ಬಂಟ್ವಾಳ: ಬಿ.ಸಿರೋಡಿನಿಂದ ಮಂಗಳೂರು ಭಾಗಕ್ಕೆ ತೆರಳುವ ಬಸ್ಸುಗಳು ನಿಲ್ಲುವ ಸ್ಥಳದಲ್ಲಿ ಕೃತಕ ನೀರು ನಿಂತು ಪ್ರಯಾಣಿಕರು ಅದೇ ನೀರಿನಲ್ಲಿ ನಿಂತು ಬಸ್ಸಿಗಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ವಿಟ್ಲ ಭಾಗದಿಂದ ಆಗಮಿಸುವ ಬಸ್ಸುಗಳು ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ನಿಂತು ಬಳಿಕ ಮಂಗಳೂರು ಕಡೆಗೆ ಸಾಗುತ್ತದೆ.
ಅದೇ ಸ್ಥಳದಲ್ಲಿ ಎನ್‌ಎಚ್‌ಎಐನವರ ಅವಾಂತರ ಹಾಗೂ ಇತರ ಅಧಿಕಾರಿಗಳು ಅದರ ಕುರಿತು ಗಮನ ಹರಿಸದೇ ಇರುವುದರಿಂದ ಈ ಸ್ಥಿತಿ ಇದೆ.
ಇದು ಇಂದು ನಿನ್ನೆಯ ಕತೆಯಲ್ಲ, ಪ್ರತಿವರ್ಷವೂ ಇಲ್ಲಿ ನೀರು ನಿಂತು ಪ್ರಯಾಣಿಕರು ತೊಂದರೆ ಅನುಭವಿಸುವ ಸ್ಥಿತಿ ಇದೆ.
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ನೀರು ನಿಲ್ಲದಂತೆ ಕ್ರಮವಹಿಸುವ ಕಾರ್ಯ ಮಾಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.