Connect with us

    DAKSHINA KANNADA

    ಗೋ*ಮಾಂಸ ಸಾಗಾಟ ; ಗುರುಪುರ ಕೈಕಂಬ ಬಳಿ ಬಜರಂಗದಳದ ಕಾರ್ಯಾಚರಣೆ

    Published

    on

    ಮಂಗಳೂರು : ಇಬ್ಬರು ಅನ್ಯಕೋಮಿಯರು ದನವನ್ನು ಕದ್ದು, ಕ*ತ್ತರಿಸಿ, ಮಾಂ*ಸ ಮಾಡಿ, ಮಾರಾಟ ಮಾಡಲು ಸಾಗಿದುತ್ತಿದ್ದ ವೇಳೆ, ಗೋ*ಮಾಂಸ ಸಹಿತ ಬಜರಂಗದಳ ಕಾರ್ಯಕರ್ತರು ಆರೋಪಿಗಳನ್ನು ತಡೆದು ಬಜಪೆ ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುಪುರ ಕೈಕಂಬದ ವಿಕಾಸ್ ನಗರದಲ್ಲಿ ಇಂದು (ಡಿ.26) ಮುಂಜಾನೆ ನಡೆದಿದೆ.

    ಆರೋಪಿಗಳು ಟೆಂಪೋ ವಾಹನದಲ್ಲಿ ಗೋ*ಮಾಂ*ಸವನ್ನು ತುಂಬಿಸಿ ಸಾಗಾಟ ಮಾಡುತ್ತಿರುವ ವಿಚಾರ ತಿಳಿದ ಸ್ಥಳೀಯ ಬಜರಂಗದಳ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಬಜಪೆ ಪೊಲೀಸರು ವಾಹನ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರು ಗೋ*ಮಾಂ*ಸವನ್ನು ಮಾಂ*ಸದ ಅಂಗಡಿಗಳಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದರು ಎಂದು ತಿಳಿದು ಬಂದಿದೆ.

     

    ಇದನ್ನೂ ಓದಿ : ಕಡಬ : ಮೇಯುತ್ತಿದ್ದ ದನದ ಕಾಲು ಕ*ಡಿದ ಪಾ*ಪಿ

     

    ಆರೋಪಿಗಳಲ್ಲಿ ವಾಹನ ಚಾಲಕನನ್ನು ಕುಪ್ಪೆಪದವು ಅಂದೇಲ್ ನಿವಾಸಿ ಅಜೀಜ್ ಎಂದು ಈತ ಹಿಂದೆಯೂ ಹಲವು ಪ್ರಕರಣಗಳ ಆರೋಪಿ. ಸದ್ಯ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸಲಿದ್ದಾರೆ.

    DAKSHINA KANNADA

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..!

    Published

    on

    ಮಂಗಳೂರು:ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ಡಿ.26 ರ ರಾತ್ರಿ  ವಿಧಿವಶರಾಗಿದ್ದಾರೆ. ರಾತ್ರಿ 8 ಗಂಟೆಗೆ ಏಮ್ಸ್ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್ ಅವರು ರಾತ್ರಿ 9.30 ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. 2004 ರಿಂದ 2014 ರ ವರೆಗೆ ಎರಡು ಅವಧಿಗೆ ದೇಶದ ಮೊದಲ ಸಿಕ್ ಪ್ರಧಾನಿಯಾಗಿದ್ದರು. ನೆಹರು ಇಂದಿರಾ ಗಾಂಧಿ ಮತ್ತು ಮೋದಿ ಬಳಿಕ ಹೆಚ್ಚು ಕಾಲ ದೇಶದ ಪ್ರಧಾನಿಯಾಗಿದ್ದ ಹೆಗ್ಗಳಿಕೆ ಇವರದು.

    1932 ರ ಸೆಪ್ಟಂಬರ್ 26 ರಲ್ಲಿ ಪಶ್ಚಿಮ ಪಂಜಾಬ್ ನಲ್ಲಿ ಜನಿಸಿದ್ದ ಮನಮೋಹನ್ ಸಿಂಗ್
    ಅಮೃತಸರ ಹಿಂದೂ ಕಾಲೇಜಿನಲ್ಲಿ ಅದ್ಯಯನ ಮಾಡಿದ್ದು ಉನ್ನತ ವ್ಯಾಸಂಗವನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಟ್ರೈಪೋಸ್ ಪೂರ್ಣ ಮಾಡಿದ್ದರು.

    ಖ್ಯಾತ ಅರ್ಥ ಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ ಮನಮೋಹನ್ ಸಿಂಗ್ ಆರ್ಥಿಕ ಕ್ರಾಂತಿಯನ್ನು ದೇಶದಲ್ಲಿ ಮಾಡಿದ್ದರು. ದೇಶದ ಪ್ರಧಾನಿಯಾಗುವ ಮೊದಲು ಹಲವು ದೇಶಗಳ ಆರ್ಥಿಕ ಸಲಹೆಗಾರರಾಗಿ ಆ ದೇಶಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ್ದರು.
    ಮಿತಭಾಷಿಯಾಗಿದ್ದ ಅವರು ತಮ್ಮ ಕೆಲಸದ ಮೂಲಕವೇ ಎಲ್ಲದಕ್ಕೂ ಉತ್ತರ ನೀಡುತ್ತಿದ್ದರು.

    ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ದೇಶದ ಜಿಡಿಪಿ ಶೇಖಡಾ9 ರಲ್ಲಿ ಇದ್ದು ಅಭಿವೃದ್ಧಿಶೀಲ ದೇಶಗಳ ಸಾಲಿನಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದ್ದರು.

    ಮಾಜಿ ಪ್ರಧಾನಿ ಅಗಲುವಿಕೆಯ ಸುದ್ದಿ ಕೇಳಿ ಸೋನಿಯಾ ಗಾಂಧಿ ಆದಿಯಾಗಿ ಕಾಂಗ್ರೆಸ್ ನಾಯಕರ ದಂಡು ಏಮ್ಸ್ ಆಸ್ಪತ್ರೆಗೆ ದಾವಿಸಿದ್ದಾರೆ. ಅಗಲಿದ ನಾಯಕನಿಗೆ ಪ್ರಧಾನಿ ಮೋದಿ ಸಹಿತ ಪ್ರಮುಖ ನಾಯಕರು ಶೃದ್ದಾಂಜಲಿ ಸಲ್ಲಿಸಿದ್ದಾರೆ.

    Continue Reading

    DAKSHINA KANNADA

    ಮೊದಲ ಬಾರಿಗೆ ತುಳು ಚಿತ್ರದಲ್ಲಿ ಕಾಣಿಸಲಿದ್ದಾರೆ ಬಹುಭಾಷಾ ನಟ ಸುಮನ್ ತಳವಾರ್

    Published

    on

    ಮಂಗಳೂರು : ತುಳು ಸಿನೆಮಾ ಒಂದಕ್ಕೆ ಬಹುಭಾಷ ನಟ ಸುಮನ್ ತಳವಾರ್ ಬಣ್ಣ ಹಚ್ಚಿದ್ದಾರೆ. ತುಳು ಸಹಿತ ಐದು ಭಾಷೆಯಲ್ಲಿ ಈ ಸಿನೆಮಾ ರಿಲೀಸ್ ಆಗಲಿದ್ದು, ಸುಮನ್ ತಳವಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆತ್ತರ ಕೆರೆ ಎಂಬ ಊರೊಂದರ ಸುತ್ತ ಹೆಣೆಯಲಾದ ಕಥೆ ಇದಾಗಿದ್ದು, ವಿಭಿನ್ನ ಚಿತ್ರಕಥೆಯನ್ನು ಈ ಸಿನೆಮಾ ಹೊಂದಿದೆ. ಮಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಸಿನೆಮಾದ ಚಿತ್ರೀಕರಣ ಭರದಿಂದ ಸಾಗಿದೆ.

     

    ಸಿನೆಮಾ ಇಂಡಸ್ಟ್ರೀಯಲ್ಲಿ 46 ವರ್ಷಗಳನ್ನು ಪೂರೈಸಿ 47 ನೇ ವರ್ಷಕ್ಕೆ ಕಾಲಿರಿಸಿರುವ ಸುಮನ್ ತಳವಾರ್ ಮೂಲತಃ ಮಂಗಳೂರಿನವರು. ಆದ್ರೆ ಇವರು ತೆಲುಗು ಚಿತ್ರರಂಗದಲ್ಲಿ ಸುಮಾರು 100 , ತಮಿಳಿನ 50 ಹಾಗೂ ಕನ್ನಡದ 25 ಸಿನೆಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ದೇಶದ ಹಲವು ಭಾಷೆಗಳ ಸಿನೆಮಾದಲ್ಲಿ ನಟಿಸಿ ಸುಮಾರು 700 ಕ್ಕೂ ಅಧಿಕ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ತುಳು ಸಿನೆಮಾ ಮಾಡಬೇಕು ಎಂಬ ಇವರ ಹಲವು ವರ್ಷದ ಆಸೆಗೆ ಇದೀಗ ಅವಕಾಶ ದೊರೆತಿದೆ. ಈ ಹಿಂದೆ ಅವಕಾಶ ಸಿಕ್ಕಿದ್ದರೂ ತನಗೊಪ್ಪುವ ಪಾತ್ರ ಸಿಗದ ಕಾರಣ ನಿರಾಕರಿಸಿದ್ದೆ” ಅಂತ ಸುಮನ್ ತಳವಾರ್ ಹೇಳಿದ್ದಾರೆ.

    ನೆತ್ತರ ಕೆರೆ ಎಂಬ ಸಿನೆಮಾದ ಕಥೆ ಹಾಗೂ ಅದರ ಪಾತ್ರ ಮತ್ತು ಸಿನೆಮಾ ತಂಡಕ್ಕೆ ಇರುವ ಬದ್ಧತೆಯನ್ನು ನೋಡಿ ಸಿನೆಮಾ ಒಪ್ಪಿಕೊಂಡಿದ್ದಾಗಿ ಸುಮನ್ ಹೇಳಿದ್ದಾರೆ. ಇದೊಂದು ತುಳು ಸಿನೆಮಾ ಆಗಿದ್ದು, ಈ ಸಿನೆಮವನ್ನು ಲಂಚುಲಾಲ್ ಅವರ ಅಸ್ತ್ರ ಗ್ರೂಪ್ ನಿರ್ಮಾಣ ಮಾಡುತ್ತಿದ್ದು, ಸ್ವರಾಜ್ ಶೆಟ್ಟಿ ಅವರ ನಿರ್ದೇಶನದಲ್ಲಿ ಈ ಸಿನೆಮಾ ಚಿತ್ರೀಕರಣ ನಡೆಯುತ್ತಿದೆ, ಮಂಗಳೂರು ಆಸುಪಾಸಿನಲ್ಲಿ ಈ ಸಿನೆಮಾ ಚಿತ್ರೀಕರಣ ನಡೆಯುತ್ತಿದ್ದು ಸದ್ಯು ಕೆಂಜಾರು ಗುತ್ತು ಮನೆಯಲ್ಲಿ ಚಿತ್ರಿಕರಣ ಭರದಿಂದ ಸಾಗಿದೆ. ಈ ಸಿನೆಮಾವನ್ನು ಐದು ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರ ತಂಡ ಯೋಜನೆ ರೂಪಿಸಿದೆ. ಕೇಂ

    Continue Reading

    DAKSHINA KANNADA

    ಹುಟ್ಟೂರಿನಲ್ಲಿ ಯೋಧನ ಅಂ*ತಿಮ ದರ್ಶನ; ಸರ್ಕಾರಿ ಗೌರವದೊಂದಿಗೆ ಅಂ*ತ್ಯಸಂಸ್ಕಾರ

    Published

    on

    ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರ ವಾಹನ ಕಣಿವೆಗೆ ಉರುಳಿ ಸಂಭವಿಸಿದ ಭೀ*ಕರ ಅ*ಪಘಾತದಲ್ಲಿ ಹು*ತಾತ್ಮರಾದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯ ಯೋಧ ಅನೂಪ್ ಪೂಜಾರಿ (33) ಪಾರ್ಥಿವ ಶರೀರವನ್ನು ವಿಮಾನ ಮೂಲಕ ಇಂದು (ಡಿ.26) ಮುಂಜಾನೆ ಮಂಗಳೂರಿಗೆ ತರಲಾಗಿದ್ದು, ಬಳಿಕ ಅದನ್ನು ಆಂಬುಲೆನ್ಸ್‌ ವಾಹನದಲ್ಲಿ ಉಡುಪಿ ಮೂಲಕ ಕುಂದಾಪುರಕ್ಕೆ ಕೊಂಡೊಯ್ಯಲಾಗಿದೆ.

     

    ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ವಿಮಾನ ನಿಲ್ದಾಣಕ್ಕೆ ಭೇಟಿ, ಸೇನಾ ವಿಮಾನದಿಂದ ಪಾ*ರ್ಥೀವ ಶ*ರೀರವನ್ನು ಹೊರಗೆ ತೆಗೆಯುವ ವೇಳೆ ಶ*ವ ಪಟ್ಟಿಗೆಗೆ ಹೆಗಲು ನೀಡಿದರು. ಮಾಜಿ ಯೋಧರೂ ಆಗಿರುವ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರೂ ಸೇನಾ ಸಿಬಂದಿಗಳಿಗೆ ಜತೆಯಾದರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜತೆಗಿದ್ದರು. ಬಳಿಕ ಅಂ*ತಿಮ ನಮನ ಸಲ್ಲಿಸಿದರು. ಇಂದು (ಡಿ.26) ಬೆಳಗ್ಗೆ 9ಕ್ಕೆ ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ತಂದು ಮನೆಯಲ್ಲಿ ಸಕಲ ವಿ*ಧಿ ವಿಧಾನಗಳನ್ನು ನೆರವೇರಿಸಿ, ಅಂ*ತಿಮ ಸಂ*ಸ್ಕಾರಕ್ಕೆ ಮೊದಲು ಬೀಜಾಡಿ ಪಡು ಶಾಲೆಯ ಆವರಣದಲ್ಲಿ ಪಾ*ರ್ಥಿವ ಶ*ರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಬೀಜಾಡಿ ಕಡಲ ಕಿನಾರೆಯ ಸರಕಾರಿ ಜಾಗದಲ್ಲಿ ಸರಕಾರದ ಗೌರವದೊಡನೆ ಅಂ*ತಿಮ ಸಂ*ಸ್ಕಾರ ನಡೆಸಲಾಗುವುದು.

     

    ಅನೂಪ್‌ ಪೂಜಾರಿ ಮೃ*ತಪಟ್ಟ ಸುದ್ದಿ ಹರಡುತ್ತಿದ್ದಂತೆ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಸಹಿತ ನೂರಾರು ಜನರು ಮೃ*ತರ ಮನೆಗೆ ತೆರಳಿ ನೊಂ*ದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪೆರ್ಡೂರು ಮುಳ್ಳುಗುಡ್ಡೆಯ ಮಂಜುಶ್ರೀಯನ್ನು ಮದುವೆಯಾಗಿದ್ದ ಅನೂಪ್‌ ಗೆ ಒಂದೂವರೆ ವರ್ಷದ ಇಶಾನಿ ಹೆಸರಿನ ಹೆಣ್ಣು ಮಗುವಿದೆ. ದೇಶಕ್ಕಾಗಿ ಯಾವ ತ್ಯಾ*ಗಕ್ಕೂ ಸಿದ್ದ ಎಂಬ ಸಿದ್ದಾಂತವನ್ನು ಹೊಂದಿದ್ದ ಅನೂಪ್‌ ಡಿಸೆಂಬರ್‌ನಲ್ಲಿ ರಜೆ ಪಡೆದು ಊರಿಗೆ ಬಂದು ಕೋಟೇಶ್ವರದ ಕೊಡಿಹಬ್ಬದಲ್ಲಿ ಪಾಲ್ಗೊಂಡು ಮಿತ್ರರೊಡನೆ ಸಮಯ ಕಳೆದಿದ್ದರು. ಸ್ನೇಹಮಯಿಯಾಗಿದ್ದ ಅನೂಪ್ ಬೀಜಾಡಿ, ಕೋಟೇಶ್ವರ ಪರಿಸರದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಕೊಡಿಹಬ್ಬಕ್ಕೆ ಬಂದವರು ಅದೇ ಸಂದರ್ಭ ಮಗಳ ಹುಟ್ಟುಹಬ್ಬವನ್ನು ಕೂಡ ಆಚರಿಸಿದ್ದರು.

    Continue Reading

    LATEST NEWS

    Trending