Connect with us

BIG BOSS

BBK11: ಮಹಾರಾಜ ಮಂಜಣ್ಣ, ಯುವರಾಣಿ ಮೋಕ್ಷಿತಾ ದಿಢೀರ್ ಬಂಧನ!

Published

on

ಬಿಗ್​ಬಾಸ್ ಸಾಮ್ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಆಗಿದೆ. ಮಹಾರಾಜ ಮಂಜಣ್ಣ ಮತ್ತು ಯುವರಾಣಿ ಮೋಕ್ಷಿತಾ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಆಟದಲ್ಲಿ ಸ್ವಲ್ಪ ಹಿನ್ನಡೆ ಆಗಿತ್ತು. ಇದೀಗ ಇವರಿಬ್ಬರ ಕಿತ್ತಾಟಕ್ಕೆ ಬಿಗ್​​ಬಾಸ್ ಹೊಸ ಟ್ವಿಸ್ಟ್ ನೀಡಿದ್ದಾರೆ.

ರಜಮನೆತನದ ಅಣ್ಣ-ತಂಗಿಯಾಗಿ ಮೆರದಾಡುತ್ತಿದ್ದ ಮಂಜಣ್ಣ ಹಾಗೂ ಮೋಕ್ಷಿತಾರನ್ನು ಬಂಧಿಸಿ ಹಗ್ಗದಿಂದ ಕಟ್ಟಿ ಹಾಕಲಾಗಿದೆ. ಇದರಿಂದ ಬಿಗ್​ಬಾಸ್ ಸಾಮ್ರಾಜ್ಯದಲ್ಲಿ ಪ್ರಜೆಗಳು ಮಾಡಿದ್ದೇ ಆಟವಾಗಿದೆ. ಅಲ್ಲದೇ ಬಿಗ್​ಬಾಸ್​​ ರಾಜ, ಯುವರಾಣಿಯನ್ನು ಬಿಡಿಸಿಕೊಂಡು ಬರಲು ಅಲ್ಲಿನ ಪ್ರಜೆಗಳಿಗೆ ಟಾಸ್ಕ್ ನೀಡಿದ್ದಾರೆ.

ಯುವರಾಣಿ ಮೋಕ್ಷಿತಾ ಹಾಗೂ ಮಹಾರಾಜ ಮಂಜು ಬೆಂಬಲಿತ ಪ್ರಜೆಗಳು ಟಾಸ್ಕ್​ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಈ ವೇಳೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾರ ನಿರ್ಧಾರಕ್ಕೆ ತ್ರಿವಿಕ್ರಮ್ ಹಾಗೂ ಭವ್ಯಗೌಡ ರೊಚ್ಚಿಗೆದ್ದಿದ್ದಾರೆ. ಬಂಧನಕ್ಕೆ ಒಳಗಾಗಿರುವ ದರ್ಬಾರಿಗಳನ್ನು ಪ್ರಜೆಗಳು ಹೇಗೆ ಬಿಡಿಸಿಕೊಂಡು ಬರ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

BIG BOSS

ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ

Published

on

‘ಬಿಗ್​ಬಾಸ್ ಸಾಮ್ರಾಜ್ಯ’ದ ಆಟದಲ್ಲಿ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಮಂಜು ಸಾಮ್ರಾಜ್ಯ ಪತನದತ್ತ ಸಾಗುತ್ತಿದ್ದು, ಗದ್ದುಗೆ ಮೇಲೆ ಯುವರಾಣಿ ಮೋಕ್ಷಿತಾ ಕಣ್ಣು ಬಿದ್ದಿದೆ. ಸಾಮ್ರಾಜ್ಯದ ಮೇಲೆ ಯುವರಾಣಿ ಮೋಕ್ಷಿತಾರ ಕಣ್ಣು ಬಿದ್ದಿದೆ. ಮಂಜು ಮಹಾರಾಜರು ಅಲಂಕರಿಸಿರುವ ಖುರ್ಚಿ ಮೇಲೆ ಮೋಕ್ಷಿತಾ ಹೋಗಿ ಕೂತಿದ್ದಾರೆ.

ಕಲರ್ಸ್ ಕನ್ನಡ ಇವತ್ತು ರಾತ್ರಿ ಪ್ರಸಾರವಾಗುವ ಎಪಿಡೋಡ್​ಗೆ ಸಂಬಂಧಿಸಿ ಹೊಸ ಪ್ರೊಮೋ ಹಂಚಿಕೊಂಡಿದೆ. ಬಿಗ್​ಬಾಸ್ ಸಾಮ್ರಾಜ್ಯದ ಮಂಜಣ್ಣ ಅವರ ಅಧಿಕಾರವನ್ನು ಕಸಿದುಕೊಳ್ಳಲು ಬರುತ್ತಿದ್ದಾರೆ ಅಂತಾ ಬಿಗ್​ಬಾಸ್​ ಧ್ವನಿ ಕೇಳಿಸಿದೆ. ಬೆನ್ನಲ್ಲೇ ಮಂಜು ಅಧಿಕಾರ ನಮ್ಮದೇ ಎಂದು ತೊಡೆ ತಟ್ಟಿದ್ದಾರೆ.

ಇತ್ತ ಮೋಕ್ಷಿತಾ ಈ ಸಾಮ್ರಾಜ್ಯದ ಯುವರಾಣಿ ನಾನು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅದೇ ರೀತಿ ಪ್ರಜೆಗಳಿಂದ ಯುವರಾಣಿ ಅವರಿಗೆ ಜಯವಾಗಲಿ ಎಂಬ ಘೋಷಣೆ ಕೂಡ ಮೊಳಗಿದೆ. ಅಷ್ಟರಲ್ಲೇ ಮೋಕ್ಷಿತಾ ಕ್ಯಾಪ್ಟನ್ಸಿ ರೂಮ್ ಒಳಗೆ ಹೋಗುವ ಅಧಿಕಾರ ನನಗೆ ಇದೆ ಎಂದು ನುಗ್ಗಿದ್ದಾರೆ. ಆಗ ಅಧಿಕಾರ ನಿಮಗೆ ಇಲ್ಲ. ಬಾಗಿಲು ಕ್ಲೋಸ್ ಮಾಡಿ ಎಂದು ಮಂಜು ಹೇಳಿದ್ದಾರೆ. ನಂತರ ಮತ್ತೆ ಖುರ್ಚಿ ವಿಚಾರಕ್ಕೆ ಮೋಕ್ಷಿತಾ ಮತ್ತು ಮಂಜು ನಡುವೆ ಹೋರಾಟ ನಡೆದಿದೆ. ಈ ಗದ್ದುಗೆ ಕಿತ್ತಾಟದಲ್ಲಿ ಯಾರು ಗೆದ್ದಿದ್ದಾರೆ ಅನ್ನೋದು ಇವತ್ತಿನ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

Continue Reading

BIG BOSS

BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್

Published

on

ದೊಡ್ಮನೆ ಇದೀಗ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಉಗ್ರಂ ಮಂಜು ರಾಜನಾಗಿ ಮನೆಯನ್ನು ಆಳುತ್ತಿದ್ದಾರೆ. ಮಂಜು ಸಾಮ್ರಾಜ್ಯದಲ್ಲಿ ಬಿಗ್ ಬಾಸ್ ನಾಮಿನೇಷನ್ ವಿಭಿನ್ನವಾಗಿದೆ ನಡೆದಿದೆ. ಈ ವೇಳೆ, ಮೋಕ್ಷಿತಾಗೆ ತ್ರಿವಿಕ್ರಮ್ ಎರಡು ತಲೆ ನಾಗರಹಾವು ಎಂದು ಗುಡುಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ಪ್ರಜೆಯ ಫೋಟೋವನ್ನು ಬಾಣದಿಂದ ಚುಚ್ಚಿ ಮನೆಯ ಮುಖ್ಯದ್ವಾರದಿಂದ ಹೊರಹೋಗುವಂತೆ ಹೊಡೆದು ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ನಿಯಮ ಹೇಳಿರುತ್ತಾರೆ. ಅದರಂತೆ ಮೋಕ್ಷಿತಾ ಪೈ ಅವರು ನಾಮಿನೇಷನ್‌ಗೆ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಹೆಸರನ್ನು ಹೇಳುತ್ತಾರೆ. ಮಂಜು ಮುಂದೆ ತ್ರಿವಿಕ್ರಮ್ ಬಿಲ್ಡಪ್ ಕೊಡುತ್ತಾರೆ. ಆಚೆ ಬಂದ್ಮೇಲೆ ಅದೇ ಮಂಜು ಬಗ್ಗೆ ಏನೂ ಅಲ್ಲ ಎನ್ನುತ್ತಾರೆ ಎಂದು ಮೋಕ್ಷಿತಾ ಕಾರಣ ಹೇಳ್ತಾರೆ. ಅದಕ್ಕೆ, ಉಗ್ರಂ ಮಂಜು, ಅದು ನಂಬಿಕೆ ದ್ರೋಹ ಎಂದು ಕೂಗಾಡಿದ್ದಾರೆ.

ನಂತರ ತ್ರಿವಿಕ್ರಮ್ ತಮ್ಮನ್ನು ಸಮರ್ಥಿಸಿಕೊಂಡು, ನಾನು ಇವರನ್ನು ಮ್ಯಾನಿಪುಲೇಟ್ ಮಾಡುತ್ತಿಲ್ಲ. ನಿಜವಾಗಿಯೂ ಮಾಡ್ತಿರೋದು ಇವರು. ಅದಕ್ಕೆ ಸಿಟ್ಟಿಗೆದ್ದ ಉಗ್ರಂ ಮಂಜು, ಮಾತು ಬರುತ್ತದೆ ಎಂದು ನೀವು ಮಾತನಾಡಬೇಡಿ ಎನ್ನುತ್ತಾರೆ. ಆಗ ನನ್ನನ್ನು ಗೋಮುಖ ವ್ಯಾಘ್ರ ಎನ್ನುತ್ತಾರೆ. ನಿಜವಾಗಿಯೂ ಇವರು ಎರಡು ತಲೆ ನಾಗರಹಾವು ಎಂದು ಮೋಕ್ಷಿತಾ ವಿರುದ್ಧ ತ್ರಿವಿಕ್ರಮ್ ರೊಚ್ಚಿಗೆದ್ದಿದ್ದಾರೆ.

Continue Reading

BIG BOSS

ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಆಡಳಿತ !

Published

on

ಮಂಗಳೂರು/ಬೆಂಗಳೂರು: ‘ಕನ್ನಡದ ಬಿಗ್ ಬಾಸ್ ಸೀಸನ್ 11’ ಈಗ, 9ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಹೊಸ ಟಾಸ್ಕ್ ಗೆ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ. ಅದುವೇ ಬಿಗ್ ಬಾಸ್ ಸಾಮ್ರಾಜ್ಯ. ಈ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವತಾರಕ್ಕೆ, ಇನ್ನುಳಿದ ಸ್ಪರ್ಧಿಗಳು ಸುಸ್ತಾಗಿದ್ದಾರೆ.


ಮಹಾರಾಜನಾಗಿರುವ ಉಗ್ರಂ ಮಂಜು ಆಸ್ಥಾನದಲ್ಲಿ, ಪ್ರಜೆಗಳೆಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಈ ವಾರ ಮಂಜು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗಾಗೀ ಮಹಾರಾಜನಾಗಿ ಮೆರೆಯುವ ಅವಕಾಶ ಸಿಕ್ಕಿದೆ. ಮಂಜು ಅವರ ಸಾಮ್ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಸರಿಯಾದ ಶಿಕ್ಷೆಯನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗೆ ಮಾತ್ರ ಎಂಟ್ರಿ ; ಪುರುಷರು ಈ ಪಬ್‌ಗೆ ಬರುವಂತಿಲ್ಲ  !! 
ಇನ್ನೂ ದೊಡ್ಮನೆಯಲ್ಲಿ ಯಾವಾಗಲೂ ಸೌಂಡ್ ಮಾಡುತ್ತಿದ್ದ ಚೈತ್ರಾ ಅವರ ಬಾಯಿಗೆ ಆಲೂಗಡ್ಡೆ ತುರುಕುವಂತೆ ಮಹಾರಾಜರು ಆದೇಶಿಸಿದ್ದಾರೆ. ಮಹಾರಾಜರ ಅಪ್ಪನೆಯಂತೆ ಬಾಯಲ್ಲಿ ಆಲೂಗಡ್ಡೆ ಇಟ್ಟುಕೊಂಡಿದ್ದ ಚೈತ್ರಾ ಕೆಲಹೊತ್ತು ಸುಮ್ಮನೆ ಕೂತಿದ್ದರು. ನಂತರ ಇದನ್ನು ನಾನು ಖಂಡಿಸುತ್ತೇನೆ ಎಂದು ಸೌಂಡ್ ಮಾಡೋಕೆ ಪ್ರಾರಂಭಿಸಿದರು.
ಒಟ್ಟಿನಲ್ಲಿ ಮಂಜು ಅವರ ಆಡಳಿತಕ್ಕೆ ಪ್ರಜೆಗಳು ಉಸಿರಾಡುವುದಕ್ಕೂ ಭಯ ಪಡುತ್ತಿದ್ದಾರೆ. ಅಷ್ಟಕ್ಕೂ ಮಂಜು ಆಡಳಿತ ಇಂದಿನ ಸಂಚಿಕೆಯಲ್ಲಿ ನೋಡಬಹುದು.

Continue Reading

LATEST NEWS

Trending

Exit mobile version