Home ಕರ್ನಾಟಕ ವಾರ್ತೆ ಪಾಕ್​ ಪರ ಘೋಷಣೆ ವಿವಾದ: ಆರೋಪಿ ಅಮೂಲ್ಯಾಳನ್ನು 4 ದಿನ ಪೊಲೀಸ್ ವಶಕ್ಕೆ ನೀಡಿದ ಕೋರ್ಟ್​

ಪಾಕ್​ ಪರ ಘೋಷಣೆ ವಿವಾದ: ಆರೋಪಿ ಅಮೂಲ್ಯಾಳನ್ನು 4 ದಿನ ಪೊಲೀಸ್ ವಶಕ್ಕೆ ನೀಡಿದ ಕೋರ್ಟ್​

ಪಾಕ್​ ಪರ ಘೋಷಣೆ ವಿವಾದ: ಆರೋಪಿ ಅಮೂಲ್ಯಾಳನ್ನು 4 ದಿನ ಪೊಲೀಸ್ ವಶಕ್ಕೆ ನೀಡಿದ ಕೋರ್ಟ್​

ಬೆಂಗಳೂರು: ಇತ್ತೀಚೆಗೆ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಪಾಕ್​ ಪರವಾಗಿ ಘೋಷಣೆ ಕೂಗಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. 19 ವರ್ಷದ ಅಮೂಲ್ಯಳನ್ನು ಕೂಡಲೇ ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು, ರಾತ್ರೋರಾತ್ರಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.

ಆಕೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಈ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು 4 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.ಮಂಗಳವಾರ ಸಂಜೆ ಪರಪ್ಪನ ಅಗ್ರಹಾರದಿಂದ ಕರೆದುಕೊಂಡು ವೈದ್ಯಕೀಯ ತಪಾಸಣೆ ನಡೆಸಿ, ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಯಿತು. ಆಕೆಯನ್ನು ಪೊಲೀಸ್ ವಶಕ್ಕೆ ನೀಡಿದ ನಂತರ ಬಸವೇಶ್ವರನಗರ ಠಾಣೆಗೆ ಕರೆದೊಯ್ದು ಅಮೂಲ್ಯಳನ್ನು ಅಲ್ಲಿಯೇ ವಿಚಾರಣೆ ನಡೆಸಲಾಯಿತು.

ಹೀಗಾಗಿ, ಬಸವೇಶ್ವರನಗರ ಪೊಲೀಸ್ ಠಾಣೆ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. 1 ಕೆಎಸ್​ಆರ್​ಪಿ ತುಕಡಿ, ಬೇರೆ ಠಾಣೆ ಮಹಿಳಾ ಪೊಲೀಸರ ನಿಯೋಜನೆ ಮಾಡಲಾಗಿತ್ತು.

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...