ಬಂಟ್ವಾಳ: ತಾಲೂಕಿನ ಸಜೀಪಮುನ್ನೂರಿನ ಗಾಂಧಿನಗರ ಕ್ರಾಸ್ ನಲ್ಲಿ ನಡೆದ ಸ್ಕೂಟರ್ ಅಪಘಾತದ ಸಂದರ್ಭದಲ್ಲಿ ದ್ವಿಚಕ್ರವಾಹನವೊಂದರಲ್ಲಿ ಅಕ್ರಮ ಗೋಮಾಂಸ ಸಾಗಾಟ ಪತ್ತೆಯಾಗಿದ್ದು, ಸವಾರನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜೀಪಮುನ್ನೂರು ದಾಸರಗುಡ್ಡೆ ನಿವಾಸಿ ಸ್ಕೂಟರ್ ಸವಾರೆ ಅನುರಾಧ ಕೆ. ಅವರು ಡಿ. 24ರಂದು ಬೆಳಗ್ಗೆ ಕೆಲಸಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಗಾಂಧಿನಗರ ಕ್ರಾಸ್ ಬಳಿ ಸಜೀಪ ಕಡೆಯಿಂದ ಆರೋಪಿ ಸವಾರ ಸ್ಕೂಟರನ್ನು ಅತಿ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅನುರಾಧ ಅವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದಾನೆ.
ಈ ವೇಳೆ ಎರಡೂ ಸ್ಕೂಟರಿನ ಸವಾರರು ಕೂಡ ರಸ್ತೆಗೆ ಬಿದ್ದು ಗಾಯವಾಗಿದ್ದು, ಆರೋಪಿಯ ಸ್ಕೂಟರಿನಿಂದ ಪ್ಲಾಸ್ಟಿಕ್ ನಲ್ಲಿ ಕಟ್ಟಿದ ಮಾಂಸದ ಕಟ್ಟುಗಳು ಕೂಡ ರಸ್ತೆಗೆ ಬಿದ್ದಿದೆ. ತಕ್ಷಣವೇ ಆರೋಪಿ ಪರಾರಿಯಾಗಿದ್ದು, ಆರೋಪಿಯ ಹೆಸರು ತಿಳಿದುಬಂದಿಲ್ಲ. ಆರೋಪಿ ಎಲ್ಲಿಯೋ ದನವನ್ನು ಹತ್ಯೆ ಮಾಡಿ ಮಾಂಸವನ್ನು ಮಾರಾಟ ಮಾಡುವುದಕ್ಕಾಗಿ ಸಜೀಪ ಕಡೆಯಿಂದ ಮೆಲ್ಕಾರ್ ಕಡೆಗೆ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದನು ಎಂದು ದೂರಿನಲ್ಲಿ ವಿವರಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓರಿಯೊ ಬಿಸ್ಕೆಟ್ ಎಂದರೆ ಮಕ್ಕಳು, ಹಿರಿಯರು ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. “ಇದು ತಿನ್ನಲು ರುಚಿಕರವಾಗಿದ್ದರೂ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ” ಎಂದು ಆರೋಗ್ಯ ತಜ್ಞರು ಎನ್ನುತ್ತಾರೆ. ಸಾಮಾನ್ಯವಾಗಿ 2 ರುಚಿಗಳಲ್ಲಿ ಇದು ಲಭ್ಯವಿದೆ. ಒಂದು ಹಾಲಿನ ಫ್ಲೇವರ್ ಮತ್ತು ಇನ್ನೊಂದು ಚಾಕೊಲೇಟ್ ಫ್ಲೇವರ್.
ಇದೀಗ ಒರಿಯೋ ಕುರಿತಾದ ವಿಷಯವೊಂದು ವೈರಲ್ ಆಗುತ್ತಿದ್ದು, ಎಲ್ಲರನ್ನೂ ಗಾಬರಿಗೊಳಿಸಿದೆ. ಓರಿಯೋ ಬಿಸ್ಕೆಟನ್ನು ಬೆಂ*ಕಿಗಾ*ಹುತಿ ಮಾಡಲಾಗುತ್ತದೆ. ಸುಮಾರು 30 ಸೆಕೆಂಡ್ ಬೆಂ*ಕಿ ಹಚ್ಚಿದರೂ ಅದು ಸು*ಡುವುದೇ ಇಲ್ಲ ಎಂಬ ಸ್ಫೋಟಕ ಮಾಹಿತಿ ಫುಲ್ ಸುದ್ದಿ ಮಾಡುತ್ತಿದೆ.
ಓರಿಯೋ ಬಿಸ್ಕೆಟನ್ನು ಸಕ್ಕರೆ, ಬಿಳುಪುಗೊಳಿಸದ ಹಿಟ್ಟು,ಕಾರ್ನ್ ಸಿರಪ್, ಕಬ್ಬಿಣ, ನಿಯಾಸಿನ್, ಥಯಾಮಿನ್ ಮೊನೊನೈಟ್ರೇಟ್, ಕಾರ್ನ್ ಆಯಿಲ್ , ರೈಬೋಫ್ಲಾವಿನ್, ಸೋಯಾಬೀನ್ ಕೋಕೋ, ಕ್ಯಾನೋಲಾ ಎಣ್ಣೆ , ಅಡಿಗೆ ಸೋಡಾ, ಉಪ್ಪು, ಸೋಯಾವನ್ನ ಲೆಸಿಥಿನ್ ಮತ್ತು ಚಾಕೊಲೇಟ್ ಕೃತಕ ಪರಿಮಳದಿಂದ ತಯಾರಿಸಲಾಗುತ್ತದೆ. ಆದ್ರೆ, ಇಂತಹ ಸಂಸ್ಕರಿಸಿದ ಬಿಸ್ಕತ್ತುಗಳನ್ನ ಮಕ್ಕಳಿಗೆ ತಿನ್ನಿಸಿದರೆ ಹಲವಾರು ಅ*ನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಒರಿಯೋ ಕ್ರೀಮ್ ಬಿಸ್ಕತ್ತುಗಳನ್ನು ಮಕ್ಕಳಿಗೆ ನೀಡಲೇಬಾರದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ವಿಟ್ಲ: ದೈವ ನರ್ತಕ ಶತಾಯುಷಿ ದೊಡ್ಡಬಾಬು ಪಂಡಿತ್(100) ಅಲ್ಪಕಾಲದ ಅ*ಸೌಖ್ಯದಿಂದ ನಿ*ಧನರಾಗಿದ್ದಾರೆ. ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಸುರುಳಿ ಮೂಲೆಯ ಹಿರಿಯ ದೈವ ನರ್ತಕರಾಗಿದ್ದ ಪಂಡಿತ್ ಇ*ಹಲೋಕ ತ್ಯಜಿಸಿದ್ದಾರೆ.
ದೈವಾರಾಧನೆಯಲ್ಲಿ ಭಕ್ತಿ ನಿಷ್ಠೆಯಿಂದ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು. ಶತಾಯುಶಿಯಾಗಿದ್ದ ಪಂಡಿತ್ ಕೆಲಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಕೊರಗಜ್ಜ, ಪಂಜುರ್ಲಿ, ಕಲ್ಲುಟ್ಟಿ, ಸೇರಿ ಇತರ ದೈವಗಳಿಗೆ ದೈವ ನರ್ತಕನಾಗಿ ಸೇವೆ ಸಲ್ಲಿಸಿದ್ದಾರೆ.
ಬಂಟ್ವಾಳ: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿಯೋರ್ವಳ ಮೇಲೆ ಯುವಕನೋರ್ವ ಅತ್ಯಾಚಾರಗೈದ ಘಟನೆ ನಡೆದಿರುವ ಬಗ್ಗೆ ತಡವಾಗಿ ವರದಿಯಾಗಿದ್ದು, ಅತ್ಯಾಚಾರ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ನಾವೂರ ನಿವಾಸಿ ಜಯಂತ ಎಂಬಾತ ಆರೋಪಿಯಾಗಿದ್ದು, ಸದ್ಯ ಜೈಲುವಾಸ ಆನುಭವಿಸುತ್ತಿದ್ದಾನೆ.
ಡಿ. 14 ರಂದು ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನೋಡುಲು ಮನೆಯವರ ಜೊತೆ ತೆರಳಿದ್ದ ಯುವತಿಯನ್ನು ಆರೋಪಿ ಜಯಂತ ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ನೊಂದ ಯುವತಿಯ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಳು.
ಇದೀಗ ಗ್ರಾಮಾಂತರ ಎಸ್.ಐ.ಹರೀಶ್ ಅವರ ಪೋಲೀಸ್ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.