Connect with us

LATEST NEWS

WATCH : ಮಳೆಯಿಂದ ಮುಳುಗಿದ ಬೆಂಗಳೂರು; ನೀರಿನಲ್ಲಿ ಸಿಲುಕಿಕೊಂಡ ವಾಹನಗಳ ನಡುವೆ ಗಣಪತಿ ಪ್ರತ್ಯಕ್ಷ

Published

on

ಮಂಗಳೂರು/ ಬೆಂಗಳೂರು : ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಂಗಳೂರು ಮಹಾನಗರ ಬಹುತೇಕ ಜಲಾವೃತಗೊಂಡಿದೆ. ನಗರದ ತಗ್ಗು ಪ್ರದೇಶದ ಅನೇಕ ಕಡೆಗಳಲ್ಲಿ ರಸ್ತೆಗಳು ಮಳೆ ನೀರಿನಿಂದ ತುಂಬಿಕೊಂಡಿದ್ದು, ಲಘು ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿವೆ. ಅಂಡರ್ ಪಾಸ್ ರಸ್ತೆಗಳಲ್ಲಿ ಹಲವಾರು ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿದ್ದು, ಘನ ವಾಹನಗಳು ಕೂಡ ಸಂಚರಿಸಲು ಪರದಾಡಿದೆ. ಇದೇ ವೇಳೆ ನೀರಿನ ನಡುವಿನಲ್ಲಿ ಗಣಪತಿ ಪ್ರತ್ಯಕ್ಷನಾಗಿ ನಡೆದುಕೊಂಡು ಹೋಗುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಧಿಕಾರಿಗಳಿಗೆ ಹಿಡಿ ಶಾಪ :

ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುವ ಗಣಪತಿ ನಗರದ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹಾಗಂತ ಇಲ್ಲಿ ಗಣಪತಿಯಾಗಿ ಕಾಣಿಸಿಕೊಂಡಾತ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿದ್ದು, ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಈ ರೀತಿ ವಿಭಿನ್ನವಾಗಿ ಪ್ರತಿಭಟಿಸಿದ್ದಾನೆ. ರಾಜಾಕಾಲುವ ಒತ್ತುವರಿ ತೆರವು ಮಾಡದೆ, ಅಸಮರ್ಪಕ ಕಾಮಗಾರಿಗಳಿಂದ ನಗರದಲ್ಲಿ ಈ ರೀತಿ ಅವ್ಯವಸ್ಥೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ: ಮೂಲ್ಕಿ : ಮನೆಯ ಅಡುಗೆ ಕೋಣೆಗೆ ಏಕಾಏಕಿ ನುಗ್ಗಿದ ಚಿರತೆ

ಇಂತಹ ನೀರಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾರಾದ್ರೂ ಬಿದ್ದು ಸಾ*ಯಬಾರದಾ ಅಂತ ಹಿಡಿ ಶಾಪ ಹಾಕಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

LATEST NEWS

ಪ್ರಧಾನಿ ಮೋದಿಗೆ ಡೊಮಿನಿಕಾದಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ

Published

on

ಮಂಗಳೂರು/ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ‘ಡೊಮಿನಿಕಾ ಅವಾರ್ಡ್ ಆಫ್ ಆನರ್’ ಘೋಷಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ದೇಶಕ್ಕೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸಲು ಡೊಮಿನಿಕಾ ಸರ್ಕಾರ ನಿರ್ಧರಿಸಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತ ನೀಡಿದ ಬೆಂಬಲ, ನೆರವಿಗೆ ಕೃತಜ್ಞತೆಯ ಸಂಕೇತವಾಗಿ ಮತ್ತು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಪಾಲುದಾರಿಕೆಯ ಸಂಕೇತವಾಗಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಡೊಮಿನಿಕಾದ ಪ್ರಧಾನಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ತಲೆ ನೋವಿಗೆ ಮಾತ್ರೆ ನುಂಗುತ್ತೀರಾ..? ಇಂದೇ ಬಿಟ್ಟುಬಿಡಿ.. ಯಾಕೆಂದರೆ..!

ಮುಂಬರುವ ಭಾರತ-CARICOM (ಕೆರಿಬಿಯನ್ ಸಮುದಾಯ) ಶೃಂಗಸಭೆಯಲ್ಲಿ ಡೊಮಿನಿಕನ್ ಅಧ್ಯಕ್ಷ ಸಿಲ್ವಾನಿ ಬರ್ಟನ್ ಪ್ರಧಾನಿ ಮೋದಿಯವರಿಗೆ ಗೌರವವನ್ನು ನೀಡಲಿದ್ದಾರೆ. ಈ ಶೃಂಗಸಭೆಯು ಗಯಾನಾದ ಜಾರ್ಜ್‌ಟೌನ್‌ನಲ್ಲಿ ನವೆಂಬರ್ 19 ಮತ್ತು 21ರ ನಡುವೆ ನಡೆಯಲಿದೆ. ಈ ಸಂದರ್ಭದಲ್ಲಿ, ಭಾರತ ಮತ್ತು ಕೆರಿಬಿಯನ್ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚಿಂತನೆ ನಡೆಯುವ ಸಾಧ್ಯತೆ ಇದೆ.

Continue Reading

LATEST NEWS

ಬಂಟ್ವಾಳ: ಬ್ಯಾಂಕ್‌ಗೆ ಹೋಗಿ ಹಣ ಪಡೆದು ಮನೆಗೆ ಬಂದ ವ್ಯಕ್ತಿ ಕಾಣೆ; ದೂರು ದಾಖಲು

Published

on

ಬಂಟ್ವಾಳ: ಬ್ಯಾಂಕ್‌ಗೆ ಹೋಗಿ ಹಣ ಪಡೆದುಕೊಂಡು ಮನೆಗೆ ಬಂದ ವ್ಯಕ್ತಿಯೋರ್ವರು ವಿಚಿತ್ರವಾಗಿ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಜೀಪಮುನ್ನೂರು ಗ್ರಾಮದ ನಾಗವಳಚ್ಚಿಲ್ ನಿವಾಸಿಯಾಗಿರುವ ಉಗ್ಗಪ್ಪ (70) ಎಂಬವರು ಕಾಣೆಯಾದ ವ್ಯಕ್ತಿ.

ಪಾಣೆಮಂಗಳೂರು ಯೂನಿಯನ್ ಬ್ಯಾಂಕ್‌ಗೆ ಹೋಗಿ ವೃದ್ಧಾಪ್ಯ ವೇತನ ಪಡೆದುಕೊಂಡು ವಾಪಸ್ಸು ಮನೆಗೆ ಬಂದವರು ತನ್ನ ಸೊಸೆಗೆ ಮೊಬೈಲ್ ನಲ್ಲಿ ಕರೆ ಮಾಡಿ ಏನು ವಿಷಯವನ್ನು ತಿಳಿಸಿದಂತೆ ಕರೆಯನ್ನು ಕಟ್ ಮಾಡಿದ್ದಾರೆ. ನಂತರ ಸೊಸೆ ತಿರುಗಿ ಪೋನ್ ಮಾಡಿದಾಗ ಪೋನ್ ರಿಸೀವ್ ಮಾಡಿರಲಿಲ್ಲ.

ಉಗ್ಗಪ್ಪ ಪೂಜಾರಿ ಅವರು ಮೊಬೈಲ್ ನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಹೋಗಿರುವ ವಿಚಾರ ಬಳಿಕ ಗಮನಕ್ಕೆ ಬಂದಿದೆ. ನಂತರ ಇವರ ಮಗ ಅನಿಲ್ ಕುಮಾರ್ ಅವರು ಎಲ್ಲೆಡೆ ಹುಡುಕಾಟ ಮಾಡಿದರೂ ಪತ್ತೆಯಾಗದ ಹಿನ್ನೆಲೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

LATEST NEWS

ಹೆರಿಗೆ ಬಳಿಕ ಯೋ*ನಿಯೊಳಗೆ ಬಾಕಿಯಾದ ಸೂಜಿ; 20 ವರ್ಷಗಳ ಬಳಿಕ ಗೊತ್ತಾಯ್ತು ನರ್ಸ್ ಎಡವಟ್ಟು!

Published

on

ಮಂಗಳೂರು/ಥೈಲ್ಯಾಂಡ್‌ : ಹೆರಿಗೆಯ ಸಮಯದಲ್ಲಿ ನರ್ಸ್‌ವೊಬ್ಬಳು ಮಹಿಳೆಯೋರ್ವಳ ಯೋ*ನಿಯಲ್ಲಿ ಶಸ್ತ್ರಚಿಕಿತ್ಸಾ ಸೂಜಿಯನ್ನು ಬಿಟ್ಟಿದ್ದು, ಸುಮಾರು ಎರಡು ದಶಕಗಳ ನಿರಂತರ ನೋವಿನಿಂದ ಬಳಲುತ್ತಿದ್ದ ಇದೀಗ ನೋವು ಹೆಚ್ಚಾದ ಕಾರಣ ಎಕ್ಸರೇ ತೆಗೆದಾಗ ಸೂಜಿ ಇರುವುದು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ.

ಕಳೆದ ವರ್ಷದವರೆಗೂ ಸೂಜಿ ಯೋ*ನಿಯೊಳಗೆ ಇರುವುದರ ಕುರಿತು ಮಹಿಳೆಗೆ ಯಾವುದೇ ಕಲ್ಪನೆಯೂ ಇರಲಿಲ್ಲ. ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್-ರೇ ಮಾಡಿದಾಗ ಆಕೆಯ ಖಾ*ಸಗಿ ಭಾಗದಲ್ಲಿ ಸೂಜಿ ಇರುವುದು ಕಂಡು ಬಂದಿದೆ. ಹೆರಿಗೆ ಸಮಯದಲ್ಲಿ 36 ವರ್ಷದ ಮಹಿಳೆ ಥಾಯ್ಲೆಡ್‌ನ ನಾರಾಥಿವಾಟ್‌ ಪ್ರಾಂತ್ಯದ ನಿವಾಸಿ ಪಾವೆನ್‌ ಫೌಂಡೇಶನ್‌ ಫಾರ್‌ ಚಿಲ್ಡ್ರನ್‌ ಆಂಡ್‌ ವುಮೆನ್‌ ಬಳಿ ಈ ಮಹಿಳೆ ಸಹಾಯವನ್ನು ಕೇಳಿದಾಗ ಈ ಮಾಹಿತಿ ಹೊರಬಿದ್ದಿದೆ.

’18 ವರ್ಷಗಳ ಹಿಂದೆ ಹೆರಿಗೆ ನೋವಿನ ಕಾರಣ ಅಪರೇಷನ್‌ಗೆ ಒಳಗಾಗಿದ್ದ ಮಹಿಳೆ, ಮಗು ಜನಿಸಿದ ಮೇಲೆ ಹೊಲಿಗೆ ಹಾಕುವ ವೇಳೆ ನರ್ಸ್‌ ಸೂಜಿಯನ್ನು ಯೋ*ನಿಯೆಲ್ಲಿಯೇ ಬಿಟ್ಟಿದ್ದಳು. ನಂತರ ವೈದ್ಯರು ತಮ್ಮ ಬೆರಳುಗಳ ಮೂಲಕ ಸೂಜಿಯನ್ನು ಹೊರತೆಗೆಯುವ ಪ್ರಯತ್ನ ಪಟ್ಟರೂ ಅದು ಹೊರಬಂದಿರಲಿಲ್ಲ. ಆಮೇಲೆ ಅತಿಯಾದ ರಕ್ತಸ್ರಾವ ಉಂಟಾಗಿ, ಸೂಜಿಯು ಯೋ*ನಿಯೊಳಗೆ ಉಳಿದಿದ್ದು, ವೈದ್ಯರು ತಮ್ಮ ಕೆಲಸ ಅಲ್ಲಿಗೇ ಮುಗಿಸಿದರು’ ಎಂದು ಮಹಿಳೆ ನೆನಪು ಮಾಡಿ ಹೇಳಿದ್ದಾರೆ.

ಅಂದಿನಿಂದ ಇಲ್ಲಿಯವರೆಗೆ ಮಹಿಳೆಗೆ ಆಗಾಗ ತೀವ್ರವಾದ ಕೆಳಹೊಟ್ಟೆ ನೋವು ಉಂಟಾಗುತ್ತಿತ್ತು. ಇದೀಗ ಸೂಜಿಯನ್ನು ಹೊರತೆಗೆಯಲು ಮಹಿಳೆಗೆ ಇನ್ನೊಂದು ಸರ್ಜರಿ ಮಾಡಬೇಕು. ಆದರೆ ದೇಹದಲ್ಲಿ ಸೂಜಿ ಅತ್ತಿತ್ತ ಹೋಗುತ್ತಿದ್ದ ಕಾರಣ ಸರ್ಜರಿ ವಿಳಂಬವಾಗಿದೆ ಎನ್ನಲಾಗಿದೆ.

ಮಹಿಳೆ ತಿಂಗಳಿಗೆ ನಾಲ್ಕು ಬಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ವೈದ್ಯಕೀಯ ವಿಮೆಯು ಆಕೆಯ ಹೆಚ್ಚಿನ ಚಿಕಿತ್ಸೆಯನ್ನು ಒಳಗೊಂಡಿರುತ್ತದೆಯಾದರೂ, ಸಾರಿಗೆ ವೆಚ್ಚಗಳು ಆರ್ಥಕವಾಗಿ ಆಕೆಯ ಮೇಲೆ ಹೊರೆಯಾಗಿದೆ. ಇನ್ನು ಸೂಜಿಯನ್ನು ಯಾವಾಗ ಹೊರತೆಗೆಯಲಾಗುತ್ತದೆ ಎನ್ನುವುದು ಇನ್ನು ಕೂಡಾ ನಿಶ್ಚಯವಾಗಿಲ್ಲ. ಈ ಕುರಿತು ಆಸ್ಪತ್ರೆ ಯಾವುದೇ ಪ್ರತಿಕ್ರಿಯೆಯೂ ನೀಡದ ಕಾರಣ, ಕಾನೂನು ಕ್ರಮ, ಪರಿಹಾರವೇನಾದರೂ ದೊರಕುತ್ತದೆಯೇ ಎಂಬುವುದೂ ತಿಳಿಯದೆ ಕುಟುಂಬ ಕಂಗಲಾಗಿದೆ.

Continue Reading

LATEST NEWS

Trending

Exit mobile version