ಬೆಳ್ತಂಗಡಿ: ಹಳೆ ಅಡಕೆ ಮರ ಕಡಿಯುತ್ತಿರುವಾಗ ಆಕಸ್ಮಿಕವಾಗಿ ವೃದ್ಧನ ತಲೆ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಇಂದಬೆಟ್ಟುವಿನಲ್ಲಿ ನಡೆದಿದೆ.
ಮುಂಡಾಜೆ ಗ್ರಾಮದ ಮಂಜು ಶ್ರೀ ನಗರದ ಕುಂಟಾಲಪಲ್ಕೆ ನಿವಾಸಿ ಅಣ್ಣು ನಾಲ್ಕೆ(66) ಮೃತ ದುರ್ದೈವಿ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಅಂಕೊತ್ಯಾರು ನಿವಾಸಿ ನವೀನ್ ಎಂಬವರ ಮನೆಯ ತೋಟದಲ್ಲಿ ಹಳೆ ಅಡಕೆ ಮರ ಕಡಿಯಲು ಮುಂಡಾಜೆಯ ನೌಫಾಲ್ ಎಂಬವರಿಗೆ ಕಾಂಟ್ರಾಕ್ಟ್ ನೀಡಿದ್ದರು.
ಅದರಂತೆ ಇಂದು ಬೆಳಗ್ಗೆ ಸುಮಾರು 10:30 ಕ್ಕೆ ಅಡಕೆ ಮರ ಕಡಿಯುತ್ತಿದ್ದಾಗ ಗಾಯಗೊಂಡಿದ್ದು ತಕ್ಷಣ ಕೆಲಸಗಾರರು ಸೇರಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಿಸದೆ ಅಣ್ಣು ನಾಲ್ಕೆ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಗ ಅನಂತ ಮುಂಡಾಜೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.