Connect with us

    BIG BOSS

    ಸ್ವರ್ಗವಾಸಿಗಳಿಗೆ ನರಕ ತೋರಿಸಿ ಆರಂಭದಲ್ಲೇ ನಾಮಿನೇಟ್ ಆದ ಚೈತ್ರಾ

    Published

    on

    ಸ್ವರ್ಗ ಹಾಗೂ ನರಕ ಪರಿಕಲ್ಪನೆಯಲ್ಲಿ ಈ ಬಾರಿಯ ಬಿಗ್ ಬಾಸ್ ಮನೆ ಆರಂಭದಲ್ಲೇ ರಣಾಂಗಣವಾಗುತ್ತಿದೆ. ನರಕದಲ್ಲಿರುವ ಸ್ಪರ್ಧಿ ಚೈತ್ರಾ ಈಗಾಗಲೇ ಸ್ವರ್ಗವಾಸಿಗಳಿಗೆ ನರಕ ತೋರಿಸಿದ್ದಾರೆ.

    ಆರಂಭದಲ್ಲೇ ಬಿಗ್ ಬಾಸ್ ಮನೆಯ ಕಲರ್‌ಫುಲ್ ವಾತಾವರಣ ಬಿಸಿ ಏರಿಸಿದ ಚೈತ್ರಾ ಇದೀಗ ನಾಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ 11ರ ಮೊದಲ ವಾರದಲ್ಲಿ ನಾಮಿನೇಟ್ ಆದ ಮೊದಲ ಮತ್ತು ಏಕೈಕ ಸ್ಪರ್ಧಿಯಾಗಿದ್ದಾರೆ.

    ಚೈತ್ರಾ ಕುಂದಾಪುರ ಎಲಿಮಿನೇಶನ್‌ಗೆ ಸ್ವರ್ಗವಾಸಿಗಳು ಒಕ್ಕೊರಲಿನಿಂದ ಮತ ಹಾಕಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಇವರ ಆಟಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರ. ಪರ ವಿರೋಧಗಳಿದ್ದರೂ ಆಟದ ವಿಚಾರದಲ್ಲಿ ಚೈತ್ರಾ ಜನರಿಂದ ಹೆಚ್ಚಿನ ಮತ ಪಡೆಯುವ ಸಾಧ್ಯತೆಗಳಿವೆ.

    ಚೈತ್ರಾ ಗೂಗ್ಲಿಗೆ ಆರಾಮವಾಗಿದ್ದ ಸ್ವರ್ಗವಾಸಿಗಳು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೈತ್ರಾ ಮಾತು, ಗೇಮ್ ಪ್ಲಾನ್‌ಗೆ ಸ್ವರ್ಗವಾಸಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಸ್ವರ್ಗವಾಸಿಗಳಿಗಿಂತ ನರಕವಾಸಿಗಳೇ ಹೆಚ್ಚಿನ ಖುಷಿ, ಸಂಭ್ರಮದಲ್ಲಿರುವಂತೆ ಕಂಡುಬಂತು.

    BIG BOSS

    ಈ ವಾರ ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..!

    Published

    on

    ಬೆಂಗಳೂರು: ಬಿಗ್ ಬಾಸ್ ಆಟ ಫಿನಾಲೆಯತ್ತ ಸಾಗುತ್ತಿದೆ. ಸ್ಪರ್ಧಿಗಳು ವೈಯಕ್ತಿಕ ಆಟದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಮುಂದಾಗುತ್ತಿದ್ದಾರೆ. ಈ ನಡುವೆ ದೊಡನೆಯಿಂದ 13ನೇ ವಾರದಿಂದ ಒಬ್ಬರು ಆಚೆ ಬಂದಿದ್ದಾರೆ. ಆ ಮೂಲಕ ಬಿಗ್ ಬಾಸ್ ಆಟದಿಂದ ಖ್ಯಾತ ಸ್ಪರ್ಧಿ ಔಟ್ ಆಗಿದ್ದಾರೆ.

    ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಇಡೀ ವಾರ ನಡೆದ ವಿಚಾರಗಳ ಬಗ್ಗೆ ಮಾತನಾಡಿ, ಖಡಕ್ ಆಗಿಯೇ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅದರಂತೆ ನಾಮಿನೇಟ್ ಆಗಿರುವ 8 ಸದಸ್ಯರಲ್ಲಿ ಒಬ್ಬೊಬ್ಬರನ್ನು ಕಿಚ್ಚ ಸೇಫ್ ಎಂದು ಹೇಳಿದ್ದಾರೆ. ಹನುಮಂತು ಹಾಗೂ ಧನರಾಜ್ ಅವರು ಆರಂಭಿಕವಾಗಿ ಸೇವ್ ಆಗಿದ್ದಾರೆ. ಚೈತ್ರಾ, ಗೌತಮಿ, ಮೋಕ್ಷಿತಾ, ತ್ರಿವಿಕ್ರಮ್, ಮಂಜು ಹಾಗೂ ಐಶ್ವರ್ಯಾ ಅವರಲ್ಲಿ ಕಡಿಮೆ ವೋಟ್ ಪಡೆದ ಒಬ್ಬರು ದೊಡ್ಮನೆಯಿಂದ ಆಚೆ ಬಂದಿದ್ದಾರೆ.

    ಮೂಲಗಳ ಪ್ರಕಾರ ಐಶ್ವರ್ಯಾ ಹಾಗೂ ಮೋಕ್ಷಿತಾ ಅವರು ಬಾಟಂನಲ್ಲಿರಲ್ಲಿದ್ದಾರೆ. ಈ ಪೈಕಿ ಐಶ್ವರ್ಯಾ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಶಿಶಿರ್ ಅವರು ಮನೆಯಿಂದ ಆಚೆ ಬಂದ ಬಳಿಕ ಐಶ್ವರ್ಯಾ ಅವರು ದೊಡನೆ ಮೊದಲ ಎರಡು ದಿನ ಡಲ್ ಆಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಉತ್ತಮವಾಗಿ ಆಡುತ್ತಿದ್ದರು. ಈ ಹಿಂದೆ ಚೈತ್ರಾ ಅವರೊಂದಿಗೆ ಅವರನ್ನು ಕನ್ನೆಷನ್ ರೂಮ್ ನಲ್ಲಿಟ್ಟು ಎಲಿಮಿನೇಷನ್ ಚಮಕ್ ನೀಡಲಾಗಿತ್ತು.

    Continue Reading

    BIG BOSS

    ಬಿಗ್ ಬಾಸ್ ಸೀಸನ್ 12ಕ್ಕೆ ಸಾರಥಿ ಇವರೇ ?

    Published

    on

    ಮಂಗಳೂರು/ಬೆಂಗಳೂರು: ಬಿಗ್ ಬಾಸ್ ಸೀಸನ್ 11 ಶುರುವಾಗಿ ಎರಡು ವಾರ ಕಳೆದಿತ್ತು. ಅಕ್ಟೋಬರ್ 13ರಂದು ಟ್ವೀಟ್ ಮಾಡಿದ ಕಿಚ್ಚ ಇದೇ ನನ್ನ ಕೊನೆಯ ಸೀಸನ್ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

    ಬಿಗ್ ಬಾಸ್ ಶೋಗೆ ಕಿಚ್ಚ ಬಂದ್ರೆನೇ ಒಂದು ಕಳೆ ಬರೋದು. ಬಿಗ್ ಬಾಸ್ ಕಿಕ್ ಹೆಚ್ಚಿಸೋದೆ ಬಾದ್ ಶಾ ಕಿಚ್ಚ ಸುದೀಪ್. ಆದರೆ ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಭಾವುಕ ಪೋಸ್ಟ್ ಒಂದನ್ನ ಶೇರ್ ಮಾಡಿದ್ರು. ಈ ಸುದ್ದಿ ಬಿಗ್ ಬಾಸ್ ಫ್ಯಾನ್ಸ್ ಗೆ ತೀವ್ರ ಬೇಸರ ಉಂಟು ಮಾಡಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಹೊಸ ಸುದ್ದಿಯೊಂದು ಹೊರಬಂದಿದೆ.

    ಇದನ್ನೂ ಓದಿ: ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?

    ಸಂದರ್ಶನವೊಂದರಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿರೋ ಕಿಚ್ಚ, ಶೂಟಿಂಗ್ ಹಾಗೂ ಶೋನ ಮಾಡೋದು ತುಂಬಾ ಸ್ಟ್ರೇಸ್ ಆಗ್ತಿದೆ. ಸಾಕು ಅನ್ನಿಸಿದ ತಕ್ಷಣ ಟ್ವೀಟ್ ಮಾಡಿದೆ. ಬೆಳಿಗ್ಗೆ ಮತ್ತೇ ಮೂಡ್ ಚೆಂಜ್ ಆಗಬಾರದು ಅಂತ ರಾತ್ರಿನೇ ಅನೌನ್ಸ್ ಮಾಡಿದೆ. ಆದ್ರೆ ಕಲರ್ಸ್ ಕನ್ನಡ ಇನ್ನೂ ಅದನ್ನ ಒಪ್ಪಿಕೊಂಡಿಲ್ಲ. ನೋಡೋಣ, ನನಗೆ ಬರ್ಬೇಕು ಅನ್ಸಿದ್ರೇ ಟ್ವೀಟ್ ಮಾಡ್ತೀನಿ, ಹಿಂಜರಿಯಲ್ಲ. ಖಂಡಿತ ಮತ್ತೇ ಬರ್ತಿನಿ ಎಂದು ಉತ್ತರಿಸಿದ್ದಾರೆ ಕಿಚ್ಚ ಸುದೀಪ್.

    ಈ ಮಾತುಗಳಿಂದ ಸುದೀಪ್ ಮತ್ತೆ ಬಿಗ್ ಬಾಸ್ ಶೋ ನಡೆಸಿಕೊಡಬಹುದು ಎಂಬ ನೀರಿಕ್ಷೆ ಬಿಗ್ ಬಾಸ್ ಆಭಿಮಾನಿಗಳಿಗೆ ಮೂಡಿದೆ. ಕಲರ್ಸ್ ಕನ್ನಡ ಚಾನೆಲ್ ಕನ್ವಿನ್ಸ್ ಮಾಡಿದರೆ ಕಿಚ್ಚ ಶೋಗೆ ಮರಳುವ ಸಾಧ್ಯತೆ ಇದೆ.

    Continue Reading

    BIG BOSS

    ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?

    Published

    on

    ಮಂಗಳೂರು/ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 11 ಶುರುವಾಗಿ 90ನೇ ದಿನಕ್ಕೆ ಕಾಲಿಟ್ಟಿದೆ. 100ನೇ ದಿನಕ್ಕೆ ಇನ್ನೂ 10 ದಿನ ಬಾಕಿ ಉಳಿದಿದೆ. ಇನ್ನೇನು ಗ್ರ್ಯಾಂಡ್ ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಆಚೆ ಹೋಗುತ್ತಿದ್ದಾರೆ.

    ಈ ವಾರ ಚೈತ್ರಾ ಕುಂದಾಪುರ, ಗೌತಮಿ, ಮಂಜು, ಧನರಾಜ್, ಹನುಮಂತ, ಮೋಕ್ಷಿತಾ, ತ್ರಿವಿಕ್ರಂ ಹಾಗೂ ಐಶ್ವರ್ಯ ನಾಮಿನೇಟ್ ಆಗಿದ್ದಾರೆ. ಈ ವಾರ 10 ಸ್ಪರ್ಧಿಗಳ ಪೈಕಿ ಎಂಟು ಮಂದಿ ನಾಮಿನೇಟ್ ಆಗಿದ್ದು, ಕುತೂಹಲ ಹೆಚ್ಚಿಸಿದೆ.

    ಇದನ್ನೂ ಓದಿ: ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ವಿಧಿವಶ

    ಇನ್ನೂ, ಕಳೆದ ಸಂಚಿಕೆಯಲ್ಲಿ ಯಾರು ಕೂಡ ಎಲಿಮಿನೇಟ್ ಆಗಿರಲಿಲ್ಲ. ಹೀಗಾಗಿ ಈ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಆಗುತ್ತಾ ಅನ್ನುವ ಅನುಮಾನ ಮೂಡಿದೆ. ಹಾಗೇನಾದ್ರೂ ಆದ್ರೆ ಬಿಗ್ ಬಾಸ್ ಮನೆಯಲ್ಲಿ ಕೇವಲ 8 ಮಂದಿ ಉಳಿದುಕೊಳ್ಳಲಿದ್ದಾರೆ.

    ಆದರೆ ಈ ಮೊದಲು ಹಲವು ಚಾನ್ಸ್ ಪಡೆದು ಉಳಿದುಕೊಂಡಿರೋ ಐಶ್ವರ್ಯ ಈ ವಾರ ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೂ ಕಿಚ್ಚನ ಪಂಚಾಯ್ತಿಯ ಕೊನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಟ್ವಿಸ್ಟ್ ನೀಡಲಿದ್ದಾರಾ ಅಂತ ಕಾದು ನೋಡಬೇಕಿದೆ.

    Continue Reading

    LATEST NEWS

    Trending