ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮುಂಡಾಜೆ ಸಮೀಪ ನಡೆದಿದೆ.
ಬೆಳ್ತಂಗಡಿ: ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮುಂಡಾಜೆ ಸಮೀಪ ನಡೆದಿದೆ.
ತಾಲೂಕಿನ ಕಾಜೂರಿನಲ್ಲಿ ನಡೆಯುತ್ತಿದ್ದ ಉರೂಸ್ ಕಾರ್ಯಕ್ರಮಕ್ಕೆ ಕಕ್ಕಿಂಜೆಯಿಂದ ಆಟೋ ರಿಕ್ಷಾದಲ್ಲಿ ಫೆ 3ರಂದು ರಾತ್ರಿ ತೆರಳುತ್ತಿದ್ದಾಗ ಮುಂಡಾಜೆ ಕಾಪು ಚಡಾವಿನಲ್ಲಿ ನಿಯಂತ್ರಣ ತಪ್ಪಿದ ರಿಕ್ಷಾ ಮೃತ್ಯುಂಜಯ ನದಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.
ಪರಿಣಾಮ ಅದರಲ್ಲಿದ್ದ ಕಕ್ಕಿಂಜೆ ಕತ್ತರಿಗುಡ್ಡೆಯ ಸಫೀಯ(57) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.