ಮಂಗಳೂರು: ಪ್ರವಾದಿ ಕುರಿತಂತೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಇದೀಗ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಈ ಹಿಂದೆಯೇ ಕಾಂಗ್ರೆಸ್ ಅವರ ಹೇಳಿಕೆ ಖಂಡಿಸಿದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ ಇಂತಹ ಹೇಳಿಕೆಯನ್ನು ಪ್ರತಿಯೊಬ್ಬರೂ ಖಂಡಿಸಿದ್ದಾರೆ. ದ್ವೇಷದ ಮಾತು ಬಗ್ಗೆ ಯಾರೂ ಕೂಡಾ ಹೇಳಿಕೆ ನೀಡುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎಂದು ವಿಪಕ್ಷ ಉಪನಾಯಕ ಯು ಟಿ ಖಾದರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಉದಯಪುರದಲ್ಲಿ ನಡೆದ ಶಿರಚ್ಛೇದ ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ. ಇಂತಹ ಘಟನೆ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರಕಾರದ ಭಯ ಇಂತಹ ಕೃತ್ಯ ಮಾಡುವವರಿಗೆ ಇರಬೇಕು ಎಂದರು.
ಈ ಕೃತ್ಯಕ್ಕೂ ಇಸ್ಲಾಂ ಧರ್ಮಕ್ಕೂ ಸಂಬಂಧವೇ ಇಲ್ಲ. ಈ ಕೃತ್ಯವನ್ನು ಕಾಂಗ್ರೆಸ್ಸಿನ ಪ್ರತಿಯೊಬ್ಬರೂ ಖಂಡಿಸಿದ್ದಾರೆ. ಕಾಂಗ್ರೆಸ್ ಯಾರನ್ನೂ ತುಷ್ಠೀಕರಣ ಮಾಡಲು ಹೋಗುವುದಿಲ್ಲ. ಸರಿಯಾದ ಧಾರ್ಮಿಕ ಶಿಕ್ಷಣವನ್ನು ಪಡೆದವರು ಇಂತಹ ಶಿರಚ್ಚೇದ ಕೃತ್ಯ ಮಾಡಲು ಹೋಗುವವರಲ್ಲ ಎಂದರು. ಇವತ್ತು ಕಾನೂನಿಗೆ, ಸರ್ಕಾರಕ್ಕೆ ಯಾರೂ ಭಯವೇ ಪಡ್ತಾ ಇಲ್ಲ.
ಆ ಕೃತ್ಯಕ್ಕೆ ಏನು ಆ್ಯಕ್ಷನ್ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳಿ. ಅದನ್ನು ಮಾಡುವವರು ಹಾಗೂ ಅದರ ಹಿಂದೆ ಇರುವವರನ್ನು ನೋಡಿ ಸರಿಯಾಗಿ ಕ್ರಮವನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದರು.
ಇನ್ನು ಕೇಂದ್ರ ಸರ್ಕಾರದ ವೈಫಲ್ಯದ ಬಗ್ಗೆ ಟೀಕಿಸುತ್ತಾ ‘ಇವರಿಗೆ ತಾಲಿಬಾನ್ ಗೆ ಕೋಟಿ ಕೋಟಿ ರೂಪಾಯಿ ಕೊಡಲು ಹಣ ಇದೆ. ಆದರೆ ನಮ್ಮ ದೇಶದ ಜನರಿಗೆ ಖರ್ಚು ಮಾಡಲು ಹಣ ಇಲ್ಲವಾ? ಅವರಿಗೆ ಹಣ ಕೊಡ್ಲಿಕ್ಕೆ ಯಾರು ಹೇಳಿದ್ರು. ಇಲ್ಲಿಯ ಜನರಿಗೆ ಅಕ್ಕಿಕೊಡಲು ಕೂಡಾ ಇವರಲ್ಲಿ ಹಣ ಇಲ್ಲ. ಅವರಿಗೆ ಕೊಡ್ಲಿಕ್ಕೆ ಹಣ ಇದೆಯಾ? ಎಂದು ವ್ಯಂಗ್ಯವಾಡಿದರು.
ಇನ್ನು ಪ್ರಾಕೃತಿಕ ವಿಕೋಪದ ಬಗ್ಗೆ ಮಾತನಾಡಿದ ಅವರು ‘ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರಾ ಅನ್ನೋದು ಸಂಶಯ ಆಗಿದೆ. ಉಳ್ಳಾಲದಲ್ಲಿ 144ಮಿ.ಮೀ ಮಳೆಯಾಗಿದೆ. ಇಷ್ಟು ವರ್ಷದಲ್ಲಿ ಆಗಿಲ್ಲ. ಪ್ರಕೃತಿ ವಿಕೋಪ ನಮ್ಮ ಕೈಯಲ್ಲಿಲ್ಲ. ಆದ್ರೆ ಆದಾಗ ಜನಪ್ರತಿನಿಧಿಗಳು, ಪಂಚಾಯತ್, ಅಧಿಕಾರಿಗಳು ಅದನ್ನು ಸರಿಯಾಗಿ ನಿರ್ವಹಿಸಬೇಕು.
managing is self beauty.
ಇದರಿಂದ ಜನರ ಕಷ್ಟ ಪರಿಹಾರವಾಗುತ್ತದೆ. ನಮ್ಮ ಕ್ಷೇತ್ರದ ಕಂದಾಯ ಇಲಾಖೆ, ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳು, ಮೆಸ್ಕಾಂ ಇಲಾಖೆ, ಪಂಚಾಯತ್ ಸದಸ್ಯರು, ಹೋಮ್‌ಗಾರ್ಡ್ ಇವನ್ನೆಲ್ಲ ಕರೆಸಿಕೊಂಡು ನಾವು ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡುತ್ತೇವೆ.
ಅದು ಎಲ್ಲಾ ರೀತಿಯಲ್ಲೂ ಕೆಲಸ ಮಾಡಬೇಕು. ಉಳ್ಳಾಲ ವಲಯಕ್ಕೆ ಸಂಬಂಧಪಟ್ಟಂತೆ ಮಳೆಯಿಂದಾಗಿ ಅನೇಕ ರೀತಿಯಲ್ಲಿ ಹಾನಿಯಾಗಿದೆ, ಗುಡ್ಡಗಳು ಜರಿದಿದೆ, ಈ ಬಾರಿ ಯಾಕೆ ಹೀಗಾಯ್ತು ಎಂಬುದನ್ನು ಸಮಗ್ರವಾಗಿ ಅಧ್ಯಯನ ಮಾಡಲು ರಿಪೋರ್ಟ್ ಕೊಡಲು ನಾವು ಎನ್‌ಐಟಿಕೆಯ ಭೂವಿಜ್ಞಾನ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೂಡಾ ತಿಳಿಸಿದ್ದಾರೆ.
ಈ ಒಂದು ರಿಸರ್ಚ್ ಮುಂದೊಂದು ದಿನ ಲಾಭ ಆಗುತ್ತೆ. ನಮ್ಮಲ್ಲಿ ಇವತ್ತು 25 ಮನೆಗಳು ಸಂಪೂರ್ಣ ಹಾನಿಯಾಗಿದೆ. ನಾಳೆ ಸಂಜೆಯೊಳಗೆ ಪ್ರತೀ ಮನೆಗೆ 10000 ರೂಪಾಯಿ ನೇರವಾಗಿ ಅಕೌಂಟ್‌ಗೆ ಬಂದು ಬೀಳುತ್ತೆ. ಇನ್ನು 3 ಕಡೆ ಭಾಗಶಃ ಹಾನಿಯಾಗಿದೆ. ಅದರ ಸರ್ವೇ 2 ದಿನದೊಳಗೆ ಆಗಬೇಕು. ವರದಿ ಕೊಡಬೇಕು. ಅವರಿಗೆ 95000 ಸಿಗುತ್ತೆ. 5 ಮನೆಗಳು ಡ್ಯಾಮೇಜ್ ಆಗಿದೆ, ಹೊಸ ಮನೆ ಕಟ್ಟಲು 5ಲಕ್ಷದ ಹೊಸ ಪ್ರಪೋಸಲ್ ಸಿಗುತ್ತೆ’ ಎಂದು ಹೇಳಿದರು.
ಕಡಲ್ಕೊರೆತ ವಿಷಯದಲ್ಲಿ ಸರ್ಕಾರ ಸಂಫೂರ್ಣವಾಗಿ ಬೇಜಾವಬ್ದಾರಿತನ ವಹಿಸ್ತಾ ಇದೆ. 2 ವರ್ಷಗಳಿಂದ ಸಂಪೂರ್ಣ ನಿರ್ಲಕ್ಷ್ಯ. ಈ ಸಂದರ್ಭದಲ್ಲಿ ತುರ್ತು ಕೆಲಸ ಆಗ್ಬೇಕಿತ್ತು. ಸುಭಾಷ್‌ನಗರದಂತಹ ಪ್ರದೇಶದಲ್ಲಿ ಕಡಲ್ಕೊರೆತ ಈಗ ಇಲ್ಲ. ಅಲ್ಲಿ 20 30 ಮೀ ಕಲ್ಲು ಹಾಕಿದ್ರೆ 20 ಮನೆಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತೆ.
ಸೋಮೇಶ್ವರದ ಮೀನುಗಾರರು ಇರುವ ಸ್ಥಳಗಳಲ್ಲಿ ಹಾಗೂ ಉಚ್ಚಿಲ ಪ್ರದೇಶದಲ್ಲಿ ಕೆಲಸ ಪೂರ್ತಿಯಾಗಿಲ್ಲ. ಅಲ್ಲಿ ರೋಡ್ ಕಟ್ಟ್ ಆಗ್ತಾ ಇದೆ. ಮನೆಗಳು ಬೀಳ್ತಾ ಇದೆ. ಆದ್ರೆ ಅದರ ಮೇಲೆ ಸರ್ಕಾರ ಗಮನಿಸದೆ ಇರುವುದು ಖೇದಕರ. ಜನರು ಕೆಲಸ ಮಾಡ್ಲಿಕ್ಕೆ ಬಿಡಲ್ಲ, ಅವರೂ ಮಾಡಲ್ಲ. ಜಿಲ್ಲಾಧಿಕಾರಿ, ಕಮಿಷನರ್, ಉಸ್ತುವಾರಿ ಸಚಿವರು ಆದ್ರೂ ಹೋಗ್ತಾ ಇದ್ರು. ಈಗ ಅದೂ ಇಲ್ಲ. ಜನರಿಗೆ ಇದರ ಬಗ್ಗೆ ಗೊತ್ತಿಲ್ಲ ಪಾಪ.
ಶಾಸಕರಿಗೆ ತಿಂಗಳಿಗೆ 2 ಕೋಟಿ ಬರುತ್ತೆ. ಅದರಲ್ಲಿ 20 ಪಂಚಾಯತ್‌ಗೆ, 20 ಎಸ್‌ಟಿಎಸ್‌ಸಿ ಯವರಿಗೆ ಹೋಗ್ಬೇಕು. ಆದರೆ ಸರ್ಕಾರಕ್ಕೆ ಏನು ಸಮಸ್ಯೆ..? ಎಲ್ಲಕ್ಕಿಂತ ಮಿಗಿಲಾಗಿ ಮಳೆಗಾಲ ಅಧಿವೇಶನ ಅಂತ ಇರುತ್ತೆ, ಅಲ್ಲಿ ಭೂಕಂಪ, ಅತಿವೃಷ್ಠಿ, ಅನಾವೃಷ್ಠಿ , ಬಜೆಟ್ ಬಗ್ಗೆ ಎಲ್ಲ ಚರ್ಚೆ ಇರುತ್ತೆ. ಆದ್ರೆ ಅಧಿವೇಶನ ಕರೆದ್ರೆ ಸರ್ಕಾರದ ವೈಫಲ್ಯ ಬಗ್ಗೆ ಗೊತ್ತಾಗುತ್ತೆ ಅಂತ ಈ ಬಾರಿ ಕರೆಯಲೇ ಇಲ್ಲ’ ಎಂದು ಟೀಕಿಸಿದರು.