿತ್ ಶೆಟ್ಟಿ ಹಾಕಿದ ಶರ್ಟಿಗೂ ಈಗ ವೈರಲ್ ಆಗುತ್ತಿರುವ ಶರ್ಟಿಗೂ ವ್ಯತ್ಯಾಸ ಇರೋದಂತೂ ಅಕ್ಷರಶಃ ಸತ್ಯ.

 

Continue Reading

LATEST NEWS

Trending