ಬಿಗ್ ಬಾಸ್ ಸೀಸನ್ 11 ಮನೆಯಲ್ಲಿ ಮತ್ತೆ ಹೋರಾಟದ ಕಿಚ್ಚು ಹಚ್ಚಿಕೊಳ್ಳುವ ಸುಳಿವು ಸಿಕ್ಕಿದೆ. ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಸುದೀಪ್ ಮನೆಯವರು ಮಾಡಿರೋ ತಪ್ಪುಗಳನ್ನ ಹುಡುಕಿದ್ದು, ಇವತ್ತು ತ್ರಿವಿಕ್ರಮ್, ಮಂಜು, ಗೌತಮಿ ಈ ಮೂವರಿಗೆ ಚಳಿ ಬಿಡಿಸೋ ಸಾಧ್ಯತೆ ಇದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಂಟೆಸ್ಟೆಂಟ್ ತಮ್ಮ ರಕ್ತ ಸಂಬಂಧಗಳನ್ನ ಭೇಟಿ ಮಾಡಿದ್ದಾರೆ. ಆದರೆ ಮನೆ ಊಟ ತಿಂದು ಬಿಗ್ ಬಾಸ್ ಆಟದ ಮೈ ಮರೆತು ಮಾತನಾಡಿದ್ದಾರೆ. ಮನೆಯವರ ಮಾತನ್ನ ಕೇಳಿ ಎಚ್ಚರ ಆದವರು ಇದ್ದಾರೆ.
ಮನೆಯವರ ಭೇಟಿಯಿಂದ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ, ಸಂತೋಷ ಹೆಚ್ಚಾಗಿರಬಹುದು. ಆದರೆ ಸ್ಪರ್ಧಿಗಳ ಆಟದಲ್ಲೂ ಬದಲಾವಣೆ ಆಗಲಿದೆ. ಇದಕ್ಕೆ ಸಾಕ್ಷಿಯಾಗಿ ಮನೆಯವರ ಜೊತೆ ಮಾತಾಡಿದ ತ್ರಿವಿಕ್ರಮ್, ಮಂಜು, ಗೌತಮಿ ಅವರ ಮಾತುಗಳಾಗಿದೆ. ತ್ರಿವಿಕ್ರಮ್ ಅವರ ತಾಯಿ ಬಿಗ್ ಬಾಸ್ ಮನೆಯಲ್ಲಿ ಭವ್ಯ ಜೊತೆ ಸ್ವಲ್ಪ ದೂರ ಇರು ಅಂತ ನೇರವಾಗಿ ಹೇಳಿದ್ದಾರೆ. ಇದು ತ್ರಿವಿಕ್ರಮ್ ಅವರ ಮನಮುಟ್ಟಿದ್ದು, ಇನ್ಮುಂದೆ ಭವ್ಯಾ, ತ್ರಿವಿಕ್ರಮ್ ಅವರ ಗೇಮ್ ಪ್ಲಾನ್ ಚೇಂಜ್ ಆಗುವ ಸಾಧ್ಯತೆ ಇದೆ.
ಇನ್ನು ಗೌತಮಿ ಅವರ ಪತಿ ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನ ಉಪಯೋಗಿಸಿಕೊಳ್ಳುತ್ತಾ ಇರೋರು ಅವರು. ಬಿ ಕೇರ್ ಫುಲ್ ಎಂದ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಜು ಅವರ ತಂಗಿ ಕೂಡ ಬೇಡ ಅವರ ಜೊತೆ ಇರೋದು ಬೇಡ. ಫ್ರೆಂಡ್ ಶಿಪ್‌ನ ಬ್ರೇಕ್ ಅಪ್ ಮಾಡು. ನನಗೆ ಪ್ರಾಮಿಸ್ ಮಾಡಬೇಕು ಎಂದು ಮಂಜು ತಂಗಿ ಭಾಷೆ ಕೂಡ ತೆಗೆದುಕೊಂಡಿದ್ದಾರೆ.
ಇವತ್ತಿನ ಕಿಚ್ಚನ ಪಂಚಾಯ್ತಿಯಲ್ಲಿ ಮನೆಯವರ ಜೊತೆ ಕಾಲ ಕಳೆದ ಖುಷಿಯ ಜೊತೆಗೆ ಮೈ ಮರೆತು ಮಾತನಾಡಿರೋ ಮಾತು ಚರ್ಚೆಯಾಗಲಿದೆ. ಮನೆಯವರಿಗೆ ಮಾತು ಕೊಟ್ಟಂತೆ ತ್ರಿವಿಕ್ರಮ್, ಗೌತಮಿ, ಮಂಜು ಅವರು ನಡೆದುಕೊಳ್ತಾರಾ. ಗೆಳೆತನ, ಸ್ನೇಹ ಆಟದ ದಿಕ್ಕು ಬದಲಿಸುತ್ತಾ ಅನ್ನೋದು ರೋಚಕವಾಗಿದೆ.