Friday, August 19, 2022

ಕೊರೊನಾದಿಂದ ಗುಣಮುಖವಾದ ಮಹಿಳೆಗೆ ಮತ್ತೆ ʼಬಿಗ್ ಶಾಕ್ʼನೀಡಿದ ಕೋವಿಡ್ 19..!

ಕೊರೊನಾದಿಂದ ಗುಣಮುಖವಾದ ಮಹಿಳೆಗೆ ಮತ್ತೆ ʼಬಿಗ್ ಶಾಕ್ʼನೀಡಿದ ಕೋವಿಡ್ 19..!

ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾದಿಂದ ಗುಣಮುಖವಾಗಿದ್ದ ಮಹಿಳೆಗೆ ಒಂದು ತಿಂಗಳ ನಂತರ ಮತ್ತೆ ಪಾಸಿಟಿವ್ ವರದಿ ಬಂದಿದೆ. ನಗರದ 27 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಕಳೆದ ಜುಲೈ ತಿಂಗಳಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಕ್ವಾರಂಟೈನ್, ಐಸೋಲೇಷನ್ ನಲ್ಲಿದ್ದು, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದ ಪರಿಣಾಮ ಸೋಂಕಿನಿಂದ ಮುಕ್ತರಾಗಿದ್ದರು. ಸಂಪೂರ್ಣವಾಗಿ ಕೊವಿಡ್ 19 ನೆಗಟಿವ್ ಎಂದು ವರದಿ ಬಂದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಆದರೆ, ಇದಾದ ಕೇವಲ ಒಂದು ತಿಂಗಳಿನಲ್ಲೇ ಮತ್ತೆ ಕೊವಿಡ್ 19 ರೋಗ ಲಕ್ಷಣಗಳು ಕಾಣಿಸಿಕೊಳ್ಳತೊಡಗಿವೆ. ಇದರಿಂದ ಗಾಬರಿಗೊಂಡ ಮಹಿಳೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಇದೀಗ ಸೋಂಕಿನಿಂದ ಗುಣಮುಖರಾದವರಿಗೂ ಮತ್ತೆ ಸೋಂಕು ಕಾಣಿಸಿಕೊಳ್ಳಲಿದೆ ಎಂಬುದು ಈ ಪ್ರಕರಣದಿಂದ ದೃಢಪಟ್ಟಿದೆ. ಇದು ಮೊದಲ ಅಧಿಕೃತ ಕೇಸ್ ಎಂದು ಫೋರ್ಟಿಸ್ ಆಸ್ಪತ್ರೆ ವರದಿ ಮಾಡಿದೆ.

ಆಗಸ್ಟ್ 24 ರಂದು ಹಾಂಕಾಂಗ್ ನಲ್ಲಿ ವಿಶ್ವದ ಮೊದಲ ಈ ರೀತಿ ಪ್ರಕರಣ ಕಂಡುಬಂದಿದೆ. ತೆಲಂಗಾಣ ಆರೋಗ್ಯ ಸಚಿವ ಇಟಾಲಾ ರಾಜೇಂದರ್ ರಾಜ್ಯದಲ್ಲಿ ಇಬ್ಬರಿಗೆ ಕೊರೋನಾವೈರಸ್ ಎರಡು ಸಲ ಬಂದಿವೆ ಎಂದು ಹೇಳಿದ್ದಾರೆ.

ಮುಂಬೈನ ವೈದ್ಯರೊಬ್ಬರಿಗೆ ಎರಡು ತಿಂಗಳ ಅಂತರದ ನಂತರ ಎರಡನೇ ಸಲ ಕೊರೋನಾ ಪಾಸಿಟಿವ್ ಬಂದಿದೆ. ರೋಗನಿರೋಧಕ ಶಕ್ತಿ ಕಡಿಮೆಯಾದಂತೆ ಕೊರೊನಾ ಪಾಸಿಟಿವ್ ಬಂದಿರಬಹುದೆಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here

Hot Topics

ಜಿಲ್ಲೆಯಾದ್ಯಂತ ಅನಧಿಕೃತ ಫ್ಲೆಕ್ಸ್, ಅಕ್ರಮ ಮರಳುಗಾರಿಕೆ ತಡೆಗೆ ಡಿಸಿ ಖಡಕ್ ಆರ್ಡರ್

ಮಂಗಳೂರು: ಅಕ್ರಮ ಮರಳು ಸಾಗಾಣಿಕೆ ತಡೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪೊಲೀಸರೊಂದಿಗೆ ತಂಡವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದರು.ಅವರು ಆ.19ರ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಕ್ರಮ...

E-Court ಸೇವೆಯಲ್ಲಿ ತಾಂತ್ರಿಕ ವ್ಯತ್ಯಯ: ಲೋಪ ಸರಿಪಡಿಸಲು ಮಂಗಳೂರು ವಕೀಲರ ಸಂಘ ಮನವಿ

ಮಂಗಳೂರು: ಕಳೆದ ಸುಮಾರು 3-4 ವಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಕೋರ್ಟ್ ಸೇವೆ ವ್ಯತ್ಯಯ ಉಂಟಾಗಿದೆ. ಈ ಸಮಸ್ಯೆಯಿಂದ ಸಾವಿರಾರು ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಅಡ್ಡಿಯಾಗಿದೆ. ಆದ್ದರಿಂದ ಕೇಂದ್ರ...

“ಹಿಂದೂಗಳು ಸತ್ರೆ BJPಗೆ ಓಟು ಬರುತ್ತದೆ-ಅಲ್ಪಸಂಖ್ಯಾತರು ಸತ್ತರೆ ಓಟ್ ಸಿಗಲ್ಲ”

ಮಂಗಳೂರು: ಬಿಜೆಪಿಗರಿಗೆ ಹಿಂದೂಗಳು ಸತ್ತರೆ ಅದ್ರಲ್ಲೂ ಬಿಲ್ಲವರು ಸತ್ತರೆ ಮಾತ್ರ ಓಟು ಬರುತ್ತದೆ. ಅಲ್ಪಸಂಖ್ಯಾತರು ಸತ್ತರೆ ಓಟು ಬರೋದಿಲ್ಲ. ಅದಕ್ಕಾಗಿ ಹರೀಶ್ ಪೂಜಾರಿಯವರ ಹತ್ಯೆಯಾಯ್ತು. ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮರಸ್ಯವನ್ನು ಬಯಸುವ ಪಕ್ಷ....