ಮಂಗಳೂರು: ಕಾಂಗ್ರೆಸ್ ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದ ಹಾಗೆ ಕನಸು ಕಾಣುತ್ತಿದೆ. ಜಾರಕಿಹೊಳಿ ರಾಜೀನಾಮೆ ಮಾತು ಅವರ ವೈಯಕ್ತಿಕ ಅಭಿಪ್ರಾಯ, ಅವರೇ ಉತ್ತರ ಕೊಡಲಿ. ಬಿಜೆಪಿ ಪಕ್ಷದಲ್ಲಿ ಯಾರೂ ಅವರಿಗೆ ಮೋಸ ಮಾಡಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಭೇಟಿಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜಾರಕಿಹೊಳಿ ಕಾಂಗ್ರೆಸ್ ನಲ್ಲಿ ಮೋಸ ಆಯ್ತು ಅಂತ ಬಿಜೆಪಿಗೆ ಅವರು ಬಂದರು. ಬಿಜೆಪಿಯಲ್ಲಿ ಮೋಸ ಮಾಡಿದ್ದಾರೆ ಅಂದಿಲ್ಲ, ಅಂತಹ ಪ್ರಶ್ನೆಯೇ ಇಲ್ಲ ಎಂದರು. ಅವರು ರಾಜೀನಾಮೆ ಕೊಡೋದು ಬೇಡ, ಅವರು ಹೀಗೇಯೇ ಮುಂದುವರೆಯೋದು ಸೂಕ್ತ. ಅಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ, ತನಿಖೆ ನಡೆಯುತ್ತಿದೆ. ಮುಂಬೈಗೆ ಹೋಗಿದ್ದು ಒಂದು ಪಕ್ಷದ ಸರ್ಕಾರ ತೆಗೆದು ಮತ್ತೊಂದು ಸರ್ಕಾರ ತರೋಕೆ. ಹೊಸ ಸರ್ಕಾರ ನಮಗೆ ಸ್ಥಾನಮಾನ ಕೊಟ್ಟಿದೆ. ಜಾರಕಿಹೊಳಿಯವರದ್ದು ವೈಯಕ್ತಿಕ ಸಮಸ್ಯೆ. ಕಾಂಗ್ರೆಸ್ ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದ ಹಾಗೆ ಕನಸು ಕಾಣುತ್ತಿದೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಗಾದಿಗಾಗಿ ಮುಸುಕಿನ ಗುದ್ದಾಟ ಇದೆ, ಆ ಅವರು ಆಡಳಿತಕ್ಕೆ ಬರಲ್ಲ ಎಂದು ಹೇಳಿದರು.
ಚಾಮರಾಜನಗರ: ಶಬರಿಮಲೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ, ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಈ ಒಂದು ಅಪಘಾತದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೂಲದ ಇಬ್ಬರು ಅಯ್ಯಪ್ಪ ಭಕ್ತರು ಸಾವನ್ನಪ್ಪಿದ್ದು, ಉಳಿದ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ಶಬರಿ ಮಲೆಯಿಂದ ಕೊಳ್ಳೇಗಾಲಕ್ಕೆ ವಾಪಸ್ ಬರುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ.ಅಯ್ಯಪ್ಪ ಭಕ್ತರಾದ ನಾಗಣ್ಣ (66) ವೆಂಕಟದ್ರಿ (70) ಸಾವನ್ನಪ್ಪಿದ್ದರೆ, ಘಟನೆಯಲ್ಲಿ ಮಹೇಶ್ ಕುಮಾರ್, ಸ್ವಾಮಿ ಹಾಗೂ ದೊರೆಸ್ವಾಮಿಗೆ ಗಂಭೀರವಾದ ಗಾಯಗಳಾಗಿದ್ದು ಕೊಯಮತ್ತೂರು ಆಸ್ಪತ್ರೆಯಲ್ಲಿ ಮೂವರಿಗೂ ಚಿಕಿತ್ಸೆ ಮುಂದುವರೆದಿದೆ.
ಕರಾವಳಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನದಲ್ಲಿ ಏರುಪೇರಾಗುತ್ತಿದೆ. ಮುಂಜಾನೆ ಚಳಿ, ಮಧ್ಯಾಹ್ನ ಬಿಸಿಲು ಕಾಣಿಸಿ ಕೊಂಡು ವೈರಲ್ ಕಾಯಿಲೆಗಳಿಗೆ ವೇದಿಕೆಯಾಗುತ್ತಿದೆ. ಡಿಸೆಂಬರ್, ಜನವರಿಯಲ್ಲಿ ಚಳಿಗಾಲ ಸಾಮಾನ್ಯವಾಗಿ ಆರಂಭವಾಗುತ್ತದೆ. ಆದರೆ ಈ ಬಾರಿ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಚಳಿ ತುಸು ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆರೋಗ್ಯ ಇಲಾಖೆ ಕೂಡ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ ಎಂದು ಮಾಹಿತಿ, ಜಾಗೃತಿ ನೀಡುತ್ತಿದ್ದರೂ, ಪದೇ ಪದೆ ಚಳಿಯಿಂದಾಗಿ ಶೀತ, ಜ್ವರ, ಕೆಮ್ಮು, ಅಸ್ತಮಾದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ವೈದ್ಯರ ಬಳಿಗೆ ಹೋಗಿ ಔಷಧ ಪಡೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಳಗೊಂಡಿದೆ.
ಪರೀಕ್ಷೆ ಜತೆಗೆ ಕಾಯಿಲೆಗಳ ಚಿಂತೆ :
ಜನವರಿ ತಿಂಗಳಲ್ಲಿ ಬಹಳಷ್ಟು ಶಾಲಾ-ಕಾಲೇಜುಗಳಲ್ಲಿ ಪರೀಕ್ಷಾ ಸಮಯ ಆದರೆ ಜ್ವರದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುತ್ತಿದ್ದಾರೆ. ಮಕ್ಕಳಿಂದ ಮಕ್ಕಳಿಗೆ ಜ್ವರ ಹರಡುವ ಪ್ರಮೇಯ ಹೆಚ್ಚಾಗಿರುವುದರಿಂದ ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗೆ ಸೂಚನೆ ರವಾನಿಸುವ ಕೆಲಸ ಮಾಡಿದೆ.
ಕರಾವಳಿಯಲ್ಲಿ ಚಳಿ ಇಳಿಕೆ ಸಾಧ್ಯತೆ :
ಉತ್ತರ ಭಾರತದಿಂದ ಬೀಸುತ್ತಿರುವ ಗಾಳಿ ಕಡಿಮೆಯಾಗಿ ಬಂಗಾಳಕೊಲ್ಲಿ ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಮಾಣ ಜಾಸ್ತಿಯಾಗುವ ಕಾರಣ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಉಂಟಾಗಲಿದೆ. ಇದರಿಂದ ಚಳಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಜ.13ರಂದು ಕರಾವಳಿ, ಮಲೆನಾಡು ಭಾಗದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಬಳಿಕ ಚಳಿಯ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದ್ದು, ವಾತಾವರಣ ದಲ್ಲಿ ತೇವಾಂಶ ಇದ್ದರೆ ಚಳಿ ಕಡಿಮೆಯಾಗಬಹುದು. ಆದರೆ ಒಣಹವೆ ಇದ್ದರೆ ಮಾತ್ರ ಚಳಿ ಏರಿಕೆಯಾಗಲಿದೆ. ಕೆಲವು ದಿನಗಳಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮುಂಜಾನೆ ಕನಿಷ್ಠ ತಾಪಮಾನ ಇಳಿಕೆಯಾಗಿ 20-21 ಡಿ.ಸೆ. ಆಸುಪಾಸಿನಲ್ಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ 1-2 ಡಿ.ಸೆ.ನಷ್ಟು ಇಳಿಕೆಯಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿ ಮುಂಜಾನೆ 8-9 ಗಂಟೆಯವರೆಗೂ ಚಳಿ ಅನುಭವವಾಗುತ್ತಿದೆ. ಹವಾಮಾನ ಇಲಾಖೆಯು ಉತ್ತರ ಕನ್ನಡ ಜಿಲ್ಲೆ ಸಹಿತ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಶೀತ ಗಾಳಿ ಬೀಸುವ ಎಚ್ಚರಿಕೆ ನೀಡಿದ್ದು, ಕನಿಷ್ಢ ತಾಪಮಾನ ವಾಡಿಕೆಗಿಂತ ಇನ್ನೂ 2-4 ಡಿ.ಸೆ. ವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ.
ಮಂಗಳೂರು/ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಇಂದು(ಜ.10) ಬೆಂಗಳೂರಿನ ಸಿಸಿಎಚ್ 57ರ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳು ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಹಾಗಾಗಿ ಇಂದು ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಜಾಮೀನು ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ರೇಣುಕಾ ಸ್ವಾಮಿ ಕೊ*ಲೆ ಆರೋಪಿಗಳೆಲ್ಲ ಒಟ್ಟಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಪವಿತ್ರಾ ಗೌಡ, ಇತರೆ ಆರೋಪಿಗಳು ತಮ್ಮ ತಮ್ಮ ವಕೀಲರೊಡನೆ ಕೋರ್ಟ್‌ಗೆ ಹಾಜರಾಗಿದ್ದರು. ದರ್ಶನ್, ನಟ ಧನ್ವೀರ್ ಜೊತೆ ಕಾರಿನಲ್ಲಿ ನ್ಯಾಯಾಲಯಕ್ಕೆ ಬಂದಿದ್ದು, ಅವರೊಂದಿಗೆ ವಕೀಲರು ಸಹ ಆಗಮಿಸಿದ್ದರು.