Connect with us

UDUPI

ಗಾಂಧಿ ಜಯಂತಿ ಅಂಗವಾಗಿ  ಉಡುಪಿ ಸಮುದ್ರ ತೀರದಲ್ಲಿ ಸ್ವಚ್ಚತಾ ಕಾರ್ಯ..!

Published

on

ಗಾಂಧಿ ಜಯಂತಿ ಅಂಗವಾಗಿ  ಉಡುಪಿ ಸಮುದ್ರ ತೀರದಲ್ಲಿ ಸ್ವಚ್ಚತಾ ಕಾರ್ಯ..!

ಉಡುಪಿ : ಗಾಂಧಿ ಜಯಂತಿ ಆಚರಣೆಯ ಅಂಗವಾಗಿ  ಉಡುಪಿ ಸಮುದ್ರ ತೀರದಲ್ಲಿ ಸ್ವಚ್ಚತಾ ಕಾರ್ಯ ಆಯೋಜಿಸಲಾಗಿತ್ತು.

ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕರಾದ ಆರ್ ಚೇತನ್ ಅವರ ನೇತೃತ್ವದಲ್ಲಿ ಕರಾವಳಿ ಕಾವಲು ಪೊಲೀಸರು ಕಡಲ್ ಸೆಂಟರ್ ಫಾರ್ ಸಪ್ ಸರ್ಫ್ ಯೋಗ ಮತ್ತು ನೇಶನ್ ಫಸ್ಟ್ ತಂಡದವರ ಸಹಯೋಗದೊಂದಿಗೆ ಮಲ್ಪೆ ಲೈಟ್ ಹೌಸ್ ದ್ವೀಪದಲ್ಲಿ ಮತ್ತು ದ್ವೀಪದ ಸಮುದ್ರ ತೀರ ಪ್ರದೇಶದಲ್ಲಿ ಸ್ವಚ್ಛತೆ ಮಾಡಲಾಯಿತು.

ಸ್ವಚ್ಛತೆಯಿಂದ ಶೇಖರಿಸಿದ ಕಸವನ್ನು ಮಣಿಪಾಲ ಕಸ ವಿಲೇವಾರಿ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡಲಾಯಿತು.

ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ  ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್‌ ನ ಎಸ್‌ ಪಿ ಚೇತನ್ ಆರ್ ಅವರು ಶ್ಲಾಘಿಸಿದರು.

LATEST NEWS

ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

Published

on

ಕುಂದಾಪುರ : ಬೈಕ್ ಸ್ಕಿಡ್ ಆಗಿ ಡಿವೈಡರ್ ಗೆ ಡಿ*ಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಬಳಿ ನಡೆದಿದೆ. ಕೋಟ ಮಣೂರು ನಿವಾಸಿ ವಿಕಾಸ್ ಆಚಾರ್ಯ(22) ಮೃ*ತಪಟ್ಟ ಯುವಕ.

ಸೋಮವಾರ ರಾತ್ರಿ 1.30ರ ಸುಮಾರಿಗೆ ವಿಕಾಸ್ ಸಾಸ್ತಾನದಿಂದ ಕೋಟ ಮಣೂರು ಕಡೆ ಬರುತ್ತಿದ್ದ

ವೇಳೆ ಈ ದುರಂ*ತ ಸಂಭವಿಸಿದೆ. ಕೋಟ ಗುಜಿರಿ ಅಂಗಡಿ ಸಮೀಪ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಹೆದ್ದಾರಿಯ ಡಿವೈಡರ್ ಗೆ ಡಿ*ಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ. ಗಂಭೀ*ರವಾಗಿ ಗಾಯಗೊಂಡ ವಿಕಾಸ್ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

Continue Reading

DAKSHINA KANNADA

ಮಲ್ಪೆ ಬೀಚ್‌ನಲ್ಲಿ ಮುಳುಗಿ ಯುವಕ ಮೃತ್ಯು.. ಮಂಡ್ಯ ಯುವಕನ ದುರಂತ ಅಂತ್ಯ..!

Published

on

ಉಡುಪಿ: ಮಲ್ಪೆ ಬೀಚ್‌ಗೆ ಪ್ರವಾಸಕ್ಕೆಂದು ಬಂದಿದ್ದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ(ಎ.21) ನಡೆದಿದೆ.  ಮಂಡ್ಯ ಮೂಲದ 21 ವರ್ಷದ ನಾಗೇಂದ್ರ ಪ್ರಸಾದ್‌ ಜಿ. ಆರ್‌. ಮೃತ ಯುವಕ. ನಾಗೇಂದ್ರ ಬೆಂಗಳೂರಿನ ವಿಧಾನಸೌಧದಲ್ಲಿ ಲಿಫ್ಟ್‌ ಅಪರೇಟರ್‌ ಅಗಿದ್ದರು ಎನ್ನಲಾಗಿದೆ.

death

READ MORE..; ‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು

ಒಟ್ಟು ಐವರು ಸ್ನೇಹಿತರು ರವಿವಾರ ಮಲ್ಪೆ ಬೀಚ್‌ಗೆ ಬಂದಿದ್ದಾರೆ. ಈ ವೇಳೆ ನೀರಿನಲ್ಲಿ ಆಡುತ್ತಿದ್ದಾಗ ನಾಗೇಂದ್ರ ಅವರು ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ತತ್‌ಕ್ಷಣ ಧಾವಿಸಿ ಬಂದ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಿ ನಾಗೇಂದ್ರನನ್ನು ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದರು ಎನ್ನಲಾಗಿದೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

Published

on

ಉಡುಪಿ : ಪ್ರಧಾನಿ ಮೋದಿ ಚಿಕ್ಕಬಳ್ಳಾಪುರ ಬೆಂಗಳೂರು ಪ್ರವಾಸ ಮಾಡ್ತಿದ್ದಾರೆ. ಮೂರು ಬಾರಿ ಕಾರಣಾಂತರದಿಂದ ಉಡುಪಿಗೆ ಬರಲು ಸಾಧ್ಯವಾಗಿರಲಿಲ್ಲ. ಪ್ರಧಾನಮಂತ್ರಿ ಕಚೇರಿಯಿಂದ ಅನುಮತಿ ಪಡೆದು ಉಡುಪಿ ಬಂದಿದ್ದೇನೆ. ಕರಾವಳಿ ಜನರ ರಕ್ತದಲ್ಲಿ ಹಿಂದುತ್ವ ಇದೆ. ಮೋದಿಯ 10 ವರ್ಷದ ಆಡಳಿತವನ್ನು ಜಗತ್ತು ಕೊಂಡಾಡಿದೆ. ಎಲ್ಲಾ ಅಸಾಧ್ಯಗಳನ್ನು ಪ್ರಧಾನಿ ಮೋದಿ ಸಾಧ್ಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.


ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದೇಶದ ಜನರಲ್ಲಿ ವಿಶ್ವಾಸ -ಭರವಸೆ ಮೂಡಿಸಿದ್ದು ಮೋದಿ. ರಾಮಮಂದಿರ, ಆರ್ಟಿಕಲ್ 370 ರದ್ದು, ಅಭಿವೃದ್ಧಿ ಎಲ್ಲವೂ ಮೋದಿ ಕಾಲದಲ್ಲಿ ಆಗಿದೆ. ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೆ. ನಾವು ರಕ್ಷಣೆ ಮಾಡ್ತೇವೆ ಎಂದು ಖರ್ಗೆ ಹೇಳ್ತಾರೆ. ಮೋದಿ ಮತ್ತೆ ಪ್ರಧಾನಿ ಆಗಬಾರದು ಅಂತ ಖರ್ಗೆ ಕರೆ ಕೊಡ್ತಾರೆ. ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರನ್ನು ಬದುಕಿದ್ದಾಗಲೇ ಕಗ್ಗೊ*ಲೆ ಮಾಡಿದ್ದಾರೆ. ಅಂಬೇಡ್ಕರ್ ರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಬಾಬಾ ಸಾಹೇಬರ ಅಂತ್ಯ ಸಂಸ್ಕಾರಕ್ಕೂ ಅವಕಾಶ ಕೊಟ್ಟಿಲ್ಲ. ಅಂಬೇಡ್ಕರ್ ರ ಪಂಚ ತೀರ್ಥಕ್ಷೇತ್ರ ಅಭಿವೃದ್ಧಿ ಮಾಡಿದ್ದು ಮೋದಿ – ಬಿಜೆಪಿ ಸರಕಾರ ಎಂದರು.

ಇದನ್ನೂ ಓದಿ : ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್

Continue Reading

LATEST NEWS

Trending