Connect with us

    LATEST NEWS

    ಕಣ್ಣಿನ ಆಪರೇಷನ್​ಗೆ ವರದಾನವಾದ ಗೃಹಲಕ್ಷ್ಮಿ ಹಣ

    Published

    on

    ಬೆಳಗಾವಿ: ಕರ್ನಾಟಕ ಕಾಂಗ್ರೆಸ್​ ಸರ್ಕಾರದ ಗೃಹಲಕ್ಷ್ಮಿ ಹಣದಿಂದ ಮಹಿಳೆಯೊಬ್ಬರು ಪತಿಯ ಕಣ್ಣಿನ ಆಪರೇಷನ್​ ಮಾಡಿಸಿದ್ದಾರೆ.

    ಬೆಳಗಾವಿಯ ಅನಗೋಳ ನಗರದಲ್ಲಿ ಅನಿತಾ ಮತ್ತು ಚಂದ್ರಶೇಖರ್ ಬಡಿಗೇರ ​ದಂಪತಿ ವಾಸವಾಗಿದ್ದಾರೆ. ಅನಿತಾ ಪತಿ ಚಂದ್ರಶೇಖರ್​ ಅವರಿಗೆ ದೃಷ್ಟಿ ದೋಷದ ಸಮಸ್ಯೆ ಕಾಡುತ್ತಿತ್ತು. ಆಪರೇಷನ್​ ಮಾಡಿಸಲು ನಿರ್ಧರಿಸಿದರು. ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಅನಿತಾ ಕೂಡಿಟ್ಟಿದ್ದರು.

    ಗೃಹಲಕ್ಷ್ಮಿಯಿಂದ ಬಂದ 18 ಸಾವಿರ ರೂ. ಮತ್ತು ತನ್ನ ಬಳಿ ಇದ್ದ 10 ಸಾವಿರ ಹಣ ಸೇರಿಸಿ ಪತಿ ಚಂದ್ರಶೇಖರ್​ ಅವರ ಕಣ್ಣಿನ ಆಪರೇಷನ್​ ಮಾಡಿಸಿದ್ದಾರೆ. ಆಪರೇಷನ್​ ಸಕ್ಸಸ್​ ಆಗಿದೆ. ಪತಿಯ ಕಣ್ಣಿನ ಆಪರೇಷನ್​ಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದಕ್ಕೆ ದಂಪತಿಗಳು ವಿಡಿಯೋ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    LATEST NEWS

    ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದ ಮೋದಿ

    Published

    on

    ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಅವರು, ದಾಖಲೆಯ 29 ಪದಕಗಳನ್ನು ಗೆದ್ದ‌ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಶ್ಲಾಘಿಸಿದರು.

    ಜೂಡೋದಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್ ಅವರು ಪ್ರಧಾನಿ ಮೋದಿಗೆ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪ್ರಧಾನಿ ಮೋದಿ ಕಪಿಲ್‌ಗೆ ಆಟೋಗ್ರಾಫ್‌ನ್ನು ಸಹ ನೀಡಿದರು. ಇದೇ ವೇಳೆ ಅವನಿ ಲೆಖರಾ ಅವರು ಪ್ರಧಾನಿ ಮೋದಿಯವರಿಗೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅಲ್ಲದೇ ಪ್ರಧಾನಿ ಮೋದಿಯವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

    ಮಂಗಳವಾರ ದೇಶಕ್ಕೆ ಮರಳಿದ್ದ ಭಾರತೀಯ ಅಥ್ಲೀಟ್‌ಗಳು, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಸೇರಿದಂತೆ 29 ಪದಕಗಳನ್ನು ಗೆದ್ದಿದೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ 19 ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿದಿದೆ. ಈ ಸಾಧನೆಯ ಮೂಲಕ ಪದಕ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದ್ದ ಭಾರತ 18 ನೇ ಸ್ಥಾನಕ್ಕೆ ಏರಿದೆ. ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್‌ಗೆ ತೆರಳಿತ್ತು.

    ಕ್ರೀಡಾಪಟುಗಳ ಜೊತೆ ಮೋದಿ ಮಾತುಕತೆ ನಡೆಸಿದ ವೇಳೆ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪಿಸಿಐ ಅಧ್ಯಕ್ಷ ದೇವೇಂದ್ರ ಜಜಾರಿಯಾ ಇದ್ದರು.

    Continue Reading

    LATEST NEWS

    ಸಿಜೆಐ ಮನೆಯಲ್ಲಿ ಗಣಪತಿ ಪೂಜೆಯಲ್ಲಿ ಪ್ರಧಾನಿ ಮೋದಿ- ಸಂಜಯ್‌ ರಾವತ್‌ ಆಕ್ಷೇಪ

    Published

    on

    ನವದೆಹಲಿ: ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದಕ್ಕೆ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ನಾಯಕ ಸಂಜಯ್‌ ರಾವತ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಗಣೇಶೋತ್ಸವ ಸಮಯದಲ್ಲಿ ಸಿಜೆಐ ನಿವಾಸಕ್ಕೆ ಆಗಮಿಸಿದ ಮೋದಿ ಗಣಪತಿಗೆ ಆರತಿ ಎತ್ತಿದ್ದರು. ಈ ವಿಚಾರವನ್ನು ರಾವತ್‌ ಪ್ರಸ್ತಾಪ ಮಾಡಿ ಹಲವು ಪ್ರಶ್ನೆ ಎತ್ತಿದ್ದಾರೆ. ಗಣಪತಿ ಹಬ್ಬ ನಡೆಯುತ್ತಿದೆ, ಜನರು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ. ಪ್ರಧಾನಿ ಇದುವರೆಗೆ ಎಷ್ಟು ಮನೆಗಳಿಗೆ ಭೇಟಿ ನೀಡಿದ್ದಾರೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ. ಆದರೆ ಪ್ರಧಾನಮಂತ್ರಿಯವರು ಸಿಜೆಐ ಮನೆಗೆ ತೆರಳಿ ಆರತಿ ಬೆಳಗಿದ್ದಾರೆ ಎಂದು ಟೀಕಿಸಿದ್ದಾರೆ.

    ಸಂವಿಧಾನದ ಪಾಲಕರು ರಾಜಕಾರಣಿಗಳನ್ನು ಭೇಟಿ ಮಾಡಿದರೆ, ಅದು ಜನರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಮ್ಮ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಪ್ರತಿವಾದಿಯಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದಿಂದ ದೂರವಿರಬೇಕು. ಪ್ರಕರಣದ ಪ್ರತಿವಾದಿಯ ಜೊತೆ ಅವರ ನಂಟು ಬಹಿರಂಗವಾಗಿ ಕಾಣುತ್ತಿದೆ. ಪ್ರಕರಣದಲ್ಲಿ ನಮಗೆ ಸಿಜೆಐ ನ್ಯಾಯ ನೀಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಸಂಜಯ್‌ ರಾವತ್‌ ಕೇಳಿದ್ದಾರೆ.

    Continue Reading

    LATEST NEWS

    ಕಮ್ಯುನಿಸ್ಟ್‌ ನಾಯಕ ಸಿತಾರಾಮ್‌ ಯೆಚೂರಿ ಇನ್ನಿಲ್ಲ..!

    Published

    on

    ನವದೆಹಲಿ : ಕಮ್ಯುನಿಸ್ಟ್‌ ನಾಯಕ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಅಲ್ಪಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದ್ದಾರೆ. 72 ವರ್ಷ ವಯಸ್ಸಾಗಿದ್ದ ಯೆಚೂರಿ ಅವರು ಉಸಿರಾಟದ ತೊಂದರೆಗಾಗಿ ಆಗಸ್ಟ್‌ 19 ರಂದು ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಎರಡು ದಿನಗಳಿಂದ ಶ್ವಾಸಕೋಶದ ಸೋಂಕು ಉಲ್ಭಣವಾಗಿದ್ದು ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.


    1952 ರಲ್ಲಿ ಚೆನೈನಲ್ಲಿ ಜನಿಸಿದ್ದ ಇವರು ಶಾಲಾ ಶಿಕ್ಷಣವನ್ನು ಹೈದರಾಬಾದ್‌ನಲ್ಲಿ ಪೂರೈಸಿದ್ದರು. 1969 ರಲ್ಲಿ ತೆಲಂಗಾಣ ಪ್ರತ್ಯೇಕತಾ ಹೋರಾಟ ಆರಂಭವಾದ ಬಳಿಕ ದೆಹಲಿಗೆ ತೆರಳಿದ್ದ ಯೆಚೂರಿ ದೆಹಲಿಯ ಜೆಎನ್‌ಯುನಲ್ಲಿ ಎಂಎ ಪದವಿ ಮುಗಿಸಿದ್ದರು. ಪಿಹೆಚ್‌ಡಿ ಆರಂಭಿಸಿದ್ದರಾದ್ರೂ ತುರ್ತು ಪರಿಸ್ಥಿತಿಯ ಕಾರಣದಿಂದ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. 1970 ರಿಂದ ಜೆಎನ್‌ಯುನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಮೂರು ಭಾರಿ ಆಯ್ಕೆಯಾಗಿದ್ದರು. ಬಳಿಕ 1984 ರಲ್ಲಿ ಸಿಪಿಐಎಂನ ಕೇಂದ್ರ ಸಮಿತಿಗೆ ಆಯ್ಕೆಯಾಗಿ ಪಕ್ಷದಲ್ಲಿ ಇದುವರೆಗೂ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ.

    Continue Reading

    LATEST NEWS

    Trending