Tuesday, August 16, 2022

ಬೆಳ್ತಂಗಡಿ: ಆಸ್ತಿ ವಿವಾದಕ್ಕೆ ಕತ್ತಿಯಿಂದ ಕಡಿದು ಕೊಲೆ- ಓರ್ವನ ಬಂಧನ

ಬೆಳ್ತಂಗಡಿ: ಆಸ್ತಿ ವಿವಾದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಕತ್ತಿಯಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ.

ಜಯಚಂದ್ರ ಬಂಧಿತ ಆರೋಪಿ.  ಸಾಂತಪ್ಪಗೌಡ ಮೃತ ದುರ್ದೈವಿ

ಘಟನೆ ಹಿನ್ನೆಲೆ
ಸಾಂತಪ್ಪ ಗೌಡನು ಜೀವ ವಿಮಾವೊಂದರಲ್ಲಿ ಏಜೆಂಟ್‌ ಕೆಲಸ ಮಾಡಿಕೊಂಡಿದ್ದನು. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಾಂತಪ್ಪ ಗೌಡ ಕರ್ತವ್ಯಕ್ಕೆ ಮನೆಯಿಂದ ಹೊರಟು ಹೋಗುತ್ತಿದ್ದರು.

ಈ ವೇಳೆ ನೆರೆ ಮನೆಯ ಸಂಬಂಧಿ ಜಯಚಂದ್ರ ಎಂಬಾತನು ರಸ್ತೆಬದಿಯಲ್ಲಿ ಕೆಲಸದಾಳುಗಳೊಂದಿಗೆ ಬಲ್ಲೆ ತೆಗೆಯುತ್ತಿರುವ ಸಮಯ ಸಾಂತಪ್ಪನು ಜಯಚಂದ್ರರಲ್ಲಿ ರಸ್ತೆ ಬದಿಯಲ್ಲಿರುವ ಬಲ್ಲೆಯನ್ನು ಏಕೆ ತೆಗೆಯುತ್ತೀರಿ ಎಂದು ಪ್ರಶ್ನಿಸಿದ್ದಾರೆ.


ಈ ವೇಳೆ ಜಯಚಂದ್ರನು ಅವಾಚ್ಯ ಶಬ್ದಗಳಿಂದ ಬೈದು ನೀನು ಯಾರು? ಕೇಳಿ ಕೈಯಲ್ಲಿದ್ದ ಕತ್ತಿಯಿಂದ ಏಕಾಎಕಿ ಎಡ ಬದಿಯ ಕೆನ್ನೆಗೆ ಹಾಗೂ ಹಿಂಬದಿಯ ಕುತ್ತಿಗೆಯನ್ನು ಜಯಚಂದ್ರ ಕಡಿದಿದ್ದಾನೆ. ಕತ್ತಿಯ ಏಟಿಗೆ ತೀವ್ರ ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ.

ಇದನ್ನು ನೋಡಿದ ಆರೋಪಿ ಜಯಚಂದ್ರ ಓಡಿ ತಪ್ಪಿಸಿಕೊಂಡಿದ್ದಾನೆ. ಸಾಂತಪ್ಪ ಗೌಡ ಹಾಗೂ ಜಯಚಂದ್ರನ ಮನೆಯವರಿಗೂ ಜಮೀನು ವಿಚಾರದಲ್ಲಿ ಸುಮಾರು ವರ್ಷಗಳಿಂದ ತಕರಾರು ಇದ್ದು

ಅದೇ ವಿಚಾರದಲ್ಲಿ ಜಯಚಂದ್ರನು ಸಾಂತಪ್ಪನನ್ನು ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here

Hot Topics

ಅಬ್ಬಕ್ಕನ ನಾಡಿನಲ್ಲಿ ಅತೀ ಎತ್ತರದಲ್ಲಿ ಶಾಶ್ವತವಾಗಿ ಅರಳಿದ ತಿರಂಗಾ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರು ಹೊರವಲಯದ ಅತ್ಯಂತ ಎತ್ತರ ಧ್ವಜಸ್ತಂಭದಲ್ಲಿ ಇಂದು ಬೃಹತ್ ರಾಷ್ಟ್ರ ಧ್ವಜಾರೋಹಣ ನೆರವೇರಿತು.ತೊಕ್ಕೊಟ್ಟುವಿನ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಂಡ 110 ಅಡಿ ಎತ್ತರದ ಧ್ವಜ ಸ್ಥಂಭದಲ್ಲಿ ಧ್ವಜಾರೋಹಣ...

ಕಡಬ: ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕ ಕುಸಿದು ಬಿದ್ದು ಸಾವು

ಕಡಬ: ತಾಲೂಕಿನ ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆಸ್ಟೇಷನ್ ಅಮೃತ ಸರೋವರದ ಬಳಿ ನಡೆದ ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕರೋರ್ವರು ಕುಸಿದು ಬಿದ್ದು ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ನಡೆದಿದೆ.ಧ್ವಜಾರೋಹಣವನ್ನು...

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ ಸಾಬೀತು- ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಮಂಗಳೂರಿನ ಸುಧಾಕರ ಪೂಜಾರಿ ಎಂಬಾತನಿಗೆ 7 ವರ್ಷ ಕಠಿಣ...