Saturday, July 2, 2022

ಕಡಿಮೆ ಮಾಂಸ ಕೊಟ್ಟದ್ದಕ್ಕೆ ಕುಪಿತನಾದವ  ಬೀಫ್ ಸ್ಟಾಲಿಗೆ ಬೆಂಕಿ : ಆರೋಪಿಯ ಬಂಧನ..!

ಕಡಿಮೆ ಮಾಂಸ ಕೊಟ್ಟದ್ದಕ್ಕೆ ಕುಪಿತನಾದವ  ಬೀಫ್ ಸ್ಟಾಲಿಗೆ ಬೆಂಕಿ; ಆರೋಪಿಯ ಬಂಧನ..!

ಮಂಗಳೂರು: ಉಳ್ಳಾಲ ನಗರಸಭೆಯ ಬೀಫ್‌ ಸ್ಟಾಲ್‌ಗಳಿಗೆ ಜನವರಿ 8ರಂದು ರಾತ್ರಿ ಬೆಂಕಿ ಹಚ್ಚಿದ , ರೋಪಿ ನಾಗರಾಜ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಈತ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿರುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಶಶಿಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರಕರಣವನ್ನು ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ  ಎಂದರು.

ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ, ಸಿಸಿಟಿವಿ ಫೂಟೇಜ್ ನಲ್ಲಿ  ದಾಖಲಾದ  ಕೃತ್ಯದ ಬಗ್ಗೆ ಮಾಹಿತಿ ಕಲೆ ಹಾಕಿ  ಈತನನ್ನು  ಬಂಧಿಸಲಾಗಿದೆ.

ಈತ  ತೊಕ್ಕೊಟ್ಟಿನ ವಿಠೋಭ ಭಜನಾ ಮಂದಿರದ ಬಳಿ ಬಾಡಿಗೆ ಮನೆಯಲ್ಲಿದ್ದು ಕೂಲಿ ಕೆಲಸ ಮಾಡುವಾತ. ಸ್ನೇಹಿತ ಲತೀಫ್ ಎಂಬಾತನ ಅಂಗಡಿಯಿಂದ ಮನೆಗೆ ಒಂದು ವಾರದಿಂದ  ಮಾಂಸ ಪಡೆದುಕೊಳ್ಳುತ್ತಿದ್ದ.

ಆದರೆ ಕಡಿಮೆ ಮಾಂಸ ಹಾಕಿ ಅವಮಾನ ಮಾಡಿದರು ಎನ್ನುವ ನೆಪದಲ್ಲಿ ಅದೇ ದಿನ ರಾತ್ರಿ ಮೂರು ಅಂಗಡಿಗಳಿಗೆ ಬೆಂಕಿ ಹಚ್ಚಿ ನಾಶ ಪಡಿಸಿದ್ದಾನೆ ಎಂದು ಕಮಿಷನರ್ ವಿವರಿಸಿದರು.

ಬೆಂಕಿ ಹಚ್ಚಿದ ಬಳಿಕ ಮನೆಗೆ ಬಂದು ತಾಯಿಗೂ ಈ ವಿಚಾರವನ್ನು ತಿಳಿಸಿದ್ದಾನೆ. ಈತನ ವಿರುದ್ಧ ಬೇರೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಕಮಿಷನರ್ ವಿವರಿಸಿದರು.

LEAVE A REPLY

Please enter your comment!
Please enter your name here

Hot Topics

ಮುಖ್ಯಮಂತ್ರಿಯಾಗುತ್ತಿದ್ದಂತೆ ಶಿಂಧೆ ಶಿವಸೇನೆಯಿಂದ ಉಚ್ಛಾಟನೆ

ಮುಂಬೈ: ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಿದ್ದಂತೆ ಅವರನ್ನು ಶಿವಸೇನೆ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.‘ನೀವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದೀರಿ ಮತ್ತು ಸ್ವಯಂಪ್ರೇರಣೆಯಿಂದ ಶಿವಸೇನೆಯ ಸದಸ್ಯತ್ವವನ್ನು ತ್ಯಜಿಸಿದ್ದೀರಿ.ಆದ್ದರಿಂದ, ಶಿವಸೇನಾ ಪಕ್ಷದ ಪ್ರಮುಖನಾಗಿ ನನಗೆ ನೀಡಲಾದ...

ಸುಳ್ಯ: ರಸ್ತೆ ಬದಿ ತ್ಯಾಜ್ಯ ಎಸೆದಿದ್ದ ವ್ಯಕ್ತಿಗೆ ದಂಡ ವಿಧಿಸಿ, ಆತನಿಂದಲೇ ಕಸ ತೆಗೆಸಿದ ಪಿಡಿಒ

ಸುಳ್ಯ: ರಸ್ತೆ ಬದಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದ ವ್ಯಕ್ತಿಗೆ 5 ಸಾವಿರ ದಂಡ ವಿಧಿಸಿ ಆತನಿಂದಲೇ ತ್ಯಾಜ್ಯ ತೆರವುಗೊಳಿಸಿದ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ...

ಇಲಾಖೆಯಿಂದ ನಿವೃತ್ತರಾದವರಿಗೆ ದ.ಕ ಎಸ್‌ಪಿಯಿಂದ ಬೀಳ್ಕೊಡುಗೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ನಿವೃತ್ತಿ ಹೊಂದಿದ ಇಬ್ಬರಿಗೆ ಮಂಗಳೂರಿನ ತನ್ನ ಕಚೇರಿಯಲ್ಲಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್ ಶುಭಕೋರಿದರು.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ಸಿ....