ಕಾಪು ಸಮುದ್ರದಲ್ಲಿ ಮುಳುತ್ತಿದ್ದ ನಾಲ್ವರ ರಕ್ಷಣೆ ಮಾಡಿದ ಬೀಚ್ ಸುರಕ್ಷಾ ಸಿಬ್ಬಂದಿ..!
ಉಡುಪಿ : ಉಡುಪಿ ಜಿಲ್ಲೆಯ ಕಾಪು ಬೀಚ್ ನಲ್ಲಿ ಮುಳುತ್ತಿದ್ದ ನಾಲ್ವರನ್ನು ಬೀಚ್ ಸುರಕ್ಷಾ ಸಿಬ್ಬಂದಿಗಳು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ.
ಇಂದು ಶನಿವಾರ ಸಂಜೆ ಬೀಚ್ ನಲ್ಲಿ ಆಟವಾಡಲು ಬಂದಿದ್ದ ಮೈಸೂರು ಮೂಲದ ಪರಶಿವ, ತೇಜಸ್, ರಾಹುಲ್ ಮತ್ತು ಪವನ್ ರವರು ಸ್ಥಳೀಯರ ವಿರೋಧದ ನಡುವೆಯೂ ಸಮುದ್ರಕ್ಕೆ ಇಳಿದಿದ್ದರು.
ಅಪಾಯಕಾರಿ ಅಲೆಗಳ ಬಗ್ಗೆ ಎಚ್ಚರಿಸಿದರೂ ನಿರ್ಲಕ್ಷ್ಯ ಮಾಡಿದ್ದರು.
ಆಟವಾಡುತ್ತಿದ್ದಯುವಕರ ತಂಡ ಮುಳುಗುತ್ತಿದ್ದುದನ್ನು ಕಂಡ ಪ್ರಶಾಂತ್ ಕರ್ಕೇರಾ, ಪ್ರಥಮ್ ಪ್ರಶಾಂತ್ ಕರ್ಕೇರಾ, ಪ್ರದೀಪ್, ಜೇಕ್ಸನ್ ರವರು ಅಬ್ಬರದ ಸಮುದ್ರದ ಅಲೆಗಳನ್ನೂ ಲೆಕ್ಕಿಸದೆ ಧುಮುಕಿ ನಾಲ್ವರನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಕಡಲಿನಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ.