bangalore
ಬೆಂಗಳೂರು: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರನ್ನು ಭೇಟಿಯಾದ ಸ್ಪೀಕರ್ ಯು.ಟಿ.ಖಾದರ್
ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರು ಮೊದಲ ಬಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದರು.
ಬೆಂಗಳೂರು: ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರು ಮೊದಲ ಬಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದರು.
ಈ ವೇಳೆ ಯು.ಟಿ ಖಾದರ್ ಅವರು ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಕಿರಿಯ ವಯಸ್ಸಿನಲ್ಲಿ ವಹಿಸಿಕೊಂಡಿರುವುದನ್ನು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಶ್ಲಾಘಿಸಿದ್ದಾರೆ.
ಈ ಚಿಕ್ಕ ವಯಸ್ಸಿನಲ್ಲೇ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸುದೈವ.
ಸ್ಪೀಕರ್ ಹುದ್ದೆಯಲ್ಲಿ ಸಿಗುವ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಅನುಭವಗಳು ಹಾಗೂ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಸಭಾಧ್ಯಕ್ಷರಾಗಿ ಕಾರ್ಯಸಲ್ಲಿಸುವಷ್ಟು ದಿನ ಸದನದ ಘನತೆ, ಗೌರವ ಎತ್ತಿಹಿಡಿದು ಶಾಸಕರ ಹಾಗೂ ರಾಜ್ಯದ ಜನರ ಮನಸು ಗೆಲ್ಲಿಸಿ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯದ ಜನರ ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ನನಗೆ ಅಪಾರ ಗೌರವವಿದ್ದು ಶಾಸನ ಸಭೆಯ ನಡವಳಿಕೆಯ ಯಾವುದೇ ಮಾರ್ಗದರ್ಶನಕ್ಕಾಗಿ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಜಗದೀಪ್ ಧನ್ಕರ್ ಹೇಳಿದರು.
bangalore
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ರಿಲೀಸ್ ಡೇಟ್ ಚೇಂಜ್…!
ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನೆಮಾದ ಸೈಡ್ ಬಿ ಅಕ್ಟೋಬರ್ 20ರ ಬದಲಿಗೆ ಅಕ್ಟೋಬರ್ 27ರಂದು ರಿಲೀಸ್ ಆಗಲಿದೆ.
ರಕ್ಷಿತ್ ಶೆಟ್ಟಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿನಲ್ಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರತಂಡ ಮೊದಲೇ ಘೋಷಿಸಿದಂತೆ ಅಕ್ಟೋಬರ್ 20ಕ್ಕೆ ಬಿಡುಗಡೆ ಆಗಬೇಕಿತ್ತು.
ಆದ್ರೆ ಅಕ್ಟೋಬರ್ 20ಕ್ಕೆ ಸಪ್ತ ಸಾಗರದಾಚೆ ಸಿನೆಮಾ ರಿಲೀಸ್ ಆಗುತ್ತಿಲ್ಲ.
ಸೈಡ್ ಬಿ ಪಾರ್ಟ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಭಾರೀ ಬಜೆಟ್ ಚಿತ್ರಗಳು, ಸ್ಟಾರ್ ನಟರ ಚಿತ್ರಗಳು, ಪರಭಾಷೆಯ ಚಿತ್ರಗಳ ಹಾವಳಿಯಿಂದಾಗಿ ಚಿತ್ರ ಬಿಡುಗಡೆಯ ದಿನಾಂಕ ಬದಲಾಗಿದೆ.
ಹೀಗಾಗಿ ಚಿತ್ರತಂಡ ಅಕ್ಟೋಬರ್ 27ಕ್ಕೆ ಪಾರ್ಟ್ ಬಿ ರಿಲೀಸ್ ಮಾಡುವ ಘೋಷಣೆಯನ್ನು ಮಾಡಿದೆ.
ಹೌದು ..ಅಕ್ಟೋಬರ್ 20ರ ಬದಲಿಗೆ ಅಕ್ಟೋಬರ್ 27ರಂದು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ರಿಲೀಸ್ ಆಗಲಿದೆ.
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ನೆಲದಲ್ಲೂ ಸದ್ದು ಮಾಡಿದೆ. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ ಈ ಸಿನಿಮಾ, ಈಗ ತೆಲುಗಿನಲ್ಲೂ ಅತ್ಯುತ್ತಮ ಪ್ರತಿಕ್ರಿಯೆನ್ನು ಕಂಡಿದೆ.
ಹೇಮಂತ್ ನಿರ್ದೇಶಿಸಿದ ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.
ಫೈನಲಿ ಜನ ಕಾತುರದಿಂದ ಕಾಯುತ್ತಿರುವ ಸಪ್ತ ಸಾಗರದಾಚೆ ಸಿನೆಮಾದ ಪಾರ್ಟ್ ಬಿ ಅಕ್ಟೋಬರ್ 27ರಂದು ಅದ್ದೂರಿಯಾಗಿ ಬಿಡುಗಡೆಗೆ ಸಿದ್ದವಾಗಿದೆ.
bangalore
SHOCKING! ಗುರುತೇ ಸಿಗದಷ್ಟು ಬದಲಾದ ‘ಹುಚ್ಚ’ ಖ್ಯಾತಿಯ ನಟಿ ರೇಖಾ …!
ಶಾಕಿಂಗ್ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್.
ಬೆಂಗಳೂರು : ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.
ಅಷ್ಟೊಂದು ಮುದ್ದು ಮುದ್ದು ಮುಖ, ಹೊಳೆಯುತ್ತಿದ್ದ ಕಣ್ಣು, ಮಿನುಗುತ್ತಿದ್ದ ಕೆನ್ನೆಯನ್ನು ಇಂದಿಗೂ ಅಭಿಮಾನಿಗಳು ನೆನೆಸಿಕೊಳ್ಳುತ್ತಾರೆ.ಆದ್ರೆ ಈಗ ಅದೇ ರೇಖಾ ಗುರುತೆ ಸಿಗದಷ್ಟರ ಮಟ್ಟಿಗೆ ಬದಲಾಗಿ ಹೋಗಿದ್ದಾರೆ.
ಸಣಕಲು ದೇಹ, ಬತ್ತಿದ ಕಣ್ಣುಗಳು, ಬಾಡಿದ ಕೆನ್ನೆಗಳು ರೇಖಾ ಅವರ ನಿಜ ಸ್ವರೂಪವನ್ನೇ ಬದಲಾಯಿಸಿ ಬಿಟ್ಟಿದೆ.
ಒಂದು ಕಾಲದಲ್ಲಿ ಬೆಳ್ಳಿ ತೆರೆಯಲ್ಲಿ ಮಿರ ಮಿರ ಮಿಂಚಿ ಮರೆಯಾಗಿರುವ ನಟಿ ರೇಖಾ ದಿಢೀರನೆ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆಗಿದ್ದಾರೆ.
ತೆಲುಗಿನ ‘ಶ್ರೀದೇವಿ ಡ್ರಾಮಾ ಕಂಪನಿ’ ಕಾಮಿಡಿ ಶೋಗೆ ಅತಿಥಿಯಾಗಿ ಬಂದಿದ್ದ ರೇಖಾ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿಬೆಳೆದ ರೇಖಾ ಕನ್ನಡದ ‘ಹುಚ್ಚ’ ಚಿತ್ರದಲ್ಲಿ ಮೊದಲಿಗೆ ಆಕೆ ಬಣ್ಣ ಹಚ್ಚಿದ್ದರು.
ಅಲ್ಲಿಂದ ಮುಂದೆ ಕನ್ನಡ ಸಿನಿರಸಿಕರಿಗೆ ‘ಹುಚ್ಚ’ ನಟಿ ರೇಖಾ ಅಂತ್ಲೇ ಪರಿಚಿತರಾದರು.
ಕನ್ನಡ ಜೊತೆ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲಿ ರೇಖಾ ಮಿಂಚಿದರು. ತೆಲುಗಿನಲ್ಲೂ ಆಕೆ ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ ಚೆಲುವೆಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ.
‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ‘ಚೆಲ್ಲಾಟ’ ಹೀಗೆ ಹಿಟ್ ಸಿನಿಮಾಗಳಲ್ಲಿ ಮಿಂಚಿದರು.
ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡಿದ್ದರು. ಗಣೇಶ್ ಜೋಡಿಯಾಗಿ ‘ಹುಡುಗಾಟ’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ ರೇಖಾ ಮತ್ತೊಮ್ಮೆ ಕಮಾಲ್ ಮಾಡಿದರು.
ನಟಿ ರೇಖಾ 2014ರ ನಂತರ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಅವಕಾಶಗಳು ಸಿಕ್ಕಿಲ್ವೋ ಅಥವಾ ಸಿನಿಮಾ ಮೇಲಿನ ಆಸಕ್ತಿ ಕಮ್ಮಿ ಆಯ್ತೋ ಗೊತ್ತಿಲ್ಲ.
ಆದರೆ ಇದ್ದಕ್ಕಿಂದ್ದಂತೆ ಬಿಗ್ ಸ್ಕ್ರೀನ್ನಿಂದ ಮಾಯವಾಗಿದ್ದ ರೇಖಾ ಸಿನಿಪ್ರೇಮಿಗಳಿಗೆ ಅಪರೂಪದ ತಾರೆಯಾಗಿ ಉಳಿದುಕೊಂಡು ಬಿಟ್ರು.
ಆದಷ್ಟು ಬೇಗ ಕನ್ನಡ ಮುದ್ದು ಮುಖದ ನಟಿ ರೇಖಾ ವೇದವ್ಯಾಸ್ ಗುಣ ಮುಖರಾಗಿ ಮೊದಲಿನ ಮಂದಹಾಸ ಬರಲಿ ಅನ್ನೋದೆ ಅವರ ಅಭಿಮಾನಿಗಳ ಆಸೆ.
bangalore
ಹಾಫ್ ಸೆಂಚುರಿ ಖುಷಿಯಲ್ಲಿ ಸೀತಾ-ರಾಮ ಸೀರಿಯಲ್
ಕನ್ನಡ ಕಿರುತೆರೆಯ ನಂಬರ್ ಒನ್ ಧಾರವಾಹಿ “ಸೀತಾ-ರಾಮ” ಯಶಸ್ವಿ 50 ಸಂಚಿಕೆಗಳನ್ನು ಪೂರೈಸಿದೆ.
ಬೆಂಗಳೂರು : ಕನ್ನಡ ಕಿರುತೆರೆಯಲ್ಲಿ ಸದ್ಯ ಸೀತಾರಾಮ ಧಾರವಾಹಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ರಾತ್ರಿ 9.30 ಕ್ಕೆ ಸರಿಯಾಗಿ ಪುಟ್ಟ ಮಕ್ಕಳಿಂದ ಹಿಡಿದು, ಹುಡುಗೀರು, ಆಂಟಿಯಂದಿರು ಟಿವಿ ಮುಂದೆ ಹಾಜರಿರ್ತಾರೆ.
ಇದೀಗ ನಂಬರ್ ಒನ್ ಸೀರಿಯಲ್ ಆಗಿರುವ ಸೀತಾರಾಮ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕಥೆ ರಿಮೇಕ್ ಆದ್ರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಧಾರವಾಹಿ ಕಥಾ ಹಂದರವನ್ನು ಬಳಸಲಾಗಿದೆ.
ಅದ್ರಲ್ಲೂ ವೈಷ್ಣವಿ ಇದ್ದಾರೆ ಅಂದ್ರೆ ಅಲ್ಲಿ ಟಿ.ಆರ್.ಪಿ ರೇಟ್ ಗಗನಕ್ಕೇರುತ್ತೆ.
ಬಿಗ್ ಬಾಸ್ ಬಳಿಕ ವೈಷ್ಣವಿ ಸೀತಾ ರಾಮ ಪ್ರೋಜೆಕ್ಟ್ ಮೂಲಕ ಜನರ ಮನಸ್ಸನ್ನು ಗೆದ್ದು ಈಗ 50 ಸಂಚಿಕೆಗಳನ್ನು ಪೂರೈಸಿರುವ ಸಂತೋಷದಲ್ಲಿದ್ದಾರೆ.
ಬಡ ಮನೆಯ ಹೆಣ್ಣು ಮಗಳು ಬದುಕಿನ ಹೋರಾಟದಲ್ಲಿ ಎದುರಿಸುವ ನಾನಾ ಸಂಕಷ್ಟಗಳನ್ನುಇಟ್ಟುಕೊಂಡು ಧಾರವಾಹಿಯ ಕಥೆಯನ್ನು ಹೆಣೆಯಲಾಗಿದೆ.
ಹೀರೋ- ಹೀರೋಹಿನ್ ಕೆಮೆಸ್ಟ್ರೀ ಕ್ಲಿಕ್ ಆಗಿದ್ದು, ಇವರಿಬ್ಬರೂ ರಿಯಲ್ ಲೈಫಲ್ಲೂ ಒಂದಾದ್ರೆ ಚೆನ್ನಾಗಿರುತ್ತೆ ಅಲ್ವಾ ಅಂತ ಯೋಚ್ನೆ ಮಾಡ್ತಿದ್ದಾರೆ.
ಧಾರವಾಹಿ ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಲಿ ಅನ್ನೋದೆ ಸೀತಾ-ರಾಮ ಧಾರವಾಹಿ ಅಭಿಮಾನಿಗಳ ಆಸೆ. ನಮ್ಮ ಕಡೆಯಿಂದಲೂ ಆಲ್ ದ ವೆರೀ ಬೆಸ್ಟ್.
- DAKSHINA KANNADA6 days ago
2ನೇ ಮದುವೆಯಾದ ಕಿರುತೆರೆ ನಟಿ ಜ್ಯೋತಿ ರೈ …!
- LATEST NEWS6 days ago
ವಾರವಿಡೀ ಕಾಡಿನಲ್ಲಿ ಸಿಲುಕಿದ್ದ ಯುವಕ- ಮನೆಗೆ ವಾಪಸ್ ಆಗುವಂತೆ ರಕ್ಷಣೆ ಮಾಡಿದ ಸಾಕುನಾಯಿ..!
- DAKSHINA KANNADA6 days ago
Puttur: ಕಾಲೇಜು ವಿದ್ಯಾರ್ಥಿನಿ ಜಿವಾಂತ್ಯ..!
- DAKSHINA KANNADA6 days ago
Ullala: ರೈಲಿನಡಿಗೆ ತಲೆಯಿಟ್ಟು ಅವಿವಾಹಿತ ವ್ಯಕ್ತಿ ಜೀವಾಂತ್ಯ..!