ಬೆಂಗಳೂರು: ಬಿಗ್ ಬಾಸ್ ಆಟ ಫಿನಾಲೆಯತ್ತ ಸಾಗುತ್ತಿದೆ. ಸ್ಪರ್ಧಿಗಳು ವೈಯಕ್ತಿಕ ಆಟದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಮುಂದಾಗುತ್ತಿದ್ದಾರೆ. ಈ ನಡುವೆ ದೊಡನೆಯಿಂದ 13ನೇ ವಾರದಿಂದ ಒಬ್ಬರು ಆಚೆ ಬಂದಿದ್ದಾರೆ. ಆ ಮೂಲಕ ಬಿಗ್ ಬಾಸ್ ಆಟದಿಂದ ಖ್ಯಾತ ಸ್ಪರ್ಧಿ ಔಟ್ ಆಗಿದ್ದಾರೆ.
ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಇಡೀ ವಾರ ನಡೆದ ವಿಚಾರಗಳ ಬಗ್ಗೆ ಮಾತನಾಡಿ, ಖಡಕ್ ಆಗಿಯೇ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅದರಂತೆ ನಾಮಿನೇಟ್ ಆಗಿರುವ 8 ಸದಸ್ಯರಲ್ಲಿ ಒಬ್ಬೊಬ್ಬರನ್ನು ಕಿಚ್ಚ ಸೇಫ್ ಎಂದು ಹೇಳಿದ್ದಾರೆ. ಹನುಮಂತು ಹಾಗೂ ಧನರಾಜ್ ಅವರು ಆರಂಭಿಕವಾಗಿ ಸೇವ್ ಆಗಿದ್ದಾರೆ. ಚೈತ್ರಾ, ಗೌತಮಿ, ಮೋಕ್ಷಿತಾ, ತ್ರಿವಿಕ್ರಮ್, ಮಂಜು ಹಾಗೂ ಐಶ್ವರ್ಯಾ ಅವರಲ್ಲಿ ಕಡಿಮೆ ವೋಟ್ ಪಡೆದ ಒಬ್ಬರು ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಮೂಲಗಳ ಪ್ರಕಾರ ಐಶ್ವರ್ಯಾ ಹಾಗೂ ಮೋಕ್ಷಿತಾ ಅವರು ಬಾಟಂನಲ್ಲಿರಲ್ಲಿದ್ದಾರೆ. ಈ ಪೈಕಿ ಐಶ್ವರ್ಯಾ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಶಿಶಿರ್ ಅವರು ಮನೆಯಿಂದ ಆಚೆ ಬಂದ ಬಳಿಕ ಐಶ್ವರ್ಯಾ ಅವರು ದೊಡನೆ ಮೊದಲ ಎರಡು ದಿನ ಡಲ್ ಆಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಉತ್ತಮವಾಗಿ ಆಡುತ್ತಿದ್ದರು. ಈ ಹಿಂದೆ ಚೈತ್ರಾ ಅವರೊಂದಿಗೆ ಅವರನ್ನು ಕನ್ನೆಷನ್ ರೂಮ್ ನಲ್ಲಿಟ್ಟು ಎಲಿಮಿನೇಷನ್ ಚಮಕ್ ನೀಡಲಾಗಿತ್ತು.
ಕಿಚ್ಚ ಸುದೀಪ್ ಅವರು ನಡೆಸಿ ಕೊಡುವ ಕನ್ನಡದ ಬಿಗ್ ರಿಯಾಲಿಟಿ ಶೋ ಕನ್ನಡಿಗರ ಮನ ಗೆದ್ದಿದೆ. ವಾರದಿಂದ ವಾರಕ್ಕೆ ಹೆಚ್ಚು ಹೆಚ್ಚು ಜನರನ್ನು ಸೆಳೆಯುತ್ತ ಯಶಸ್ವಿಯಾಗಿ ಸಾಗುತ್ತಿದೆ. ನ್ಯೂ ಇಯರ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳ ಕುಟುಂಬಸ್ಥರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಇದೇ ರೀತಿ ಮೋಕ್ಷಿತಾಗೆ ಬಿಗ್ಬಾಸ್ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಆದರೆ ತಮ್ಮನನ್ನು ನೋಡಿ ಅಕ್ಕ ಮೋಕ್ಷಿತಾ ಕಣ್ಣೀರು ಹಾಕಿರುವುದು ಎಲ್ಲರ ಕರುಳು ಚುರುಕ್ ಅನ್ನುತ್ತೆ.
ಹೊಸ ವರ್ಷ ಬಿಗ್ಬಾಸ್ ಮನೆಯಲ್ಲೂ ಅದ್ಧೂರಿಯಾಗಿ ಸೆಲೆಬ್ರೆಷನ್ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಸಖತ್ ಆಗಿಯೇ ಕುಣಿದು ಕುಪ್ಪಳಿಸುತ್ತಿದ್ದರು. ಮೋಕ್ಷಿತಾ ಕೂಡ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬಿಗ್ಬಾಸ್ಗೆ ಬಂದ ಮೇಲೆ ಪ್ರೀತಿಯ ಸಹೋದರನ್ನು ಮರೆತು ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಈ ವೇಳೆ ನೋಡಿ ಫುಲ್ ಶಾಕ್ ಆಗಿರೋದು. ಬಿಗ್ಬಾಸ್ ಮನೆಗೆ ಕುಟುಂಬ ಬರುತ್ತಿದ್ದಂತೆ ತಮ್ಮನನ್ನು ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇಷ್ಟು ದಿನ ಬಿಟ್ಟು ಇದ್ದಿದ್ದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಪುಟಾಣಿ ಎಂದು ಕರೆದರೂ ವೀಲ್ ಚೇರ್ ಮೇಲಿದ್ದ ಸಹೋದರ, ಮೋಕ್ಷಿತಾರನ್ನ ಯಾರೆಂದು ಗುರುತಿಸಲಿಲ್ಲ. ಅದಕ್ಕೆ ನನ್ನನ್ನು ಮರೆತು ಹೋಗಿದ್ದಾನೆ. ಇಷ್ಟು ದಿನ ಮನೆಯಲ್ಲಿ ಇರದಿದ್ದಕ್ಕೆ ನನ್ನನ್ನು ಮರೆತು ಹೋಗಿ ಬಿಟ್ಟಿದ್ದಾನೆ ಎಂದು ಮೋಕ್ಷಿತಾ, ತಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಮೋಕ್ಷಿತಾ ತಂದೆ, ತಾಯಿ ಕೂಡ ಕಣ್ಣೀರು ಹಾಕಿರುವುದು ಎಲ್ಲರನ್ನೂ ಮೂಕವಿಸ್ಮಿತರಾಗಿ ಮಾಡುತ್ತದೆ.
ಮೋಕ್ಷಿತಾ ತಮ್ಮನ ಪರಿಸ್ಥಿತಿಯನ್ನು ನೋಡಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ಬೆರಗಾಗಿದ್ದರು. ಗೌತಮಿಯಂತೂ ದುಃಖಿಸಿರುವುದು ಎಲ್ಲರ ಮನ ಕದಡುವಂತೆ ಇತ್ತು. ಚೈತ್ರಾ, ಮಂಜು, ರಜತ್, ಹನುಮಂತು, ತ್ರಿವಿಕ್ರಮ್, ಧನರಾಜ್ ಎಲ್ಲರ ಮುಖದಲ್ಲಿನ ಭಾವ ಕೂಡ ಏನೋ ಹೇಳುವಂತೆ ಇತ್ತು.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 93ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಇನ್ನೇನೋ ಕೆಲವೇ ದಿನಗಳಲ್ಲಿ ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದೆ. ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಮನೆಯ 9 ಸ್ಪರ್ಧಿಗಳು ಹೈ ಅಲರ್ಟ್ ಆಗಿದ್ದಾರೆ.
ಇನ್ನೂ, ಈ ಬಾರಿಯ ಸೀಸನ್ 11 ಗ್ರ್ಯಾಂಡ್ ಫಿನಾಲೆಯನ್ನು ಎರಡು ವಾರಗಳ ಕಾಲ ಮುಂದಕ್ಕೆ ಹಾಕುವ ಪ್ಲಾನ್ನಲ್ಲಿದ್ದಾರಂತೆ ಬಿಗ್ಬಾಸ್ ಟೀಮ್. ಏಕೆಂದರೆ ಈ ಬಾರಿಯ ಬಿಗ್ಬಾಸ್ ಸೀಸನ್ 11 ಹೊಸ ಅಧ್ಯಾಯ ಟೈಟಲ್ನೊಂದಿಗೆ ಶುರುವಾಗಿತ್ತು. ಹೀಗಾಗಿ ಈ ಬಾರಿಯ ಬಿಗ್ಬಾಸ್ ಸೀಸನ್ 11, 125 ದಿನಗಳ ನಡೆಸಬೇಕು ಅಂತ ಪ್ಲಾನ್ನಲ್ಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಾಮಾನ್ಯವಾಗಿ ಕಳೆದ 10 ಸೀಸನ್ಗಳಿಗಿಂತ ಈ ಬಾರಿಯ ಸೀಸನ್ ಹೊಸ ಅಧ್ಯಾಯದೊಂದಿಗೆ ತೆರೆಗೆ ಬಂದಿತ್ತು. ಮೊದಲು ಸ್ವರ್ಗ ಹಾಗೂ ನರಕ ಎಂಬ ಕಾನ್ಸೆಪ್ಟ್ ಮೂಲಕ ಬಂದಿದ್ದರಿಂದ ಅತೀ ಹೆಚ್ಚು ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡು ಟಿಆರ್ಪಿಯಲ್ಲೂ ಟಾಪ್ ಸ್ಥಾನವನ್ನು ಪಡೆದುಕೊಂಡು ಮುನ್ನುಗ್ಗುತ್ತಿತ್ತು. ಜೊತೆಗೆ ವೀಕ್ಷಕರಿಂದ ಒಳ್ಳೆಯ ರೆಸ್ಪಾನ್ಸ ಪಡೆದುಕೊಂಡು ಮುನ್ನುಗ್ಗುತ್ತಿದೆ. ಹೀಗಾಗಿ ವೀಕ್ಷಕರು ಕೂಡ ಟಾಪ್ 5ನಲ್ಲಿ ಯಾವೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಕುತೂಹಲ ಮನೆ ಮಾಡಿದೆ.
ಸದ್ಯ ಬಿಗ್ಬಾಸ್ ಸೀಸನ್ 11, 93ನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರದ ಸಂಚಿಕೆಯಲ್ಲಿ ಐಶ್ವರ್ಯಾ ಸಿಂಧೋಗಿ ಬಿಗ್ಬಾಸ್ ಮನೆಗೆ ವಿದಾಯ ಹೇಳಿದ್ದರು. ಹೀಗಾಗಿ ಈಗ ಬಿಗ್ಬಾಸ್ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 9 ಸ್ಪರ್ಧಿಗಳ ಪೈಕಿ ಯಾರು ಟಾಪ್ 5 ಫೈನಲಿಸ್ಟ್ ಆಗಲಿದ್ದಾರೆ ಅಂತ ಮುಂದಿನ ಕೆಲವು ದಿನಗಳಲ್ಲಿ ಗೊತ್ತಾಗಲಿದೆ.
ಬಿಗ್ಬಾಸ್ ಶೋ ಯಶಸ್ವಿಯಾಗಿ ಸಾಗುತ್ತಿದ್ದು ಮನೆಯಲ್ಲಿ ಹೊಸ ವರ್ಷದ ವಾತಾವರಣ ಮೂಡಿದೆ. ಎಲ್ಲರ ಮುಖದಲ್ಲಿ ಖುಷಿ ಮೂಡಿದ್ದು ಟಾಸ್ಕ್ ನೀಡಲಾಗಿದೆ. ಸ್ಪರ್ಧಿಗಳಿಗೆ ಈ ಟಾಸ್ಕ್ಗಳೇ ಮುಖ್ಯವಾಗಿರುತ್ತವೆ. ಏಕೆಂದರೆ ಮನೆಯಲ್ಲಿ ಏನನ್ನಾದರೂ ಪಡೆಯಬೇಕು ಎಂದರೆ ಕೊಟ್ಟಿರುವ ಟಾಸ್ಕ್ ಪೂರ್ಣಗೊಳಿಸಲೇಬೇಕು. ಇದೇ ರೀತಿ ನಿಗಧಿತ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ್ದೇ ತಡ ಇಬ್ಬರು ಸ್ಪರ್ಧಿಗಳ ತಾಯಂದಿರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮನೆಯಲ್ಲಿ ಬಿಗ್ಬಾಸ್ ವಿಶೇಷ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ತ್ರಿವಿಕ್ರಮ್ ಅವರು, ಪಜಲ್ (ಒಂದು ಚಿತ್ರವನ್ನು ಜೋಡಿಸುವುದು) ಅನ್ನು ಫುಲ್ ಟೆನ್ಷನ್ನಲ್ಲಿ ಬೇಗ ಬೇಗ ಪೂರ್ಣಗೊಳಿಸಿದರು. ಟಾಸ್ಕ್ ಮುಗಿದಿದ್ದೆ ತಡ ಮೇನ್ ಡೋರ್ ಓಪನ್ ಆಗಿದೆ. ಮುಖ್ಯ ಬಾಗಿಲಿನಿಂದ ತ್ರಿವಿಕ್ರಮ್ ಅವರ ತಾಯಿ ಮನೆಯೊಳಗೆ ಬಂದಿದ್ದಾರೆ.
ಈ ವೇಳೆ ತ್ರಿವಿಕ್ರಮ್ ಅವರ ತಾಯಿಯ ಆಶೀರ್ವಾದವನ್ನು ಎಲ್ಲ ಸ್ಪರ್ಧಿಗಳು ಪಡೆದರು. ಭವ್ಯ, ತ್ರಿವಿಕ್ರಮ್ ಅವರ ತಾಯಿಯನ್ನು ತಬ್ಬಿಕೊಂಡು ಸಂತಸ ಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಇಬ್ಬರು ಚೆನ್ನಾಗಿದ್ದೀರಿ. ರಾಧಾಕೃಷ್ಣನ ಥರ ಇದೀರಿ ಎಂದು ತ್ರಿವಿಕ್ರಮ್ ತಾಯಿ, ಭವ್ಯಗೆ ಹೇಳಿದ್ದಾರೆ. ಇದರಿಂದ ಭವ್ಯ ಸಖತ್ ಖುಷಿ ಖುಷಿಯಾಗಿ ನಕ್ಕಿದ್ದಾರೆ.
ಇನ್ನು ಅಮ್ಮ ಮನೆಯಿಂದ ಹೊರ ಹೋಗುವಾಗ ತ್ರಿವಿಕ್ರಮ್ ಅವರು ಇನ್ನು 10 ನಿಮಿಷ ಅನುಮತಿ ಕೊಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಬಿಗ್ ಬಾಸ್ ಅನುಮತಿಸದೇ ಇದ್ದಿದ್ದರಿಂದ ತಾಯಿ ಮನೆಯಿಂದ ಹೊರ ಹೋಗುತ್ತಿದ್ದರು. ಆಗ ತ್ರಿವಿಕ್ರಮ್ ಕಣ್ಣೀರು ಹಾಕಿದ್ದಾರೆ. ಇದು ಅಲ್ಲದೇ ಬಿಗ್ ಬಾಸ್ ಮನೆಗೆ ಭವ್ಯ ಅವರ ತಾಯಿ ಕೂಡ ಬಂದಿದ್ದರು.
Pingback: ವಿಷಕಾರಿ ಅನಿಲ ಸೇವಿಸಿ ನಾಲ್ವರು ಕಾರ್ಮಿಕರು ಸಾ*ವು - NAMMAKUDLA NEWS - ನಮ್ಮಕುಡ್ಲ ನ್ಯೂಸ್