ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಬಳಸಿದ ವಸ್ತುಗಳಿಗೂ ಬೆಂಗಳೂರಿನ ಬ್ಲಾಸ್ಟ್ನಲ್ಲಿ ಬಳಸಿರೋ ವಸ್ತುಗಳಿಗೂ ಸಾಮ್ಯತೆ ಇರೋ ಕಾರಣ ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಹೀಗಾಗಿ ಸರ್ಕಾರ ಎನ್ಐಎ ತಂಡಕ್ಕೆ ಈ ಪ್ರಕರಣವನ್ನು ಒಪ್ಪಿಸುವ ಎಲ್ಲಾ ಸಾದ್ಯತೆಗಳ ಬಗ್ಗೆ ಅನುಮಾನ ಮೂಡಿದೆ. ವೈಟ್ ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿನ ಬ್ಲಾಸ್ಟ್ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಸಿಸಿಬಿ ಈ ಬಗ್ಗೆ ತೀವೃ ವಿಚಾರಣೆ ನಡೆಸ್ತಾ ಇದೆ. ಆದ್ರೆ ಈ ನಡುವೆ ಎನ್ಐಎ ಅಧಿಕಾರಿಗಳು ಸಿಸಿಬಿಯಿಂದ ಕೆಲವೊಂದು ಮಾಹಿತಿಗಳನ್ನು ಪಡೆದುಕೊಂಡಿದ್ದು, ತನಿಖೆಯನ್ನು ಕೈಎತ್ತಿಕೊಳ್ಳುವ ಸಾದ್ಯತೆ ಇದೆ.
ವ್ಯವಸ್ಥಿತವಾಗಿ ಈ ಬ್ಲಾಸ್ಟ್ ಸಂಚು ರೂಪಿಸಲಾಗಿದ್ದು, ಬಹಳ ಜಾಗರೂಕತೆಯಿಂದ ಅದನ್ನು ಜಾರಿ ಮಾಡಿದ್ದಾರೆ. ಎಲ್ಲಿಯೂ ಮುಖ ಚಹರೆಯಾಗಲಿ, ಇತರ ಬೇರೆ ಸುಳಿವನ್ನಾಗಲೀ ಬಿಟ್ಟುಕೊಂಡದಂತೆ ಪ್ಲ್ಯಾನ್ ಮಾಡಿ ಬ್ಲಾಸ್ಟ್ ಮಾಡಲಾಗಿದೆ. ಹೀಗಾಗಿ ಇದು ಒಬ್ಬನಿಂದ ನಡೆದ ಕೃತ್ಯವಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರ ಹಿಂದೆ ಒಂದು ಜಾಲವೇ ಇದ್ದು, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಬಳಸಿದ ವಸ್ತುಗಳಿಗೂ, ರಾಮೇಶ್ವರಂ ಕೆಫೆ ಬ್ಲಾಸ್ಟ್ಗೆ ಬಳಕೆ ಮಾಡಲಾಗಿರುವ ವಸ್ತುಗಳಿಗೂ ಸಾಮ್ಯತೆ ಕಂಡು ಬಂದಿದೆ. ಹೀಗಾಗಿ ಎನ್ಐಎ ಮಧ್ಯಪ್ರವೇಶ ಮಾಡಿ ತನಿಖೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದೆ.
ಬ್ಲಾಸ್ಟ್ಗಾಗಿ ಹಲವು ತಿಂಗಳ ಸ್ಕೆಚ್..! ಬಾಂಬ್ ಸ್ಪೋಟಿಸಿದ್ದು ಹೇಗೆ…?
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಆಯಾಮದಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ. ಈ ಕೃತ್ಯವು ಶಂಕಿತರ ಟಾರ್ಗೆಟ್ ಆಗಿತ್ತೇ ಅಥವಾ ಬ್ಯುಸಿನೆಸ್ ಕಾರಣಕ್ಕೆ ವಿರೋಧಿಗಳು ಬಾಂಬ್ ಬ್ಲಾಸ್ಟ್ ಮಾಡಿಸಿದ್ದರಾ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಶಂಕಿತರು ರಾಮೇಶ್ವರಂ ಕೆಫೆ ಬ್ಲಾಸ್ಟ್ಗೆ 3 ತಿಂಗಳಿಂದ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಕೆಫೆಯಲ್ಲಿ ಯಾವಾಗ ಹೆಚ್ಚು ಜನರು ಇರುತ್ತಾರೆ. ಕೆಫೆಗೆ ಸುತ್ತಮುತ್ತ ಎಲ್ಲೆಲ್ಲಿ ಸಿಸಿ ಕ್ಯಾಮೆರಾ ಇದೆ. ಸಿಸಿ ಕ್ಯಾಮೆರಾ ಇದ್ದರೂ ಕೃತ್ಯದ ಬಳಿಕ ಹೇಗೆ ಸೇಫ್ ಆಗಿ ಎಕ್ಸಿಟ್ ಆಗಬೇಕು. ಈ ನಡುವೆ ಎಲ್ಲೆಲ್ಲಿ ಪೊಲೀಸ್ ಠಾಣೆಗಳು ಸಿಗುತ್ತವೆ ಎನ್ನುವ ಮಾಹಿತಿಯನ್ನು ಈ ಮೊದಲೇ ಸಂಗ್ರಹಿಸಿದ್ದಾರೆ. ಈ ಕೃತ್ಯದಲ್ಲಿ ಒಬ್ಬನಲ್ಲದೆ ಒಂದು ಗ್ಯಾಂಗ್ ಕೆಲಸ ಮಾಡಿದೆ ಎಂಬ ಅನುಮಾನ ಮೂಡಿದೆ. ಶಂಕಿತರು ಯಾವುದೇ ಮೊಬೈಲ್ ಬಳಸದೇ ಕೃತ್ಯ ಎಸಗಿದ್ದಾರೆ.
ಇದರ ಹಿಂದೆ ಉಗ್ರರ ಕೈವಾಡ ಇದೆಯೇ? ಅಥವಾ ವೈಯಕ್ತಿಕ ದ್ವೇಷಕ್ಕೆ ಮಾಡಲಾಗಿದೆಯೇ? ಇಲ್ಲವೇ ಬೇರೆ ಯಾವ ಕಾರಣಕ್ಕೆ ಯಾರು ಮಾಡಿರಬಹುದು ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಯಬೇಕು. ಇನ್ನು ಬಾಂಬ್ ಸ್ಫೋಟದಂತಹ ಪ್ರಕರಣಗಳಲ್ಲಿ ಹಲವು ತನಿಖೆಗಳನ್ನು ನಡೆಸಿರುವ ಎನ್ಐಎ ಜವಾಬ್ದಾರಿ ವಹಿಸಿಕೊಂಡರೆ ಜಾಲವನ್ನು ಭೇದಿಸುವುದು ಮತ್ತಷ್ಟು ಸುಲಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸಿಸಿಬಿಯಿಂದ ಎನ್ಐಎಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಈ ಮೊದಲು ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಸಿಸಿಬಿಯಿಂದ ಎನ್ಐಎಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.
ಬೆಂಗಳೂರು: ದೀಪಾವಳಿ ದಿನದಂದು ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕ ಬ*ಲಿಯಾದ ಘಟನೆ ಬೆಳಕಿಗೆ ಬಂದಿದೆ. ಕೋಣನಕುಂಟೆಯ ವೀವರ್ಸ್ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ.
ಪಟಾಕಿ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ಸ್ನೇಹಿತರು ಹುಡುಗಾಟ ಮಾಡಲು ಹೋಗಿ ಸ್ನೇಹಿತನನ್ನೇ ಕಳೆದುಕೊಂಡಿದ್ದಾರೆ. ಶಬರೀಶ್ ಎಂಬ ಯುವಕ ಸ್ನೇಹಿತರೊಂದಿಗೆ ಹುಚ್ಚಾಟ ಮಾಡಲು ಹೋಗಿ ಬ*ಲಿಯಾಗಿದ್ದಾನೆ.
ದೀಪಾವಳಿ ದಿನದಂದು ಶಬರೀಶ್ ಹಾಗೂ ಸ್ನೇಹಿತರು ಪಟಾಕಿ ಹೊಡೆಯುತ್ತಿದ್ದರು. ಈ ವೇಳೆ ಪಟಾಕಿ ಇಟ್ಟು ಅದರ ಮೇಲೆ ಡಬ್ಬ ಇಟ್ಟು ಕೂರಲು ಚಾಲೆಂಜ್ ಹಾಕಿದ್ದರು. ಮದ್ಯಪಾನ ಮಾಡಿದ್ದ ಶಬರೀಶ್ ಅದೇ ರೀತಿ ಮಾಡಿದ್ದಾನೆ. ಪಟಾಕಿ ಸಿಡಿದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದಾನೆ.
ಗಾಯಾಳು ಶಬರೀಶನನ್ನು ಆಸ್ಪತ್ರೆಗೆ ದಾಖಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಶಬರೀಶ್ ಸಾ*ವನ್ನಪ್ಪಿದ್ದಾನೆ. ಸದ್ಯ ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಮಂಗಳೂರು/ ಬೆಂಗಳೂರು: ಇತ್ತೀಚೆಗೆ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕೆಲವೊಂದು ಪ್ರಕರಣಗಳು ವಿಚಿತ್ರವಾಗಿರುತ್ತವೆ. ಇಲ್ಲೊಬ್ಬಾಕೆ ಪ್ರಿಯತಮನ ಮೊಬೈಲ್‌ನಲ್ಲಿದ್ದ ತನ್ನ ಫೋಟೋ ಹಾಗೂ ವೀಡಿಯೊಗಳನ್ನು ಡಿಲೀಟ್ ಮಾಡಿಸಲೆಂದು ರಾಬರಿ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿನಿಮೀಯ ರೀತಿ ಪ್ರಿಯತಮೆಯೇ ಪ್ರಿಯಕರನ ಮೇಲೆ ರಾಬರಿ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ.
ಬೆಳ್ಳಂದೂರು ಪೊಲೀಸರು ಟೆಕ್ಕಿ ಶ್ರುತಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ಆ್ಯಕ್ಸಿಡೆಂಟ್ – ಡ್ರಾಮಾ :
ಕಳೆದ ಸೆಪ್ಟೆಂಬರ್ 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶ್ರುತಿ ಭೇಟಿಗೆ ತೆರಳಿದ್ದ. ಭೇಟಿಯಾಗಿ ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದ ಅಪರಿಚಿತರು ವಂಶಿಕೃಷ್ಣರೆಡ್ಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಜಗಳ ತೆಗೆದ ಅಪರಿಚಿತರು ಆತನ ಬಳಿಯಿದ್ದ ಮೊಬೈಲ್ ಕಸಿದಿದ್ದರು. ಅಲ್ಲದೇ, ವಂಶಿ ಜತೆಯಲ್ಲಿಯೇ ಇದ್ದ ಶ್ರುತಿಯ ಮೊಬೈಲ್ ಅನ್ನು ಕಸಿದುಕೊಂಡಿದ್ದರು. ಬಳಿಕ ದೂರು ಕೊಡುವುದು ಬೇಡ ಮೊಬೈಲ್ ಹೋದರೆ ಹೋಯಿತು ಎಂದು ಬಾಯ್‌ಫ್ರೆಂಡ್ ವಂಶಿ ಮುಂದೆ ಶ್ರುತಿ ನಾಟಕವಾಡಿದ್ದಾಳೆ.
ಆದರೆ, ಇಷ್ಟಕ್ಕೆ ಸುಮ್ಮನಾಗದ ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ತೆರಳಿ ಕಾರಿನ ನಂಬರ್ ಸಮೇತ ದೂರು ನೀಡಿದ್ದರು.
ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಇತ್ತೀಚೆಗೆ ಪ್ರಿಯತಮ ವಂಶಿಕೃಷ್ಣನಿಂದ ದೂರವಾಗಲು ಶ್ರುತಿ ಯತ್ನಿಸಿದ್ದಳು. ಆದರೆ, ವಂಶಿಕೃಷ್ಣನ ಮೊಬೈಲ್‌ನಲ್ಲಿ ಶ್ರುತಿಯ ಫೋಟೋಗಳಿದ್ದವು. ನೇರವಾಗಿ ಹೇಳಿದರೆ ಎಲ್ಲಿ ವಂಶಿಕೃಷ್ಣ ವಿರೋಧ ವ್ಯಕ್ತಪಡಿಸುತ್ತಾನೋ ಎಂಬ ಭಯದಿಂದ ಶ್ರುತಿ ಮೊಬೈಲ್ ರಾಬರಿ ಮಾಡುವ ಯೋಜನೆ ರೂಪಿಸಿದ್ದಾರೆ. ಸದ್ಯ ಆರೋಪಿ ಟೆಕ್ಕಿ ಶ್ರುತಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದು, ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಗಳೂರು/ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪ್ರಕರಣ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಸೆಂಟ್ರಲ್ ಜೈಲ್ಗೆ ಮೊಬೈಲ್ ರವಾನೆ ಮಾಡುತ್ತಿದ್ದ ಖೈದಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೋಲಾರದ ಕೆಜಿಎಫ್ ನ ವಿಜಯ್ನನ್ನು ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಆಗ್ನೇಯ ವಿಭಾಗದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದರು.
ಜೈಲಿನೊಳಗೆ ವಿಜಯ್ ಸಿಬ್ಬಂದಿಯೊಬ್ಬರ ನೆರವು ಪಡೆದು ಸ್ಮಾರ್ಟ್ ಫೋನ್ಗಳನ್ನು ಹೊರಗಿನಿಂದ ಖರೀದಿಸಿಕೊಂಡು ಅವುಗಳನ್ನು ಜೈಲಿನಲ್ಲಿರುವ ಇತರ ಖೈದಿಗಳಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ವಿಜಯ್ ಮೊಬೈಲ್ ಪೂರೈಸುವುದಕ್ಕೆ ಸಾಕ್ಷ್ಯಗಳು ಸಿಕ್ಕ ಬೆನ್ನಲ್ಲೇ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಸ್ಟಡಿಯಲ್ಲಿದ್ದ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್ ಹಾಗೂ ವೇಲು ಅವರ ವಿಚಾರಣೆಯೂ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ವಿಜಯ್ ಜೈಲು ಅಧಿಕಾರಿಗಳ ಸಹಾಯದಿಂದಲೇ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್ಗಳು ಸಾವಿರಾರು ಹಣ ಕೊಟ್ಟು ಈತನಿಂದ ಮೊಬೈಲ್ ಖರೀದಿಸುತ್ತಿದ್ದರು ಎಂಬ ವಿಚಾರದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೆ. 15 ರಂದು ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 26 ಮೊಬೈಲ್ ಪತ್ತೆಯಾಗಿದ್ದವು. ಇನ್ನಷ್ಟು ತನಿಖೆ ನಡೆಸಿದಾಗ ವಿಜಯ್ ಮೊಬೈಲ್ ಪೂರೈಸುತ್ತಿದ್ದ ಎಂಬುವುದು ಖಚಿತವಾಗಿದೆ ಎಂದು ವರದಿಯಾಗಿದೆ